ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲೆಂದು  ಸರ್ಕಾರವು ಕೃಷಿ ಇಲಾಖೆಯ ವತಿಯಿಂದ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಸಂಸ್ಕರಣೆ ಯೋಜನೆ ಅಡಿ ಉಳುಮೆಯಿಂದ ಕೊಯ್ಲುವರೆಗೆ ವಿವಿಧ ಕೃಷಿ ಯಂತ್ರೋಪಕರಣಗಳನ್ನು (Farm machinery subsidy) ರಿಯಾಯ್ತಿ ದರದಲ್ಲಿ ನೀಡುತ್ತದೆ.

ಕೃಷಿ ಯಂತ್ರೋಪಕರಣಗಳನ್ನು ರೈತರು ಖರೀದಿಸಲು ಸಾಧ್ಯವಾಗದೆ ಇರುವುದರಿಂದ ಸರ್ಕಾರವು ಕೃಷಿ ಯಂತ್ರೋಪಕರಣಗಳಿಗೆ ಪ್ರೋತ್ಸಾಹ ಧನ ನೀಡುತ್ತದೆ. ಆಯಾ ಯಂತ್ರೋಪಕರಣಗಳಿಗನುಗುಣವಾಗಿ ಶೇ. 60, ಶೇ.50  ಮತ್ತು ಶೇ. 40 ರಷ್ಟು ಸಹಾಯಧನ ನೀಡಲಾಗುವುದು. ಇದಕ್ಕಾಗಿ ರೈತಬಾಂಧವರು ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ಸಬ್ಸಿಡಿಯಲ್ಲಿ ಯಂತ್ರೋಪಕರಣಗಳನ್ನು ಪಡೆಯಬಹುದು.

ಕೃಷಿ ಯಂತ್ರೋಪಕರಣ ಪಡೆಯಲು ಬೇಕಾಗುವ ದಾಖಲಾತಿಗಳು (documents for farm machinery) 

ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಭೇಟಿ ನೀಡಿ ಯಾವ ಕೃಷಿ ಯಂತ್ರೋಪಕರಣಗಳು ಪ್ರೋತ್ಸಾಹಧನದಲ್ಲಿ ಲಭ್ಯವಿದೆ ಎಂಬುದನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬೇಕು. ಜೇಷ್ಠತಾ ಆಧಾರ ಮತ್ತು ಅನುದಾನದ ಲಭ್ಯತೆ ಮೇರೆಗೆ ಅರ್ಜಿಗಳನ್ನು ಪುರಸ್ಕರಿಸಿ ಯಂತ್ರೋಪಕರಗಳನ್ನು ವಿತರಿಸಲಾಗುವುದು.

ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಫಲಾನುಭವಿಗಳ ಲಿಸ್ಟ್ ಬಿಡುಗಡೆ, ಮೊಬೈಲ್ ನಲ್ಲಿಯೇ ನಿಮ್ಮ ಹೆಸರು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ರೈತರು ಕೃಷಿ ಯಂತ್ರೋಪಕರಣಗಳನ್ನು ಪಡೆಯಲು  ಈ ಕೆಳಗಿನ ದಾಖಲಾತಿಗಳನ್ನು ಬಿಲ್ಲಿನೊಂದಿಗೆ ಸಲ್ಲಿಸಬೇಕಾಗುತ್ತದೆ.

1.ರೈತರ ಅರ್ಜಿ (ಪೂರ್ಣ ಪ್ರಮಾಣದಲ್ಲಿ ತಿದ್ದುಪಡಿಗಳಿಲ್ಲದೆ ಭರ್ತಿ ಮಾಡಬೇಕು) 2. ರೈತರಿಂದ ಸ್ವಯಂ ದೃಢೀಕೃತ ಸರಬರಾಜು ಕಂಪನಿಯ ಡೆಲವರಿ ಚಾಲನ್ (ಮೂಲಪ್ರತಿ). 3. ಕೆ-ಕಿಸಾನ್ ನಲ್ಲಿ ಆನ್ ಲೈನ್ ನೋಂದಣಿ ಪ್ರತಿ (ಎಫ್.ಐ.ಡಿ ಸಂಖ್ಯೆಯೊಂದಿಗೆ) 4. ಪಹಣ ಮೂಲ ಪ್ರತಿ ( ರೈತರಿಂದ ಸ್ವಯಂ ದೃಢೀಕೃತ). 5. ಆಧಾರ್ ಕಾರ್ಡ್ ಝಿರಾಕ್ಸ್ ಪ್ರತಿ (ರೈತರಿಂದ ಸ್ವಯಂ ದೃಢೀಕೃತ). 6. ಬ್ಯಾಂಕ್ ಪಾಸ್ ಬುಕ್ ಝಿರಾಕ್ಸ್ ಪ್ರತಿ (ರೈತರಿಂದ ಸ್ವಯಂ ದೃಢೀಕೃತ) 7. ಇಪ್ಪತ್ತು ರೂಪಾಯಿ ಕಾಗದದ ಮೇಲೆ ರೈತರ ಪ್ರಮಾಣ ಪತ್ರ. 8. ರೈತರ ಬ್ಯಾಂಕ್ ಪುಸ್ತಕದಲ್ಲಿ ರೈತರ ವಂತಿಕೆ ಸರಬರಾಜು ಸಂಸ್ಥೆಗೆ ಆರ್.ಟಿ.ಜಿ.ಎಸ್ ಜಮಾವಣೆಯಾದ ಬಗ್ಗೆ ರೈತರಿಂದ ಸ್ವಯಂ ದೃಢೀಕೃತ ದಾಖಲಾತಿ, 9. ರೈತರ ವಂತಿಗೆ ಹಣ ಪಾವತಿಗೆ ರಶೀದಿ (ಜೆ.ಆರ್), ಆನ್ ಲೈನ್ ಕಾರ್ಯ ಆದೇಶ ಪ್ರತಿ( ಸಹಾಯಕ ಕೃಷಿ ನಿರ್ದೇಶಕ ಸಹಿಯೊಂದಿಗೆ), 10. ರೈತರಿಂದ ತೃಪ್ತಿಕರ ಪ್ರಮಾಣಪತ್ರ/ಕೃಷಿ ಅಧಿಕಾರಿಗಳಿಂದ ಕ್ಷೇತ್ರ ಪರಿಶೀಲನೆ ದೃಢೀಕರಣ, 11, ಜಾತಿ ಪ್ರಮಾಣ ಪತ್ರ (ಎಸ್.ಸಿ/ಎಸ್.ಟಿ ರೈತರಿಗೆ) ರೈತರಿಂದ ಸ್ವಯಂ ದೃಢೀಕೃತ,  12. ಟ್ರ್ಯಾಕ್ಟರ್ ಚಾಲಿತ ಉಪಕರಣಗಳಿಗೆ ಆರ್.ಸಿ ಸೂಕ್ಷ್ಮ ನೀರಾವರಿ ಘಟಕಗಳಿಗೆ ನೀರು ಬಳಕೆ ಪ್ರಮಾಣ ಪತ್ರ ಹಾಗೂ ಸಂಸ್ಕರಣೆ ಘಟಕಗಳಿಗೆ 15 ಹೆಚ್.ಪಿ ವಿದ್ಯುತ್ ಸಂಪರ್ಕ ಪಡೆದ ದಾಖಲಾತಿಗಳೊಂದಿಗೆ ಲಗತ್ತಿಸಬೇಕು.13 ಘಟಕದ ಜೊತ ಅರ್ಜಿ ಸಲ್ಲಿಸಲಾದ ರೈತನೇ ಖುದ್ದಾಗಿ ರೈತ ಸಂರ್ಪಕ ಕೇಂದ್ರದ ಮುಖ್ಯಸ್ಥರೊಂದಿಗೆ ರೈತ ಸಂಪರ್ಕ ಕೇಂದ್ರದಲ್ಲಿ, ಸಹಾಯಕ ಕೃಷಿ ನಿರ್ದೇಶಕ, ಕಚೇರಿಯಲ್ಲಿ ತೆಗೆಯಲಾದ ಫೋಟೋ ಪ್ರತಿಯೊಂದಿಗೆ  ರೈತರ ಹಾಗೂ ಕೃಷಿ ಅಧಿಕಾರಿಗಳ ದೃಢೀಕರಣ ಕಡ್ಡಾಯವಾಗಿ ಮಾಡಬೇಕು.

ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ಅಥವಾ ಆಯಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು.

ಕೃಷಿ ಇಲಾಖೆಯಿಂದ ಸಿಗುವ ಕೃಷಿ ಯಂತ್ರೋಪಕರಣಗಳ ಪಟ್ಟಿ ಇಲ್ಲಿದೆ.

ಕೃಷಿ ಯಂತ್ರೋಪಕರಣಗಳು                          ಎಸ್.ಸಿ, ಎಸ್.ಟಿಯವರಿಗೆ                              ಇತರೆ ವರ್ಗಕ್ಕೆ

ಕೃಷಿ ಯಂತ್ರೋಪಕರಣ                                ಗರಿಷ್ಟ ಪ್ರೋತ್ಸಾಹಧನ      ಸಬ್ಸಿಡಿ    ಗರಿಷ್ಟ ಪ್ರೋತ್ಸಾಹಧನ  ಸಬ್ಸಿಡಿ

2 Replies to “ಕೃಷಿ ಇಲಾಖೆಯಲ್ಲಿ ಶೇ 60 ರಷ್ಟು ಪ್ರೋತ್ಸಾಹಧನದಲ್ಲಿ ಸಿಗುವ ಕೃಷಿ ಯಂತ್ರೋಪಕರಣಗಳ (Farm machinery) ಪಟ್ಟಿ ಇಲ್ಲಿದೆ”

Leave a Reply

Your email address will not be published. Required fields are marked *