ತಿಂಗಳಿಗೆ 55 ರೂಪಾಯಿ ಹೂಡಿಕೆ ಮಾಡಿ ತಿಂಗಳಿಗೆ 3 ಸಾವಿರ ಪಡೆಯಿರಿ

Written by Ramlinganna

Updated on:

Pradhanmantri Shram yogi Maandhan ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯಡಿಯಲ್ಲಿ ತಿಂಗಳಿಗೆ ಕೇವಲ 55 ರೂಪಾಯಿ ಹೂಡಿಕೆ ಮಾಡಿ ವಾರ್ಷಿಕವಾಗಿ  36 ಸಾವಿರ ರೂಪಾಯಿ ಪಿಂಚಣಿ ಪಡೆಯಬಹುದು.

ಹೌದು, ರೈತರಾಗಲಿ, ಕೂಲಿಕಾರ್ಮಿಕರಾಗಲಿ, ಕಟ್ಟಡ ಕಾರ್ಮಿಕರಾಗಲಿ, ಬೀದಿ ವ್ಯಾಪಾರಿಗಳಾಗಲಿ  ತಿಂಗಳಿಗೆ ಕೇವಲ 55 ರೂಪಾಯಿ ಉಳಿತಾಯ ಮಾಡಿದರೆ ತಿಂಗಳಿಗೆ 3 ಸಾವಿರ ರೂಪಾಯಿಯಂತೆ  ವರ್ಷಕ್ಕೆ 36 ಸಾವಿರ ರೂಪಾಯಿ ಪಿಂಚಣಿ ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ.. ಇಲ್ಲಿದೆ ಸಂಪೂರ್ಣ ಮಾಹಿತಿ.

Pradhanmantri Shram yogi Maandhan ಏನಿದು ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ?

ಸರ್ಕಾರಿ ನೌಕರರು ನಿವೃತ್ತಿಯ ನಂತರ ಕೂಲಿ ಕಾರ್ಮಿಕರು ಸಹ ಪಿಂಚಣಿ ಸೌಲಭ್ಯ ಪಡೆಯಲೆಂಬ ಉದ್ದೇಶದಿಂದಾಗಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯನನು ಆರಂಭಿಸಿದೆ.  ಈ  ಯೋಜನೆಯಡಿಯಲ್ಲಿ ಬೀದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು, ಮನೆ ಕೆಲಸದವರು, ಕೃಷಿ ಕೂಲಿ ಕಾರ್ಮಿಕರು, ಕಾರ್ಮಿಕರು ಸೇರಿದಂತೆ ಇನ್ನಿತರ ವೃತ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರು ಪಿಂಚಣಿ ಸೌಲಭ್ಯ ಪಡೆಯಬಹುದು.

ಈ ಯೋಜನೆಗೆ ಸೇರಲು ಅರ್ಹತೆಗಳೇನು?

ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯಡಿಯಲ್ಲಿ ಪಿಂಚಣಿ ಸೌಲಭ್ಯ ಪಡೆಯಲಿಚ್ಚಿಸುವವರು 19 ರಿಂದ 40 ವರ್ಷದೊಳಗಿರಬೇಕು. ರೈತರ ಮಾಸಿಕ ಆದಾಯ 15 ಸಾವಿರಕ್ಕಿಂತ ಕಡಿಮೆ ಇರಬೇಕು. ಆದಾಯ ತೆರಿಗೆ ಪಾವತಿಸುವವರಾಗಿರಬಾರದು.

ಯಾವ ಯಾವ ದಾಖಲೆ ಬೇಕು?

ಈ ಯೋಜನೆಯಡಿಯಲ್ಲಿ ಪಿಂಚಣಿ ಸೌಲಭ್ಯ ಪಡೆಯಲಿಚ್ಚಿಸುವ ಆಸಕ್ತರಿಗೆ ಆಧಾರ್ ಕಾರ್ಡ್ ಇರಬೇಕು. ಬ್ಯಾಂಕ್ ಖಾತೆ ಪಾಸ್ ಬುಕ್ ಝರಾಕ್ಸ್ ಪ್ರತಿ ಇರಬೇಕು.  ಆರಂಭದಲ್ಲಿ ವಯಸ್ಸಿಗನುಗುಣವಾಗಿ ಆರಂಭಿಕ ವಂತಿಗೆಯನ್ನು ನಗದು ರೂಪದಲ್ಲಿ ಪಾವತಿಸಬೇಕು. ನಂತರ ಮಾಸಿಕ ವಂತಿಗೆಯು ಅವರ ಖಾತೆಯಿಂದ ಡೆಬಿಟ್ ಮಾಡಲಾಗುವುದು. ಹಣ ಪಾವತಿಯು ಯಶಸ್ವಿಯಾದ ನಂತರ ಆನ್ಲೈನ್  ಶ್ರಮಯೋಗಿ ಪೆನ್ಶನ್ ಸಂಖ್ಯೆ ನೀಡಲಾಗುವುದು.  ಬ್ಯಾಂಕಿನಿಂದ ದೃಢೀಕರಣ ಬಂದ ನಂತರ ಎಸ್.ಎಸ್.ಎಎಸ್ ಮೂಲಕ ಫಲಾನುಭವಿಗೆ ಮಾಹಿತಿ ನೀಡಲಾಗುವುದು.

ಪಿಂಚಣಿಯ ಲೆಕ್ಕ ಇಲ್ಲಿದೆ

ಉದಾಹರಣೆಗೆ ನೀವು 18ನೇ ವಯಸ್ಸಿಗೆ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಗೆ ಸೇರಿದರೆಂದುಕೊಳ್ಳೋಣ.ಪ್ರತಿ ತಿಂಗಳು ನೀವು 55 ರೂಪಾಯಿ ವರ್ಷಕ್ಕೆ 660 ರೂಪಾಯಿ ಆಗಲಿದೆ. 62 ವರ್ಷಗಳವರೆಗೆ ಒಟ್ಟು 27720 ರೂಪಾಯಿ ಆಗಲಿದೆ. 60 ವರ್ಷದ ನಂತರ ನಿಮಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿಯಂತೆ ವರ್ಷಕ್ಕೆ 36 ಸಾವಿರ ರೂಪಾಯಿ ಜೀವಿತಾವಧಿಯವರೆಗೂ ನಿಮ್ಮ ಖಾತೆಗೆ ಪಿಂಚಣಿ ಹಣ ಜಮೆಯಾಗಲಿದೆ.

ಯಾವ ವಯಸ್ಸಿಗೆ ಎಷ್ಟು ವಂತಿಕೆ ಪಾವತಿಸಬೇಕು ಅದಕ್ಕೆ ಕೇಂದ್ರ ಸರ್ಕಾರವು ಎಷ್ಟು ವಂತಿಕೆ ಪಾವತಿಸುತ್ತದೆ. ಒಟ್ಟು ಮಾಸಿಕ ವಂತಿಕೆ ಎಷ್ಟು ಎಂಬ ಚಾರ್ಟ್ ನೋಡಲು ಈ

https://ksuwssb.karnataka.gov.in/info-2/Central+Government+Schemes/Pradhana+Manthri+Shram+Yogi+Maandhan+yojana+(PMSYM)/kn

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಕೆಳಗಡೆ ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ ವಂತಿಕೆಯ ಚಾರ್ಟ್ ಓಪನ್ ಆಗುತ್ತದೆ. ನಿಮ್ಮ ವಯಸ್ಸು ಎಷ್ಟಿದೆ ಎಂಬುದನ್ನು ನೋಡಿ ನೀವು ಎಷ್ಟು ಹಣ ಪಾವತಿಸಬೇಕು ಎಂಬುದನ್ನು ಅಲ್ಲಿ ನೋಡಬಹುದು.

ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ ಎಲ್ಲಿ ನೋಂದಣಿ ಮಾಬೇಕು?

ದೇಶದ ಅಸಂಘಟಿತ ವಲಯದ ಕಾರ್ಮಿಕರು ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (ಸಿ.ಎಸ್.ಸಿ) ಗಳಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು.

ಇದನ್ನೂ ಓದಿ : ಮೊಬೈಲ್ ನಲ್ಲೇ ಚೆಕ್ ಮಾಡಿ ನಿಮ್ಮ ಪಿಎಂ ಕಿಸಾನ್ ಇಕೆವೈಸಿ ಸ್ಟೇಟಸ್

ಕೇಂದ್ರ ಸರ್ಕಾರವು ಚಂದಾದಾರರು ಪಾವತಿಸುವ ವಂತಿಗೆಗೆ ಸಮಾನಾಂತರ ವಂತಿಗೆಯನ್ನು ಪಾವತಿಸುತ್ತದೆ.  ವಂತಿಗೆದಾರರು 60 ವರ್ಷ ಪೂರ್ಣಗೊಂಡ ನಂತರ ತಿಂಗಳಿಗೆ 3 ಸಾವಿರ ರೂಪಾಯಿ ಪಿಂಚಣಿ ಸೌಲಭ್ಯ ಪಡೆಯುತ್ತಾರೆ.  ಪಿಂಚಣಿ ಆರಂಭಗೊಂಡ ನಂತರ ಚಂದಾದಾರರು ಮೃತಪಟ್ಟಿದ್ದಲ್ಲಿ ಅವರ ಪತ್ನಿ ಅಥವಾ ಪತಿಗೆ ಪಿಂಚಣಿಯ ಶೇ. 50 ರಷ್ಟು ಪಿಂಚಣಿ ನೀಡಲಾಗುವುದು. ಚಂದಾದಾರರು ಯೋಜನೆಯಿಂದ 60 ವರ್ಷ ಪೂರ್ವದಲ್ಲೇ ನಿರ್ಗಮಿಸಿದಲ್ಲಿ ಅವರು ಪಾವತಿಸಿರುವ ವಂತಿಕೆಯನ್ನು ಮಾತ್ರ ಬಡ್ಡಿಯೊಂದಿಗೆ ಹಿಂಪಡೆಯಲು ಅರ್ಹರಾಗಿರುತ್ತಾರೆ.

Leave a Comment