jaler kadi: ಪಂಚ್ ಆವೋನಿ ಭಾ ಜಳ್ ಲೇಮಾ

Written by By: janajagran

Updated on:

jaler kadi ಬಂಜಾರಾ ಸಮಾಜ ತಮ್ಮದೇ ಆದ ಆಚಾರ, ವಿಚಾರ, ಪರಂಪರೆ, ಪದ್ಧತಿ, ಸಂಪ್ರದಾಯಗಳು, ಸಾಹಿತ್ಯ, ಸಂಗೀತ ಸೇರಿದಂತೆ ಹಲವಾರು ಪದ್ಧತಿಗಳಿಂದ ತಮ್ಮದೇ ಆದ ಇತಿಹಾಸವನ್ನು ಹೊಂದಿದ್ದಾರೆ. ಮದುವೆಯ ರೀತಿ-ರಿವಾಜು, ವೇಷ-ಭೂಷಣ, ಆಹಾರ ಪದ್ಧತಿಯೂ ಸಹ ಭಿನ್ನವಾಗಿರುತ್ತದೆ.

ಹಿಂದಿನ ಕಾಲದಲ್ಲಿ ಬಂಜಾರಾ ಸಮುದಾಯದಲ್ಲಿ ಮದುವೆಗಳು ಹತ್ತು-ಹನ್ನೆರಡು ದಿನ ನಡೆಯುತ್ತಿತ್ತು. ಈಗ ಅಂತಹ ಮದುವೆಗಳು ಕಣ್ಮರೆಯಾಗಿದ್ದರೂ ಸಹ ಇನ್ನೂ ಬಂಜಾರಾ ಸಮುದಾಯದಲ್ಲಿ ಸಂಪ್ರದಾಯ ಅಚ್ಚಳಿಯದೆ ಉಳಿದಿದೆ. ಎಷ್ಟೇ ದೊಡ್ಡ ಶ್ರೀಮಂತನಾಗಿದ್ದರೂ, ಮದುವೆಗಳು ಕಲ್ಯಾಣಮಂಟಪದಲ್ಲಿ ನಡೆದರೂ ಕೆಲವು ಸಂಪ್ರದಾಯಗಳನ್ನು ತಲೆತಲಾಂತರಗಳಿಂದ ಉಳಿಸಿಕೊಂಡು ಬಂದಿದ್ದಾರೆ.

ವಿಶೇಷವಾಗಿ ಬಂಜಾರಾ ಸಮುದಾಯದಲ್ಲಿ ಕನ್ಯೆ ನೋಡಲು ಹೋಗುವಾಗ, ಮದುವೆ ನಿಶ್ಛಯ ಮಾಡುವಾಗ (ಸಗಾಯಿ) ಮದುವೆಗಿಂತ ಮುಂಚಿತವಾಗಿ ಕನ್ಯೆ ಬರಮಾಡಿಕೊಳ್ಳುವಾಗ (ಛೋರಿ ಲೇನ್ ಜಾಯೇರೋ) ಹೀಗೆ ಹತ್ತು ಹಲವಾರು ಮದುವೆ ಕಾರ್ಯಕ್ರಮಗಳಲ್ಲಿ ಇಂದಿಗೂ ಜಳೇರ ಕಡಿ ಸಂಪ್ರದಾಯ ಉಳಿದಿದೆ.

ಏನಿದು (ಜಳೇರ್ ಕಡಿ) jaler kadi?

ಮದುವೆ ಸಂದರ್ಭದಲ್ಲಿ ಬೀಗರಿಗೆ ಬಾಜಾ ಬಜಂತ್ರಿಗಳೊಂದಿಗೆ ಬರಮಾಡಿಕೊಂಡು ಸೇವಾಲಾಲ ಮಂದಿರವೋ ಅಥವಾ ಮನೆಯ ಮುಂದೆ ಬೀಗರಿಗೆ ವಿಶೇಷ ಆತಿಥ್ಯ ನೀಡಲಾಗುವುದು. ದೂರದ ಊರಿಂದ ಬಂದವರಿಗೆ ಕುಡಿಯಲು ನೀರು ಕೊಡುವುದು ಸಾಮಾನ್ಯವಾಗಿ ಎಲ್ಲಾ ಕಡೆ ಇದ್ದೇ ಇರುತ್ತದೆ. ಆದರೆ ಬಂಜಾರದಲ್ಲಿ ಅದಕ್ಕೆ ಒಂದು ವಿಶೇಷ ಪದ್ಧತಿಯಿದೆ. ಹೌದು, ಅದಕ್ಕೆ ಜಳ್ ಲೋ ನಾಯಕ್ ಅಂತಾರೆ. ಅಂದರೆ ನೀರು ತೆಗೆದುಕೊಳ್ಳಿ ಎಂದರ್ಥ. ಬೀಗರ ಊರಿನ ನಾಯಕ, ಅಥವಾ ಕಾರಭಾರಿ ಅಥವಾ ಮುಖ್ಯಸ್ಥರು ಯಾರಾದರೊಬ್ಬರ ಮುಂದೆ ಕುಡಿಯಲು ತಂಬಿಗೆ (ಲೋಟ) ಇಟ್ಟು ಜಳ್ ಲೋ ನಾಯಕ್ ಅಂತಾರೆ. ಆಗ ಆ ಊರಿನ ಮುಖ್ಯಸ್ಥ ಹಾಗೆಯೇ ನೀರು ಕುಡಿಯುವುದಿಲ್ಲ. ಅದಕ್ಕೆ ಒಂದು ಪದ್ಧತಿಯಿದೆ. ಬಂಜಾರಾ ಸಮುದಾಯದಲ್ಲಿ ಜಳೇರ್ ಕಡಿ (ಒಂದು ಶ್ಲೋಕವೆಂದೆ ತಿಳಿದುಕೊಳ್ಳೋಣ)  ಹೇಳುವ ಮುನ್ನ ತಲೆಗೆ ರೂಮಾಲು ಸುತ್ತಿ ಒಂದು ಹನಿ ನೀರು ಭೂತಾಯಿಗೆ ಅರ್ಪಿಸಿ ಪದ್ಧತಿಯಂತೆ ಕುಡಿಯಬೇಕು. ಆಗ ಆತಿಥ್ಯವಹಿಸಿದ ಊರಿನವರು ಅದಕ್ಕೆ ಜಳೇರ್ ಕಡಿಯಲ್ಲಿಯೆ ಪ್ರತ್ಯುತ್ತರ ನೀಡುತ್ತಾರೆ. ಇದಕ್ಕೆ ಎರಡೂ ಊರಿನ ಜನ ತದೇಕಚಿತ್ತದಿಂದ ಕೇಳುತ್ತಾರೆ. ಜಳೇರ್ ಕಡಿಗೆ ವಿಶೇಷ ಮಹತ್ವವಿರುತ್ತದೆ. ಈ ಪದ್ಧತಿ ಈಗಲೂ ಸಹ ಬಂಜಾರ ಸಮುದಾಯದಲ್ಲಿ ಮುಂದುವರೆದಿದೆ. ಇದೇ ರೀತಿ ಮುಂದುವರೆದು ಬಂಜಾರಾ ಸಂಪ್ರದಾಯ ಚಿರಕಾಲ ಉಳಿಯಲಿ ಎಂಬ ಆಶಾಭಾವನೆ ನನ್ನದು.

ನಮ್ಮ ಊರಿನ ನಾಯಕರು ಅಥವಾ ಕಾರಭಾರಿ ಮದುವೆ ಮುಂಚೆ (ಛೋರಿನ್ ಲೇನ್ ಜಾಯೇರೋ) ಕನ್ಯೆಯನ್ನು ಬರಮಾಡಿಕೊಳ್ಳಲು ಹೋದಾಗ ಜಳೇರ್ ಕಡಿ ಅಂದು ಶಹಬ್ಬಾಸ್ ಅಂದುಕೊಂಡಿದ್ದು ಈಗಲೂ ನೆನಪಿದೆ. ಜಳೇರ್ ಕಡಿ ಅಂದವನಿಗೆ ಬುದ್ಧಿವಂತ ಎಂದೇ ಭಾವಿಸುತ್ತಾರೆ.

ಇದನ್ನೂ ಓದಿ: ರಾಠೋಡ, ಪವಾರ, ಚವ್ಹಾಣ, ಬಾಣ್ಣೋತ್, ಜಾಧವ ಜಾತಿಯಲ್ಲಿ Banjara Gotra (ಪಾಡಾ)ಗಳೆಷ್ಡು ನಿಮಗೆ ಗೊತ್ತೇ? ಇಲ್ಲಿದೆ ಸಂಪೂರ್ಣ ಮಾಹಿತಿ

ನಮ್ಮೂರಿನ  ಮುಖ್ಯಸ್ಥರು, ನಾಯಕ, ಕಾರಭಾರಿ, ಡಾವ್, ಗಾಯಕರು, ಜಳೇರ್ ಕಡೆ ಬಲ್ಲವ ಶ್ಯಾಣ್ (ಬುದ್ದಿವಂತರಿಂದ) ಕೆಲವು ಕಡಿಗಳನ್ನು ಸಂಗ್ರಹಿಸಿ ಇಲ್ಲಿ ಬರೆದಿದ್ದೇನೆ. ಇವು ಮುಂದಿನ ಪೀಳಿಗೆಗೆ ಗೊತ್ತಾಗಲಿ, ಬಾಯಿಮಾತಿನಲ್ಲಿರುವ ಕಡಿಗಳು ಮರೆತುಹೋಗಬಾರದೆಂದು ಇಲ್ಲಿ ಕೆಲವನ್ನು ಬರೆಯುತ್ತೇದ್ದೇನೆ. ದಯವಿಟ್ಟು ತಮಗೂ ಗೊತ್ತಿದ್ದರೆ ನನಗೆ ಬರೆದು ಅಥವಾ ರಿಕಾರ್ಡ್ ಮಾಡಿ ಕಳಿಸಿದರೆ ನಿಮ್ಮ ಹೆಸರಿನೊಂದಿಗೆ ಇದರಲ್ಲಿ ಸೇರಿಸುತ್ತೇನೆ.

ಇಲ್ಲಿ ನಿಮ್ಮ ನೆನಪಿಗೋಸ್ಕರ ಕೆಲವು (ಜಳೇರ್ ಕಡಿ) jaler kadi ಗಳನ್ನು ಸಂಗ್ರಹಿಸಿ ಬರೆದಿದ್ದೇನೆ.

  1. ಜಳ್ ಲೋ ನಾಯಕ್……

ನಾಯಕ್, ಕಾರಭಾರಿ, ಡಾವ್-ಸಾಣ್, ಯಾಡಿ-ಬಾಪು, ದಾದಿ-ಕಾಕಿ, ಬೇಟೆ ಜಕೋಣ್ ಪಂಚ್ ಆವೋನಿ ಭಾ ಜಳ್ ಲೇಮಾ

ಪಂಚ್ ಪಚಾತ್ ರಾಜಾಭೋಜೇರ್ ಸವಾತ್..ಭಾಯಿ ಜಗ್ ಪತಾರೆ ಜಗ್ ಎಕೇತಿ ಏಕ್ ಸವಾಯಿ

ಪಚಾರೆನ್ ಲಾಕ್ ಸವಾ ಲಾಕ್, ರಾಮೇರಿ ಕಚೇರಿ ಪಂಚುರ್ ಬೇಸ್ಕಾರ್, ಬ್ರಹ್ಮೆರ್ ಲಕೋಣೋ ಚಟೇರ್ ರಾಕ್,

ಕರ್ಮ್ ಲಕ್ದಿನೋ ಕರ್ಮೇರ್ ಟಾಕ್, ದಮ್ ಸೆ ದಿಯಾ ದಿಯಾ ಸು ಮುಲಾಕತ್ ಭಾಯಿ ಸೇ ಕಸಳಾತ್

  1. ಜಳ್ ಲೋ ನಾಯಕ್……

ನಾಯಕ್, ಕಾರಭಾರಿ, ಡಾವ್-ಸಾಣ್, ಯಾಡಿ-ಬಾಪು, ದಾದಿ-ಕಾಕಿ, ಬೇಟೆ ಜಕೋಣ್ ಪಂಚ್ ಆವೋನಿ ಭಾ ಜಳ್ ಲೇಮಾ

ಪಂಚ್ ಪಂಚಾತ್ ರಾಜಭೋಜೇರ್ ಸಬಾಸಗಳ ಕಚೇರಿ,

ಪಚಾರೋ ಲಾಕ್ ತೋ ಅನ್ ಪಚಾರೋ ಸವಾಲಾಕ್ ರ ನಾಯಕ್

ಪೇಲ್ ಕಚೇರಿ ರಾಮೇರ್ ಚರ ನಾಯಕ್,

ಸರೆರೋ ಛುಂಗ್ಲಾ ಸೋನೆರ್ ವೀಟಿ ರ ನಾಯಕ್,

ಗಂಗಾರೋ ಜಳ ಕಾಶಿರೋ ದರಸಣ,

ಭಾಯಿರ್ ಕಸಳ್ ಸಗಾ ರಾಣಾತ್, ತಮ್ ಕಸಳ್ ತೋ ಸಮ್ ಕಸಳ್,

ಸಮ್ ಕಸಳ್ ತೋ ತಮ್ ಕಸಳ್, ಭಾಯಿ ಸಂಗ್ ಸೇ ಕಸಳ್

3. ಜಳ್ ಲೋ ನಾಯಕ್……

ನಾಯಕ್, ಕಾರಭಾರಿ, ಡಾವ್-ಸಾಣ್, ಯಾಡಿ-ಬಾಪು, ದಾದಿ-ಕಾಕಿ, ಬೇಟೆ ಜಕೋಣ್ ಪಂಚ್ ಆವೋನಿ ಭಾ ಜಳ್ ಲೇಮಾ

ಪೇಲ್ ಕಚೇರಿ, ರಾಮೇರ್ ಛರೇ ನಾಯಕ್

ಪಂಚ್ ಪಂಚಾತ್ ರಾಜಾಭೋಜೇರ್ ಸಬಾತ್

ಸಬಾ ಸಗಳ್, ಪಚಾರೋ ಲಾಕ್ ಅನ್ ಪಚಾರೋ ಸವಾ ಲಾಕ್ ರ ನಾಯಕ್

ಘರ್ ಗುತ್ತಿ ಘರೇನ್ ಆಯೇಚ್, ಆಯ್ತು ಏಕ್ ದಾಡೇರಿ ಕೋನ್ ಏಕ್ ವರ್ಷರಿ ವಾತೆ ಕರ್ ನುರಾ ನಾಯಕ್

ವಾತೆ ಕರೋತು ತೀನ್ ದಾಡೇರ್ ಕೋನಿ ತೀನ್ ಪಿಡಿರಿ ವಾತೆ ಕರನೂರ್ ನಾಯಕ್

ಗಂಗಾ ತೀರ್ಥ, ತೀರ್ಥೆರೋ ಮೇಳೋ, ಬಾಯಿರ್ ಕಸಳ್,

ಸಗಾರ್ ಆನಂದ್ ಹಮ್ ಆನಂದ್ ಛಾ ತಮ್ ಆನಂದ್ ಛೋ

ಹಮ್ ಕಸಳ್ ಛ ಭಾಯಿ ಸೇ ಸಂಗ್ ಕಸಳ್ ಛೋಕೊ ನಾಯಕ್

  1. ಜಳ್ ಲೋ ನಾಯಕ್……

ನಾಯಕ್, ಕಾರಭಾರಿ, ಡಾವ್-ಸಾಣ್, ಯಾಡಿ-ಬಾಪು, ದಾದಿ-ಕಾಕಿ, ಬೇಟೆ ಜಕೋಣ್ ಪಂಚ್ ಆವೋನಿ ಭಾ ಜಳ್ ಲೇಮಾ

ದಲಮಣ್ ದರರ್ಸಣ್ ಪಾಯೆ, ಜಳೇರ್ ಲೋಟಾ ಥಾಟೇರ್ ಥಿಂಕಳಿ,  ಭಾಯಿ ಸೇ ಕಸಳಾತ್.

  1. ಜಳ್ ಲೋ ನಾಯಕ್……

ನಾಯಕ್, ಕಾರಭಾರಿ, ಡಾವ್-ಸಾಣ್, ಯಾಡಿ-ಬಾಪು, ದಾದಿ-ಕಾಕಿ, ಬೇಟೆ ಜಕೋಣ್ ಪಂಚ್ ಆವೋನಿ ಭಾ ಜಳ್ ಲೇಮಾ

ಹರ್ಬರ್ ನಾಯಕ್, ಪಂಚ್ ಪಚಾತ್ ಪಚಾರೆನ್ ಜಗತ್, ಸಭಾ ಸಗಳೇರಿ, ಸೇವಾಲಾಲ್ ಬಾಪು ಮಹಾರಾಜ್,

ಲಾಂಬಿ ಚ ಹಾರಿ,ಧೋಳೇ ಚ ಹಾರಿ, ಭಾಯಿ ಸೇ ಕಳಸರ್

ನಮ್ಮ ಬಂಜಾರಾ ಸಮುದಾಯದಲ್ಲಿ ಜಳೇರ್ ಕಡಿ ಸಾಕಷ್ಟಿವೆ… ನಿಮಗೆ ಗೊತ್ತಿದ್ದ ಜಳೇರ್ ಕಡಿ ಸೇರಿಸಲು 9731491393 ಗೆ ಕರೆ ಮಾಡಬಹುದು. ನೂರಾರು ಬಂಜಾರಾ ಕಡಿಗಳು ಒಂದೆಡೆ ಸೇರಿದರೆ ಮುಂದಿನ ಪೀಳಿಗೆಗೆ ಸಹಾಯವಾಗಲಿದೆ. ಎಲ್ಲರೂ ಸೇರಿ ಜಳೇರ್ ಕಡಿಗಳನ್ನು ಸಂಗ್ರಹಿಸೋಣ. ಜಳೇರ್ ಕಡಿಮಾ ಕಾಯಿಭಿ ಗಲತ್ ವೇಗಿತೋ ಖೊಳೆಮಾ ಗಾಲ್ನೇಣು ಮಾಫಿ ಕರಲೇಣು ಬಾಪು.. ತಮಾರ್ ಸಹಕಾರಜ್ ಮನ್ ಲಕೇನ್ ಧೈರ್ಯ ದಚ್ ಕಣನ್ ಆಸಾ ಛ.

ಲೇಖನ: ರಾಮಲಿಂಗ್ ಬಾಣ್ಣೋತ್, ಇಟಕಾಲ್ ತಾಂಡಾ, 9731491393

1 thought on “jaler kadi: ಪಂಚ್ ಆವೋನಿ ಭಾ ಜಳ್ ಲೇಮಾ”

Leave a Comment