ಗ್ರಾಮ ಉಜಾಲಾ ಯೋಜನೆಯಡಿಯಲ್ಲಿ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಬಿಹಾರ, ಉತ್ತರಪ್ರದೇಶ ರಾಜ್ಯದಲ್ಲಿ 10 ರೂಪಾಯಿಗೆ ಸಿಗಲಿದೆ ಎಲ್ಇಡಿ ಬಲ್ಬ್.
ಏನಿದು ಗ್ರಾಮ ಉಜಾಲಾ ಯೋಜನೆ?
ಸಿಇಎಸ್ಎಲ್ ಸಾಂಪ್ರದಾಯಿಕ ಬಲ್ಬ್ ಗಳ ಪದಲಿಗೆ ಪ್ರತಿ ಬಲ್ಬ್ ಗೆ 10 ರೂಪಾಯಿ ದರದಲ್ಲಿ 3 ವರ್ಷಗಳ ಗ್ಯಾರೆಂಟಿಯೊಂದಿಗೆ ಉತ್ತಮ ಗುಣಮಟ್ಟದ 7W, ಮತ್ತು 12W LED ಬಲ್ಬ್ ಗಳನ್ನು ಗ್ರಾಮ ಉಜಾಲಾ ಯೋಜನೆಯಡಿ ನೀಡಲಾಗುವುದು. ಈ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ ಗರಿಷ್ಠ 5 ಬಲ್ಬ್ ಗಳನ್ನು ನೀಡಲಾಗುವುದು. ಈ ಬಲ್ಬ್ ಗಳ ಬಳಕೆಯಿಂದ ಸಾಕಷ್ಟು ವಿದ್ಯುತ್ ಉಳಿತಾಯವಾಗುತ್ತದೆ.
ಎಲ್ಇಡಿ ಬಲ್ಬ್ ಗಳು ಎಲ್ಲಿ ಸಿಗುತ್ತವೆ?
ಒಂದು ಕುಟುಂಬಕ್ಕೆ 5 ಎಲ್ಇಡಿ ಬಲ್ಬ್ ಗಳು ಸಿಗುತ್ತವೆ. ಈ ಬಲ್ಬ್ ಗಳನ್ನು ಸರ್ಕಾರಿ ಕಂಪನಿ ಕನ್ಸರ್ಜಿನ್ಸ್ ಎನರ್ಜಿ ಸರ್ವಿಸೆಸ್ ಲಿಮಿಟೆಡ್ (ಸಿಇಎಸ್ಎಲ್) ನೀಡುತ್ತದೆ. ಈ ಬಲ್ಬ್ ಗಳನ್ನು ನಿಮ್ಮ ಗ್ರಾಮ ಪಂಚಾಯತಿ ಅಥವಾ ನಿಮ್ಮ ಹತ್ತಿರದ ಕೆಇಬಿ ಕಚೇರಿಯಲ್ಲಿ ಪಡೆಯಬಹುದು. ಗ್ರಾಮ ಉಜಾಲಾ ಯೋಜನೆಯಡಿಯಲ್ಲಿ ಒಂದು ಕುಟುಂಬವು 7 ರಿಂದ 12 ವ್ಯಾಟ್ ಗಳ 5 ಬಲ್ಬ್ ಗಳನ್ನು ಪಡೆಯಬಹುದು. 31ನೇ ಮಾರ್ಚ್ 2022 ರವರೆಗೆ ಈ ಬಲ್ಬ್ ಗಳನ್ನು ಗ್ರಾಮೀಣ ಪ್ರದೇಶದ ಜನರು ಪಡೆಯಬಹುದು.
ಒಂದುವೇಳೆ ಎಲ್ಇಡಿಸಿ ಈ ಬಲ್ಬ್ ಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಲು ಹೋದರೆ ಒಂದು ಬಲ್ಬ್ ಗೆ ಸುಮಾರು 100 ರೂಪಾಯಿ ಬೇಕಾಗುತ್ತದೆ. ಹಾಗಾಗಿ ಗ್ರಾಮೀಣ ಜನರಿಗೆ ಅನುಕೂಲವಾಗಲೆಂದು ಕಡಿಮೆ ದರದಲ್ಲಿ ವಿತರಿಸಲಾಗುತ್ತದೆ. ಇದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ.
ಇದನ್ನೂ ಓದಿ : ನಿಮ್ಮ ಜಮೀನಿಗೆ ಹೋಗುವ ಕಾಲುದಾರಿ, ಎತ್ತಿನಬಂಡಿ ದಾರಿ, ಸರ್ವೆನಂಬರ್, ಊರಿನ ಮ್ಯಾಪ್ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಈ ಯೋಜನೆಯಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಆರಂಭಿಸಲಾಗಿತ್ತು. ಡಿಸೆಂಬರ್ ತಿಂಗಳಲ್ಲಿ ರಾಷ್ಟ್ರೀ ಇಂಧನ ಸಂರಕ್ಷಣಾ ದಿನದ ಅಂಗವಾಗಿ 31 ಮಾರ್ಚ್ 2022 ರವರೆಗೆ ವಿಸ್ತರಿಸಲಾಗಿದೆ. ಈ ಬಲ್ಬ್ ಗಳನ್ನು ಬಳಸುವುದರಿಂದ ವಿದ್ಯುತ್ ಉಳಿತಾಯವಾಗುತ್ತದೆ. ಇಂಗಾಲದ ಹೊರಸೂಸುವಿಕೆ ಸಹ ಕಡಿಮೆ ಮಾಡಬಹುದು. ಅಷ್ಟೇ ಅಲ್ಲ, ವಿದ್ಯುತ್ ಬಿಲ್ ಸಹ ಉಳಿತಾಯವಾಗುತ್ತದೆ.
ಪ್ರಸ್ತುತ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ ಮತ್ತು ಉತ್ತರ ಪ್ರದೇಶದ ರಾಜ್ಯದಲ್ಲಿ ಗ್ರಾಮ ಉಜಾಲಾ ಯೋಜನೆ ಜಾರಿಯಲ್ಲಿದೆ. ಗ್ರಾಮದ ಜನು ಕಡಿಮೆ ದರದಲ್ಲಿ ಅಂದರೆ ಕೇಲವ 10 ರೂಪಾಯಿಗೆ ಒಂದು ಬಲ್ಬ್ ನಂತೆ ಒಟ್ಟು 5 ಬಲ್ಬ್ ಗಳನ್ನು 5 ಎಲ್ಇಡಿ ಬಲ್ಬ್ ಪಡೆಯಬಹುದು.