ಬೆಳೆ ವಿಮೆಯ ಮಾಹಿತಿ ನೀಡಲಿದೆ ಸಂರಕ್ಷಣೆ? ಇಲ್ಲಿದೆ ಮಾಹಿತಿ

Written by Ramlinganna

Updated on:

Samrakshane will give insurance information ಬೆಳೆ ವಿಮೆ ಪಾವತಿಸಿದ ಪಾವತಿಸಲಿರುವ ರೈತರಿಗೆ ಅನೇಕ ಮಾಹಿತಿ ನೀಡಲಿದೆ ಸಂರಕ್ಷಣೆ. ಹಾಗಾದರೆ ರಾಜ್ಯ ಸರ್ಕಾರದ ಸಂರಕ್ಷಣೆ ತಂತ್ರಾಂಶ ರೈತರಿಗೆ ಯಾವ ಯಾವ ಮಾಹಿತಿ ನೀಡಲಿದೆ? ಈ ತಂತ್ರಾಂಶದ ಮೂಲಕ ರೈತರು ಏನೇನು ಮಾಹಿತಿ ಪಡೆಯಲಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಳೆ ವಿಮೆಯ ಕುರಿತಂತೆ ರೈತರಿಗೆ ಸಂಪೂರ್ಣ ಮಾಹಿತಿ ಆರಂಭವಾಗಿದೆ ಸಂರಕ್ಷಣೆ. ಈ ಸಂರಕ್ಷಣೆ ತಂತ್ರಾಂಶದ ಮೂಲಕ ರೈತರು ಮುಂಗಾರು ಹಾಗೂ ಹಿಂಗಾರು ಬೆಳೆಗಳಿಗೆ ಎಷ್ಟು ವಿಮೆ ಹಣ ಪಾವತಿಸಬೇಕು? ಬೆಳೆ ವಿಮೆಯ ಮೊತ್ತ ರೈತರಿಗೆಷ್ಟು ಬರಲಿದೆ? ಬೆಳೆ ವಿಮೆ ಹಿಂದಿನ ಸ್ಟೇಟಸ್ ಹಾಗೂ ಬೆಳೆ ವಿಮೆ ಈಗಿನ ಸ್ಟೇಟಸ್ ಸಹ ಚೆಕ್ ಮಾಡಬಹುದು. ಇದರೊಂದಿಗೆ ಆಯಾ ಜಿಲ್ಲಾವಾರು ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿ ಮಾಡಿಸಬಹುದು ಎಂಬುದರ ಕುರಿತು ಸಹ ಮಾಹಿತಿ ಸಿಗಲಿದೆ. ಇನ್ನೂ ರೈತರಿಗೆ ಯಾವ ಯಾವ ಮಾಹಿತಿ ಸಿಗಲಿದೆ ಎಂಬುದನ್ನು ಒಂದೊಂದಾಗಿ ಇಲ್ಲಿ ವಿವರಿಸಲಾಗಿದೆ.

ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಬೇಕೇ?

ರೈತರು ಬೆಳೆ ವಿಮೆ ಪಾವತಿಸಿದ ನಂತರ ಅರ್ಜಿ ವಿಮಾ ಕಂಪನಿಯಿಂದ ಸ್ವೀಕೃತವಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು. ಹೌದು, ಈ

https://www.samrakshane.karnataka.gov.in/Premium/CheckStatusMain_aadhaar.aspx

ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ರೈತರು ತಮ್ಮ ಮೊಬೈಲ್ ನಂಬರ್ ನಮೂದಿಸಿ ಸ್ಟೇಟಸ್ ಚೆಕ್ ಮಾಡಬುದು. ಮೊಬೈಲ್ ನಂಬರ್ ಆಯ್ಕೆ ಮಾಡಿಕೊಂಡ ನಂತರ ಮೊಬೈಲ್ ನಂಬರ್ ನಮೂದಿಸಿ ಕ್ಯಾಪ್ಚ್ಯಾ ಕೋಡ್ ನಮೂದಿಸಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ಪ್ರಸಕ್ತ ವರ್ಷದ ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದು.

ಸಂರಕ್ಷಣೆ ಪೇಜ್ ನ ಮುಖಪುಟದಲ್ಲಿ ಕಾಣುವ ಫಾರ್ಮರ್ಸ್ ಕಾಲಂ ಕೆಳಗಡೆ ಕಾಣುವ ಪ್ರಿಮಿಯಂ ಕ್ಯಾಲುಕಲೆಟರ್ ಮೇಲೆ ಕ್ಲಿಕ್ ಮಾಡಿದ ನಂತರ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಯಾವ ಬೆಳೆಯ ವಿಮೆ ಲೆಕ್ಕ ನೋಡಬೇಕೆಂದುಕೊಂಡಿದ್ದೀರೋ ಅದನ್ನು ಆಯ್ಕೆ ಮಾಡಿಕೊಂಡು ಎಕರೆ ನಮೂದಿಸಿ ಶೋ ಪ್ರಿಮಿಯಂ ಮೇಲೆ ಕ್ಲಿಕ್ ಮಾಡಿ ಚೆಕ್ ಮಾಡಬಹುದು.

Samrakshane will give insurance information ನಿಮ್ಮ ಗ್ರಾಮಕ್ಕೆ ಯಾವ ಯಾವ ಬೆಳೆಗೆ ವಿಮೆ ಮಾಡಿಸಲು ಚೆಕ್ ಮಾಡಬೇಕೆ?

ನಿಮ್ಮ ಗ್ರಾಮದಲ್ಲಿ ಬೆಳೆಯುವ ಎಲ್ಲಾ ಬೆಳೆಗಳಿಗೆ ವಿಮೆ ಮಾಡಿಸುವಂತಿಲ್ಲ. ಕೆಲವು ಬೆಳೆಗಳನ್ನು ಮಾತ್ರ ವಿಮೆ ಮಾಡಿಸಬಹುದು. ಹೌದು ಯಾವ ಯಾವ ಬೆಳೆಗೆ ವಿಮೆ ಮಾಡಿಸಬೇಕೆಂಬುದನ್ನು ಚೆಕ್ ಮಾಡಲು ಫಾರ್ಮರ್ ಕಾಲಂ ಕೆಳಗಡೆಯಿರುವ ಕ್ರಾಪ್  ಕ್ಯಾಯುನ್ ಇನ್ಶುರ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮ ಆಯ್ಕೆ ಮಾಡಿಕೊಂಡ ಡಿಸಪ್ಲೇ ಮೇಲೆ ಕ್ಲಿಕ್ ಮಾಡಿ ಚೆಕ್ ಮಾಡಬಹುದು.

ವಿಮಾ ಕಂಪನಿಗಳ ಹೆಸರು ಚೆಕ್ ಮಾಡಬೇಕೆ?

ಬೆಳೆ ವಿಮೆ ಪಾವತಿಸಿದ ಬಹುತೇಕ ರೈತರಿಗೆ ಯಾವ ಕಂಪನಿಗೆ ವಿಮೆ ಪಾವತಿಸಲಾಗಿದೆ ಎಂಬುದರ ಬಗ್ಗೆ ಮಾಹಿತಿ ಗೊತ್ತಿರುವುದಿಲ್ಲ. ರೈತರಿಗೆ  ಜಿಲ್ಲಾವಾರು ವಿಮಾ ಕಂಪನಿಗಳ ಮಾಹಿತಿ ಗೊತ್ತಾಗಲೆಂಬ ಉದ್ದೇಶದಿಂದ ವಿಮಾ ಕಂಪನಿಗಳ ಪಟ್ಟಿಯನ್ನು ಸಹ ನವೀಡಲಾಗಿದೆ. ಫಾರ್ಮರ್ ಕಾಲಂ ಕೆಳಗಡೆ Know your Insurance co. ಮೇಲೆ ಕ್ಲಿಕ್ ಮಾಡಬೇಕು. ಆಗ ಜಿಲ್ಲಾವಾರು ವಿಮಾ ಕಂಪನಿಯ ಹೆಸರುಗಳ ಪಟ್ಟಿ ತೆರೆದುಕೊಳ್ಳುತ್ತದೆ.

ಬೆಳೆಗಳಿಗೆ ವಿಮೆ ಮಾಡಿಸುವ ಕೊನೆಯ ದಿನಾಂಕ ಚೆಕ್ ಮಾಡಬೇಕೆ?

ಬೆಳೆಗಳಿಗೆ ವಿಮೆ ಮಾಡಿಸುವ ಕೊನೆಯ ದಿನಾಂಕ ಯಾವುದು ಎಂಬುದನ್ನು ಚೆಕ್ ಮಾಡಲು ಈ ಸಂರಕ್ಷಣೆಯಲ್ಲಿ ಸೇರಿಸಲಾಗಿದೆ. ಫಾರ್ಮರ್ ಕಾಲಂ ಕೆಳಗಡೆ ಕಾಣುವ View cut off dates ಮೇಲೆ ಕ್ಲಿಕ್ ಮಾಡಬೇಕು. ನಂತರ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಆಗ ವಿಮೆ ಮಾಡಿಸಲು ಯಾವ ಬೆಳೆಗೆ ಆರಂಭ ದಿನಾಂಕ ಯಾವುದು ಹಾಗೂಕೊನೆಯ ದಿನಾಂಕ ಯಾವುದು ಎಂಬುದನ್ನು ಚೆಕ್ ಮಾಡಬಹುದು.

ಇದನ್ನೂ ಓದಿ  ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ

ಇದೇ ರೀತಿ ರೈತರಿಗೆ ಸಹಾಯವಾಗುವ ಇನ್ನೂ ಹಲವಾರು ಮಾಹಿತಿಗಳನ್ನು ಸಂರಕ್ಷಣೆ ತಂತ್ರಾಂಶದಲ್ಲಿ ಸೇರಿಸಲಾಗಿದೆ.

Leave a Comment