ಕುರಿ, ಮೇಕೆ, ಮೀನು, ಮೊಲ ಸಾಕಾಣಿಕೆ ಘಟಕ ಸ್ಥಾಪನೆಗೆ ಶೇ. 50 ರಷ್ಟು ಸಹಾಯಧನ ನೀಡಲು ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ವತಿಯಿಂದ ನೇರಸಾಲ ಯೋಜನೆಯಡಿಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ತರಕಾರಿ, ಹಣ್ಣು-ಹಂಪಲು, ಮೀನು ಮತ್ತು ಮಾಂಸ ಮಾರಾಟ, ಕುರಿ/ಹಂದಿ/ಮೊಲ ಸಾಕಾಣಿಕೆ, ತಳ್ಳುವ ಗಾಡಿ ಘಟಕಗಳನ್ನು ಸ್ಥಾಪಿಸಲು ಗರಿಷ್ಟ ಘಟಕ ವೆಚ್ಚ ರೂ. 50,000 ರೂಪಾಯಿಯವರಿಗೆ ನೀಡಲಾಗುವುದು. ಯೋಜನೆಯ ಘಟಕ ವೆಚ್ಚ ರೂ. 50,000/- ಗಳಾಗಿದ್ದು, ಈ ಪೈಕಿ ರೂ. 25,000/- ಸಹಾಯಧನ ಮತ್ತು ರೂ. 25,000/- ಸಾಲವಾಗಿರುತ್ತದೆ. ಸಾಲದ ಮೊತ್ತವನ್ನು ಶೇ. 4ರ ಬಡ್ಡಿದರದಲ್ಲಿ 30 ಸಮಾನ ಕಂತುಗಳಲ್ಲಿ ನಿಗಮಕ್ಕೆ ಮರು ಪಾವತಿಸಬೇಕಾಗುತ್ತದೆ. ರೈತರು September 1 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ

ಅರ್ಜಿ ಸಲ್ಲಿಸಲು ಅರ್ಹತೆ:

ಅರ್ಜಿದಾರರು ಪರಿಶಿಷ್ಟ ಜಾತಿಯ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಸೇರಿದವರಾಗಿರಬೇಕು. ಆದಿ ಕರ್ನಾಟಕ, ಆದಿ ಆಂದ್ರ, ಆದಿ ದ್ರಾವಿಡ ಎಂಬ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿದಲ್ಲಿ ಕಡ್ಡಾಯವಾಗಿ ಮೂಲ ಜಾತಿಯನ್ನು ನಮೂದಿಸಿ ಸ್ವಯಂ ಘೋಷಣೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಅರ್ಜಿದಾರರು/ ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಈ ಹಿಂದೆ ನಿಗಮದಿಂದ ಸೌಲಭ್ಯ ಪಡೆದಿದ್ದಲ್ಲಿ, ಅಂತಹ ಫಲಾನುಭವಿಗಳು ಅರ್ಹರಿರುವುದಿಲ್ಲ. ಅರ್ಜಿದಾರರು ಘಟಕವನ್ನು ಸ್ಥಾಪಿಸಲು ಅವಶ್ಯವಿರುವ ಸ್ಥಳಾವಕಾಶವನ್ನು ಹೊಂದಿರಬೇಕು.

ನಿಯಮಗಳು:

ಅರ್ಜಿದಾರರು ಆಯ್ಕೆ ಸಮಿತಿಯಿಂದ ಆಯ್ಕೆಯಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದವರಿಗೆ ರೂ.1,50,000/- ಹಾಗೂ ನಗರ ಪ್ರದೇಶದವರಿಗೆ ರೂ.2,00,000/- ಗಳ ಮಿತಿಯೊಳಗಿರಬೇಕು. ಅರ್ಜಿದಾರರು 21 ವರ್ಷದಿಂದ 50 ವರ್ಷದವರೆಗಿನ ವಯೋಮಾನದವರಾಗಿರಬೇಕು. ಉದ್ದೇಶಿತ ವ್ಯಾಪಾರ /ಚಟುವಟಿಕೆ ಆಧಾರದ ಮೇಲೆ ಸಾಲ/ಸಹಾಯಧನ ಮಂಜೂರು ಮಾಡಲಾಗುವುದು. ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡು ಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದುಪಡಿಸಲಾಗುತ್ತದೆ. ಸಹಾಯಧನ ಮತ್ತು ಸಾಲವನ್ನು ನೇರವಾಗಿ ಫಲಾನುಭವಿಗಳಿಗೆ/ಮಾರಾಟಗಾರರಿಗೆ ಬಿಡುಗಡೆ ಮಾಡಲಾಗುವುದು.

ಫಲಾಪೇಕ್ಷಿಯು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:

ಅರ್ಜಿಯನ್ನು ಆನ್ಲೈನ್ ಅಥವಾ ಆಫ್ ಲೈನ್ ಮೂಲಕ ಸಲ್ಲಿಸಬಹುದುದು. ಅರ್ಜಿಯೊಂದಿಗೆ ಇತ್ತೀಚಿನ ಭಾವಚಿತ್ರ ಹೊಂದಿರಬೇಕು.

ಜಾತಿ ಪತ್ರ (ಆರ್.ಡಿ. ಸಂಖ್ಯೆ ಹೊಂದಿರಬೇಕು). ಆಧಾಯ ಪತ್ರ (ಆರ್.ಡಿ. ಸಂಖ್ಯೆ ಹೊಂದಿರಬೇಕು). ಆಧಾರ್ ಕಾರ್ಡ್ ಹಾಗೂ  ಬ್ಯಾಂಕ್ ಪಾಸ್ಬುಕ್ ಇರಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗಿ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು..

ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮದ ವ್ಯಾಪ್ತಿಗೆ ಬರುವ ಈ ಕೆಳಕಂಡ ಜಾತಿಗೆ ಸೇರಿಸುವ  ಅರುಂಧತಿಯಾರ್, ಭಂಗಿ, ಮೆಹತರ್, ಓಲ್ಗಾನ, ರೂಖಿ, ಮಲ್ಕಾನ, ಹಲಾಲಕೋರ, ಲಾಲ್‍ಬೇಗಿ, ಬಾಲ್ಮಿಕಿ, ಕೊರರ್, ಜಾಡಮಾಲಿ, ಬಾಂಬಿ, ಭಾಂಭಿ, ಅಸಾದರು, ಅಸೋಡಿ, ಚಮ್ಮಡಿಯ, ಚಮ್ಮಾರ್, ಚಂಭಾರ್, ಚಮಗಾರ್, ಹರಳಯ್ಯ, ಹರಲಿ, ಖಲ್ಪ, ಮಚಗಾರ್, ಮೋಚಿಗಾರ್, ಮಾದರ್, ಮಾದಿಗ್, ಮೋಚಿ, ಮೂಚಿ, ತೆಲುಗುಮೋಚಿ, ಕಾಮಟಿಮೋಚಿ, ರಾಣಿಗರ್, ರೋಹಿದಾಸ್, ರೋಹಿತ್, ಸಮಗಾರ್, ಬಿಂಡ್ಲಾ, ಚಕ್ಕಿಲಿಯನ್, ದಕ್ಕಲ್, ದೊಕ್ಕಲವಾರ್, ದಕ್ಕಲಿಗ, ಡೋರ್, ಕಕ್ಕಯ್ಯ, ಕನ್‍ಕಯ್ಯ, ಜಾಂಬುವುಲ, ಮಾಚಾಲ, ಮಾದಿಗ, ಮಾಂಗ್, ಮಾತಂಗ್, ಮಿನಿ ಮಾದಿಗ್, ಮಾಂಗಗಾರುಡಿ, ಮಾಂಗಗಾರೋಡಿ, ಮಾಷ್ಟಿ, ಸಮಗಾರ, ಸಿಂದೊಲ್ಲು, ಚಿಂದೊಲ್ಲು ಜಾತಿಯವರು ಮಾತ್ರ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಅರ್ಜಿಯನ್ನು ಆನ್ಲೈನ್ ಮೂಲಕ ಭರ್ತಿ ಮಾಡಬೇಕು. ಆನ್ಲೈನ್ ಮೂಲಕ್ ಭರ್ತಿ ಮಾಡಲು https://adijambava.online/apl-su-nera-saala.php

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಅರ್ಜಿ ಓಪನ್ ಆಗುತ್ತದೆ. ಇಲ್ಲಿ ನಿಮ್ಮ ಜಿಲ್ಲೆಯ ಹೆಸರು, ಅರ್ಜಿದಾರನ ಭಾವಚಿತ್ರ, ಹೆಸರು, ಸೇರಿದಂತೆ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ https://adijambava.online ಲಿಂಕ್ ಮೇಲೆ ಕ್ಲಿಕ್ ಮಾಡಬಹುದು. ಅಥವಾ ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮ ನಂ, 17/5, ಓಬ್ಲಾಂಗ್ ಬ್ಲಾಕ್, 2ನೇ ಮಹಡಿ, ಯುನಿಟಿ ಕಟ್ಟಡ, ಜಯಚಾಮರಾಜೇಂದ್ರ ರಸ್ತೆ, ಬೆಂಗಳೊರು 560 002 ದೂರವಾಣಿ 080-22215222 ಗೆ ಕರೆಮಾಡಬಹುದು.

Leave a Reply

Your email address will not be published. Required fields are marked *