ರೈತರಿಗೆ ತಮ್ಮ ಜಮೀನಿಗೆ ಹೋಗಲು ದಾರಿಯಿಲ್ಲದೆ ಸಾಕಷ್ಟು ಕಷ್ಟ ಪಡುತ್ತಿರುತ್ತಾರೆ. ಜಮೀನು ಹತ್ತಿರವೇ ಇರುತ್ತದೆ. ಆದರೆ ಎತ್ತಿನ ಬಂಡಿ ಹೋಗುವ ದಾರಿಯಿಲ್ಲದೆ ಬಹಳಷ್ಟು ತೊಂದರೆ ಅನುಭವಿಸುತ್ತಿರುತ್ತಾರೆ. ರೈತರ ಜಮೀನಿಗೆ ಕಾಲುದಾರಿ ಅಥವಾ ಎತ್ತಿನಬಂಡಿ ಹೋಗುವ ದಾರಿಯಿದ್ದರೂ ಸಹ ರೈತರಿಗೆ ಗೊತ್ತಿರುವುದಿಲ್ಲ. ನಿಮ್ಮ ಹೊಲದ ಸರ್ವೆ ನಂಬರ್ ನಕ್ಷೆ, ಹೋಗುವ ದಾರಿ ನೋಡಬೇಕೆ.. ಇಲ್ಲಿದೆ ಸಂಪೂರ್ಣ ಮಾಹಿತಿ.
ನಿಮ್ಮ ಜಮೀನಿನ ಸುತ್ತಮುತ್ತ ಯಾವ ಯಾವ ಸರ್ವೆ ನಂಬರ್ ಗಳಿವೆ, ನಿಮ್ಮ ಜಮೀನಿಗೆ ಹೋಗುವ ಕಾಲದಾರಿ ಯಾವುದು, ಎತ್ತಿನಬಂಡಿ ದಾರಿಯಾವುದು ಎಂಬುದನ್ನು ನೋಡಲು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿಯೇ ನೋಡಬಹುದು. ಹೌದು ಭೂ ಕಂದಾಯ ಇಲಾಖೆ ಈ https://www.landrecords.karnataka.gov.in/service3/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕಂದಾಯ ಇಲಾಖೆಯ ವೆಬ್ ಪೇಜ್ ಓಪನ್ ಆಗುತ್ತದೆ. ಇಲ್ಲಿ ಜಿಲ್ಲೆ, ತಾಲೂಕು, ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ Cadastral Maps ಆಯ್ಕೆ ಮಾಡಿಕೊಳಬೇಕು. ಆಗ ನಿಮ್ಮ ಊರಿನ ಮುಂದೆ ಇರುವ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಪಾಪ್ ಅಪ್ ಬ್ಲಾಕ್ಡ್ ಮೆಸೆಜ್ ಬರುತ್ತದೆ. ಅಲ್ಲಿ Always show ಮೇಲೆ ಕ್ಲಿಕ್ ಮಾಡಿದ ನಂತರ ಮ್ಯಾಪ್ ಓಪನ್ ಆಗುತ್ತದೆ. ಇಲ್ಲಿ ನಿಮ್ಮೂರಿನ ಸಂಪೂರ್ಣ ಜಮೀನಿನ ಮ್ಯಾಪ್ ಓಪನ್ ಆಗುತ್ತದೆ.
ಈ ಮ್ಯಾಪ್ ನಲ್ಲಿ ನಿಮ್ಮೂರಿನ ಗಡಿರೇಖೆ, ಸರ್ವೆ ನಂಬರ್ ಗಳು, ಕಾಲುದಾರಿ, ಬಂಡಿ ದಾರಿ, ಹಳ್ಳ, ಬೆಟ್ಟ, ಮನೆಗಳು, ಕೆರೆ, ನೀರು ಹರಿಯು ದಿಕ್ಕು ಬಾವಿ, ದೇವಸ್ಥಾನ ಎಲ್ಲವೂ ನಮೂದಾಗಿರುತ್ತದೆ. ನಕ್ಷೆಯ ಎಡಗಡೆ ನಿಮ್ಮೂರಿನ ಕೆರೆ, ರಸ್ತೆ ಗುರುತಿಸಲು ಒಂದು ರೇಖೆ ಕೊಟ್ಟಿರಲಾಗುತ್ತದೆ. ಅಂದರ್ ಗುರುತಿಸಲು ಮಾರ್ಕ್ ಅಥವಾ ಚಿಹ್ನೆ ಮಾಡಲಾಗಿರುತ್ತದೆ. ಅದರ ಆಧಾರದ ಮೇಲೆ ನೀವು ಸುಲಭವಾಗಿ ಕೆರೆ, ಬಾವಿ, ಗುಡ್ಡ, ಸರ್ವೆ ನಂಬರ್, ಕಾಲುದಾರಿ, ಬಂಡಿದಾರಿ ಯಾವುದೆಂಬುದನ್ನು ಸುಲಭವಾಗಿ ಗುರುತಿಸಬಹುದು.
ಈ ಮ್ಯಾಪನ್ನು ಕಂದಾಯ ಇಲಾಖೆಯು ಸಿದ್ದಪಡಿಸಿರುತ್ತದೆ. ಈ ಮ್ಯಾಪ್ ಸಹಾಯದಿಂದಾಗಿ ರೈತರು ಸುಲಭವಾಗಿ ಕಾಲುದಾರಿ, ಬಂಡಿದಾರಿ, ಕೆರೆ, ಬೆಟ್ಟ, ಗಡಿರೇಖೆ, ನಿಮ್ಮ ಅಕ್ಕಪಕ್ಕದಲ್ಲಿರುವ ಸರ್ವೆ ನಂಬರ್ ಗಳನ್ನು ಸುಲಭವಾಗಿ ಗುರುತಿಸಬಹುದು. ಒಮ್ಮೆ ನೀವು ಸಹ ನಿಮ್ಮ ಸರ್ವೆ ನಂಬರ್ ಎಲ್ಲಿದೆ, ನಿಮ್ಮ ಹೊಲಕ್ಕೆ ಹೋಗಲು ಎತ್ತಿನ ಬಂಡಿ ದಾರಿಯಾವುದೆಂಬುದನ್ನು ಸುಲಭವಾಗಿ ನೋಡಬಹುದು.
ನಿಮ್ಮೂರಿನ ಮ್ಯಾಪನ್ನು ಮೇಲೆ ತಿಳಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ ಡೋನ್ಲೋಡ್ ಮಾಡಿಕೊಂಡು ಪ್ರಿಂಟ್ ಮಾಡಿಕೊಳ್ಳಬಹುದು. ಇದು ನಿಮ್ಮ ಹೊಲದ ಸುತ್ತಮುತ್ತಲಿರುವ ಸರ್ವೆನಂಬರ್ ಗಳು ಹಾಗೂ ದಾರಿಯನ್ನು ಗುರುತಿಸಲು ಅನುಕೂಲವಾಗುತ್ತದೆ. ಕೇವಲ ಒಬ್ಬ ರೈತರಿಗಷ್ಟೇ ಅಲ್ಲ, ಗ್ರಾಮದ ಎಲ್ಲಾ ಜನರಿಗೂ ಈ ಮ್ಯಾಪ್ ಅನುಕೂಲವಾಗುತ್ತದೆ.
ಅತ್ಯುತ್ತಮ ಜನೋಪಯೋಗಿ ಸಂದೇಶ
Very informative and useful information for all farmers and others. Thank you for your valuable post sir.