ಕೃಷಿ ಬೆಳೆಗಳಿಗೆ ತಗಲುವ ರೋಗ, ಕೀಟಗಳ ಬಾಧೆಗೆ ಹತೋಟಿ ಕ್ರಮ, ಮಣ್ಣಿನ ಪರೀಕ್ಷೆ ಸೇರಿದಂತೆ ಬೆಳೆಗಳಿಗೆ ಕಾಡುವ ಇನ್ನಿತರ ರೋಗಗಳ ಹತೋಟಿಗೆ ರೈತರ ಜಮೀನಿನಲ್ಲಿ ಸಲಹೆ ನೀಡಲು ರಾಜ್ಯ ಸರ್ಕಾರವು ಕೃಷಿ ಸಂಜೀವಿನಿ  ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಕೃಷಿ ಸಂಜೀವಿನಿ ವಾಹನದೊಂದಿಗೆ ರೈತರ  ಜಮೀನಿಗೆ ಬಂದು ಸಲಹೆ ನೀಡಲಿದ್ದಾರೆ.

ರೈತರ ಬೆಳಗಳಿಗೆ ತಗಲುವ ಕೀಟಗಳ ಹಾವಳಿ, ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಬೆಳೆಗಳಿಗೆ ಬರುವ ರೋಗಗಳ ನಿಯಂತ್ರಣ ಮಾಡಕ್ಕಾಗದರೆ ರೈತರ ಅಪಾರ ಬೆಳೆ ಹಾನಿಯಾಗುತ್ತಿರುತ್ತದೆ.  ರೋಗ ಹಾಗೂ ಕೀಟಗಳ ನಿಯಂತ್ರಣದ ಬಗ್ಗೆ ಸರಿಯಾದ ಮಾಹಿತಿಯ ಕೊರತೆಯಿಂದಲೂ ರೋಗ  ಹಾಗೂ ಕೀಟಗಳ ನಿಯಂತ್ರಣ ಮಾಡಕ್ಕಾಗದೆ ನಷ್ಟ ಅನುಭವಿಸುತ್ತಿರುತ್ತಾರೆ. ಹಾಗಾಗಿ ಸರ್ಕಾರವು ಈಗ ರೈತರ ಜಮೀನಿಗೆ ಹೋಗಿ ಪರಿಹಾರ ನೀಡಲು ಕೃಷಿ ಸಂಜೀವಿನಿ ವಾಹನ ಯೋಜನೆಯನ್ನು ಜಾರಿಗೆತಂದಿದೆ.

ಕೃಷಿ ಸಂಜೀವಿನಿ ವಾಹನ ಸಹಾಯವಾಣಿ

ರೈತರು ತಮ್ಮ ಬೆಳೆಗಳಿಗೆ ತಗಲುವ ರೋಗ, ಕೀಟಗಳು ಹಾಗೂ ಮಣ್ಣಿನ ತಪಾಸಣೆ ಕುರಿತು ಸಹಾಯ ಪಡೆಯಬೇಕಾದರೆ ಸರ್ಕಾರ ಆರಂಭಿಸಿದೆ ಉಚಿತ ಸಹಾಯವಾಣಿ 155313 ಗೆ ಕರೆ ಮಾಡಬೇಕು. ಆಗ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿರುವ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಕರೆ ತಲುಪಿಸಲಾಗುವುದು. ನಂತರ ರೈತರ ಕರೆಯಂತೆ ಕೃಷಿ ಸಂಜೀವಿನಿ ವಾಹನ ಜಮೀನಿಗೆ ಬಂದರು ಪರಿಹಾರ ನೀಡಲಿದೆ.

ಮಾರ್ಚ್ ತಿಂಗಳಂತ್ಯಕ್ಕೆ 100  ಕೃಷಿ ಸಂಜೀವಿನಿ ವಾಹನ

ಕೃಷಿ ಸಂಬಂಧ ಬೆಳೆ, ಕೀಟ ನಿಯಂತ್ರಣ ಕುರಿತು ಮಾಹಿತಿ ನೀಡಲು ಹಾಗೂ ಮಣ್ಣು  ಪರೀಕ್ಷೆಗಳನ್ನು ರೈತರ ಜಮೀನಿನ ಬಳಿಯೇ ಬಂದು ತಪಾಸಣೆ ಮಾಡುವ 100 ಕೃಷಿ ಸಂಜೀವಿನಿ ವಾಹನಗಳ ಸೇವೆಯನ್ನು  ನೀಡಲು ವಾಹನಗಳನ್ನು ತರಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.

ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದ ಕೃಷಿ  ಸಂಜೀವಿನಿ ವಾಹನಗಳ  ಸೇವೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ.  ಈ ತಿಂಗಳಅಂತ್ಯದೊಳಗೆ 100 ವಾಹನಗಳನ್ನು  ತಾಲೂಕುಗಳಿಗೆ ನೀಡಲಾಗುವುದು. ಉಳಿದವುಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ತಿಳಿಸಿದರು.

ರೈತರು ಕೃಷಿ ಸಂಜೀವಿನಿ ವಾಹನಕ್ಕಾಗಿ ಕರೆ ಮಾಡಿದರೆ ಕೃಷಿಗೆ  ಸಂಬಂಧಿಸಿದ ಮಣ್ಣು ಪರೀಕ್ಷೆ, ಕೀಟ ಬಾಧೆ, ಬೆಳೆ ಬೆಳೆಯುವ ಕುರಿತು ಮಾಹಿತಿ ನೀಡುವ ಜೊತೆಗೆ ಅವರ ಜಮೀನಿಗೆ  ಹೋಗಿ ಪರಿಹಾರ ಒದಗಿಸಲಾಗುವುದು ಎಂದರು.

ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ

ಈ ಕೃಷಿ ಸಂಜೀವಿನಿ ವಾಹನಗಳು ನೀರು, ಮಣ್ಣು ಮತ್ತು ಬೆಳೆಯನ್ನು ಪರೀಕ್ಷಿಸುವ ಸಂಚಾರಿ ಪ್ರಯೋಗಾಲಯದ ಸೌಲಭ್ಯ ಹೊಂದಿರುವ 164 ಕೃಷಿ ಸಂಜೀವಿನಿ ವಾಹನಗಳನ್ನುಶೀಘ್ರದಲ್ಲಿ ಸೇವೆಗೆ ಒದಗಿಸಲಾಗುವುದು. ಕೊಪ್ಪಳದಲ್ಲಿ ಜಿಲ್ಲಾ ಖನೀಜ ನಿಧಿ ಹಣವನ್ನು ಬಳಸಿಕೊಂಡು ಪ್ರಾಯೋಗಿಕವಾಗಿ 20 ಕೃಷಿ ಸಂಜೀವಿನಿ ವಾಹನಗಳನ್ನು ಸೇವೆಗೆ ಒದಗಿಸಲಾಗಿತ್ತು. ಈಗ ಅದನ್ನು ರಾಜ್ಯಾದ್ಯಂತ ತಾಲೂಕು ಮಟ್ಟದಲ್ಲಿಯೂ ವಿಸ್ತರಿಸಲಾಗುವುದು ಎಂದರು.

ಕೀಟ ನಾಶಕಗಳ ಗುಣಮಟ್ಟ ಪರೀಕ್ಷಿಸಲು ಪ್ರಯೋಗಾಲಯ ಮತ್ತು ಔಷಧ  ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಅತೀ ಶೀಘ್ರದಲ್ಲಿ ಪತ್ರ ಬರೆಯಲಾಗುವುದು. ಸದ್ಯ ರಾಜ್ಯದ ಬೆಂಗಳೂರು, ಬಳ್ಳಾರಿ, ಕಲಬುರಗಿ, ಧಾರವಾಡ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಕೀಟನಾಶಕ ಗುಣಮಟ್ಟ ಪರೀಕ್ಷಿಸುವ ಪ್ರಯೋಗಾಲಯವಿದೆ.  ಧಾರವಾಡ ಹಾಗೂ ಶಿವಮೊಗ್ಗ ಪ್ರಯೋಗಾಲಯಗಳಇಗೆ ಎನ್ಎಬಿಎಲ್ ಮಾನ್ಯತೆದೊರೆಯಿದೆ.  ಉಳಿದ ನಾಲ್ಕು ಪ್ರಯೋಗಾಲಯಗಳಿಗೂ ಮಾನ್ಯತೆ ಪಡೆಯಲು ಪ್ರಯತ್ನಿಸಲಾಗುವುದು ಎಂದರು.

ಇದನ್ನೂ ಓದಿ ನಿಮ್ಮ ಮನೆ ತೆರಿಗೆ ಬಾಕಿ ಎಷ್ಟಿದೆ? ಮೊಬೈಲ್ ನಲ್ಲೇ ಚೆಕ್ ಮಾಡಬೇಕೇ? ಇಲ್ಲಿದೆ ಮಾಹಿತಿ

Leave a Reply

Your email address will not be published. Required fields are marked *