ರೈತಬಾಂಧವರಿಗಿಲ್ಲಿದೆ ಸಂತಸದ ಸುದ್ದಿ. ಕೃಷಿ ಜಮೀನುಗಳಲ್ಲಿ ಕೃಷಿ ಹೊಂಡ, ಬದು ನಿರ್ಮಾಣ, ತೆರೆದ ಬಾವಿ ದುರಸ್ತಿ, ಸೇರಿದಂತೆ ಇನ್ನಿತರ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು Raita kriya yojaneಯಡಿ 2.50 ಲಕ್ಷ ರೂಪಾಯಿಯವರೆಗೆ ಆರ್ಥಿಕ ನೆರವು ಸಿಗಲಿದೆ. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಸಂಪೂರ್ಣ ಮಾಹಿತಿ…
ಏನಿದು ರೈತ ಕ್ರಿಯಾ ಯೋಜನೆ (What is raita kriya yojana)
ತೋಟಗಾರಿಕೆ, ಕೃಷಿ, ಅರಣ್ಯ, ರೇಷ್ಮೆ ಇಲಾಖೆ ಹಾಗೂ ಗ್ರಾಮ ಪಂಚಾಯತಿಗಳಿಂದ ಕಾಮಗಾರಿಗಳನ್ನು ಕೈಗೊಳ್ಳಲು ರೈತ ಕ್ರಿಯಾ ಯೋಜನೆಯಡಿಯ ಆರ್ಥಿಕ ನೆರವಿನ ಸೌಲಭ್ಯ ಪಡೆಯಬಹುದು. ಈ ಯೋಜನೆಯಡಿಯಲ್ಲಿ 2.5 ಲಕ್ಷ ರೂಪಾಯಿಯವರೆಗೆ ಸೌಲಭ್ಯ ಪಡೆಯಬಹುದು. ಪ್ರತಿಯೊಬ್ಬ ಫಲಾನುಭವಿಯು ವೈಯಕ್ತಿಕವಾಗಿ ಕಾಮಗಾರಿಗೆ 2.5 ಲಕ್ಷದವರೆಗೆ ಮೀರದಂತೆ ಆರ್ಥಿಕ ನೆರವು ನಿಗದಿಪಡಿಸಲಾಗಿದೆ. ರೈತರು ತಮ್ಮ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಬೇಡಿಕೆ ಪಟ್ಟಿ ಸಲ್ಲಿಸಿ ಕಾಮಗಾರಿ ಕೈಗೊಳ್ಳಬಹುದು.
ಜಾಬ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬವು ನರೇಗಾ ಯೋಜನೆಯಡಿ ಗರಿಷ್ಠ 2.50 ಲಕ್ಷ ರೂಪಾಯಿಯವರೆಗೆ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ನರೇಗಾ ಯೋಜನೆಯಡಿ ರೈತರು ಮನೆಯಲ್ಲಿಯೇ ಕುಳಿತು ಅರ್ಜಿ ಸಲ್ಲಿಸಬಹುದು. ಹೌದು ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.
ರೈತ ಕ್ರಿಯಾ ಯೋಜನೆಯಡಿ ಅರ್ಜಿ ಸಲ್ಲಿಸುವುದು ಹೇಗೆ (How to submit application for jobcard)
www.mgnregakarnataka.com/yojane ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನರೇಗಾ ಕರ್ನಾಟಕ ರೈತರ ಕ್ರಿಯಾ ಯೋಜನೆ ಪುಟ ತೆರೆಯಲ್ಪಡುತ್ತದೆ. ಇಲ್ಲಿ ಅರ್ಜಿ ಸಲ್ಲಿಸುವವರು ಹೆಸರು, ದೂರವಾಣಿ ಸಂಖ್ಯೆ (ಮೊಬೈಲ್ ಸಂಖ್ಯೆ), ಜಜಾಬ್ ಕಾರ್ಡ್ ಸಂಖ್ಯೆ, ಜಿಲ್ಲೆ. ತಾಲೂಕು, ಗ್ರಾಮ ಪಂಚಾಯತಿ, ಗ್ರಾಮ, ಫಲಾನುಭವಿ ವರ್ಗ (ಎಸ್ಸಿ, ಎಸ್ಟಿ, ಇತರೆ ವರ್ಗ, ಬಿಪಿಎಲ್ ಹೀಗೆ ಯಾವ ಗುಂಪಿಗೆ ಸೇರಿದ್ದೀರೆಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು) ಯಾವ ಇಲಾಖೆಯಿಂದ ಸಹಾಯ ಪಡೆಯುತ್ತೀರೆಂಬುದನ್ನು ವೈಯಕ್ತಿಕ ಕೆಲಸ ವಿನಂತಿ ಕಾಲಂನಲ್ಲಿ ನಮೂದಿಸಬೇಕು. ಉದಾಹರಣೆಗೆ, ತೋಟಗಾರಿಕೆ, ಅರಣ್ಯ ಇಲಾಖೆ, ರೇಷ್ಮೆ ಇಲಾಖೆ, ಜಾನುವಾರು ಶೆಡ್, ಇತರ ಕಾಮಗಾರಿಗಳು ಕಂದಾಯ ಗ್ರಾಮದ ಹೆಸರು, ಸರ್ವೆ ನಂಬರ್ ಆಯ್ಕೆ ಮಾಡಿ ನಿಖರವಾದ ಮಾಹಿತಿ ತುಂಬಿ ಅರ್ಜಿ ಸಲ್ಲಿಸಬೇಕು.
ಯಾವ್ಯಾವ ಕಾಮಗಾರಿ ಕೈಗೊಳ್ಳಬಹುದು (facility)
ತೋಟಗಾರಿಕೆ ಇಲಾಖೆಯ ಮೂಲಕ ತೆಂಗು, ಮಾವು, ಸಪೋಟ, ನಿಂಬೆ, ದಾಳಿಂಬೆ, ನುಗ್ಗೆ, ಪಪ್ಪಾಯ, ಕರಿಬೇವು, ನೆಲ್ಲಿ, ದ್ರಾಕ್ಷಿ, ಸೀತಾಫಲ, ಬಾಳೆ, ಗುಲಾಬಿ, ಹೂವು, ಮಲ್ಲಿಗೆ ಹೂ ಬೆಳೆಯಲು ಅವಕಾಶ ನೀಡಲಾಗಿದೆ. ಕೃಷಿ ಹಾಗೂ ಅರಣ್ಯ ಇಲಾಖೆಯ ಮೂಲಕ ಹೊಂಗೆ, ಬೇವು, ಸಾಗುವಾನಿ, ಹೆಬ್ಬೇವು ಬೆಳೆಯಬಹುದು. ರೇಷ್ಮೆ ಇಲಾಖೆಯ ವತಿಯಿಂದ ಹಿಪ್ಪು ನೇರಳೆ ನರ್ಸರಿ, ಹಿಪ್ಪು ನೇರಳೆ ನಾಟಿ, ಮತ್ತು ಹಿಪ್ಪು ನೇರಳೆ ಮರಗಡ್ಜಿ ಕಾಮಗಾರಿಗಳ್ನು ಕೈಗೊಳ್ಳಲು ಅವಕಾಶವಿದೆ. ಗ್ರಾಮ ಪಂಚಾಯತಿ ವತಿಯಿಂದ ದನದ ಶೆಡ್, ಕುರಿ ಹಾಗೂ ಕೋಳಿ ಶೆಡ್ ನಿರ್ಮಾಣಕ್ಕಾಗಿ ಅನುದಾನದ ನೆರವು ನೀಡಲು ಈ ಯೋಜನೆಯನ್ನು ರೂಪಿಸಲಾಗಿದೆ.
ಅರ್ಜಿ ಭರ್ತಿಯಲ್ಲಿ ತಾಂತ್ರಿಕ ಸಮಸ್ಯೆಯಾಗುತ್ತಿದ್ದರೆ ರೈತರು, ಗ್ರಾಮಸ್ಥರು ತಮ್ಮ ಹತ್ತಿರದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.