ಯಾವ ರೈತರಿಗೆ ಯಾವ ಬೆಳೆಗೆ ಎಷ್ಟು ಬೆಳೆ ಹಾನಿ ಪರಿಹಾರ

Written by Ramlinganna

Updated on:

Which farmers will get crop damage compensation ಬೆಳೆ ಹಾನಿ ಪರಿಹಾರ ಹಣ ಯಾವ ರೈತರಿಗೆ ಎಷ್ಟುಜಮೆಯಾಗುತ್ತದೆ ನಿಮಗೆ ಗೊತ್ತೇ?  ಯಾವ ಯಾವ ಬೆಳೆಗೆ ಎಷ್ಟೆಷ್ಟು ಹಣ ಜಮೆಯಾಗುತ್ತದೆ? ಬೆಳೆ ಹಾನಿ ಪರಿಹಾರಕ್ಕಾಗಿ ಎಲ್ಲಿ ವಿಚಾರಿಸಬೇಕೆಂಬದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಂಗಾರು ಹಂಗಾಮಿಗೆ ಬೆಳೆ ಹಾನಿಯಾದ ರೈತರಿಗೆ ಇನ್ನೂವರೆಗೆ ಎಲ್ಲಾ ಜಿಲ್ಲೆಗಳಲ್ಲಿ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿಲ್ಲ. ಕೆಲವು ರೈತರಿಗಷ್ಟೇ ಏಕೆ  ಜಮೆಯಾಗಿದೆ. ಕೆಲವು ರೈತರಿಗೇಕೆ ಜಮೆಯಾಗಿಲ್ಲ? ಬೆಳೆ ಹಾನಿ ಪರಿಹಾರಕ್ಕಾಗಿ ಎಲ್ಲಿ ವಿಚಾರಿಸಬೇಕೆಂಬುದು ಬಹುತೇಕ ರೈತರಿಗೆ ಮಾಹಿತಿ ಕೊರತೆಯಿರುತ್ತದೆ. ಅಂತಹ ರೈತರಿಗಾಗಿ ಇಲ್ಲಿದೆ ಅಲ್ಪ ಮಾಹಿತಿ.

ಪ್ರಸಕ್ತ ವರ್ಷದಲ್ಲಿ ಸುರಿದ ಅಪಾರ ಮಳೆಯಿಂದಾಗಿ ಹಾಗೂ ಪ್ರವಾಹದಿಂದಾಗಿ ಲಕ್ಷಾಂತರ ರೈತರ ಬೆಳೆ ಹಾಳಾಗಿದೆ. ಇನ್ನೂ ಕೆಲವು ರೈತರು ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಕೆಲವು ರೈತರಿಗೆ ಪರಿಹಾರ ಹಣ ಯಾವ ಖಾತೆಗೆ ಜಮೆಯಾಗಿದೆ ಎಷ್ಟು ಜಮೆಯಾಗಿದೆ ಎಂಬುದರ ಬಗ್ಗೆ ಚೆಕ್ ಮಾಡುವುದು ಗೊತ್ತಿರುವುದಿಲ್ಲ. ಕೆಲವು ರೈತರಿಗೆ ಜಮೆಯಾಗಿದ್ದರೂ ಆಧಾರ್ ಲಿಂಕ್ ಆಗಿರದ ಖಾತೆಗೆ ಜಮೆಯಾಗಿರುವುದರಿಂದ ರೈತರಿಗೆ ಗೊತ್ತಿರುವುದಿಲ್ಲ.

Which farmers will get crop damage compensation ಯಾವ ಯಾವ ರೈತರಿಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ?

ಪ್ರಸಕ್ತ ವರ್ಷ ಅಂದರೆ 2022-23 ನೇ ಸಾಲಿನ ಮುಂಗಾರು ಹಂಗಾಮಿಗೆ ಬೆಳೆ ಹಾನಿಯಾದ ರೈತರಿಗೆಲ್ಲಾ ಪರಿಹಾರ ಹಣ ಜಮೆಯಾಗಿಲ್ಲ. ಯಾವ ರೈತರು ಪರಿಹಾರ ಹಣಕ್ಕಾಗಿ ತಮ್ಮ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯತ್ ನಲ್ಲಿ ಅರ್ಜಿ ಸಲ್ಲಿಸಿರುತ್ತಾರೋ ಅವರಿಗೆ ಜಮೆಯಾಗುತ್ತದೆ. ಗ್ರಾಮ ಪಂಚಾಯತ್ ಅಧಿಕಾರಿಗಳು ಪರಿಹಾರ ತಂತ್ರಾಂಶದಲ್ಲಿ ರೈತರ ಮಾಹಿತಿ ಅಪ್ಲೋಡ್ ಮಾಡಿದ್ದಾರೋ ಅಂತಹ ರೈತರಿಗೆ ಜಮೆಯಾಗಿದೆ.

ಪರಿಹಾರ ಹಣ ಜಮೆಯಾಗಿರುವುದನ್ನು ಎಲ್ಲಿ ಚೆಕ್ ಮಾಡಬೇಕು?

2022-23ನೇ ಸಾಲಿನ ಮುಂಗಾರು ಹಂಗಾಮಿಗೆ ಬೆಳೆ ಹಾನಿಯಾದ ರೈತರು ಅಂದರೆ ಪರಿಹಾರ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಪರಿಶೀಲಿಸಬಹುದು. ಹೌದು, ರೈತರು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ತಮ್ಮ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿರುವುದನ್ನು ಚೆಕ್ ಮಾಡಬಹುದು.  ಪರಿಹಾರ ಹಣ ಸಂದಾಯ ವರದಿ ಪೇಜ್ ನಲ್ಲಿ ಆಧಾರ್ ಸಂಖ್ಯೆ ಮೇಲೆ ಕ್ಲಿಕ್ ಮಾಡಬೇಕು. ನಂತರ ಸೆಲೆಕ್ಟ್ ಕಾಲಾಮಿಟಿ ಟೈಪ್ ನಲ್ಲಿ ಫ್ಲಡ್ ಆಯ್ಕೆ ಮಾಡಿಕೊಳ್ಳಬೇಕು. ಸೆಲೆಕ್ಟ್ ಇಯರ್ ಟೈಪ್ ನಲ್ಲಿ 2022-23 ಆಯ್ಕೆ ಮಾಡಿಕೊಳ್ಳಬೇಕು.  ಇದಾದ ಮೇಲೆರೈತರು ಆಧಾರ್ ಕಾರ್ಡ್ ನಂಬರ್ ಬರೆಯಬೇಕು. ಕ್ಯಾಪ್ಚ್ಯಾ ಕೋಡ್ ಬರೆದ ನಂತರ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಖಾತೆಗೆ ಪರಿಹಾರ ಹಣ ಜಮೆಯಾಗಿದೆಯೋ ಇಲ್ಲವೋ ಹಾಗೂ ಯಾವ ಬ್ಯಾಂಕಿಗೆ ಯಾವ ಸರ್ವೆ ನಂಬರಿಗೆ ಹಣ ಜಮೆಯಾಗಿದೆ. ಹಾಗೂ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ರೈತರು ಮನೆಯಲ್ಲಿಯೇ ಕುಳಿತು ಚೆಕ್ ಮಾಡಬಹುದು.

ಇದನ್ನೂ ಓದಿ ಬೆಳೆ ವಿಮೆ ಮಾಡಿಸಿದ ನಂತರ ರೇತರೇನು ಮಾಡಬೇಕು? ರೈತರಿಗೆ ಗೊತ್ತಿರಲೇಬೇಕಾದ ಮಾಹಿತಿಗಳ ವಿವರ ಇಲ್ಲಿದೆ

ರೈತರು ತಮ್ಮ ಬಳಿಯಿರುವ ಫೋನ್ ನಲ್ಲೇ ಚೆಕ್ ಮಾಡಬಹುದು. ಇದಕ್ಕಾಗಿ ಯಾರ ಸಹಾಯವೂ ಬೇಕಿಲ್ಲ. ರೈತರು ಸ್ವತಃ ಅವರೇ ಸುಲಭವಾಗಿ ಚೆಕ್ ಮಾಡಬಹುದು. ಇದರಿಂದ ರೈತರು ತಮ್ಮ ಖಾತೆಗೆ ಜಮೆಯಾಗಿರುವ ಪರಿಹಾರ ಹಣದ ಸ್ಟೇಟಸ್ ಚೆಕ್ ಮಾಡಬಹುದು. ಇದರೊಂದಿಗೆ ಹಳೆಯ ವರ್ಷದ ಸ್ಟೇಟಸ್ ಸಹ ಚೆಕ್ ಮಾಡಬಹುದು. ಅಲ್ಲಿ ಸೆಲೆಕ್ಟ್ ಇಯರ್ ನಲ್ಲಿ ಯಾವ ವರ್ಷದ ಸ್ಟೇಟಸ್ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಅದನ್ನುಆಯ್ಕೆ ಮಾಡಿಕೊಳ್ಳಬೇಕು.

Leave a Comment