ಪಿಎಂ ಕಿಸಾನ್ ಯೋಜನೆಯ 11 ನೇ ಕಂತಿನ ಹಣ ಕೊನೆಗೂ ರೈತರ ಖಾತೆಗೆ ಜಮೆಯಾಯಿತು. ಕಳೆದ ಒಂದು ತಿಂಗಳಿಂದ ರೈತರಿಗೆ ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಹಣ ಯಾವಾಗ ಜಮೆಯಾಗುತ್ತದೆ ಎಂಬುದರ ಕುರಿತು ಕುತೂಹಲವಿತ್ತು. ಏಕೆಂದರೆ ಇಕೆವೈಸಿ ಮಾಡಿಸಲು ಮೇ 31 ಕೊನೆಯ ದಿನಾಂಕವಾಗಿದ್ದರಿಂದ ರೈತರಿಗೆ ಯಾವಾಗ ಜಮೆಯಾಗುತ್ತದೆ. ಇಕೆವೈಸಿ ಗಡುವು ಮುಗಿದ ನಂತರ ಜಮೆಯಾಗುತ್ತೋ ಅಥವಾ ಅದಕ್ಕಿಂತ ಮುಂಚಿತವಾಗಿ ಜಮೆಯಾಗುತ್ತೋ ಎಂಬ ಕುತೂಹಲವಿತ್ತು.
ಪ್ರಧಾನಿ ನರೇಂದ್ರ ಮೋದಿಯವರು ಕೊನೆಗೂ ಪಿಎಂ ಕಿಸಾನ್ 11 ನೇ ಕಂತಿನ ಹಣವನ್ನು ಹಿಮಾಚಲ ಪ್ರದೇಶದಲ್ಲಿ ಬಟನ್ ಒತ್ತುವ ಮೂಲಕ ಚಾಲನೆ ನೀಡಿದರು. ದೇಶದ 10 ಕೋಟಿಗೂ ಅಧಿಕ ರೈತರಿಗೆ ಸುಮಾರು 20 ಕೋಟಿ ರೂಪಾಯಿ ಹಣ ರೈತರ ಖಾತೆಗೆ ಜಮೆಯಾಯಿತು.
ಪಿಎಂ ಕಿಸಾನ್ ಹಣ ಜಮೆಯಾಗುವುದಕ್ಕಿಂತ ಮುಂಚಿತವಾಗಿ ಪಿಎಂ ಕಿಸಾನ್ ಯೋಜನೆಯ ಫಲಾನುಭವಿ ರೈತರಿಗೆ ಸಂದೇಶ ಕಳುಹಿಸಲಾಗುತ್ತಿತ್ತು.ಆದರೆ ಈ ಸಲ ಅಂದರೆ 11ನೇ ಕಂತಿನ ಹಣ ಜಮೆ ಕುರಿತು ಮುಂಚಿತವಾಗಿ ರೈತರಿಗೆ ಯಾವುದೇ ಸಂದೇಶ ಬರಲಿಲ್ಲ. ಹಾಗಾಗಿ ಕೆಲವು ರೈತರಿಗೆ ಜಮೆಯಾಗಿರುವ ಕುರಿತು ಸಂದೇಶ ಬಂದಿಲ್ಲ.11ನೇ ಕಂತಿನ ಹಣ ಜಮೆಯಾಗಿರುವ ಕುರಿತು ನೋಡಲು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ನಿಮ್ಮ ಬ್ಯಾಲೆನ್ಸ್ ಚೆಕ್ ಮಾಡಿದರೂ ಗೊತ್ತಾಗುತ್ತದೆ.
ಮೊಬೈಲ್ ನಲ್ಲೇ ಸ್ಟೇಟಸ್ ಚೆಕ್ ಮಾಡಿ
ರೈತರು ಪಿಎಂ ಕಿಸಾನ್ ಯೋಜನೆಯ 11 ನೇ ಕಂತಿನ ಹಣ ಜಮೆಯಾಗಿರುವ ಕುರಿತು ಚೆಕ್ ಮಾಡಲು
ಈ https://pmkisan.gov.in/BeneficiaryStatus.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರು ತಮ್ಮ ಆಧಾರ್ ಕಾರ್ಡ್ ನಮೂದಿಸಿ ಚೆಕ್ ಮಾಡಬೇಕಾಗುತ್ತದೆ. ಇಲ್ಲಿಯವರೆಗೆ ನಿಮ್ಮ ಖಾತೆಗೆ ಜಮೆಯಾಗಿರುವ ಹಣ, ಯಾವ ದಿನಾಂಕದಂದು ಜಮೆಯಾಗಿದೆ ಎಂಬಿತ್ಯಾದಿ ಮಾಹಿತಿಯನ್ನು ಪಡೆಯಬಹುದು.
ಪಿಎಂ ಕಿಸಾನ್ ಯೋಜನೆಗೆ ಫಲಾನುಭವಿಗಳು ಯಾರು (who will be PM kisan beneficiary)?
2 ಹೆಕ್ಟೇರ್ ವರೆಗೆ ಜಮೀನು ಹೊಂದಿರುವ ಸಣ್ಣ ಮತ್ತು ಅತೀ ಸಣ್ಣ ರೈತ ಕುಟುಂಬವು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಬಹುದು. ಪಿಎಂ ಕಿಸಾನ್ ಯೋಜನೆಯಡಿ ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಲಾಭ ಸಿಗುತ್ತದೆ. ಈಗಾಗಲೇ ಕೆಲವು ರೈತರು ಒಂದು ಕುಟುಂಬದಲ್ಲಿಇಬ್ಬರು ಮೂವರು ಫಲಾನುಭವಿಗಳಾಗಿದ್ದಾರೆ. ಹಾಗಾಗಿ ಅಂತಹ ಫಲಾನುಭವಿಗಳನ್ನು ಕಂಡುಹಿಡಿಯಲು ಈಗ ಇಕೆವೈಸಿ ಕಡ್ಡಾಯಗೊಳಿಸಲಾಗಿದೆ. ಒಂದೇ ಕುಟುಂಬದ ಪತಿ ಪತ್ನಿಯರಿಬ್ಬರು ಪ್ರಯೋಜನ ಪಡೆಯುತ್ತಿದ್ದರೆ ಅಂತಹ ರೈತರನ್ನು ಅನರ್ಹರೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ : ರೈತರೇಕೆ ಬೆಳೆವಿಮೆ ಮಾಡಿಸಬೇಕು? ವಿಮೆ ಮಾಡಿಸುವುದರಿಂದಾಗುವ ಉಪಯೋಗ? ಯಾವ ಬೆಳೆಗೆ ಎಷ್ಟು ವಿಮೆ ಕಟ್ಟಬೇಕು? ಇಲ್ಲಿದೆ ಮಾಹಿತಿ
ರೈತ ಕುಟುಂಬದಲ್ಲಿ ಯಾರಾದರೂ ತೆರಿಗೆ ಪಾವತಿಸುತ್ತಿದ್ದರೆ ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ವೃತ್ತಿಪರ ನೋಂದಾಯಿತ ವೈದ್ಯರು, ಇಂಜಿನಿಯರ್, ವಕೀಲರು ಸರ್ಕಾರಿ ನೌಕರರು ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಲು ಅನರ್ಹರಾಗಿರುತ್ತಾರೆ.
ಪಿಎಂ ಕಿಸಾನ್ ಹಣ ಜಮೆಯಾಗಿಲ್ಲವೇ ಈ ಸಹಾಯವಾಣಿಗೆ ಕರೆ ಮಾಡಿ (PM kisan Helpline Number)
ರೈತರಿಗೆ ಪಿಎಂ ಕಿಸಾನ್ ಯೋಜನೆಯ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಈ 011-24300606 ಅಥವಾ 155261 ಗೆ ಕರೆ ಮಾಡಬಹುದು.