2020-21ನೇ ಶೈಕ್ಷಣಿಕ ಸಾಲಿನ ದ್ವಿತೀಯ PUC Result (ಜುಲೈ 20) ಮಂಗಳವಾರ ಸಾಯಂಕಾಲ 4 ಗಂಟೆಗೆ ಪ್ರಕಟವಾಗಲಿದೆ. ಕೊರೋನಾದಿಂದಾಗಿ ಈ ವರ್ಷ ಎಸ್ಎಸ್ಎಲ್ಸಿ ಮತ್ತು ಪ್ರಥಮ ಪಿಯುಸಿ ಹಾಗೂ ಶೈಕ್ಷಣಿಕ ಚಟುವಟಿಕೆಗೆ ನೀಡಿದ ಅಂಕಗಳ ಆಧಾರದ ಮೇಲೆ ಫಲಿತಾಂಶ ನೀಡಲು ನಿರ್ಣಯಿಸಲಾಗಿದೆ.
ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶಕುಮಾರ ಪಿಯುಸಿ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ https://karresults.nic.in/ ವೆಬ್ ಸೈಟ್ ನಲ್ಲಿ ಸಾಯಂಕಾಲ 4 ರ ನಂತರ ಮೊಬೈಲ್ ನಲ್ಲಿಯೇ ವೀಕ್ಷಿಸಬಹುದು.
ಫಲಿತಾಂಶ ವೀಕ್ಷಿಸಲು ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ ನಮೂದಿಸಬೇಕು. ಫಲಿತಾಂಶಕ್ಕಾಗಿ ಅಗತ್ಯವಾದ ನೋಂದಣಿ ಸಂಖ್ಯೆಯನ್ನು ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗಿದೆ. ಒಂದು ವೇಳೆ ನೋಂದಣಿ ಸಂಖ್ಯೆ ಸಿಗದಿದ್ದರೆ ವಿದ್ಯಾರ್ಥಿಗಳು http://pue.kar.nic.in ಈ ಲಿಂಕ್ ಮೇಲೆ ಕ್ಲಿಕ್ ಮಾಡಿ know my register number ಒತ್ತಿ ಕಲಿಯುತ್ತಿರುವ ಜಿಲ್ಲೆ, ಕಾಲೇಜು ಆಯ್ಕೆ ಮಾಡಿಕೊಂಡು ನೋಂದಣಿ ಸಂಖ್ಯೆ ಪಡೆಯಬಹುದು. ಖಾಸಗಿ ಅಭ್ಯರ್ಥಿಗಳಿಗೆ ಪರೀಕ್ಷೆ ಬಳಿಕ ಫಲಿತಾಂಶ ಪ್ರಕಟವಾಗಲಿದೆ.
ಪ್ರಸಕ್ತ ವರ್ಷ ಪಿಯುಸಿ ದ್ವಿತೀಯ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಲ್ಲದೆ ಪಾಸ್ ಮಾಡಲಾಗಿದೆ. ಹೊಸ (ಪ್ರೇಷರ್ಸ್) ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಈ ಬಾರಿಯ ದ್ವಿತಿಯೀ ಪಿಯುಸಿ ಪರೀಕ್ಷೆ ರದ್ದುಪಡಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆಯು ಆ ಮಕ್ಕಳ ಎಸ್ಎಸ್ಎಲ್ಸಿ ಮತ್ತು ಪ್ರಥಮ ಪಿಯುಸಿ ಪರೀಕ್ಷಾ ಫಲಿತಾಂಶ ಆಧರಿಸಿ ದ್ವಿತಿಯೀ ಪಿಯುಸಿ ಫಲಿತಾಂಶ ಸಿದ್ದಪಡಿಸಿದೆ.