ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ರಾಜಸ್ಥಾನ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಕಂಡುಬರುವ ಲಂಬಾಣಿ ಸಮಾಜಕ್ಕೆ ತನ್ನದೇ ಆದ ಸಂಸ್ಕೃತಿಯಿದೆ. ವೇಷ ಭೂಷಣಗಳೊಂದಿಗೆ ಗುರುತಿಸಲ್ಪಡುವ ಈ ಬಂಜಾರ ಸಮಾಜಕ್ಕೆ ತನ್ನದೇ ಆದ ಇತಿಹಾಸವಿದೆ. ಲಂಬಾಣಿ, ಲಂಬಾಡಾ, ಲಮಾಣಿ, ಲಮಾನೆ, ಬಂಜಾರಾ, ಸುಕಾಲಿ, ಸುಗಾಲಿ ಹೀಗೆ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಬಂಜಾರ ಸಮುದಾಯದಲ್ಲಿ (Banjara Gotra) ಐದು ಮುಖ್ಯ ಗೋತ್ರಗಳು ಅಥವಾ ವಂಶಾವಳಿ ಇದೆ. ಇದರಲ್ಲಿ ಹಲವಾರು ಪಾಡಾ (ಉಪಗೋತ್ರಗಳು)ಗಳಿವೆ.

ರಾಠೋಡ (ಭುಕ್ಯಾ), ಪವಾರ್ (ಜಾತ್), ಚವ್ಹಾಣ, ವಡತ್ಯಾ (ಜಾಧವ) ಹಾಗೂ ಬಾಣ್ಣೋತ್ ಈ ಮುಖ್ಯವಾದ ಐದು ಗೋತ್ರಗಳಲ್ಲಿ ಹಲವಾರು ಉಪಗೋತ್ರಗಳಿವೆ. ಇಲ್ಲಿದೆ ಸಂಪೂರ್ಣ ಮಾಹಿತಿ.

ರಾಠೋಡ (ಭುಕ್ಯಾ) ನಲ್ಲಿ 27  (Pada ಗೋತ್ರಗಳು

  1. ಅಲೋತ್, 2 ಭಾಣವಾತ್/ಮಾಣಾವತ್ , 3.ಭಿಲಾವತ್, 4.ದೇಗಾವತ್, 5. ದೀಪಾವತ್, 6. ದೇವ್ಸೋತ್, 7 ದುಂಗಾವತ್, 8 ಝಂಡಾವತ್, 9. ಕಾನಾವತ್, 10, ಕರಂತೋಟ್, 11. ಖಾತ್ರೋಟ್, 12. ಖೇತಾವತ್, 13. ಖಿಲಾವತ್, 14, ಕೊಡವಾತ್, 15, ಕುಮಾವತ್, 16. ಮೇಘಾವತ್, 17. ಮೇರಾಜೋತ್, 18. ಮೇರಾವತ್, 19. ನೆನಾವತ್, 20. ಪಾತ್ಲೋತ್, 21. ಪಿಥಾವತ್, 22, ರಾಜವತ್, 23. ರಾಮವತ್, 24 ರಾತ್ಲಾ/ಪುಲಿಯಾ, 25. ರಣ್ಸೋತ್, 26. ಸಂಗಾವತ್, 27 ಸೋತ್ಕಿ,

ಪವಾರ್(ಜಾತ್)ನಲ್ಲಿ 12 ಗೋತ್ರಗಳು (Gotra)

1.ಅಮ್ಗೋತ್, 2. ಇವತ್ ಪಮ್ಮಾರ್, 3. ಭಾಣಿ, 4 ಚೈವತ್ ಪಮ್ಮಾರ್, 5. ಇಂಜ್ರಾವತ್, 6. ಇನ್ಲೋತ್ ಪಮ್ಮಾರ್, 7. ಝರಪ್ಲಾ, 8. ಲುಣ್ಸಾವತ್, 9 ಪಮಾಡಿಯಾ, 10. ತಾರಾಬಾಣಿ, 11. ವಾಂಕ್ಡೋತ್, 12. ವಿಸ್ಲಾವತ್

ಚವ್ಹಾಣನಲ್ಲಿ 6 (ಪಾಡಾ) ಗೋತ್ರಗಳು

  1. ಮೂಡ್, 2. ಕೇಳೋತ್, 3. ಕೋರ್ರಾ, 4. ಸಬಾವಟ್, 5 ಪಾಲ್ತ್ಯಾ, 6 ಲಾವಡಿಯಾ

ವಡತ್ಯಾ/ಜಾಧವನಲ್ಲಿ 52 (ಪಾಡಾ) ಗೋತ್ರಗಳು

1.ಮಾಲಾವತ್, 2. ವಡತ್ಯಾ, 3. ತೇಜಾವತ್, 4. ಗೂಗಲೋತ್, 5. ಧಾರಾವತ್, 6. ಲಕಾನತ್, 7. ಬರ್ನಾವತ್, 8.ಸುನಾವತ್, 9.ಲೂನಾವತ್, 10. ಅಜ್ಮೆರಾ, 11. ಪೊರಿಕಾ, 12. ತೇಪಾವತ್, 13. ತೆರಾವತ್, 14. ಬಾರೋತ್, 15. ವುಂಡಾವತ್, 16. ಹಾಲಾವತ್, 17. ಬೋಡಾ, 18. ಕುನಸೋತ್, 19 ಗಂಗಾವತ್, 20. ಸೋಲಾವತ್, 21. ಜಾಲೋತ್, 22. ಸಜಾವತ್, 23. ತುವರ್, 24. ಪೆಮಾವತ್, 25. ಡುಂಗ್ರೋತ್, 26. ಹರ್ಕಾವತ್,27. ಚೆಂಗಾವತ್, 28. ಗೋರಂ, 29, ಮೋಹನದಾಸ್, 30. ಜ್ಯಾತ್, 31. ಭಗವಾನದಾಸ್, 32. ಪೂನ್ಸಾಮಾಲ್, 33. ಲಾಲಾವತ್, 34, ಜಾಜಿಗಿರಿ, 35. ಮೆರಾಜೋತ್, 36. ಪಾಡಿಯಾ, 37. ಜೆಜಾವತ್, 38. ಖಾನಾವತ್, 39. ದೇನಾಪಾಡಿಯಾ, 40. ಹಾರ್ಜಿಪಾಡಿಯಾ, 41. ನಾನಾಗೋತ್, 42. ರುಡಾವತ್, 43. ಖರಪತಿ,, 44. ಡೋಂಗ್ರಿಯಾ, 45. ರಂಮನ್ಯಾ, 46.ಪೆರಪಾನಿ, 47. ಹಜಾವತ್, 48. ರತ್ನಾವತ್, 49.ದೇಶಾವತ್ 50. ಬಾದಾವತ್, 51. ಹನಾವತ್, 52. ಜಾಡಿಯಾ

ಬಾಣ್ಣೋತ್ /ಅಡೆ ನಲ್ಲಿ 12 (ಪಾಡಾ) ಗೋತ್ರಗಳು

1.ಅಡೋತ್, 2. ಅಡೆ, 3. ಬಾಣ್ಣೋತ್, 4. ಭೋಜಾವತ್, 5. ದಾನಾವತ್, 6. ಧರಮ್ ಸೋತ್, 7. ಧೀರಾವತ್, 8. ಜಾತ್ರೋತ್, 9. ಕರ್ನಾವತ್, 10. ಕುಂತಾವತ್, 11. ಲಾವೋರಿ, 12. ಮುದಾವತ್, 13. ಪಾನಾವತ್, 14. ರುಪಾವತ್, 15. ಸಬ್ದಸೋತ್

ಇದನ್ನೂ ಓದಿ: ನಾಯಕ್, ಕಾರಭಾರಿ, ಡಾವ್-ಸಾಣ್, ಯಾಡಿ-ಬಾಪು, ದಾದಿ-ಕಾಕಿ, ಬೇಟೆ ಜಕೋಣ್ ಪಂಚ್ ಆವೋನಿ ಭಾ ಜಳ್ ಲೇಮಾ

ದೇಶದ ಯಾವ ರಾಜ್ಯದಲ್ಲಿದ್ದರೂ ಸಹ ಗೊತ್ರಗಳಲ್ಲಿ ಬದಲಾವಣೆಯಿಲ್ಲ. ದೇಶದ ಯಾವ ಮೂಲೆಯಲ್ಲಿದ್ದರೂ ಒಂದೇ ಗೋತ್ರದಲ್ಲಿದ್ದರೆ ಅವರು ಭಾಯಿ ಭಾಯಿ. ಬೇರೆ ರಾಜ್ಯದಲ್ಲಿದ್ದರೂ ಸಹೋದರ ಸಹೋದರಿಯೆಂಬ ಭಾವನೆ ಇರುವುದು ಬಂಜಾರಾ ಸಮಾಜದ ವೈಶಿಷ್ಟಯವಾಗಿದೆ.

ಒಂದು ವೇಳೆ ನಿಮಗೆ ಈ ಲೇಖನ ಇಷ್ಟವಾದರೆ ದಯವಿಟ್ಟು ಸಾಧ್ಯವಾದಷ್ಟು ಬಂಜಾರ ಸಮಾಜದ ಮೂಲೆ ಜನತೆಗೆ ತಲುಪಿಸಿ. ನೀವು ಎಷ್ಟು ಜನರಿಗೆ ಈ ಮಾಹಿತಿ ಷೇರ್ ಮಾಡುತ್ತೀರೋ ಅಷ್ಟು ನನಗೆ ಸ್ಪೂರ್ತಿ ಬರುತ್ತದೆ. ಬಂಜಾರಾ ಸಂಸ್ಕೃತಿ ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ಗೋತ್ರಗಳಾದರೂ ನೆನಪಿರಲಿ ಎಂಬ ಆಶಾಭಾವನೆಯಿಂದ ಈ ಲೇಖನ ಬರೆದಿದ್ದೇನೆ. ಪಾಡಾಗಳಲ್ಲಿ  ಬೇರೆ ಬೇರೆ ರಾಜ್ಯಗಳಲ್ಲಿ ಸ್ವಲ್ಪ ಉಚ್ಚಾರಣೆಯಲ್ಲಿ ವ್ಯತ್ಯಾಸವಿರುತ್ತದೆ. ಬಲ್ಲವರಿಂದ. ಗಾಯಕರಿಂದ, ನಾಯಕ, ಕಾರಭಾರಿ, ಡಾವ್ ಜೊತೆ ಚರ್ಚೆ ಮಾಡಿ  ಮಾಹಿತಿ ಸಂಗ್ರಹಿಸಿ ಬರೆದಿದ್ದೇನೆ. ಪಾಡಾದಲ್ಲಿ ಇನ್ನೇನಾದರೂ ನಾನು ಮರೆತಿದ್ದರೆ ದಯವಿಟ್ಟು ತಿಳಿಸಿ. ಸರ್.

ಲೇಖನ: ರಾಮಲಿಂಗ್ ಬಾಣ್ಣೋತ್,  ಇಟಕಾಲ್ ತಾಂಡಾ, ಮೊ. 9731491393

One Reply to “ರಾಠೋಡ, ಪವಾರ, ಚವ್ಹಾಣ, ಬಾಣ್ಣೋತ್, ಜಾಧವ ಜಾತಿಯಲ್ಲಿ Banjara Gotra (ಪಾಡಾ)ಗಳೆಷ್ಡು ನಿಮಗೆ ಗೊತ್ತೇ? ಇಲ್ಲಿದೆ ಸಂಪೂರ್ಣ ಮಾಹಿತಿ”

Leave a Reply

Your email address will not be published.