ಈ ದಿನ ಪಿಎಂ ಕಿಸಾನ್ ಹಣ ರೈತರ ಖಾತೆಗೆ ಜಮೆ-ಲಿಸ್ಟ್ ನಲ್ಲಿ ನಿಮ್ಮ ಹೆಸರು ಇಲ್ಲೇ ಚೆಕ್ ಮಾಡಿ

Written by Ramlinganna

Updated on:

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್. ಕೊನೆಗೂ ಪಿಎಂ ಕಿಸಾನ್ ಯೋಜನೆಯ 13ನೇ ಕಂತು ಬಿಡುಗಡೆ ದಿನಾಂಕ ನಿಗಿದಿಯಾಗಿದೆ.

ಹೌದು, ಇದೇ ಫೆಬ್ರವರಿ 27 ರಂದು ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ರೈತರ ಖಾತೆಗೆ ಜಮೆಯಾಗಲಿದೆ. ಅಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರ್ನಾಟಕದಿಂದಲೇ ದೇಶದ ರೈತರ ಖಾತೆಗೆ ಪಿಎಂಕಿಸಾನ್ ಹಣ ಬಿಡುಗಡೆಗೆ ಚಾಲನೆ ನೀಡಲಿದ್ದಾರೆ. ಅಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಜನ್ಮದಿನ ಹಾಗೂ ಇತರ ಕಾರ್ಯಕ್ರಮಗಳಿಗೆ  ಆಗಮಿಸಲಿದ್ದಾರೆ. ಅದೇ ದಿನ 13ನೇ  ಪಿಎಂ ಕಿಸಾನ್ 13ನೇ ಹಣ ರೈತರ ಖಾತೆಗೆ ನೇರವಾಗಿ ಜಮೆಯಾಗಲಿದೆ.

ಪಿಎಂ ಕಿಸಾನ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೇ? ಇಲ್ಲೇ ಚೆಕ್ ಮಾಡಿ (How to check pm kisan beneficiary list)

ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://pmkisan.gov.in/BeneficiaryStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿದ ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ನಂತರ Get Data ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ನಿಮ್ಮ ಹೆಸರು, ತಂದೆ, ಪತಿಯ ಹೆಸರು, ನಿಮ್ಮ ಊರು, ಜಿಲ್ಲೆ, ರಾಜ್ಯ ವಿಳಾಸ, ನೋಂದಣಿ ಸಂಖ್ಯೆ ಕಾಣಿಸುತ್ತದೆ. ನಿಮ್ಮ ಆಧಾರ್ ಡೆಮೊ ಅಥೆಂಟಿಕೇಶನ್ ಸ್ಟೇಟಸ್ ಎದುರುಗಡೆ Success ಇರಬೇಕು.  Ekys demo ಎದುರುಗಡೆ yes ಇರಬೇಕು. ಇದಾದನಂತರ Eligibility ಎದುರು Yes ಇರಬೇಕು. ನಂತರland Seeding ಎದುರುಗಡೆಯೂ Yes ಇರಬೇಕು. ಈ ಮೂರುಕಡೆ Yes ಇದ್ದರೆ ಮಾತ್ರ ನಿಮಗೆ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆ. ಒಂದುವೇಳೆ ಲ್ಯಾಂಡ್ ಸೀಡಿಂಗ್ ಅಥವಾ ಇಕೆವೈಸಿ ಹಾಗೂ ಎಲಿಜಿಬಿಲಿಟಿಯಲ್ಲಿ ನೋ ಇದ್ದರೆ ನಿಮಗೆ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಜಮೆಯಾಗುವುದಿಲ್ಲ ಎಂದರ್ಥ.

ಇದನ್ನೂ ಓದಿ : ರೇಷನ್ ಕಾರ್ಡ್ ಪಟ್ಟಿಯಲ್ಲಿ ಯಾರ ಹೆಸರಿದೆ? ಯಾರ ಹೆಸರಿಲ್ಲ: ಮೊಬೈಲ್ ನಲ್ಲೇ ಚೆಕ್ ಮಾಡಿ

ಇಕೆವೈಸಿ ಸಕ್ಸೆಸ್ ಆಗಿಲ್ಲದಿದ್ದರೆ ಕೂಡಲೇ ರೈತರು ತಮ್ಮ ಮೊಬೈಲ್ ನಲ್ಲೇ ಅಥವಾ ಬಯೋಮೆಟ್ರಿಕ್ ಆಧಾರಿತ ಇಕೆವೈಸಿ ಮಾಡಿಸಿಕೊಳ್ಳಬೇಕು. ನಿಮ್ಮ ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಸಿಎಸ್ಸಿ ಕೇಂದ್ರಗಳಲ್ಲಿಯೂ ಬಯೋಮೆಟ್ರಿಕ್ ಆಧಾರಿತ ಇಕೆವೈಸಿ ಮಾಡಿಸಿಕೊಳ್ಳಬಹುದು.

ಯಾವ ರೈತರಿಗೆ ಜಮೆಯಾಗುತ್ತದೆ? ಯಾರಿಗೆ ಜಮೆಯಾಗಲ್ಲ? (which farmer will get and not get pm kisan money)

ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣವು ಸಣ್ಣ ಮತ್ತು ಅತೀಸಣ್ಣ ರೈತರ ಖಾತೆಗೆ 5 ಎಕರೆಗಿಂತ ಕಡಿಮೆ ಜಮೀನಿರುವ ರೈತರಿಗೆ ಜಮೆಯಾಗುತ್ತದೆ. ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಕುಟುಂಬದಲ್ಲಿ ಸರ್ಕಾರಿ ನೌಕರರಿದ್ದರೆ ಅಂತಹ ಕುಟುಂಬದ ಸದಸ್ಯರಿಗೆ ಪಿಎಂ ಕಿಸಾನ್ ಯೋಜನೆಯ ಹಣ ಜಮೆಯಾಗುವುದಿಲ್ಲ. ಅದೇ ರೀತಿ ಆ ಕುಟುಂಬದಲ್ಲಿ ತೆರಿಗೆ ಪಾವತಿಸುವವರಿದ್ದರೆ ಹಾಗೂ 10 ಸಾವಿರ ರೂಪಾಯಿಯವರೆಗೆ ಪಿಂಚಣಿ ಪಡೆಯುವ ಕುಟುಂಬದ ಸದಸ್ಯರಿಗೂ 13ನೇ ಕಂತಿನ ಹಣ ಜಮೆಯಾಗುವುದಿಲ್ಲ. ನಿಮ್ಮ ಕುಟುಂಬದಲ್ಲಿ ಸರ್ಕಾರಿ ನೌಕರರು ಹಾಗೂ ತೆರಿಗೆ ಪಾವತಿಸುವವರಿದ್ದರೆ ಸ್ಟೇಟಸ್ ನ ಎಲಿಜಿಬಿಲಿಟಿಯಲ್ಲಿ ಯಾವ ಕಾರಣಕ್ಕಾಗಿ ನಿಮಗೆ ಪಿಎಂ ಕಿಸಾನ್ ಹಣ ಜಮೆಯಾಗಲ್ಲ ಎಂಬುದನ್ನು ತೋರಿಲಾಗಿರುತ್ತದೆ.

Leave a comment