ರೈತರಿಗೆ 16.52 ಕೋಟಿ ರೂಪಾಯಿ ಬೆಳೆ ವಿಮೆ ಹಣ ಬಿಡುಗಡೆ

Written by Ramlinganna

Updated on:

16.52 crore insurance released ತಾಂತ್ರಿಕ ಕಾರಣಗಳಿಂದಾಗಿ ಬಾಕಿ ಉಳಿದಿದ್ದರೈತರ ಬೆಳೆ ವಿಮೆ ಹಣವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

2018-19ನೇ ಸಾಲಿನಲ್ಲಿ ಬೆಳೆ ವಿಮೆ ತುಂಬಿ ಬೆಳೆ ಸಮೀಕ್ಷೆ ವಿವರಗಳು ಹೊಂದಾಣಿಕೆಯಾಗದ ಕಾರಣ 9204 ರೈತರ ವಿಮೆ ಹಣ ಬಿಡುಗಡೆಯಾಗದೆ ನೆನೆಗುದಿಗೆ ಬಿದ್ದಿತ್ತು. ಈಗ ಬೆಳೆ ವಿಮೆ ಬರದೆ ಕಾಯುತ್ತಿರುವ ರೈತರಿಗೆ 16.52 ಕೋಟಿ ರೂಪಾಯಿ ಬೆಳೆ ವಿಮೆ ಬಾಕಿ ಮೊತ್ತ ಬಿಡುಗಡೆಯಾಗಿದೆ.  ಹೌದು, ಬೆಳೆ ಸಮೀಕ್ಷೆ ವಿವರಗಳು ಹೊಂದಾಣಿಕೆಯಾಗದೆ ಬೆಳೆ ವಿಮೆಯಿಂದ ವಂಚಿತರಾಗಿದ್ದ ರೈತರಿಗೆ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ವಿಮಾ ಹಣ ಸಿಗುತ್ತಿದೆ.

2018-19ನೇ ಸಾಲಿನಲ್ಲಿ ವಿಮೆ ತುಂಬಿದ್ದ ಹಾವೇರಿ ಜಿಲ್ಲೆಯ 9204 ರೈತರಿಗೆ ಬಾಕಿ ಬರಬೇಕಿದ್ದ 16.52 ಕೋಟಿ ರೂಪಾಯಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿಸಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿದ್ದ ರೈತರ ಬೆಳೆ ಸಮೀಕ್ಷೆ ವಿವರಗಳು ಹೊಂದಾಣಿಕೆಯಾಗಿದೆ ತಾಳೆಯಾಗದ ಕಾರಣಕ್ಕೆ ಬೆಳೆ ವಿಮೆ ಹಣ ಬಿಡುಗಡೆಯಾಗಿರಲಿಲ್ಲ.

2018019ನೇ ಸಾಲಿನಲ್ಲಿ ಭೀಕರ ಬರಗಾಲದಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿತ್ತು. ರೈತರು ವಿಮಾ ಕಂತು ಭರ್ತಿ ಮಾಡಿದ್ದರೂ ಸಮೀಕ್ಷೆಯಲ್ಲಿನ ದೋಷ, ಸಮೀಕ್ಷಾ ವಿವರ ತಾಳೆಯಾಗದಿರುವುದು ಸೇರಿದಂತೆ ತಾಂತ್ರಿಕಕಾರಣ ನೀಡಿ ರೈತರಿಗೆ ಕಂಪನಿ ವಿಮಾ ಪಾವತಿಸಿರಲಿಲ್ಲ.  ಈಗ 9204 ರೈತರ 16,52,71,712 ರೂಪಾಯಿ ಹಣ ಬಿಡುಗಡೆಯಾಗಿದೆ. ಯಾವ ರೈತರಿಗೆ ಬೆಳೆ ವಿಮೆ ಹಣ ಬಂದಿದಿಲ್ಲವೋ  ರೈತರ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಬಾಕಿ ಬೆಳೆ ವಿಮೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವ ಮೂಲಕ ರೈತರ ಬೇಡಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಡೇರಿಸಿದ್ದಾರೆ. ಬಿಡಗಡೆಯಾದ ವಿಮಾ ಮೊತ್ತವನ್ನು ಸಂಬಂಧಪಟ್ಟ ರೈತರ ಬ್ಯಾಂಕ್ ಖಾತೆಗೆ ಕೂಡಲೇ ಜಮೆ ಮಾಡುವಂತೆ ಕೃಷಿ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.

16.52 crore insurance released ಯಾವ ತಾಲೂಕಿನ ರೈತರಿಗೆ ಎಷ್ಟು ಹಣ ಬಿಡುಗಡೆ

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ 1307 ರೈತರಿಗೆ 2,11,30,063 ರೂಪಾಯಿ, ಶಿಗ್ಗಾಂವಿ ತಾಲೂಕಿನ 580 ರೈತರಿಗೆ 1,51,01,823 ರೂಪಾಯಿ, ಹಾವೇರಿ ತಾಲೂಕಿನ 2341 ರೈತರಿಗೆ 4,01,03,716 ರೂಪಾಯಿ, ಹಾನಗಲ್ ತಾಲೂಕಿನ 1120 ರೈತರಿಗೆ  2,65,61,164 ರೂಪಾಯಿ, ಬ್ಯಾಡಗಿ ತಾಲೂಕಿನ 1788 ರೈತರಿಗೆ 4,18,18,746 ರೂಪಾಯಿ, ಹಿರೆಕೇರೂರ ತಾಲೂಕಿನ 1330 ರೈತರಿಗೆ 73,09,232 ರೂಪಾಯಿಹಾಗೂ ರಾಣಿಬೆನ್ನೂರ ತಾಲೂಕಿನ 738 ರೈತರಿಗೆ 1,32,46,712 ರೂಪಾಯಿ ಬಿಡುಗಡೆಯಾಗಿದೆ.  ಮುಂದಿನ ಎರಡ್ಮೂರು ದಿನಗಳಲ್ಲಿ ಈ ಹಣ ಎಲ್ಲಾ ರೈತರ ಖಾತೆಗೆ ಜಮೆಯಾಗಲಿದೆ.

 ರೈತರು ಆನ್ಲೈನ್ ನಲ್ಲಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ರೈತರು ಬೆಳೆ ವಿಮೆಯ ಸ್ಟೇಟಸನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರು ಈ

https://www.samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಪೇಜ್ ಓಪನ್ ಆಗುತ್ತದೆ. ಅಲ್ಲಿರೈತರು ವರ್ಷ ಆಯ್ಕೆ ಮಾಡಿಕೊಳ್ಳಬೇಕು. ನಂತರ ಋತು ಆಯ್ಕೆ ಮಾಡಿಕೊಳ್ಳಬೇಕು. ಮುಂಗಾರು ಬೆಳೆಯಾಗಿದ್ದರೆ ಮುಂಗಾರು, ಹಿಂಗಾರು  ಬೆಳೆಯಾಗಿದ್ದರೆ ಹಿಂಗಾರು ಆಯ್ಕೆ ಮಾಡಿಕೊಂಡು ಮುಂದೆ ಅಥವಾ ಗೋ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಫಾರ್ಮರ್ ಕೆಳಗಡೆ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು.  ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ಮೊಬೈಲ್ ನಂಬರ್ ನಮೂದಿಸಿದ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ನಿಮ್ಮ ಬೆಳೆ ವಿಮೆ ಸ್ಟೇಟಸ್ ಕಾಣುತ್ತದೆ. ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಿ ವಿವರಗಳನ್ನು ನೋಡಬಹುದು.

ಇದನ್ನೂ ಓದಿ : ಈ ರೈತರಿಗೆ ಮಾತ್ರ ಬೆಳೆ ವಿಮೆ ಪರಿಹಾರ ಮತ್ತು ಬೆಳೆ ಹಾನಿ ಪರಿಹಾರ ಜಮೆ: ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಸಕ್ತ ವರ್ಷದ ಅಂದರೆ 2022-23ನೇ ಸಾಲಿನ ಬೆಳೆ ವಿಮೆ ಪಾವತಿಸಿದ ಇತರ ಜಿಲ್ಲೆಯ ರೈತರೂಸಹ 2022-23 ನೇ ಸಾಲಿನ ಅರ್ಜಿಯ ಸ್ಟೇಟಸನ್ನು ಸಹ ಚೆಕ್ ಮಾಡಬಹುದು.

Leave a Comment