ರೈತರಿಗೆ ನೆರವಾಗುವ ವಿದ್ಯುತ್ ಚಾಲಿತ (E-tractor) ಟ್ರ್ಯಾಕ್ಟರ್

Written by By: janajagran

Updated on:

ದಿನದಿಂದ ದಿನಕ್ಕೆ ಪೆಟ್ರೋಲ್ ಡಿಸೀಲ್ ಬೆಲೆ ಏರಿಕೆಯಾಗುತ್ತಿರುವ ಈ ದಿನಗಳಲ್ಲಿ ರೈತರಿಗೆ ನೆರವಾಗುವ ವಿದ್ಯುತ್ ಚಾಲಿತ (Sonalika Tiger Electric tractor launched) ಟ್ರ್ಯಾಕ್ಟರ್ ನ್ನು ಸೋನಾಲಿಕಾ ಕಂಪನಿಯು ಅಭಿವೃದ್ಧಿಪಡಿಸಿದೆ. ಇದಕ್ಕೆ  ಟೈಗರ್ ಟ್ರ್ಯಾಕ್ಟರ್ ಎಂದು ಹೆಸರಿಡಲಾಗಿದೆ.

ಬೈಕ್, ಕಾರು, ಆಟೋ, ಸ್ಕೂಟರ್ ಅಷ್ಟೇ ಅಲ್ಲ, ಕೃಷಿ ಕ್ಷೇತ್ರಕ್ಕೆ ಬಳಕೆಯಾಗುವ ಟ್ರ್ಯಾಕ್ಟರನ್ನು ಸಹ ಕಂಡುಹಿಡಿದಿದ್ದರಿಂದ ಕೃಷಿ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಯಾಗುತ್ತಿದೆ.

ಕಳೆದ ವರ್ಷ ಡಿಸೆಂಬರ್ 23 ರಂದು ರೈತರ ದಿನದಂದೇ ಸೋನಾಲಿಕ ಕಂಪನಿಯು ಈ ಟ್ರ್ಯಾಕ್ಟರನ್ನು ಬಿಡುಗಡೆ ಮಾಡಿದೆ. 11 ಕೆವಿ ಸಾಮರ್ಥ್ಯದ ಮೋಟಾರು ಹೊಂದಿರುವ ಟ್ರ್ಯಾಕ್ಟರ 25.5 ಕಿಲೋ ವ್ಯಾಟ್ ಸಾಮರ್ಥ್ಯದ ಲಿಥಿಯಂ ಅಯಾನ್ ಬ್ಯಾಟರಿ ಹೊಂದಿದೆ.

ಟೈಗರ್ ಟ್ರ್ಯಾಕ್ಟರನ್ನು ಒಮ್ಮೆ ಚಾರ್ಜ್ ಮಾಡಿದರೆ ಸಾಕು, 2 ಟನ್ ಸಾಮರ್ಥ್ಯದ ಟ್ರಾಲಿಯೊಂದಿಗೆ 8 ರಿಂದ 10 ಗಂಟೆಗಳ ಕಾಲ ಕೆಲಸ ಮಾಡುತ್ತದೆ. ಮನೆಯಲ್ಲಿರುವ ತ್ರಿ ಪೈಂಟ್ ಚಾರ್ಜಿಂಗ್ ಪಿನ್ ಮೂಲಕವೇ ಬ್ಯಾಟರಿ ಚಾರ್ಜ್ ಮಾಡಬಹುದು. 4 ಗಂಟೆಯಲ್ಲಿ ಈ ಬ್ಯಾಟರಿ ಫುಲ್ ಚಾರ್ಜ್ ಆಗುತ್ತದೆ.  ಈ ಟ್ರ್ಯಾಕ್ಟರ್ ಎಕ್ಸ್ ಶೋರೂಂ 5.99 ಲಕ್ಷವೆಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಜರ್ಮನಿ ವಿನ್ಯಾಸದ ಈ ಟ್ರ್ಯಾಕ್ಟರ್ ಉತ್ತಮ ಪಿಕಪ್ ಮತ್ತು ಕಾರ್ಯಕ್ಷಮತೆಯನ್ನು ಹೊಂದಿದೆ. ಈ ಟ್ರ್ಯಾಕ್ಟರ್ ನಿಂದ ಶೇ. 75 ರಷ್ಟು ಇಂದನ ಉಳಿತಾಯವಾಗಲಿದೆ ಎಂದು ಕಂಪನಿ ತಿಳಿಸಿದೆ.

ಟೈಗರ್ ಎಲೆಕ್ಟ್ರಿಕ್ ಅನ್ನು ಪಂಜಾಬ್ ನ ಹೋಶಿಯಾರ್ ಪುರ್ ನ ಸೊನಾಲಿಕಾ ಅವರ ಸಂಯೋಜಿತ ಟ್ರ್ಯಾಕ್ಟರ್ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುತ್ತದೆ.

ಇದನ್ನೂ ಓದಿ:ಕೃಷಿ ಇಲಾಖೆಯಲ್ಲಿ ಶೇ 60 ರಷ್ಟು ಪ್ರೋತ್ಸಾಹಧನದಲ್ಲಿ ಸಿಗುವ ಕೃಷಿ ಯಂತ್ರೋಪಕರಣಗಳ (Farm machinery) ಪಟ್ಟಿ ಇಲ್ಲಿದೆ

ಸೋನಾಲಿಕಾ ಟ್ರ್ಯಾಕ್ಟರ್ಗಳು ಯಾವಾಗಲೂ ನಾವೀನ್ಯತೆಯ ಮುಂಚೂಣಿಯಲ್ಲಿವೆ ಮತ್ತು ವರ್ಗ ತಂತ್ರಜ್ಞಾನದಲ್ಲಿ ಅತ್ಯುತ್ತಮ ವಾಗಿ ಜಗತ್ತಿನಾದ್ಯಂತ, ಅದರಲ್ಲೂ ಯೂರೋಪ್ ಮತ್ತು ಯುಎಸ್ ಎ ಗೆ ಅತ್ಯುತ್ತಮ ವಾಗಿ ಸೇವೆ ಸಲ್ಲಿಸುತ್ತಲೇ ಇವೆ. ಕೃಷಿ ಉತ್ಪಾದಕತೆ ಮತ್ತು ಲಾಭಗಳಿಕೆಯನ್ನು ಹೆಚ್ಚಿಸಲು ತಾಂತ್ರಿಕ ವಿಕಾಸಗಳನ್ನು ನಿರಂತರವಾಗಿ ಒದಗಿಸುವ ಪ್ರತಿಯೊಬ್ಬ ಭಾರತೀಯ ರೈತನಿಗೆ ನಾವು ನೀಡುವ ಭರವಸೆಟೈಗರ್ ಎಲೆಕ್ಟ್ರಿಕ್ ನೊಂದಿಗೆ ಬರುತ್ತದೆ, ರೈತರ ಸ್ನೇಹಿಯಾಗಿ, ಪರಿಸರಕ್ಕೆ ಪೂರಕವಾಗಿರುವ ನಿಟ್ಟಿನಲ್ಲಿ ಸೊನಲಿಕಾ ಕಂಪನಿಯು ಈ ಟ್ರ್ಯಾಕ್ಟರ್ ನ್ನು ನಿರ್ಮಿಸಲಾಗಿದೆ’ ಎಂದು ಸೊನಾಲಿಕಾ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ರಮಣ್ ಮಿತ್ತಲ್ ತಿಳಿಸಿದ್ದಾರೆ.

‘ಟೈಗರ್ ಎಲೆಕ್ಟ್ರಿಕ್ ಕಾರ್ಯಾಚರಣೆ ಯು ಸಾಮಾನ್ಯ ಟ್ರ್ಯಾಕ್ಟರ್ ಗಿಂತ ಭಿನ್ನವಾಗಿಲ್ಲ, ಇಂಧನ ವೆಚ್ಚವನ್ನು ಕಡಿತಮಾಡುವ ಮೂಲಕ ರೈತ ಸ್ನೇಹಿಯಾಗಿ ಮಾಡುತ್ತದೆ. ಗ್ರಾಹಕ ಕೇಂದ್ರಿತ ಬ್ರ್ಯಾಂಡ್ ಆಗಿ, ಭಾರತೀಯ ರೈತರು ಕಸ್ಟಮೈಸ್ಡ್ ಪರಿಹಾರಗಳನ್ನು ಒದಗಿಸಲು ಕಾಲಕಾಲಕ್ಕೆ ನಿರಂತರವಾಗಿ ಹೊಸ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.

3 thoughts on “ರೈತರಿಗೆ ನೆರವಾಗುವ ವಿದ್ಯುತ್ ಚಾಲಿತ (E-tractor) ಟ್ರ್ಯಾಕ್ಟರ್”

  1. ಈ ತಂತ್ರಜ್ಞಾನ ಬರಿತ ಟ್ರಾಕ್ಟರ್ ಅನ್ನು ಕರ್ನಾಟಕದ ಎಲ್ಲ ಜಿಲ್ಲೆಗಳಿಗೂ ಬಿಡುಗಡೆ ಮಾಡಿದರೆ ನಮ್ಮ ರೈತರಿಗೆ ಕೃಷಿ ಗೆ. ತುಂಬಾ ಅನುಕೂಲವಾಗುತ್ತದೆ

    Reply

Leave a comment