ಮಳೆಯಿಂದ ಹಾನಿಗೊಳಗಾದ ಬೆಳೆಯನ್ನು ಅಧಿಕಾರಿಗಳು ಸರ್ವೆ ಮಾಡುತ್ತಿದ್ದು, ಈ ಕೆಲಸ ಪೂರ್ಣಗೊಂಡು ಬೆಳೆಹಾನಿ ವರದಿ ಆ್ಯಪ್ ಗೆ ಅಪ್ಲೋಡ್ ಆಗುತ್ತಿದ್ದಂತೆ ರೈತರಿಗೆ ಪರಿಹಾರ ನೀಡಲಾಗುವುದೆಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.

ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಗೊಳಗಾದ ಚಿತ್ರದುರ್ಗ ತಾಲೂಕಿನ ಓಬವ್ವನಾಗತಿಹಳ್ಳಿ ಹಾಗೂ ದೊಡ್ಡ ಆಲಘಟ್ಟ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ವೀಕ್ಷಿಸಿ ಮಾತನಾಡಿದರು.

ಕಳೆದ ಎರಡು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದ ರಾಜ್ಯದಲ್ಲಿ ಅಪಾರ ಬೆಳೆ ಹಾನಿಯಾಗಿದೆ. ಬೆಳೆ ಹಾನಿಯಾದ ರೈತರಿಗೆ ತಿಂಗಳೊಳಗೆ  ಬೆಳೆಹಾನಿ  ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು. ಬೆಳೆ ಹಾನಿಯಾದ ರೈತರಿಗೆ  ಕಳೆದ ವರ್ಷಕ್ಕಿಂತ ಈ ವರ್ಷ ಬೆಳೆಹಾನಿ ಪರಿಹಾರವನ್ನು ಮುಖ್ಯಮಂತ್ರಿ ಹೆಚ್ಚಿಸಿದ್ದಾರೆ. ಮಳೆಯಾಶ್ರಿತ ಪ್ರದೇಶದಲ್ಲಿ ಪ್ರತಿ ಹೆಕ್ಟೇರಿಗೆ 16800 ರೂಪಾಯಿ, ನೀರಾವರಿ ಪ್ರದೇಶದಲ್ಲಿ ಪ್ರತಿ ಹೆಕ್ಟೇರಿಗೆ 25500 ರೂಪಾಯಿ ಪರಿಹಾರ ನೀಡಲಾಗುವುದು. ಬಹುವಾರ್ಷಿಕ ಬೆಳೆ ಪ್ರದೇಶದಲ್ಲಿ ಪ್ರತಿ ಹೆಕ್ಟೇರಿಗೆ 28000 ರೂಪಾಯಿ ಪರಿಹಾರ ನೀಡಲಾಗುವುದು ಎಂದರು.

ಮೂರು ವರ್ಷಗಳಿಂದ ರಾಜ್ಯದಲ್ಲಿ ಮಳೆ ಹೆಚ್ಚಾಗುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಬಹುತೇಕ ರೈತರ ಬೆಳೆ ಹಾನಿಯಾಗುತ್ತಿದೆ. ಈ ವರ್ಷ 14 ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ.ರೈತರ ಬೆಳೆಗಳು ಹಾನಿಯಾಗಿದೆ. ನೋವಿನಲ್ಲಿರುವ ರೈತರಿಗೆ ಅತೀ ಶೀಘ್ರಪರಿಹಾರ ನೀಡಲಾಗವುದು. ಮಧ್ಯವರ್ತಿಗಳ ಕಾಟತಪ್ಪಿಸಿ, ರೈತರ ಖಾತೆಗೆ ನೇರವಾಗಿ ಪರಿಹಾರದ ಹಣ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಬೆಳೆ ವಿಮೆ ಪರಿಹಾರ 2022 ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ

ಪ್ರಕೃತಿ ವಿಕೋಪದಿಂದಾಗಿ ಉಂಟಾಗುವ ಪ್ರಾಣ ಹಾನಿಗೆ ಸಂಬಂಧಿಸಿದಂತಹ ಪ್ರಕರಣಗಳಿಗೆ 24 ಗಂಟೆ ಒಳಗಾಗಿ ಸರ್ಕಾರದಿಂದ ಪರಿಹಾರ ನೀಡಲು ತುರ್ತು ಕ್ರಮವಹಿಸಲು ತಹಶೀಲ್ದಾರಗಳಿಗೆ ಸೂಚಿಸಿದ್ದೇನೆ. ಮನೆ ಹಾನಿ ಉಂಟಾದ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ತುರ್ತು ಕ್ರಮವಹಿಸಲು ತಹಶೀಲ್ದಾರ ನೇತೃತ್ವದ ತಂಡ ಕಾರ್ಯನಿರ್ವಹಿಸುತ್ತಿದೆ ಎಂದರು.

ಪ್ರವಾಹ ಪೀಡಿತ 14 ಜಿಲ್ಲೆಗಳ 161 ತಾಲೂಕುಗಳಲ್ಲಿ ಪ್ರವಾಸ ಮುಗಿದಿದೆ. ಪ್ರವಾಹದಿಂದ ಬಿದ್ದಿರುವ ಮನೆಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ. ರಾಜ್ಯದಲ್ಲಿ 1.37 ಲಕ್ಷ ಹೆಕ್ಟೇರಿಗೂ ಹೆಚ್ಚಿನ ಪ್ರದೇಶದ ಬೆಳೆ ಹಾಳಾಗಿದೆ. ಪರಿಹಾರ ನೀಡಲು ಈಗಾಗಲೇ 145 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದರು.

ಬೆಳೆಹಾನಿ ಪರಿಹಾರ ಟೋಲ್ ಫ್ರೀ ನಂಬರ್

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲಾದ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ ರೈತರು 72 ಗಂಟೆಯೊಳಗೆ 1800 180 1551 ಗೆ ಕೆರ ಮಾಡಬೇಕು. ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘಸ್ಫೋಟ ಹಾಗೂ ಗುಡುಗು ಮಿಂಚುಗಳಿಂದಾಗಿ ಉಂಟಗುವ ಬೆಂಕಿ ಅವಘಡ ನಷ್ಟಕ್ಕೆ ವೈಯಕ್ತಿಕವಾಗಿ ಬೆಳೆ ವಿಮೆ ಪರಿಹಾರ ನೀಡಲಾಗುವುದು.

ಬೀದರ್ ಜಿಲ್ಲೆ ಕಲಬುರಗಿ ಜಿಲ್ಲೆಯ ರೈತರು 1800 200 5142 ನಂಬರಿಗೆ ಕರೆ ಮಾಡಿ ತಮ್ಮ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬೆಳೆ ನಷ್ಟದ ಬಗ್ಗೆ ಲಿಖಿತವಾಗಿ ದೂರು ನೀಡಬೇಕು.

ಬೀದರ್ ಜಿಲ್ಲೆಯ ರೈತರು ಯೂನಿವರ್ಸಲ್ ಸೋಂಪೋ ಜನರಲ್ ಇನಸೂರೆನ್ಸ್  ಕಂಪನಿ ಲಿಮಿಟೆಡ್ ಕಂಪನಿಯ ಬೀದರ್ ಜಿಲ್ಲೆಯ ಸಂಯೋಜಕರು ದಸ್ತಗಿರ್ ಸಾಹೇಬ್ 7204333750 ಗೆ ಸಂಪರ್ಕಿಸಬೇಕು. ಬೀದರ್ ತಾಲೂಕು ಸಂಯೋಜಕ ಕಿರಣಕುಮಾರ ಮೊ.ಸಂ. 6361044910ಗೆ ಸಂಪರ್ಕಿಸಬೇಕು. ಬಾಲ್ಕಿ ತಾಲೂಕು ಸಂಯೋಜಕ ವೀರಶೆಟ್ಟಿ 8296200280, ಕಮಲನಗರ ತಾಲೂಕು ಸಂಯೋಜಕ ಆಕಾಶ 9900947910ಗೆ ಸಂಪರ್ಕಿಸಬೇಕು. ಬಸವಕಲ್ಯಾಣ ತಾಲೂಕು ಸಂಯೋಜಕ ಕೃಷ್ಣಕಾಂತ 9880536788, ಹುಲಸೂರ ತಾಲೂಕು ಸಂಯೋಜಕ ಪ್ರೇಮ 7338316246, ಔರಾದ ತಾಲೂಕು ಸಂಯೋಜಕ ಚೇತನ 9741168044, ಹುಮಾನಬಾದ ತಾಲೂಕು ಸಂಯೋಜಕ ಸದ್ದಾಂ ಹುಸೇನ 7795927064, ಚಿಟಗುಪ್ಪಾ ತಾಲುಕು ಸಂಯೋಜಕ ಮಾಣಿಕಪ್ಪಾ 9740675054 ಗೆ ಸಂಪರ್ಕಿಸಬಹುದು.

Leave a Reply

Your email address will not be published. Required fields are marked *