ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ತಮ್ಮ ಖಾತೆಗೆ 12ನೇ ಕಂತಿನ ಹಣ ಜಮೆಯಾಗುತ್ತೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ಪಿಎಂ ಕಿಸಾನ್ ಯೋಜನೆಯ 12 ನೇ ಕಂತಿನ ಹಣ ಬಿಡುಗಡೆಗೆ ಈಗ ಕ್ಷಣಗಣನೆ ಶುರುವಾಗಿದೆ. ಇಕೆವೈಸಿ ಪ್ರಕ್ರಿಯೆಯ ಅವಧಿಯೂ ಈಗ ಮುಗಿದಿದ್ದರಿಂದ ಯಾವ ರೈತರಿಗೆ ಹಣ ಜಮೆಯಾಗುತ್ತದೆ ಮತ್ತು ಯಾವ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗುವುದಿಲ್ಲ ಎಂಬುದು ಮೊಬೈಲ್ ನಲ್ಲೇ ಚೆಕ್ ಮಾಡಹಬಹುದು.
ಈ ಸಲ ಇಕೆವೈಸಿ ಮಾಡಿಸಿದ ರೈತರಿಗೆ ಮಾತ್ರ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆ. ಇಕೆವೈಸಿ ಮಾಡಿಸಿದ ನಂತರವೂ ಎಲ್ಲಾ ರೈತರಿಗೆ ಜಮೆಯಾಗುತ್ತದೆ ಎಂದು ಹೇಳಲಿಕ್ಕಾಗುವುದಿಲ್ಲ. ಏಕೆಂದರೆ ಒಂದು ಕುಟುಂಬದಲ್ಲಿ ಪತಿ, ಪತ್ನಿ ಹಾಗೂ ಮಕ್ಕಳು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದರೆ ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಪಿಎಂ ಕಿಸಾನ್ ಹಣ ಜಮೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಕುಟುಂಬದಲ್ಲಿ ಯಾರಾದರೊಬ್ಬರು ಸರ್ಕಾರಿ ನೌಕರರಿದ್ದರೆ, ತೆರಿಗೆ ಪಾವತಿಸುತ್ತಿರುವವರಿದ್ದರೆ ಅಂತಹ ಕುಟುಂಬದ ಸದಸ್ಯರಿಗೆ ಈ ಸಲ ಪಿಎಂ ಕಿಸಾನ್ ಹಣ ಜಮೆಯಾಗುವ ಸಾಧ್ಯತೆ ತೀರಾ ಕಡಿಮೆಯಿದೆ. ನಿಜವಾದ ಫಲಾನುಭವಿಗಳನ್ನು ಗುರುತಿಸಲೆಂದೇ ಇಕೆವೈಸಿ ಪ್ರಕ್ರಿಯೆಯನ್ನು ಸರ್ಕಾರವು ಕಡ್ಡಾಯಗೊಳಿಸಲಾಗಿತ್ತು. ಹಾಗಾದರೆ ಯಾವ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆ ಯಾವ ರೈತರಿಗೆ ಜಮೆಯಾಗುವುದಿಲ್ಲ ಎಂಬುದನ್ನು ಚೆಕ್ ಮಾಡುವುದು ತುಂಬಾ ಸರಳವಾಗಿದೆ.
ಮೊಬೈಲ್ ನಲ್ಲೇ ಯಾವ ರೈತರಿಗೆ ಹಣ ಜಮೆಯಾಗುತ್ತದೆ? ಯಾವ ರೈತರಿಗೆ ಜಮೆಯಾಗಲ್ಲ? ಚೆಕ್ ಮಾಡಿ
ರೈತರು ಮನೆಯಲ್ಲಿ ಕುಳಿತು ತಮ್ಮಲ್ಲಿರುವ ಮೊಬೈಲ್ ನಲ್ಲೇ ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡಬಹುದು. ಹೌದು, ರೈತರು ಮೊಬೈಲ್ ನಲ್ಲೇ ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡಬೇಕಾದರೆ ಈ
https://pmkisan.gov.in/BeneficiaryStatus.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಅಲ್ಲಿ ತೆರೆದುಕೊಳ್ಳುವ ಪೇಜ್ ನಲ್ಲಿ search By ಮುಂದುಗಡೆಯಿರುವ ಬಾಕ್ಸ್ ನಲ್ಲಿ ಮೊಬೈಲ್ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. Enter Value ಬಾಕ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು. Enter Image Text ಮುಂದಿರುವ ಬಾಕ್ಸ್ ನಲ್ಲಿ ಅಲ್ಲಿ ಕಾಣುವ ಇಮೆಜ್ ಕೋಡ್ ನಮೂದಿಸಬೇಕು. ನಂತರ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಇನ್ನೊಂದು ಪೇಜ್ ಕಾಣುತ್ತದೆ. ಅಲ್ಲಿ ರೈತರಿಗೆ ಇಲ್ಲಿಯವರೆಗೆ ಪಿಎಂ ಕಿಸಾನ್ ಹಣ ಎಷ್ಟು ಕಂತುಗಳು ಜಮೆಯಾಗಿವೆ? ಹಾಗೂ ಈಗ 12ನೇ ಕಂತಿನ ಹಣದ ಸ್ಟೇಟಸ್ ಕಾಣುತ್ತದೆ.
ಒಂದು ವೇಳೆ ನಿಮಗೆ waiting for approval by state , RFT signed ಅಥವಾ FTO is Generated and payment confirmation is pending ಎಂದು ಕಂಡರೆ ನಿಮಗೆ ಪಿಎಂ ಕಿಸಾನ್ ಹಣ ಅತೀ ಶೀಘ್ರದಲ್ಲಿ ಜಮೆಯಾಗುತ್ತದೆ.
ಇದನ್ನೂ ಓದಿ : ಬೆಳೆಹಾನಿ ವರದಿ ಆ್ಯಪ್ ಗೆ ಅಪ್ಲೋಡ್ ಆಗುತ್ತಿದ್ದಂತೆ ರೈತರಿಗೆ ಪರಿಹಾರ
ಒಂದು ವೇಳೆ ನಿಮ್ಮ ಸ್ಟೇಟಸ್ ನಲ್ಲಿ ಸರ್ಕಾರದ 12ನೇ ಕಂತಿನ ಹಣ ಅಂದರೆ ಮುಂದಿನ ಕಂತಿನ ಹಣ ಜಮೆಯ ಕುರಿತಂತೆ ಯಾವುದೇ ಸಂದೇಶ ಕಂಡಿಲ್ಲವೆಂದರೆ ಒಂದೆರಡು ದಿನ ಕಾಯಬೇಕಾಗುತ್ತದೆ. ಆದರೂ ಸಂದೇಶದಲ್ಲಿ ಬದಲಾವಣೆಯಾಗದಿದ್ದರೆ ಪಿಎಂ ಕಿಸಾನ್ ಹಣ ನಿಮ್ಮ ಖಾತೆಗೆ ಜಮೆಯಾಗುತ್ತೋ ಇಲ್ಲವೋ ಎಂಬುದು ಸೆಪ್ಟೆಂಬರ್ 15 ರಂದು ಗೊತ್ತಾಗುತ್ತದೆ. ಏಕೆಂದರೆ ಅಂದು ಪಿಎಂ ಕಿಸಾನ್ 12ನೇ ಕಂತಿನ ಹಣ ಬಿಡುಗಡೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ರೈತರು ಕೆಲವು ರೈತರು ಸೆಪ್ಟೆಂಬರ್ 15 ರವರೆಗೆ ಕಾಯಬೇಕಾಗುತ್ತದೆ.