ನಿಮ್ಮ ಜಮೀನಿಗೆ ಹೋಗಲು ದಾರಿಯಿದೆಯೇ ಚೆಕ್ ಮಾಡಿ

Written by Ramlinganna

Updated on:

Check your village map ರೈತರು ಮನೆಯಲ್ಲಿಯೇ ಕುಳಿತು ತಮ್ಮ ಜಮೀನಿಗೆ ಹೋಗಲು ಕಾಲುದಾರಿ, ಬಂಡಿದಾರಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.

ಹೌದು, ರೈತರ ಬಳಿ ಮೊಬೈಲ್ ಇದ್ದರೆ ಸಾಕು, ಕೇವಲ ಒಂದೇ ನಿಮಿಷದಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ದಾರಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.  ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ಮಾಹಿತಿ.

ರೈತರು ತಮ್ಮ ಊರಿನ ಮ್ಯಾಪನ್ನು ಕುಳಿತಲ್ಲಿಯೇ ವೀಕ್ಷಿಸಲು ಹಾಗೂ ಡೌನ್ಲೋಡ್ ಮಾಡಿಕೊಳ್ಳಲು ಕಂದಾಯ ಇಲಾಖೆಯು  ಈ ವ್ಯವಸ್ಥೆಯನ್ನು ಮಾಡಿದೆ. ರೈತರ ಜಮೀನಿನ ಸುತ್ತಮುತ್ತಲಿನ ಸರ್ವೆ ನಂಬರ್ ಗಳು, ತಮ್ಮ ಜಮೀನಿಗೆ ಹೋಗಲು ಬಂಡಿದಾರಿ, ಕಾಲುದಾರಿ ಇದೆಯೋ ಇಲ್ಲವೋ ಚೆಕ್ ಮಾಡಬಹುದು.

ಇದರೊಂದಿಗೆ ತಮ್ಮ ಊರಿನ ಸುತ್ತಮುತ್ತ ಹರಿಯುವ ಹಳ್ಳಕೊಳ್ಳಗಳು, ಕಾಲುವೆಗಳು, ನದಿಗಳು ಹರಿಯುತ್ತಿದ್ದರೆ ಯಾವ ದಿಕ್ಕಿನಲ್ಲಿ ಹರಿಯುತ್ತಿದೆ. ಯಾವ ಸರ್ವೆ ನಂಬರ್ ಪಕ್ಕದಲ್ಲಿ ನದಿ, ಹಳ್ಳಕೊಳ್ಳಗಳು ಹರಿಯುತ್ತಿವೆ ಎಂಬ ಮಾಹಿತಿ ರೈತರಿಗೆ ಸಿಗಲಿದೆ.

Check your village map ಗ್ರಾಮ ನಕ್ಷೆಯನ್ನು ರೈತರು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡುವುದು ಹೇಗೆ?

ರೈತರು ಮೊಬೈಲ್ ನಲ್ಲೇ ತಮ್ಮಊರಿನ ಗ್ರಾಮದ ನಕ್ಷೆ ವೀಕ್ಷಿಸಲು ಅಥವಾ ಡೌನ್ಲೋಡ್ ಮಾಡಿಕೊಳ್ಳಲು ಈ

https://landrecords.karnataka.gov.in/service3/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ Revenue Maps Online ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರಾಜ್ಯದ ಎಲ್ಲಾ ಗ್ರಾಮಗಳ ಮ್ಯಾಪ್ ಅಪ್ಲೋಡ್ ಮಾಡಲಾಗಿರುತ್ತದೆ. ನಿಮ್ಮ ಊರಿನ ಮ್ಯಾಪ್ ಮೂಲಕ ನಿಮ್ಮ ಜಮೀನಿಗೆ ಹೋಗಲು ಕಾಲದಾರಿ, ಬಂಡಿದಾರಿ ಇದೆಯೋ ಇಲ್ಲವೋ ಎಂಬುದತನ್ನು ಚೆಕ್ ಮಾಡಲು  ಮೊದಲು ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನೀವು ಆಯ್ಕೆ ಮಾಡಿಕೊಂಡ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಪಟ್ಟಿ ಕಾಣಿಸುತ್ತದೆ.

ಕೆಳಗಡೆ ನಿಮ್ಮ ಜಿಲ್ಲೆ, ತಾಲೂಕು ಕೆಳಗಡೆಯಿರುವ ಬಾಕ್ಸ್ ನಲ್ಲಿ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಕೆಳಗಡೆಯಿರುವ ಬಾಕ್ಸ್ ನಲ್ಲಿ ಹೋಬಳಿ ಆಐಯ್ಕೆ ಮಾಡಿಕೊಂಡು ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ಅಲ್ಲಿ ಕಾಣುವ ಪಿಡಿಎಫ್ ಪೇಜ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಡಿಎಫ್ ಪೇಜ್ ಓಪನ್ ಆಗುತ್ತದೆ.

ಮ್ಯಾಪ್ ನಲ್ಲಿ ಏನೇನು ಮಾಹಿತಿ ಒಳಗೊಂಡಿರುತ್ತದೆ?                     

ನೀವು ಡೌನ್ಲೋಡ್ ಮಾಡಲಾದ ಗ್ರಾಮ ಮ್ಯಾಪ್ ನಲ್ಲಿ ನಿಮ್ಮೂರಿನ ಸುತ್ತಮುತ್ತಲು ಇರುವ ದಾರಿ, ಹಳ್ಳಕೊಳ್ಳಗಳುಹರಿದು ಹೋಗುವ ಮಾರ್ಗಗಳು ಸಹ ಕಾಣಿಸುತ್ತವೆ.

ಇದನ್ನೂ ಓದಿ ರೈತರಿಗೆ ಗುಡ್ ನ್ಯೂಸ್: ಪಿಎಂ ಕಿಸಾನ್ 15 ನೇ ಕಂತಿನ ಫಲಾನುಭವಿಗಳ ಪಟ್ಟಿ ಬಿಡುಗಡೆ

ಗ್ರಾಮ ನಕ್ಷೆಯಲ್ಲಿ ಎಡಗಡೆ ಇನ್ನೊಂದು ಕಾಲಂ ಕಾಣುತ್ತದೆ. ಅಲ್ಲಿ ಗ್ರಾಮದ ಗಡಿ ರೇಖೆ, ಸರ್ನೆ ನಂಬರ್ ಗಡಿ, ಹಿಸ್ಸಾ ನಂಬರ್ ಗಳು, ಸರ್ವೆ ನಂಬರ್ ಗಳು, ಕಾಲುದಾರಿ, ಬಂಡಿ ದಾರಿ, ಡಾಂಬರು ರಸ್ತೆ, ಹಳ್ಳ, ಬೆಟ್ಟ, ಕೆರೆ, ನೀರು ಹರಿಯುವ ದಿಕ್ಕು, ಹಾಳಾದ ಬಾವಿ, ದೇವಸ್ಥಾನ ಸೇರಿದಂತೆ ಇನ್ನಿತರ ಮಾಹಿತಿಯ ಕಾಲಂ ಇರುತ್ತದೆ. ಅದರ ಮುಂದುಗಡೆ ಗುರುತಿಸುವ ಚಿಹ್ನೆಗಳಿರುತ್ತವೆ.

ರೈತರು. ತಮ್ಮ ಊರಿನ ಅಕ್ಕಪಕ್ಕದ ಊರಿನಿಂದ ನಿಮ್ಮೂರಿಗೆ ಹಾದು ಹೋಗುವ ಕಾಲುದಾರಿ, ಬಂಡಿದಾರಿಗಳ ಮಾಹಿತಿ ಸಹ ಕಾಣಿುಸುತ್ತದೆ. ನಿಮಗೆ ನಿಮ್ಮ ಸರ್ವೆ ನಂಬರ್ ಗೊತ್ತಿದ್ದರೆ ಸಾಕು, ಅದರ ಅಕ್ಕಪಕದ್ದಲ್ಲಿ ರಸ್ತೆ ಯಾವ ಮಾರ್ಗದಿಂದ ಯಾವ ಮಾರ್ಗದ ಕಡೆ ಹೋಗುತ್ತಿದೆ ಎಂಬುದನ್ನು ಚೆಕ್ ಮಾಡಬಹುದು.

Leave a Comment