ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗಲು ಈ ಮೆಸೆಜ್ ಇರಲೇಬೇಕು?

Written by Ramlinganna

Updated on:

Pm kisan status should be seedling yes ರೈತರ ಖಾತೆಗೆ ಇನ್ನೂ ಮುಂದೆ ಪಿಎಂ ಕಿಸಾನ್ ಹಣ ಜಮೆಯಾಗಬೇಕಾದರೆ ಸ್ಟೇಟಸ್ ನಲ್ಲಿ ಲ್ಯಾಂಡ್ ಸೀಡ್ಲಿಂಗ್ ಮುಂದೆ ಯಸ್ ಎಂಬ ಮೆಸೆಜ್ ಇದ್ದರೆ ಮಾತ್ರ ಹಣ ಜಮೆಯಾಗುತ್ತದೆ.

ಹೌದು, ಪಿಎಂ ಕಿಸಾನ್ ಯೋಜನೆಯಡಿ ನೋಂದಣಿ ಮಾಡಿಸಿದ ಮಾತ್ರಕ್ಕೆ ಎಲ್ಲಾ ರೈತರಿಗೆ ಹಣ ಜಮೆಯಾಗುವುದಿಲ್ಲ. ಹಿಂದೆ ನೋಂದಣಿ ಮಾಡಿಸಿದ ಬಹುತೇಕ ಎಲ್ಲಾ ರೈತರಿಗೆ 11ನೇ ಕಂತಿನವರೆಗೆ ಜಮೆಯಾಗಿದೆ. ಆದರೆ ಕಳೆದ ಕಂತು ಅಂದರೆ 12ನೇ ಕಂತಿನಲ್ಲಿ ಸುಮಾರು ರೈತರಿಗೆ ಜಮೆಯಾಗಿಲ್ಲ.ಏಕೆಂದರೆ ಪಿಎಂ ಕಿಸಾನ್ ಸ್ಟೇಟಸ್ ನಲ್ಲಿ Land Seedling ಎದುರುಗಡೆ yes ಇದ್ದರೆ ಮಾತ್ರ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆ. ಏನಿದು ಲ್ಯಾಂಡ್ ಸೀಡ್ಲಿಂಗ್? ಇದನ್ನು ಹೇಗೆ ಚೆಕ್ ಮಾಡಬೇಕು? ಇಲ್ಲಿದೆ ಮಾಹಿತಿ.

Pm kisan status should be seedling yes ಪಿಎಂ ಕಿಸಾನ್ ಸ್ಟೇಟಸ್ ನಲ್ಲಿ ಲ್ಯಾಂಡ್ ಸೀಡ್ಲಿಂಗ್ ಚೆಕ್ ಮಾಡುವುದು ಹೇಗೆ?

ಪಿಎಂ ಕಿಸಾನ್ ಯೋಜನೆಯ ಫಲಾನುಭವಿ ರೈತರು ತಮ್ಮ ಸ್ಟೇಟಸ್ ನಲ್ಲಿ ಲ್ಯಾಂಡ್ ಸೀಡ್ಲಿಂಗ್ ಮುಂದೆ ಯಸ್ ಇರುವುದನ್ನು ಚೆಕ್ ಮಾಡಲು ಈ

https://pmkisan.gov.in/BeneficiaryStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಬೆನಿಫಿಶಿಯರಿ ಸ್ಟೇಟಸ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಎಂಟರ್ ವ್ಯಾಲ್ಯು ಕೆಳಗಡೆ ಮೊಬೈಲ್ ನಂಬರ್ ಹಾಕಬೇಕು. ಅದರ ಕೆಳಗಡೆ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು.  ಆಗ ಬೆನೆಫಿಶಿಯರಿ ಸ್ಟೇಟಸ್ ಇನ್ನೊಂದು ಪೇಜ್ ಓಪನ್ ಆಗುತ್ತದೆ.

ಬೆನಿಫಿಶಿಯರಿ ಸ್ಟೇಟಸ್ ಪೇಜ್ ನಲ್ಲಿ ಏನೇನು ಮಾಹಿತಿ ಇರುತ್ತದೆ?

ಪಿಎಂ ಕಿಸಾನ್ ಬೆನಿಫಿಶಿಯರಿ ಸ್ಟೇಟಸ್ ಪೇಜ್ ನಲ್ಲಿ ರೈತರ ಹೆಸರು, ತಂದೆಯ ಹೆಸರು, ಮೊಬೈಲ್ ನಂಬರಿನ ಕೊನೆಯ ನಾಲ್ಕು ಅಂಕಿಗಳು, ರಾಜ್ಯ, ಜಿಲ್ಲೆ, ಊರು, ರೆಜಿಸ್ಟ್ಟೇಶನ್ ನಂಬರ್, ರೆಜಿಸ್ಟ್ರೇಶನ್ ಡೆಟ್ ಇರುತ್ತದೆ. ಅಂದರೆ ನೋಂದಣಿ ಮಾಡಿದ ದಿನಾಂಕ ಇರುತ್ತದೆ. ಅದರ ಕೆಳಗಡೆ ಆಧಾರ್ ಕಾರ್ಡ್ ಅಥೆಂಟಿಕೇಶನ್ ಸ್ಟೇಟಸ್ ಸಕ್ಸೆರ್ ಇರಬೇಕು. ಇಕೆವೈಸಿ ಡನ್ ಎದುರುಗಡೆ ಯಸ್ ಇರಬೇಕು. ಎಲಿಜಿಬಿಲಿಟಿ ಯಸ್ ಇರಬೇಕು.

ಇದನ್ನೂ ಓದಿ : ದ್ವಿಚಕ್ರ, ತ್ರಿಚಕ್ರ ವಾಹನ, ಸರಕು ಸಾಗಾಣಿಕೆ ವಾಹನ ಖರೀದಿಗೆ ಶೇ. 50 ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನ

ಬ್ಯಾಂಕ್ ಸ್ಟೇಟಸ್ ಎದುರುಗಡೆ ಫಾರ್ಮರ್ ರಿಕಾರ್ಡ್ ಹ್ಯಾಸ್ ಬೀನ್ ಆ್ಯಕ್ಸೆಪ್ಟೇಡ್ ಇರಬೇಕು. ಮುಖ್ಯವಾಗಿ ಲ್ಯಾಂಡ್ ಸೀಡ್ಲಿಂಗ್ ಎದುರುಗಡೆ  Yes ಇರಲೇಬೇಕು. ಇಲ್ಲಿ ಯಸ್ ಇದ್ದರೆ ಮಾತ್ರ ರೈತರಿಗೆ ಮುಂದಿನ ಕಂತು ಹಣ ಜಮೆಯಾಗುತ್ತದೆ. ಇಲ್ಲದಿದ್ದರೆ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗುವುದಿಲ್ಲ.

ಯಾವ ಯಾವ ರೈತರಿಗೆ ಲ್ಯಾಂಡ್ ಸೀಡ್ಲಿಂಗ್ ನೋ ಇರುತ್ತದೆ?

ಯಾವ ಕುಟುಂಬದಲ್ಲಿ ಸರ್ಕಾರಿ ನೌಕರರು ಇದ್ದಾರೋ, ತೆರಿಗೆ ಪಾವತಿಸುತ್ತಿದ್ದಾರೋ ಹಾಗೂ ಒಂದೇ ಕುಟುಂಬದಲ್ಲಿಒಬ್ಬರಿಗಿಂತ ಹೆಚ್ಚಿನ ಸದಸ್ಯರು ಪಿಎಂ ಕಿಸಾನ್ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೋ ಅಂತಹವರ ಸ್ಟೇಟಸ್ ಮುಂದುಗಡೆ ನೋ ಇರುತ್ತದೆ. ಹಾಗೂ ಕೆಲವು ರೈತರಿಗೆ ಕಾರಣ ಸಹಿತ ನಮೂದಿಸಲಾಗಿರುತ್ತದೆ.

ಲ್ಯಾಂಡ್ ಸೀಡ್ಲಿಂಗ್ ನೋ ಇದ್ದ ರೈತರೇನು ಮಾಡಬೇಕು?

ಒಂದು ವೇಳೆ ನೀವು ಒಂದು ಕುಟುಂಬದಲ್ಲಿ ಒಬ್ಬರೇ ಸದಸ್ಯರಾಗಿದ್ದರೂ ಪಿಎಂ ಕಿಸಾನ್ ಯೋಜನೆಯ ಹಣ ಬರದಿದ್ದರೆ ಹಾಗೂ ತೆರಿಗೆ ಪಾವತಿಸದಿದ್ದರೆ ಮತ್ತು ನಿಮ್ಮ ಕುಟುಂಬದಲ್ಲಿ ಸರ್ಕಾರಿ ನೌಕರರು ಯಾರೂ ಇರದಿದ್ದರೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಬೇಕು. ನಿಮ್ಮ ಜಮೀನಿನ ಪಹಣಿ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್  ದಾಖಲೆ ತೆಗೆದುಕೊಂಡು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ದಾಖಲೆ ಸಲ್ಲಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು.

Leave a Comment