Sant Sevalal maharaj history in kannada

Written by Ramlinganna

Updated on:

Sant Sevalal Maharaj history in kannada ಲಂಬಾಣಿ ಸಮುದಾಯದ ಆರಾಧ್ಯ ದೈವ ಸದ್ಗುರು ಸೇವಾಲಾಲ್ ಮಹಾರಾಜರ ಜೀವನ ಚರಿತ್ರೆ, ಅವರು ಬಾಲ್ಯ ಜೀವನದಲ್ಲಿ ಮಾಡಿದ ಪವಾಡಗಳು, ಬಂಜಾರಾ ಸಮಾಜದ ಉದ್ದಾರಕ್ಕಾಗಿ ಮಾಡಿದ ಮಹಾನ್ ಕಾರ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕದ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ (ಹಿಂದೆ ಹೊನ್ನಾಳ್ಳಿ ತಾಲೂಕಿನ) ಬೆಳಗುತ್ತಿ ಹೋಬಳಿಯ ಸೂರಗೊಂಡನ ಕೊಪ್ಪ ಎಂಬ ಗ್ರಾಮದಲ್ಲಿ ಶ್ರೀ ಭೀಮಾನಾಯಕ್ ಶ್ರೀಮತಿ ಧರ್ಮಿಣಿ ಮಾತೆ ದಂಪತಿಯಮಗನಾಗಿ ಜನ್ಮತಾಳಿದರು. ಅವರು 1739 ರ ಫೆಬ್ರವರಿ 15 ರಂದು ಜನಿಸಿದರು. ಅವರು ಜನನವಾದ ಸೂರನಗೊಂಡ ಕೊಪ್ಪವನ್ನು ಭಾಯಗಢ ಎಂದು ಕರೆಯುವರು. ಸೇವಾಲಾಲ್ ಮಹಾರಾಜರು ಜಗದಂಬೆಯ ಆರಾಧಕರಾಗಿ ಜೀವನುದ್ದಕ್ಕೂ ಬ್ರಹ್ಮಚಾರಿಯಾಗಿ ಉಳಿದರು.

Sant Sevalal maharaj history: ಬಾಲ್ಯದಲ್ಲಿ ಮಾಡಿದ ಪವಾಡಗಳು

ಬಾಲಕನಾಗಿ ಬೆಳೆಯುತ್ತಿದ್ದಾಗ ಚಿನ್ನಿಕಟ್ಟೆ ಸುತ್ತಮುತ್ತ ಗೋವುಗಳನ್ನು ಮೇಯಿಸಲು ಹೋಗುತ್ತಿದ್ದರು. ಆಗ ಸಹಪಾಠಿಗಳೊಂದಿಗೆ ಆಟವಾಡುತ್ತಾ ಪವಾಡಗಳನ್ನು ತೋರುತ್ತಿದ್ದರು. ಬಂಡಿಯನ್ನು ನಗಾರಿಯನ್ನಾಗಿ ಬಾರಿಸುವುದು. ಕೆಸರನ್ನು ಹುಗ್ಗಿ ಪಾಯಸವನ್ನಾಗಿ ಮಾಡುವುದು. ನೀರನ್ನು ತುಪ್ಪ ಮಾಡಿ ಯಜ್ಞ ಮಾಡುತ್ತಿದ್ದರು ಎನ್ನುವ ಪ್ರತೀತಿ ಇದೆ.

ಮಹಾರಾಷ್ಟ್ರದ ಪೌರಾಗಢದಲ್ಲಿ (ಪೌರಾದೇವಿಯ ಸ್ಥಳ)ಸೇವಾಲಾಲ್ ಮಹಾರಾಜರು ಐಕ್ಯರಾದರು ಎಂದು ಇತಿಹಾಸ ಹೇಳುತ್ತದೆ.

Sant Sevalal maharaj history: ಸೇವಾಲಾಲ್ ಮಹಾರಾಜರ ಬಾಲ್ಯ ಜೀವನ

ರಾಮಸಿ ರಾಮಾವತ್ (ರಾಥೋಡ್) ಗೋತ್ರದ ರಾಮಜಿನಾಯಕರ ಹಿರಿಯ ಮಗ ಭೀಮಾನಾಯಕ. ಭೀಮಾನಾಯಕ ಧರ್ಮೀಣಿಬಾಯಿ ಮದುವೆಯಾದ 12 ವರ್ಷಗಳ ನಂತರ ಮರಿಯಮ್ಮಾ ದೇವಿಯ ಕೃಪೆಯಿಂದ ಸೇವಾಲಾಲರು ಜನಿಸುತ್ತಾರೆ. ನಂತರ ಹಾಪಾ, ಬದ್ದು, ಪೂರಾ ಎಂಬ ಮಕ್ಕಳು ಜನಿಸುತ್ತಾರೆ.

ಇದನ್ನೂ ಓದಿ Banjara Gotra (ಪಾಡಾ)ಗಳೆಷ್ಡು? ಇಲ್ಲಿದೆ ಮಾಹಿತಿ

ಸೇವಾಲಾಲರಿಗೆ 12 ವರ್ಷ ತುಂಬಿದಾಗ ಮರಿಯಮ್ಮ ತನ್ನ ಷರತನ್ನು ಈಡೇರಿಸಬೇಕೆಂದು  ಧರ್ಮಿಣಿಬಾಯಿಯವರ ಕನಸಿನಲ್ಲಿ ಬಂದು ಸೇವಾಲಾಲರನ್ನು ತನ್ನ ಸೇವೆಗೆ ಬಿಡಬೇಕೆಂದು ಒತ್ತಾಯಿಸುತ್ತಾಳೆ. ಭೀಮಾನಾಯಕ ದಂಪತಿಯ ಮುದ್ದಿನ ಮಗ ಸೇವಾಲಾಲ್ ಆಗಿದ್ದರು.  . ದೇವಿ ಭೀಮಾನಾಯಕನಿಗೆ ನೀಡಿದ ಸೂಚನೆಯಂತೆ ಹರಕೆ ಈಡೇರಿಸಲು ಕೇಳಿದರೂ ಭೀಮಾನಾಯಕ ಹಿಂದೇಟು ಹಾಕುತ್ತಿರುತ್ತಾರೆ.  ಸೇವಾಲಾಲರು ಸದಾ ಭಗವಂತನ ಧ್ಯಾನದಲ್ಲಿ ನಿರತರಾಗಿರುತ್ತಾರೆ.

12 ವರ್ಷಗಳಾದರೂ ಭೀಮಾನಾಯಕ ಹರಕೆ ತೀರಿಸಿದೆ ಇರುವುದರಿಂದ ದೇವಿ ಕುಪಿತಗೊಳ್ಳುತ್ತಾಳೆ. ಇದರಿಂದಾಗಿ ಭೀಮಾನಾಯಕನಿಗೆ ಬಗೆಬಗೆಯ ಕಂಟಕಗಳು ಬರಲಾರಂಭಿಸುತ್ತದೆ.ಹಲವಾರು ದನಗಳು ಕಣ್ಮರೆಯಾಗುತ್ತವೆ. ತಾಂಡದ ಜನ ಅನಾರೋಗ್ಯಕ್ಕೊಳಗಾಗುತ್ತಾರೆ.  ಆರಂಭದಲ್ಲಿ ಸೇವಾಲಾಲ ಮಹಾರಾಜರು ಕೃಷ್ಣನ ಭಕ್ತರಾಗಿರುತ್ತಾರೆ. ವಚನದಂತೆ ನಡೆಯದೆ ಇರುವದರಿಂದ ಹಲವಾರು ಸಂಕಷ್ಟಗಳು ಬರುತ್ತಿವೆಯೆಂದು ಅರಿವಾದ ನಂತರ ಸೇವಾಲಾಲರಿಗೆ ನೀನು ದೇವಿಯವರ ಭಕ್ತನಾಗಬೇಕೆಂದು ಒತ್ತಾಯ ಮಾಡುತ್ತಾರೆ.  ಆರಂಭದಲ್ಲಿ ಭಗವಂತನ ಸೇವೆಯೇ ಮುಖ್ಯವೆಂದು ಭಾವಿಸಿದ ಸೇವಾಲಾಲ ಮಹಾರಾಜರು ನಂತರ ತಂದೆಯ ಒತ್ತಾಯದಿಂದಾಗಿ ದೇವಿಯ ಭಕ್ತನಾಗುತ್ತಾನೆ. ಅಲ್ಲೇ ಜಗದಂಬೆಯ ಗುಡಿ ಕಟ್ಟಿಸುತ್ತಾನೆ. ನಂತರ ದೇವಿಯ ಸೇವೆ ಮಾಡಿದ್ದರಿಂದ ದೈವೀಶಕ್ತಿ ಪಡೆಯುತ್ತಾನೆ.

ಭಾಯಗಡ್ ಸೂರ್ ಖಂಡ್ (Bhaygadh)

ಸೂರಗೊಂಡನಕೊಪ್ಪವನ್ನು ಬಂಜರಾ ಸಮಾಜದವರು ಭಾಯಗಡ್ ಸೂರಖಂಡ್ ಎಂದು ಕರೆಯುತ್ತಾರೆ. ಸೇವಾಲಾಲ್ ಮಹಾರಾಜರನ್ನು ಮೋತಿವಾಳೋ, ಲಾಲ್ ಮೋತಿ ಎಂದು ಕರೆಯುವರು.

ಮೋತಿವಾಳೋ ಬಾಪು (motivalo bapu)

ಮುಂಬಾಯಿನಲ್ಲಿರುವ ಸ್ಮಿತ್ ಭಾವುಚಾ ಎಂಬ ಸ್ಥಳದಲ್ಲಿ ಹಿಂದೆ ಪೋರ್ಚುಗೀಸರ ಹಡಗು ಸಿಕ್ಕಿ ಹಾಕಿಕೊಳ್ಳುತ್ತದೆ. ಇದನ್ನು ಸೇವಾಲಾಲ ಮಹಾರಾಜರು ತಮ್ಮ ಜಾಣತನದಿಂದ ದಡ ಸೇರಿಸಿದ್ದರಿಂದ ಪೋರ್ಚುಗೀಸರು ಸೇವಾಲಾಲ ಮಹಾರಾಜರಿಗೆ ಮುತ್ತಿನ ಹಾರ ಕಾಣಿಕೆಯಾಗಿ ನೀಡುತ್ತಾರೆ. ಹಾಗಾಗಿ ಸೇವಾಲಾಲರ ಹೆಸರು ಮೋತಿವಾಳೋ ಎಂದು ಹೆಸರಿಡಲ್ಪಡಲಾಯಿತು.

ಬಂಜಾರಾ ಹಿಲ್ಸ್ (Banjara hills)

ಸೇವಾಲಾಲ ಮಹಾರಾಜರ ದೈವೀ ಶಕ್ತಿಯನ್ನು ತಿಳಿದು ಹೈದ್ರಾಬಾದಿನ ನಿಜಾಮ ಸೇವಾಲಾಲ ಮಹಾರಾಜರನ್ನು ಕರೆದು ಪಾದಪೂಜೆ ಮಾಡಿ, ಕಪ್ಪಕಾಣಿಕೆ ನೀಡಿದರು.  ಹೈದ್ರಾಬಾದಿನ ಕೇಂದ್ರ ಸ್ಥಾನದಲ್ಲಿ ಅವರ ತಂಡ ನೆಲೆಯೂರಲು ಒಂದಿಷ್ಟು ಜಾಗವನ್ನು ಅರ್ಪಿಸುತ್ತಾನೆ. ಆ ಪ್ರದೇಶವನ್ನು ಈಗಲೂ  ಬಂಜಾರಾ ಹಿಲ್ಸ್ ಎಂದು ಕರೆಯುತ್ತಾರೆ.

ತೋಳಾರಾಂ ಕುದುರೆ ಗರಸ್ಯಾ ಸಾಂಡ್ (Tolaram garsya sand)

ಬಂಜಾರಾ ಸಮುದಾಯವಿರುವ ಕಡೆ ಸಂಚರಿಸುತ್ತಾ ಅವರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ. ಅವರು ಕುದುರೆಯ ಮೇಲೆ ಸಂಚರಿಸುತ್ತಾರೆ.  ಅವರ ಕುದುರೆಯ ಹೆಸರು ತೋಳಾರಾಮ. ಅದು ಬಿಳಿ ಬಣ್ಣದ್ದಾಗಿತ್ತು.  ಬಿಳಿಬಾವುಟ, ಬಿಳಿ ವಸ್ತ್ರ,   ಆತ್ಮರಕ್ಷಣೆಗಾಗಿ ನಿಜಾಮರು ಉಡುಗೋರೆಯಾಗಿ ನೀಡಿದ ಕತ್ತಿಯನ್ನು ಜೊತೆಯಲ್ಲಿಡುತ್ತಿದ್ದರು. ಅವರ ಜೊತೆ ತೋಳಾರಾಂ ಕುದುರೆ ಹಾಗೂ ಗರಸ್ಯಾ ಸಾಂಡ್ ಸದಾ ಇರುತ್ತಿದ್ದವು.

ಇದನ್ನೂ ಓದಿಪಂಚ್ ಆವೋನಿ ಭಾ ಜಳ್ ಲೇಮಾ

ಸಂತ ಸೇವಾಲಾಲ್ ಮಹಾರಾಜರು ಮಾಡುತ್ತಿರುವ ಪವಾಡಗಳಿಂದ ಅವರು ದೈವೀ ಪುರುಷರಾಗುತ್ತಾರೆ. ಸೇವಾಲಾಲರು ಸಿದ್ದಿ ಪುರುಷರುಎಂದು ಖ್ಯಾತಿ ಪಡೆದಾಗ ಕೆಲ ಪಡ್ಡೆ ಹುಡುಗರು ಅವರನ್ನು ಪರೀಕ್ಷಿಸಲು ಮುಂದಾಗುತ್ತಾರೆ.

ಒಬ್ಬ ಹುಡುಗನಿಗೆ ಹುಡುಗಿಯ ವೇಷಭೂಷಣ ತೊಡಿಸಿ ಸೇವಾಭಾಯರ ಬಳಿಗೆ ಕರೆದುಕೊಂಡು ಹೋಗುತ್ತಾರೆ. ಆ ಹುಡುಗಿಗೆ ಮದುವೆಯಾಗಿ 12 ವರ್ಷ ಆಗಿದೆ. ಮಕ್ಕಳಾಗಿಲ್ಲವೆಂದು ಇವಳ ವಂಶ ಬೆಳೆಯುಂತೆ ಮಾಡಲು ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತಾರೆ. ಸೇವಾಭಾಯರಿಗೆ ಈ ಹುಡುಗರ ಕುತಂತ್ರ ತಿಳಿಯುತ್ತದೆ. ಅವರು ಆ ಹುಡುಗಿಗೆ ಶೀಘ್ರ ಮಕ್ಕಳಾಗುತ್ತವೆ ಇವಳ ವಂಶ ಅನಾದಿ ಕಾಲದವರಿಗೆ ಬಾಳುತ್ತದೆ ಎಂದು ಅಶೀರ್ವದಿಸಿ ಕಳುಹಿಸಿ ಕೊಡುತ್ತಾರೆ. ನಂತರ ಆ ಪಡ್ಡೆ ಹುಡುಗರು ಸೇವಾಭಾಯರನ್ನು ಹಿಯಾಳಿಸುತ್ತಾ ಗ್ರಾಮದ ಕಡೆ ಹೋಗುತ್ತಿರುತ್ತಾರೆ. ಮಾರ್ಗ ಮಧದಲ್ಲಿ ವೇಷಧಾರಿಯಾಗಿದ್ದ ಹುಡುಗ ಹೆಣ್ಣಾಗಿ ಪರಿವರ್ತನೆಯಾಗಿರುವುದು ಗೊತ್ತಾಗುತ್ತದೆ. ಇದರಿಂದ ಗಾಬರಿಕೊಂಡ ಆ ವೇಷಧಾರಿಯಾಗಿದ್ದ ಹುಡುಗ ಸೇವಾಲಾಲ್ ಹತ್ತಿರ ಬರುತ್ತಾರೆ. ಮತ್ತೆ ಹುಡಗನನ್ನಾಗಿ ಪರಿವರ್ತಿಸಬೇಕೆಂದು ಬೇಡಿಕೊಳ್ಳುತ್ತಾರೆ. ಆಗ ಸೇವಾಭಾಯರು ತಾವು ಒಮ್ಮೆ ನುಡಿದ ನುಡಿ ಹುಸಿಯಾಗುವದಿಲ್ಲ ಎಂದು ಹೇಳುತ್ತಾರೆ. ನಾನು ನುಡಿದಂತೆ ಇವಳಿಗೆ ಮಕ್ಕಳಿಗಾ ವಂಶ ಬೆಳೆಯುತ್ತದೆ ಎಂದು ಹೇಳಿ ಅವರಿಗೆ ಕಳಿಸುತ್ತಾರೆ.ಇಲ್ಲಿ ಸೇವಾಭಾಯರ ಸತ್ಯ, ಕಾಳಜಿ, ನಿಷ್ಠೆ ಎಲ್ಲವೂ ಅಭಿವ್ಯಕ್ತವಾಗಿದೆ.

ಸೇವಾಲಾಲ್ ಮಹಾರಾಜರು ನೀಡಿದ ಹಿತ ನುಡಿಗಳು (ಕಡಿ)ಇಲ್ಲಿದೆ

  1. ಕೋರ್ ಗೋರೂನ್ ಸಾಯಿ ವೆಣು,

ಜೀವ ಜನ್ ಗಾನಿರ್ ಸಾಯಿವೇಣು,

ಮುಂಗ್ರಿ ಖುಂಟಾರ್ ಸಾಯಿ ವೇಣು,

ಕೀಡಾ ಮಕೋಡಾರ ಸಾಯಿ ವೇಣು.

  1. ಚೋರಿ ಮತ್ ಕರೋ,

ಜೊ ಕರಿಯೋ ಚೋರಿ,

ಖಾಂಯೆ ಕೋರಿ,

ಹಾತೆಮಾಡಿ ಹತಕಡಿ,

ಪಗಮಾಯಿ ಬೇಡಿ,

ಡೋರಿ ಡೋರಿ ಹಿಂಡಿಯೇ

  1. ಗೋರ್ ಗರೀಬೇನ್ ದಾಂಡನ್ ಖಾಯೆ

ವೋರ್ ಸಾತ್ ಪೀಡಿ ಪರ್ ದಾಗ್ ಲಗ್ ಜಾಯೆ

ವಂಶ್ ಪರ್ ದೀವೋ ಕೋನಿ ರಿಯೇ.

  1. ಜಾಣಜೋ ಛಾಣಜೋ ಮಾನ್ ಜೋ ಅಂದರೆ ಆಲಿಸು, ಆಲಿಸಿದ್ದರಲ್ಲಿ ಒಳಿತು ಯಾವುದು ಕೆಡುಕು ಯಾವುದು ಎಂಬುದನ್ನು ಪರಿಶೀಲಿಸು, ಒಳ್ಳೆಯದನ್ನು ಸ್ವೀಕರಿಸು ಎಂದರ್ಥ.
  2. ಅನುಭಾವೇತಿ ಕಳಜಕೋ ಖರೋ, ಅನುಭಾವೇತಿ ಸೀಕಜಕೋ ಭುಲಾಯೆನಿ
  3. ರಪಿಯಾನ ಕಟೋರೋ ಪಾಣಿ ವಕಿಯೇ

ರಪಿಯಾನ ತೇರ ಚಣಾ ವಕಿಯೇ

  1. ಮಾಯೆನ ಬೇಟಾ ಭಾರಿ ವಿಯೇ

ಮಲಕೇರ ವಾತ್ ಪಲಕೇಮಾ ವಿಯ

  1. ಸೋನೇರ ಮೋಲ್ ಸಿಂಗೇವಾಳ್ ಗಾವಡಿ ವಕಜಾಯ
  2. ಅಜಿ ಜಲಮ್ ಲಿಂಯೂ ಬನಾ ಹತಿಯಾರೇರ ವೇರ್ ಮಚಾಂಯೂ
  3. ದಾರು ಗಾಂಜಾ ಮತ್ ಪೀವೋ, ಕಾಮ್ ಕ್ರೋಧೇರಿ ಧೂಣಿ ಬಾಳೋ ಹೀಗೆ ಹೇಳುತ್ತಾ ಜನರಲ್ಲಿ ಅರಿವು ಮೂಡಿಸುತ್ತಿದ್ದರು. ಮಾನವ ಜನ್ಮ ಪವಿತ್ರವಾದದ್ದು, ಇದನ್ನು ಹಾಳು ಮಾಡಿಕೊಳ್ಳಬಾರದು.

ಬಂಜಾರಾ ಸಮುದಾಯ ಹಲವಾರು ವರ್ಷಗಳಿಂದ ನಗರ ಪ್ರದೇಶಗಳಿಂದ ಹೊರಗುಳಿದ್ದಿದ್ದರು. ನಗರ ಸಂಪರ್ಕವಿಲ್ಲದೆ ಅಲೆಮಾರಿಗಳಾಗಿ ಜೀವನ ಸಾಗಿಸುತ್ತಿದ್ದರು. ಬಂಜಾರ ಸಮಾಜ ಪಡುವತ್ತಿರುವ ಕಷ್ಟವನ್ನರಿತು ಅವರ ಉದ್ದಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಅರಣ್ಯವಾಸಿಗಳಾಗಿ ಜೀವನ ಸಾಗಿಸುತ್ತಿದ್ದ ಬಂಜಾರಾ ಸಮಾಜಕ್ಕೆ ಮುಖ್ಯವಾಹಿನಿಗೆ ತರುವದು ಅವರ ಉದ್ದೇಶವಾಗಿತ್ತು. ಹಾಗಾಗಿ ಅವರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಲೆದಾಡಿ ಅವರಲ್ಲಿದ್ದ ಅಂಧಕಾರವನ್ನು ದೂರ ಮಾಡಿ ಜ್ಞಾನ ಮಾರ್ಗ ತೋರಿಸಿದ ಸೇವಾಲಾಲ ಮಹಾರಾಜರಿಗೆ ಮೋತಿವಾಳೋ, ಬಾಪು ಎಂದು ಕರೆಯುತ್ತಾರೆ.

ಸೇವಾಲಾಲ ಮಹಾರಾಜರು ಭೇಟಿ ನೀಡುವ ಪ್ರತಿ ಸ್ಥಳದಲ್ಲಿ ಪ್ರವಚನ ಏರ್ಪಾಡು ಮಾಡುತ್ತಿದ್ದರು. ರೋಗಿಗಳ ಶೂಶ್ರೂಶೆಗೆ ಕ್ಯಾಂಪುಗಳ ಆಯೋಜನೆಯಾಗುತ್ತಿತ್ತು. ಅವರು ಕೇವಲ ಮಾನವರಷ್ಟೇ ಅಲ್ಲ, ಭೂಮಂಡಲದಲ್ಲಿ ಜೀವಿಸುತ್ತಿರುವ ಸಕಲ ಜೀವರಾಶಿಗಳ ಒಳತಿಗಾಗಿ ಪ್ರಾರ್ಥಿಸುವ ಮಹಾನ್ ಮಹಾನ್ ಪುರುಷರಾಗಿದ್ದರು. ಈಗ ಬಂಜಾರಾ ಸಮಾಜದ ಆರಾಧ್ಯದೇವರಾಗಿದ್ದಾರೆ.

Leave a Comment