ನಿಮ್ಮ ಜಮೀನು ಒತ್ತುವರಿಯಾಗಿದೆಯೇ…. ಅಥವಾ ಹಾಕಿದ ಕಲ್ಲುಗಳು ನಾಶವಾಗಿವಿಯೇ ಅಥವಾ ಪಹಣಿಯಲ್ಲಿ ಜಮಿನೀ ಕಡಿಮೆ ತೋರಿಸುತ್ತಿದೆಯೇ…. ಹಾಗಾದರೆ ಚಿಂತೆ ಮಾಡಬೇಡಿ..ಜಮೀನಿನ ಹದ್ದುಬಸ್ತು ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು…ಇಲ್ಲಿದೆ ಸಂಪೂರ್ಣ ಮಾಹಿತಿ.
ಹದ್ದು ಬಸ್ತಿಗೆ ಅರ್ಜಿ ಸಲ್ಲಿಸಿದರೆ ಭೂ ಮಾಪಕರು ನಿಮ್ಮ ಜಮೀನಿಗೆ ಬಂದು ಸರ್ವೆ ದಾಖಲೆಗಳ ಆಧಾರದ ಮೇಲೆ ನಿಮ್ಮ ಜಮೀನಿನನ್ನು ಅಳತೆ ಕಾರ್ಯ ಮಾಡಿ ಅಳಿಸಿ ಹೋಗಿರುವ ಗಡಿಭಾಗವನ್ನು ಪುನಃ ಪತ್ತೆ ಹಚ್ಚಿ ಜಮೀನಿಗೆ ಗಡಿ ಭಾಗ ಗುರುತು ಮಾಡುತ್ತಾರೆ. ಅಂದರೆ ಹದ್ದು ಬಸ್ತು ಪತ್ತೆಹಚ್ಚಿ ಗುರುತು ಮಾಡುತ್ತಾರೆ. ಇದಕ್ಕೆ ಹದ್ದುಬಸ್ತು ಎನ್ನುತ್ತಾರೆ,
ಹದ್ದುಬಸ್ತಿಗೆ ಏನೇನು ದಾಖಲೆಗಳು ಬೇಕು?
ಅರ್ಜಿದಾರನ ಅಂದರೆ ಜಮೀನು ಹದ್ದುಬಸ್ತು ಮಾಡಿಸುವ ರೈತನ ಆಧಾರ್ ಕಾರ್ಡ್, ಇತ್ತೀಚಿನ ಪಹಣ ಪ್ರತಿ ಇರಬೇಕು. ನಾಡ ಕಚೇರಿ, ಅಥವಾ ನೆಮ್ಮದಿ ಕೇಂದ್ರದ ಸುತ್ತಮುತ್ತಲಿರುವ ಝರಾಕ್ಸ್ ಅಂಗಡಿಗಳಲ್ಲಿ ಹದ್ದುಬಸ್ತಿಗೆ ಅರ್ಜಿ ತೆಗೆದುಕೊಳ್ಳಬೇಕು. ಅರ್ಜಿಯಲ್ಲಿ ಕೇಳಿದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಆಧಾರ್ ಕಾರ್ಡ್ ಹಾಗೂ ಪಹಣಿಯೊಂದಿಗೆ ಅರ್ಜಿದಾರ ಹತ್ತಿರದ ನೆಮ್ಮದಿ ಕೇಂದ್ರ, ನಾಡ ಕಚೇರಿ ಅಥವಾ ತಾಲೂಕು ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿಯ ಶುಲ್ಕ ಸುಮಾರು 150 ರಿಂದ 300 ರೂಪಾಯಿ ಇರುತ್ತದೆ.
ಅರ್ಜಿ ಸಲ್ಲಿಸಿದ ನಂತರ ಪ್ರಕ್ರಿಯೆ
ಅರ್ಜಿದಾರರು ಹದ್ದುಬಸ್ತಿಗೆ ಅರ್ಜಿ ಸಲ್ಲಿಸಿದ ನಂತರ ಭೂಮಾಪಕರಿಗೆ ರವಾನಿಸಲಾಗುತ್ತದೆ. ಭೂಮಾಪಕರು ಅರ್ಜಿಯಲ್ಲಿರುವ ಮಾಹಿತಿಯನ್ನು ಓದಿಕೊಂಡು ಮುಂಚಿತವಾಗಿಯೇ ಅರ್ಜಿದಾರರಿಗೆ ಕರೆ ಮಾಡಿ ಭೂ ಮಾಪನಕ್ಕೆ ದಿನಾಂಕ ನಿಗದಿ ಪಡಿಸುತ್ತಾರೆ. ಅಂದು ಅರ್ಜಿದಾರನ ಎದುರುಗಡೆ ಜಮೀನಿನ ಅಳತೆ ಮಾಡಲಾಗುತ್ತದೆ. ಅಳತೆ ಕಾರ್ಯ ಮುಗಿದ ನಂತರ ಭೂ ಮಾಪಕರು ಸೂಚಿಸಿದ ಸ್ಥಳಗಳಲ್ಲಿ ಅರ್ಜಿದಾರ ಕಲ್ಲುಗಳನ್ನು ಹಾಕಿಕೊಳ್ಳಬೇಕು. ಈ ಬಗ್ಗೆ ಹೇಳಿಕೆ ಪಡೆದುಕೊಂಡು ಈ ಸ್ಥಳವು ಒಂದುವೇಳೆ ಒತ್ತುವರಿಯಾಗಿದ್ದರೆ ಒತ್ತುವರಿ ಎಂದು ಭೂಮಾಪಕರು ತಿಳಿಸುತ್ತಾರೆ. ಅದರ ಅಳತೆ ಮಾಡಿ ಎಷ್ಟು ಪ್ರದೇಶ ಒತ್ತುವರಿಯಾಗಿದೆ ಎಂಬುದರ ಕುರಿತು ಭೂ ಮಾಪಕರು ಸೂಚಿಸಿ ಕಚೇರಿಗೆ ಸೂಚಿಸುತ್ತಾರೆ.
ಅರ್ಜಿದಾರರಿಂದ ಹೇಳಿಕೆ ಪಡೆದುಕೊಂಡು ಒತ್ತುವರಿಯಾಗಿದ್ದರೆ ಒತ್ತುವರಿಯಾಗಿದೆ ಎಂದು ನಕ್ಷೆಯಲ್ಲಿ ತೋರಿಸುತ್ತಾರೆ. ಒಂದು ವೇಳೆ ಒತ್ತುವರಿಯಾಗದಿದ್ದರೂ ಪ್ರದೇಶದ ನಕ್ಷೆ ತಯಾರಿಸಲಾಗುತ್ತದೆ. ಹದ್ದುಬಸ್ತಿಯ ನಕ್ಷೆ ಪ್ರತಿಯನ್ನು ಅರ್ಜಿದಾರರು ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬೇಕು.
ಹದ್ದುಬಸ್ತಿಗೆ ಅರ್ಜಿ ಯಾವಾಗ ಸಲ್ಲಿಸಬೇಕು?
ಜಮೀನು ಸುತ್ತಲೂ ಕಲ್ಲುಗಳು ನಾಶವಾಗಿದ್ದರೆ ಅಥವಾ ಪಕ್ಕದ ಹಿಡುವಳಿದಾರರು ನಿಮ್ಮ ಜಮೀನು ಒತ್ತುವರಿ ಮಾಡಿಕೊಂಡಿದ್ದರೆ ನಿಮ್ಮ ಜಮೀನಿನ ಪಹಣಿಯಲ್ ಕಡಿಮೆ ಜಮೀನು ಇದೆ ಎಂದೆನಿಸಿದರೆ ಹದ್ದುಬಸ್ತಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರನಿಗೆ ಹದ್ದುಬಸ್ತಿಯ ಅಳತೆಯಿಂದ ಸಮಾಧಾನವಾಗದಿದ್ದರೆ ಮೇಲ್ಮನವಿಗೂ ಅರ್ಜಿ ಸಲ್ಲಿಸಬಹುದು.