ಒಲಿಂಪಿಕ್ಸ್ ನಲ್ಲಿ ಭರ್ಜಿ ಎಸೆತದಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ ನೇಗಿಲಯೋಗಿಯ ಪುತ್ರ ನೀರಜ್ ಛೋಪ್ರಾ

Written by By: janajagran

Published on:

ಒಲಿಂಪಿಕ್ಸ್ ಅಂಗಣದಲ್ಲಿ ಚಿನ್ನದ ಪದಕ ಗೆದ್ದುಕೊಳ್ಳುವ ಮೂಲಕ  ಭಾರತದ ಶತಮಾನ ಹಳೆಯ ಕನಸನ್ನು ನನಸುಗೊಳಿಸಿದ್ದಾರೆ. 23 ವರ್ಷದ ಭರ್ಜಿ ಎಸೆತಗಾರ ನೀರಜ್ ಛೋಪ್ರಾ. ಹರಿಯಾಣ ಮೂಲದ ನೀರಜ್ ಛೋಪ್ರಾ ರೈತನ ಮಗನಾಗಿದ್ದು,  ಈ ವರ್ಷದ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಪಾಣಿಪತ್ ಸಮೀಪದ ಖಾಂಡ್ರಾ ಹಳ್ಳಿಯ ರೈತನ ಮಗನಾಗಿರುವ ನೀರಜ್ ಛೋಪ್ರಾ 2ನೇ ಪ್ರಯತ್ನದಲ್ಲಿ 87.58 ಮೀಟರ್ ದೂರ ಭರ್ಜಿ ಎಸೆದು ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ

125 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಅಥ್ಲೇಟಿಕ್ಸ್ ನಲ್ಲ ಭಾರತಕ್ಕೆ ಮೊದಲ ಚಿನ್ನದ ಪದಕ ಇದಾಗಿದೆ.  . ಶೂಟರ್ ಅಭಿನವ್ ಬಿಂದ್ರಾ ಬಳಿಕ ವೈಯಕ್ತಿಕ ಚಿನ್ನ ಗೆದ್ದ 2ನೇ ಭಾರತೀಯರಾಗಿದ್ದಾರೆ. ಈ ಸಲದ ಒಲಿಂಪಿಕ್ಸ್ ನಲ್ಲಿ ಭಾರತವು ಒಟ್ಟು 7 ಪದಗಳನ್ನು ಗೆದ್ದಿದೆ. ಇಲ್ಲಿಯವರೆಗೆ ನಡೆದ ಒಲಿಂಪಿಕ್ಸ್ ನಲ್ಲಿ ಒಟ್ಟು 35 ಪದಕಗಳನ್ನು ಗೆದ್ದಿದೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದ 35 ಪದಕಗಳಲ್ಲಿ 10 ಚಿನ್ನ, 9 ಬೆಳ್ಳಿ ಹಾಗೂ 16 ಕಂಚಿನ ಪದಕಗಳು ಸೇರಿವೆ.

ಈ ವರ್ಷದ ಒಲಿಂಪಿಕ್ಸ್ ನಲ್ಲಿ 1 ಚಿನ್ನ, 2 ಬೆಳ್ಳಿ, 4 ಕಂಚಿನ ಪದಕ ಗೆದ್ದು ಶ್ರೇಷ್ಠ ಸಾಧನೆ ಮಾಡಿದೆ. 2016 ರಲ್ಲಿ 6 ಪದಕ ಗಳಿಸಿದ್ದೇ ಹಿಂದಿನ ದಾಖಲೆಯಾಗಿತ್ತು. 10 ಚಿನ್ನದ ಪದಕದಲ್ಲಿ ಭಾರತ ಪುರುಷರ ಹಾಕಿಯಲ್ಲಿ 8 ಚಿನ್ನ ಜಯಿಸಿದ್ದರೆ, ಶೂಟರ್ ಅಭಿನವ್ ಬಿಂದ್ರಾ ವೈಯಕ್ತಿಕ ವಿಭಾಗದಲ್ಲಿ ಸ್ವರ್ಣ ಗೆದ್ದಿದ್ದರು. ಈಗ ಅಭಿನವ್ ಬಿಂದ್ರಾ ಭರ್ಜಿ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ನೀರಜ್ ಛೋಪ್ರಾಗೆ ಬಹುಮಾನಗಳ ಸರಮಾಲೆ

ಹರ್ಯಾಣದ ಮುಖ್ಯಮಂತ್ರಿ ಶನಿವಾರವೇ ನೀರಜ್ ಛೋಪ್ರಾಗೆ 6 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ. ಇದೇ ವೇಳೆ ಪಂಜಾಬನ ಮುಖ್ಯಮಂತ್ರಿ ಕೂಡ 2 ಕೋಟಿ ರೂಪಾಯಿಗಳ ಬಹುಮಾನ ಘೋಷಿಸಿದ್ದಾರೆ. ಕೇಂದ್ರ ಸರ್ಕಾರವು 75 ಲಕ್ಷ ರೂಪಾಯಿ ಘೋಶಿಸಿದೆ. ಐಒಎ 75 ಲಕ್ಷ ಹಾಗೂ ಕರ್ನಾಟಕ ಸರ್ಕಾರವು 15 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ವಿಮಾನಯಾನ ಸಂಸ್ಥೆ ಇಂಡಿಗೋ ಭಾರತದ ಯಾವುದೇ ಮೂಲೆಗೆ ಪ್ರಯಾಣಿಸಲು ಒಂದು ವರ್ಷಗಳ ಕಾಲ ಉಚಿತ ಸೇವೆ ನೀಡುವುದಾಗಿ ತಿಳಸಿದೆ. ಆಗಸ್ಟ್‌ 8ರಿಂದ ಆಗಸ್ಟ್‌ 7ರವರೆಗೆ ಈ ಕೊಡುಗೆ ಲಭ್ಯವಾಗಲಿದೆ ಎಂದು ಹೇಳಿದೆ.

ಭಾರತದ ಜನಪ್ರಿಯ ಕಾರು ತಯಾರಿಕಾ ಸಂಸ್ಥೆ ಆಗಿರುವ ಮಹಿಂದ್ರಾ ಅಂಡ್‌ ಮಹಿಂದ್ರಾ ಸಂಸ್ಥೆಯ ಮುಖ್ಯಸ್ಥರಾದ ಆನಂದ್‌ ಮಹಿಂದ್ರಾ ಅವರು ನೂತನ ಎಕ್ಸ್‌ಯುವು 700 ಐಶಾರಾಮಿ ಕಾರನ್ನು ನೀರಜ್‌ಗೆ ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.

13 ವರ್ಷದ ಬಳಿಕ ಜನಗಣಮನ

ಒಲಿಂಪಿಕ್ಸ್ ನಲ್ಲಿ ಸ್ವರ್ಣ ಗೆದ್ದ ದೇಶದ ರಾಷ್ಟ್ರಗೀತೆ ಮಾತ್ರ ಪದಕ ಪ್ರಧಾನ ಸಮಾರಂಭದಲ್ಲಿ ಮೊಳಗುತ್ತದೆ. ನೀರಜ್ ಈ ಸಾಧನೆಯಿಂದ ಒಲಿಂಪಿಕ್ಸ್ ನಲ್ಲಿ 13 ವರ್ಷಗಳ ಬಳಿಕ ಜನಗಣಮನ ಮೊಳಗುವಂತಾಯಿತು.

ಈ ವರ್ಷ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತರ ಪಟ್ಟಿ

ನೀರಜ್ ಛೋಪ್ರಾ ಅಥ್ಲೇಟಿಕ್ಸ್ ನಲ್ಲಿ ಚಿನ್ನ, ಮೀರಾಬಾಯಿ ಚಾನು ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ, ರವಿಕುಮಾರ ದಹಿಯಾ ಕುಸ್ತಿಯಲ್ಲಿ ಬೆಳ್ಳಿ, ಪಿವಿ ಸಿಂಧು ಬ್ಯಾಂಡ್ಮಿಂಟನ್ ನಲ್ಲಿ, ಪುರುಷರ ಹಾಕಿ ತಂಡ, ಭಜರಂಗ್ ಪೂನಿಯಾ ಕುಸ್ತಿಯಲ್ಲಿ, ಲವ್ಲಿನಾ ಬೋರ್ಗೋಹೈನ್ ಬಾಕ್ಸಿಂಗ್ ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

——

ಇದೊಂದು ನಂಬಲಸಾಧ್ಯ ಅನುಭವ. ನನಗೆ ಮತ್ತು ದೇಶಕ್ಕೆ ಇದು ಹೆಮ್ಮೆಯ ಸಂಗತಿಯಾಗಿದೆ. ಅರ್ಹತಾ ಸುತ್ತಿನ ಬಳಿಕ ಪದಕ ಗೆಲ್ಲುವ ವಿಶ್ವಾಸವಿತ್ತು ಆದರೆ ಚಿನ್ನದ ಪದಕ ಗೆಲ್ಲುವ ಒಲಿಯುವ ಯೋಚನೆ ಮಾಡಿರಲಿಲ್ಲ. ಈ ಚಿನ್ನದ ಪದಕಗಳನ್ನು ಅಥ್ಲೇಟಿಕ್ಸ್ ದಿಗ್ಗದರಾಜ ಮಿಲ್ಕಾಸಿಂಗ್ ಮತ್ತು ಪಿಟಿ ಉಷಾ ಅವರಿಗೆ ಅರ್ಪಿಸುವೆ. ಪದಕದೊಂದಿಗೆ ಮಿಲ್ಕಾ ಸಿಂಗ್ ಅವರನ್ನು ಭೇಟಿಯಾಗುವ ಕನಸು ಕಂಡಿದ್ದೆ. ಆದರೆ ಇಂದು ಮಿಲ್ಕಾಸಿಂಗ್ ಈ ಪದಕ ನೋಡಲು ಇಲ್ಲವೆಂಬುದೇ ಕೊರಗಿದೆ.

–ನೀರಜ್ ಛೋಪ್ರಾ

Leave a comment