ವಿದ್ಯಾರ್ಥಿಗಳ ಶಿಷ್ಯವೇತನ ವಿದ್ಯಾರ್ಥಿಗಳ ಖಾತೆಗೆ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ನೋಡಲು ಈಗ ವಿದ್ಯಾರ್ಥಿಗಳು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು (Scholarship status) ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಖಾತೆಗೆ ಶಿಷ್ಯವೇತನ ಜಮೆ ಮಾಡಿದೆ.ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಖಾತೆಗೆ ಶಿಷ್ಯವೇತನ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲಿನಲ್ಲಿಯೇ ಕ್ಷಣಾರ್ಧದಲ್ಲಿ ನೋಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ಸಿಂಪಲ್ ಸ್ಟೆಪ್…. ಈ ಮುಂದಿನ ಲಿಂಕ್ ಮೇಲೆ https://ssp.karnataka.gov.in/homepage.aspx ಕ್ಲಿಕ್ ಮಾಡಿದರೆ ಸಾಕು.  ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನದ  ಪೇಜ್ ಓಪನ್ ಆಗುತ್ತದೆ. ಅಲ್ಲಿ ಇಂಗ್ಲೀಷ್ ನಲ್ಲಿ ಬರೆದ ಟ್ರ್ಯಾಕ್ ಸ್ಟುಡೆಂಟ್ ಸ್ಕಾಲರಶಿಪ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ವಿದ್ಯಾರ್ಥಿಯ SATS ಗುರುತಿನ ಸಂಖ್ಯೆ (ಅಂಕಪಟ್ಟಿಯಲ್ಲಿರುತ್ತದೆ) ನಂತರ ಆಯವ್ಯಯ ವರ್ಷದಲ್ಲಿ 2020-21 ಸೆಲೆಕ್ಟ್ ಮಾಡಬೇಕು. ಕಳೆದ ಎರಡು ವರ್ಷಗಳ ಸ್ಟೇಟಸ್ ಸಹ ನೋಡಬಹುದು. 2021-21ನೇ ವರ್ಷ ಆಯ್ಕೆ ಮಾಡಿದ ನಂತರ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಯಾವ ತಿಂಗಳಲ್ಲಿ ಎಷ್ಟು ಹಣ ವಿದ್ಯಾರ್ಥಿಯ ಖಾತೆಗೆ ಜಮೆಯಾಗಿದೆ ಎಂಬುದು ಗೊತ್ತಾಗುತ್ತದೆ.

ಅಥವಾ ಈ https://ssp.karnataka.gov.in/studentstatusreportforstudent.aspx ಲಿಂಕ್ ಮೇಲೆ ಕ್ಲಿಕ್ ಮಾಡಿ ನೇರವಾಗಿ ವಿದ್ಯಾರ್ಥಿಯ SATS ಗುರುತಿನ ಸಂಖ್ಯೆ ಹಾಗೂ ವರ್ಷ ಆಯ್ಕೆ ಮಾಡಿಕೊಂಡು ಸ್ಟೇಟಸ್ ನೋಡಬಹುದು.

ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಸಿ ಶಿಷ್ಯವೇತನ ಬರದಿದ್ದರೆ ಸಮಾಜ ಕಲ್ಯಾಣ ಇಲಾಖೆಯ ಮೊಬೈಲ್ ನಂಬರ್ ಇರುತ್ತದೆ. ಆ ನಂಬರಿಗೆ ಕರೆ ಮಾಡಬಹುದು. ಇದೇ ರೀತಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯವಾಣಿ ನಂಬರ್ ಸಹ ನೀಡಲಾಗಿದೆ.

Leave a Reply

Your email address will not be published. Required fields are marked *