ಇಂದು ಪಿಎಂ ಕಿಸಾನ್ 15ನೇ ಕಂತಿನ ಹಣ ಬಿಡುಗಡೆ

Written by Ramlinganna

Updated on:

PMkisan 15th installment released  : ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗಿಲ್ಲಿದೆ ಸಂತಸದ ಸುದ್ದಿ. ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಖಾತೆಗೆ 15ನೇ ಕಂತಿನ ಹಣ ಇಂದು ಬೆಳಗ್ಗೆ 11.30 ಗಂಟೆಗೆ ಜಮೆಯಾಗಲಿದೆ.

ಹೌದು, ದೀಪಾವಳಿ ಹಬ್ಬಕ್ಕೆ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯಿಂದ ಭರ್ಜರಿ ಗಿಫ್ಟ್ ಸಿಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ದೀಪಾವಳಿಯ ಎರಡು ದಿನದ ನಂತರ ರೈತರಿಗೆ ಭರ್ಜರಿ ಕೊಡುಗೆ ಸಿಕ್ಕಂತಾಗುತ್ತದೆ. ಯಾವ ಯಾವ ರೈತರು ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದಾರೋ ಹಾಗೂ ಯಾವ ರೈತರು ಅರ್ಹತೆ ಹೊಂದಿದ್ದಾರೋ ಆ ರೈತರ ಖಾತೆಗೆ ಇಂದು ಪಿಎಂ ಕಿಸಾನ್ ಹಣ ಜಮೆಯಾಗಲಿದೆ.

ಪಿಎಂ ಕಿಸಾನ್ ಯೋಜನೆಯ ನಾಲ್ಕು ಕಂತುಗಳು ಯಾವಾಗ ಜಮೆಯಾಗಲಿದೆ?

ಪಿಎಂ ಕಿಸಾನ್ ಯೋಜನೆಯ 6 ಸಾವಿರ ರೂಪಾಯಿಯನ್ನು ಸಮಾನ ಮೂರು ಕಂತುಗಳಲ್ಲಿ ಜಮೆ ಮಾಡಲಾಗುವುದು. ಹೌದು,  ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂಪಾಯಿ ಜಮೆ ಮಾಡಲಾಗುತ್ತಿದೆ. ಏಪ್ರೀಲ್ – ಜುಲೈ ತಿಂಗಳ ಅವಧಿಯಲ್ಲಿ ಮೊದಲ ಕಂತು, ಆಗಸ್ಟ್ – ನವೆಂಬರ್ ತಿಂಗಳ ಅವಧಿಯಲ್ಲಿ 2ನೇ ಕಂತು ಹಾಗೂ ಡಿಸೆಂಬರ್ – ಮಾರ್ಚ್ ತಿಂಗಳ ಅವಧಿಯಲ್ಲಿ 3ನೇ ಕಂತು ಹಣ ಜಮೆ ಮಾಡಲಾಗುವುದು.

ಈಗಾಗಲೇ ರೈತರ ಖಾತೆಗೆ 14 ಕಂತುಗಳ ಹಣ ಜಮೆ ಮಾಡಲಾಗಿದೆ. ಈಗ 15ನೇ ಕಂತಿನ ಹಣ ನವೆಂಬರ್ 15 ರಂದು ಬೆಳಗ್ಗೆ 11.30 ಗಂಟೆಗೆ ಜಮೆ ಮಾಡಲಾಗುವುದು. ಕಳೆದ 14ನೇ ಕಂತಿನ ಹಣ ಜುಲೈ ತಿಂಗಳಲ್ಲಿ ಜಮೆ ಮಾಡಲಾಗಿತ್ತು. ಈಗ 15ನೇ ಕಂತಿನ ಹಣ ನವೆಂಬರ್ ತಿಂಗಳಲ್ಲಿ ಜಮೆ ಮಾಡಲಾಗುತ್ತಿದೆ.

PMkisan 15th installment released  ನಿಮಗೆ ಹಣ ಜಮೆಯಾಗಿದೆಯೇ? ಹೀಗೆ ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆಯ ಹಣ ನಿಮಗೆ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನುಚೆಕ್ ಮಾಡಲು ಈ

https://pmkisan.gov.in/BeneficiaryStatus_New.aspx

ಲಿಂಕ್ ಮೇಲೆ ಕ್ಲಿಕ್ ಮಾಡಿ ಚೆಕ್ ಮಾಡಿಕೊಳ್ಳಬಹುದು.

ಯಾವ ಕಂತಿನಲ್ಲಿ ಎಷ್ಟು ರೈತರಿಗೆ ಹಣ ಜಮೆ ಮಾಡಲಾಗಿದೆ?

ಮೊದಲ ಕಂತಿನಲ್ಲಿ 3 ಕೋಟಿಗೂ ಅಧಿಕ ರೈತರ ಖಾತೆಗೆ ಹಣ ಜಮೆ ಮಾಡಲಾಗಿತ್ತು. ಎರಡನೇ ಕಂತಿನಲ್ಲಿ 6 ಕೋಟಿಗೂ ಅದಿಕ ರೈತರ ಖಾತೆಗೆ ಹಣ ಜಮೆ ಮಾಡಲಾಯಿತು. ಮೂರು, ನಾಲ್ಕು ಕಂತಿನಲ್ಲಿ 8 ಕೋಟಿ ಗೂ ಅಧಿಕ ರೈತರ ಖಾತೆಗೆ ಹಣ ಜಮೆ ಮಾಡಲಾಯಿತು. ಅದೇ ರೀತಿ ಐದು, ಆರು ಹಾಗೂ ಏಳನೇ ಕಂತಿನಲ್ಲಿ 10 ಕೋಟಿಗೂ ಅಧಿಕ ರೈತರಿಗೆ ಹಣ ಜಮೆಯಾಗಿತ್ತು. ಎಂಟು, ಒಂಬತ್ತು, ಹತ್ತು ಹನ್ನೊಂದು ಕಂತಿನಲ್ಲಿ 11 ಕೋಟಿಗೂ ಅಧಿಕ ರೈತರಿಗೆ ಹಣ ಜಮೆಯಾಯಿತು. ಆದರೆ ನಂತರ ಇಕೆವೈಸಿ ಕಡ್ಡಾಯಗೊಳಿಸಲಾಯಿತು. ಹಾಗಾಗಿ ಹಲವಾರು ರೈತರುಈ ಯೋಜನೆಯಿಂದ ವಂಚಿತಗೊಂಡರು.

ಇದನ್ನೂ ಓದಿ : ನಿಮ್ಮ ಜಮೀನಿಗೆ ಹೋಗಲು ದಾರಿಯಿದೆಯೋ ಇಲ್ಲವೋ? ಮೊಬೈಲ್ ನಲ್ಲೇ ಚೆಕ್ ಮಾಡಿ

ಒಂದೇ ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚಿನ ಜನರು ನೋಂದಣಿ ಮಾಡಿಸಿಕೊಂಡಿದ್ದರಿಂದ ದಾಖಲೆಗಳನ್ನು ಪರಿಶೀಲಿಸಿ ಹಲವಾರು ರೈತರನ್ನು ಕೈಬಿಡಲಾಯಿತು. 12 ಹಾಗೂ ಹದಿಮೂರನೇ  ಕಂತಿನಲ್ಲಿ 8 ಕೋಟಿಗೂ ಅಧಿಕ ರೈತರಿಗೆ ಹಣ ಜಮೆ ಮಾಡಲಾಯಿತು. ಅದೇ ರೀತಿ 15ನೇ ಕಂತಿನಲ್ಲಿ 9 ಕೋಟಿಗೂ ಅಧಿಕ ರೈತರ ಖಾತೆಗೆ ಹಣ ಜಮೆ ಮಾಡಲಾಗುವುದು.

ಯಾರ್ಯಾರಿಗೆ ಯೋಜನೆಯಿಂದ ಕೈಬಿಡಲಾಯಿತು?

ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿಕೊಂಡ ಅನರ್ಹರಿಗೆ ಕೈಬಿಡಲಾಯಿತು.ಅಂದರೆ ಜನಪ್ರತಿನಿಧಿಗಳು, ಸರ್ಕಾರಿ ನೌಕರರು, ತೆರಿಗೆ ಪಾವತಿಸುವವರು, ಒಂದು ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಜನ ನೋಂದಣಿ ಮಾಡಿಸಿಕೊಂಡವರು, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಜಮೀನಿನ ದಾಖಲೆಗಳಲ್ಲಿ ಹೆಸರು ವ್ಯತ್ಯಾಸಗಳಿದ್ದರೆ ಅಂತಹ ರೈತರಿಗೆ ಪಿಎಂ ಕಿಸಾನ್ ಯೋಜನೆಯಿಂದ ಕೈಬಿಡಲಾಗುತ್ತಿದೆ.

Leave a Comment