ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಸರಕು ಸಾಗಾಣಿಕೆ ವಾಹನಗಳ ಖರೀದಿ ಸೇರಿದಂತೆ ಇನ್ನಿತರ ಲಾಭದಾಯಕ ಚಟುವಟಿಕೆ ಕೈಗೊಳ್ಳಲು ಶೇ. 50 ರಷ್ಟುಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 2022-23 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಜನರ ಆರ್ಥಿಕ ಅಭಿವೃದ್ಧಿಗೆ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ನೀಡಲಾಗುವ ತ್ರಿಚಕ್ರ, ಸರಕು ಸಾಗಾಣಿಕೆ, ವ್ಯಾಪಾರ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋಗ ಘಟಕ ಆರಂಭಿಸಲು ಹಾಗೂ ಮೈಕ್ರೋ ಕ್ರೇಡಿಟ್ (ಪ್ರೇರಣಾ) ಯೋಜನೆಯಡಿ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ನೀಡುವ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು21 ರಿಂದ 50 ವರ್ಷದೊಳಗಿರಬೇಕು. ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆಯಡಿ ಅರ್ಜಿದಾರರು 21 ರಿಂದ 60 ವರ್ಷದೊಳಗಿರಬೇಕು. ವಾಹನ ಸೌಲಭ್ಯ ಪಡೆಯುವ ಫಲಾಫೇಕ್ಷಿಗಳು ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. ಸ್ವ ಸಹಾಯ ಸಂಘಗಳು ಸಕ್ಷಮ ಪ್ರಾಧಿಕಾರಗಳಿಂದ ನೋಂದಣಿಯಾಗಿರಬೇಕು. ಸಂಘದ ಹೆಸರಿನಲ್ಲಿ ಬ್ಯಾಂಕ್ ಉಳಿತಾಯ ಖಾತೆ ಹೊಂದಿರಬೇಕು.
ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್
http://sevasindhu.karnataka.gov.in
ನ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ಸಲ್ಲಿಸಬಹುದು
ಘಟಕದ ವೆಚ್ಚ ಶೇ.ತ 50 ರಷ್ಟು ಅಥವಾ ಗರಿಷ್ಟ 2 ಲಕ್ಷ ರೂಪಾಯಿಯವರೆಗೆ ಸಹಾಯಧನ ನೀಡಲಾಗುವುದು. ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ. (ವಾಹನ ಉದ್ದೇಶ ಹೊರತುಪಡಿಸಿ)
ಸರಕು ಸಾಗಾಣಿಕೆ ವಾಹನ ಉದ್ದೇಶಕ್ಕೆ ಘಟಕ ವೆಚ್ಚದ ಶೇ. 50 ರಷ್ಟು ಅಥವಾ ಗರಿಷ್ಟ 3.50 ಲಕ್ಷ ರೂಪಾಯಿಯವರೆಗೆ ಸಹಾಯಧನ ನೀಡಲಾಗುವುದು. ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ.
ಸೌಲಭ್ಯ ಪಡೆಯಲು ಅರ್ಜಿದಾರರಿಗೆ ಇರಬೇಕಾದ ಅರ್ಹತೆಗಳು
ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ಅರ್ಜಿದಾರರು ಕನಿಷ್ಟ ಕಳೆದ 15 ವರ್ಷಗಳಿಂದ ಕರ್ನಾಟಕದಲ್ಲಿ ವಾಸಿಸುತ್ತಿರಬೇಕು. ಅರ್ಜಿದಾರರ ವಯಸ್ಸು 18 ರಿಂದ 50 ವರ್ಷದೊಳಗಿರಬೇಕು. ಅರ್ಜಿದಾರರ ಕುಟುಂಬದ ಸದಸ್ಯರಲ್ಲಿ ಯಾರೊಬ್ಬರೂ ಸರ್ಕಾರಿ ನೌಕರಿಯಲ್ಲಿರಬಾರದು. ಅರ್ಜಿದಾರರ ಕುಟುಂಬದಲ್ಲಿ ಯಾವುದೇ ಸದಸ್ಯರು ಈ ಹಿಂದೆ ನಿಗಮದಿಂದ 1 ಲಕ್ಷ ಮೇಲ್ಪಟ್ಟು ಸೌಲಭ್ಯ ಪಡೆದಿದ್ದಲ್ಲಿ ಅಂತಹ ಫಲಾನುಭವಿಗಳು ಈ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು 1.50 ಲಕ್ಷ ರೂಪಾಯಿ ಗ್ರಾಮೀಣ ಹಾಗೂ 2 ಲಕ್ಷ ರೂಪಾಯಿ ನಗರ ಪ್ರದೇಶದವರಿಗೆ ಮಿತಿಯೊಳಗಿರಬೇಕು.
ಆನ್ಲೈನ್ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು
ಅರ್ಜಿದಾರರು ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ ಹೊಂದಿರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು. ಪಡಿತರ ಚೀಟಿ ಇರಬೇಕು. ಗುರುತಿನ ಚೀಟಿಗಾಗಿ (ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್ ಇರಬೇಕು)
ಇದನ್ನೂ ಓದಿ : ಯಾವ ರೈತರಿಗೆ ಯಾವ ಬೆಳೆಗೆ ಎಷ್ಟು ಬೆಳೆ ಹಾನಿ ಪರಿಹಾರ ಹಣ ಜಮೆಯಾಗುತ್ತದೆ ನಿಮಗೆ ಗೊತ್ತೇ? ಇಲ್ಲಿದೆ ಮಾಹಿತಿ
ವಾಹನ ಉದ್ದೇಶಕ್ಕಾಗಿ ಅರ್ಜಿ ಸಲ್ಲಿಸುವವರು ಖಾಯಂ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. ಪ್ಯಾಸೆಂಜರ್ ವಾಹನಗಳಿಗೆ ಬ್ಯಾಡ್ಜ್ ಹೊಂದಿರಬೇಕು. ಕೃಷಿ ಉದ್ದೇಶಕ್ಕಾಗಿ ಅರ್ಜಿ ಸಲ್ಲಿಸುವವರು ಜಮೀನಿನ ಆರ್.ಟಿ.ಸಿ ಹೊಂದಿರಬೇಕು.
ಯಾವ ಯಾವ ಚಟುವಟಿಕೆ ಕೈಗೊಳ್ಳಲು ಸಾಲ ನೀಡಲಾಗುವುದು?
ಸರಕು ಸಾಗಾಣಿಕೆಗಾಗಿ ದ್ವಿಚಕ್ರ, ತ್ರಿಚಕ್ರ ವಾಹನ, ಸೇರಿದಂತೆ ಸ್ಟೇಶನರಿ ಅಂಗಡಿ, ಬ್ಯೂಟಿ ಪಾರ್ಲರ್, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಎಲೆಕ್ಟ್ರಿಕ್ ಶಾಪ್, ಆಟೋರಿಕ್ಷಾ, ಗೂಡ್ಸ್ ಕ್ಯಾರಿಯರ್, ಪಾಸೆಂಜರ್ ಕಾರ್, ಇಟ್ಟಿಗೆ ತಯಾರಿಕೆ ಸೇರಿದಂತೆ ಯಾವುದೇ ಲಾಭದಾಯಕ ಸಣ್ಣ ಕೈಗಾರಿಕೆ ಘಟಕ ಸ್ಥಾಪಿಸಲು ಸಹಾಯಧನ ನೀಡಲಾಗುವುದು.
ಚಾಮರಾಜನಗರ ಜಿಲ್ಲೆಯವರಿಗೆ ಅರ್ಜಿ ಸಲ್ಲಿಸಲು ನವೆಂಬರ್ 20 ಕೊನೆಯ ದಿನವಾಗಿದೆ. ಮೈಸೂರು ಜಿಲ್ಲೆಯ ರೈತರಿಗೆ ನವೆಂಬರ್ 30 ಕೊನೆಯ ದಿನವಾಗಿದೆ. ಚಾಮರಾಜನಗರ ಜಿಲ್ಲೆಯವರು 08226 224133 ಗೆ ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಸಂಪರ್ಕಿಸಿ
ಹೆಚ್ಚಿ ಮಾಹಿತಿಗಾಗಿ ಸಾರ್ವಜನಿಕರು ದೂರವಾಣಿ ಸಂಖ್ಯೆ 080 22634300 ಗೆ ಸಂಪರ್ಕಿಸಬಹುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲೆಗಳಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಂಪರ್ಕಿಸಬಹುದು.