ಈ ದಿನ ಪಿಎಂ ಕಿಸಾನ್ ಹಣ ಜಮೆ: ನಿಮ್ಮ ಹೆಸರು ಚೆಕ್ ಮಾಡಿ

Written by By: janajagran

Updated on:

PM Kisan money will be credited ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗಿಲ್ಲಿದೆ ಸಂತಸದ ಸುದ್ದಿ. ಹೌದು, ಇದೇ ತಿಂಗಳು ರೈತರ ಖಾತೆಗೆ ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಹಣ ಬಿಡುಗಡೆಯಾಗಲಿದೆ. ಬಿಡುಗಡೆ ಮಾಡುವ ದಿನಾಂಕದಂದು  ದೇಶದ ಪ್ರಧಾನಿ ನರೇಂದ್ರ ಮೋದಿಯವರು ಏಕಕಾಲಕ್ಕೆ ಎಲ್ಲಾ ರೈತರ ಖಾತೆಗೆ ಹಣ ಜಮೆ ಮಾಡಲಿದ್ದಾರೆ.

ಮೊದಲ ಕಂತಿನ ಹಣ ಏಪ್ರೀಲ್ 1ರಿಂದ ಜುಲೈ 31ರೊಳಗೆ, ಎರಡನೇ ಕಂತಿನ ಹಣ ಆಗಸ್ಟ್ 1 ರಿಂದ ನವೆಂಬರ್ 31ರೊಳಗೆ, ಮೂರನೇ ಕಂತಿನ ಹಣ ಡಿಸೆಂಬರ್ 1 ರಿಂದ‌ ಮಾರ್ಚ್ 31ರೊಳಗೆ ಜಮೆಯಾಗಲಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿಯು ಭಾರತದ ರೈತರಿಗೆ ದೊಡ್ಡ ಆಸರೆಯಾಗಿದೆ. ಸಮಯಕ್ಕೆ ಸರಿಯಾಗಿ ಯಾವುದೇ ಮಧ್ಯವರ್ತಿಗಳಿಲ್ಲದೆ, ಯಾವುದೇ ಕಮಿಷನ್ ಇಲ್ಲದೆ ನೇರವಾಗಿ ರೈತರ ಖಾತೆಗೆ ಹಣ ಜಮೆಯಾಗುತ್ತಿರುವ ಯೋಜನೆಗಳಲ್ಲಿ ಇದು ಪ್ರಮುಖವಾಗಿದೆ. ಪ್ರತಿ ವರ್ಷ ಪ್ರತಿ ಕಂತಿನ ಸಾವಿರಾರು ಕೋಟಿ ರೂಪಾಯಿಗಳ ವರ್ಗಾವಣೆ ಭಾರತದಲ್ಲಿ ಇದು ಸಂಭವಿಸಬಹುದು ಎಂದು ಈ ಹಿಂದೆ ಯಾರೂ ಊಹಿಸಿರಲಿಕ್ಕಿಲ್ಲ. ಸಣ್ಣ ರೈತರು, ಈ ಮೊತ್ತದದಲ್ಲಿ ಉತ್ತಮ ಗುಣಮಟ್ಟದ ಬೀಜಗಳು, ರಸಗೊಬ್ಬರ ಹಾಗೂ ಸಲಕರಣೆಗಳನ್ನು ಖರೀದಿಸಲು ಅನುಕೂಲವಾಗುತ್ತಿದೆ.

PM Kisan money will be credited ಏನಿದು ಪಿಎಂ ಕಿಸಾನ್ ಯೋಜನೆ?

ಸಣ್ಣಮತ್ತು ಅತೀ ಸಣ್ಣ ರೈತರ ಆದಾಯ ದ್ವಿಗುಣಗೊಳಿಸಲು 2019 ರಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಆರಂಭಿಸಲಾಯಿತು. ಈ ಯೋಜನೆಯಡಿಯಲ್ಲಿ ಪ್ರತಿ ವರ್ಷ ರೈತರ ಖಾತೆಗೆ 6 ಸಾವಿರ ರೂಪಾಯಿಯನ್ನು ಮೂರು ಕಂತುಗಳಲ್ಲಿಜಮೆ ಮಾಡಲಾಗುತ್ತಿದೆ. 2 ಹೆಕ್ಟೇರ್ ಗಿಂತ ಕಡಿಮೆ ಜಮೀನು ಹೊಂದಿರುವ ರೈತ ಕುಟುಂಬಕ್ಕೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಒಟ್ಟು ಸಮಾನ 3 ಕಂತುಗಳಲ್ಲಿ ಹಣ ಜಮೆ ಮಾಡಲಾಗುತ್ತಿದೆ.

ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ನೋಂದಣಿಯಾದ ಫಲಾನುಭವಿಗಳಿಗೆ ಸರ್ಕಾರವು  10 ಕಂತುಗಳನ್ನು ಈಗಾಗಲೇ ಬಿಡುಗಡೆಮಾಡಿದೆ. ಇದೇ ಏಪ್ರೀಲ್ ತಿಂಗಳಲ್ಲಿ  ಮುಂದಿನ ಕಂತಿನ ಹಣ ಬಿಡುಗಡೆ ಮಾಡಲಾಗುವುದು.

ಇಕೆವೈಸಿ ಮಾಡಿಸಿದರೆ ಮಾತ್ರ ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ ಮಾಡಲಾಗುವುದು ಎನ್ನಲಾಗುತ್ತಿದೆ. ಈ ದಿನಾಂಕವನ್ನು ವಿಸ್ತರಿಸಲಾಗಿದೆ. ಆದರೆ ಇಕೆವೈಸಿ ಮಾಡಿಸಿದ ರೈತರಿಗೆ ಮಾತ್ರ ಜಮೆ ಮಾಡಲಾಗುತ್ತೋ ಅಥವಾ ಎಲ್ಲಾ ರೈತರ ಖಾತೆಗೆ ಹಣ ಜಮೆ ಮಾಡಲಾಗುತ್ತೋ ಬಿಡುಗಡೆಯಾದ ದಿನಾಂಕದಂದು ರೈತರಿಗೆ ಗೊತ್ತಾಗುತ್ತದೆ. ಆದರೆ ಸ್ಟೇಟಸ್ ಚೆಕ್ ಮಾಡಿದರೆ ಜಮೆಯಾಗುತ್ತೋ ಇಲ್ಲವೋ ಎಂಬ ಮಾಹಿತಿ ಗೊತ್ತಾಗುತ್ತದೆ.  ಪಿಎಂ ಕಿಸಾನ್ ಸ್ಟೇಟಸ್ ನಲ್ಲಿ Rft signed by state for installment ಅಥವಾ Rft sign ಇದ್ದರೆ ಪಿಎಂ ಕಿಸಾನ್ ಹಣ ಜಮೆಯಾಗುವ ಸಾಧ್ಯತೆಯಿದೆ.

ಪಿಎಂ ಕಿಸಾನ್ ಸ್ಟೇಟಸ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

ರೈತರು ಮನೆಯಲ್ಲಿಯೇ ಕುಳಿತು ಪಿಎಂ ಕಿಸಾನ್ ಯೋಜನೆಯ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಚೆಕ್ ಮಾಡಲು ಈ

https://pmkisan.gov.in/BeneficiaryStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಪೇಜ್ ತೆರೆದುಕೊಳ್ಳುತ್ತದೆ. ಆಗ ರೈತರು  ಆಧಾರ್ ಕಾರ್ಡ್ ನಮೂದಿಸಿ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು. ನಂತರ ಇಲ್ಲಿಯವರೆಗೆ ಜಮೆಯಾಗಿರುವ ಕಂತಿನ ಸ್ಟೇಟಸ್ ನೋಡಬಹುದು. 11 ನೇ ಕಂತಿನ ಹಣ ಜಮೆಯಾಗಲು Rft signed by state for installment ಅಥವಾ Rft sign ಇದ್ದರೆ ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆ ಹಣ ಜಮೆಯಾಗುವ ಸಂಭವವಿದೆ.

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿರುವವರೆಲ್ಲರಿಗೂ ಪಿಎಂ ಕಿಸಾನ್ ಹಣ ಜಮೆಯಾಗುವುದಿಲ್ಲ. ಏಕೆಂದರೆ ಈಗ ಸರ್ಕಾರವು  ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಪಿಎಂ ಕಿಸಾನ್ ಹಣ ಜಮೆ ಮಾಡಲು ಮುಂದಾಗಿದೆ. ಇದಕ್ಕಿಂತ ಮುಂಚಿತವಾಗಿ ಒಂದು ಕುಟುಂಬದ ಪತಿ ಪತ್ನಿ ಹಾಗೂ ಮಕ್ಕಳೂ ಸಹ ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯುತ್ತಿದ್ದರು. ಹಾಗಾಗಿ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಎಲ್ಲಾ ರೈತರ ಹೆಸರಿದೆ.

ಇದನ್ನು ಓದಿ: ಜಮೀನುಗಳ ಸರ್ವೆ ನಂಬರ್ ಸಹಿತ ಬಂಡಿದಾರಿ, ಹಳ್ಳಕೊಳ್ಳಗಳ ಮ್ಯಾಪ್ ಬೇಕೆ? ಇಲ್ಲಿದೆ ಮಾಹಿತಿ

ಸ್ಟೇಟಸ್ ಚೆಕ್ ಮಾಡಿದರೆ ಮಾತ್ರ ಯಾವ ರೈತರಿಗೆ ಬರುತ್ತದೆ ಯಾವ ರೈತರಿಗೆ ಬರುವುದಿಲ್ಲಎಂಬ ಮಾಹಿತಿ ಗೊತ್ತಾಗುತ್ತದೆ. ಸ್ಟೇಟಸ್ ನಲ್ಲಿಈ ಮುಂದಿನ ಕಂತು ಜಮೆಯಾಗಬೇಕಾದರೆ Rft signed by state for installment ಅಥವಾ Rft sign ಇರಲೇಬೇಕು.ಅಂದಾಗ ಮಾತ್ರ ಪಿಎಂ ಕಿಸಾನ್ ಯೋಜನೆಯ ಮಂದಿನ ಕಂತು ಜಮೆಯಾಗುವ ಎಲ್ಲಾಸಾಧ್ಯತೆಯಿದೆ.

1 thought on “ಈ ದಿನ ಪಿಎಂ ಕಿಸಾನ್ ಹಣ ಜಮೆ: ನಿಮ್ಮ ಹೆಸರು ಚೆಕ್ ಮಾಡಿ”

  1. ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು….
    Thank you for your information…

    Reply

Leave a Comment