ಪಿಎಂ ಕಿಸಾನ್ 11ನೇ ಕಂತಿನ ಫಲಾನುಭವಿ ಪಟ್ಟಿ ಬಿಡುಗಡೆ

Written by By: janajagran

Updated on:

PMkisan 11th beneficiary list ಪಿಎಂ ಕಿಸಾನ್ ಯೋಜನೆಯ 11 ನೇ ಕಂತಿನ ನಿರೀಕ್ಷೆಯಲ್ಲಿರುವ ರೈತರಿಗಿಲ್ಲಿದೆ ಸಂತಸದ ಸುದ್ದಿ.  ಈಗ ಮೊಬೈಲ್ ನಲ್ಲೇ 11ನೇ ಕಂತಿನ ಫಲಾನುಭವಿಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ಮಾಹಿತಿ.

ಜನವರಿ ತಿಂಗಳಲ್ಲಿ ಕೆಲವು ಕಾರಣಗಳಿಂದ ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಹಣ ಅನೇಕ ರೈತರ ಖಾತೆಗೆ ಜಮೆಯಾಗಿರಲಿಲ್ಲ. ಹಾಗಾಗಿ ಮುಂದಿನ ಕಂತು ಅಂದರೆ 11ನೇ ಕಂತಿನ ಹಣ ಜಮೆಯಾಗಲು ಇಕೆವೈಸಿ ಮಾಡಿಸುವುದು ಕಡ್ಡಾಯಗೊಳಿಸಲಾಗಿದೆ.

ಇಕೆವೈಸಿ ಮಾಡಿಸಲು ಮಾರ್ಚ್ 31 ಕೊನೆಯ ದಿನವಾಗಿದೆ. ಈಗಾಗಲೇ ಬಹಳಷ್ಟು  ರೈತರು  ಇಕೆವೈಸಿ ಮಾಡಿಸಿದ್ದಾರೆ. ಆದರೆ ಇಕೆವೈಸಿ ಮಾಡಿಸಿದ  ಮಾಹಿತಿ ಸರಿಯಾಗಿದೆಯೋ ಇಲ್ಲವೋ  ಎಂಬ ಸಂಶಯದಲ್ಲಿರುತ್ತಾರೆ.  11ನೇ ಕಂತಿನ ಹಣ ನಿಮ್ಮ ಖಾತೆಗೆ ಬರುತ್ತೋ ಇಲ್ಲವೋ ಎಂಬುದನ್ನು ಎಂಬ ಮಾಹಿತಿಯನ್ನುನೋಡಲು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ನಲ್ಲಿಯೇ ನೋಡಬಹುದು.

PMkisan 11th beneficiary list ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ

ಕಳೆದ ಜನವರಿ ತಿಂಗಳಲ್ಲಿ10ನೇ ಕಂತಿನ ಹಣ ಬಿಡುಗಡೆಯಾಗಿತ್ತು ಆಗ ಹಲವಾರು ರೈತರ ಖಾತೆಗೆ ಹಣ ಜಮೆಯಾಗಿರಲಿಲ್ಲ. ಅಂತಹ ರೈತರು  ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡಲು ಹೋದಾಗ  PFMS /Bank status: ನಲ್ಲಿ your payment held by state ಎಂಬ ಮೆಸೇಜ್ ಇತ್ತು. ಹೀಗಾಗಿ 10ನೇ ಕಂತಿನ ಹಣ ರೈತರ ಖಾತೆಗೆ ಜಮೆ ಮಾಡಿರಲಿಲ್ಲ. ಈಗ ಇಕೆವೈಸಿ ಕಡ್ಡಾಯಗೊಳಿಸಿದ್ದರಿಂದ ರೈತರು ಮೊಬೈಲ್ ನಲ್ಲಿ ಹಾಗೂ  ಸಿಎಸ್.ಸಿ ಕೇಂದ್ರಗಳಲ್ಲಿ ಅಗತ್ಯ ದಾಖಲೆಗಳನ್ನು ನೀಡಿ ಇಕೆವೈಸಿ ಮಾಡಿಸಿದ್ದಾರೆ.  ಆದರೆ 11ನೇ ಕಂತಿನ ಹಣ ಬರುತ್ತೋ ಇಲ್ಲವೋ ಎಂಬ ಸಂದೇಹ ಇನ್ನೂ ಇದೆ.  ಅಂತಹ ರೈತರು ಈಗ ಮೊಬೈಲ್ ನಲ್ಲೇ ಸ್ಟೇಟಸ್ ಚೆಕ್ ಮಾಡಬಹುದು.

ನೀವು ಮಾಡಿಸಿದ ಇಕೆವೈಸಿ ಯಶಸ್ವಿಯಾಗಿದೆಯೋ  ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ನೋಡಬಹುದು.  ಅದಕ್ಕಾಗಿ ರೈತರು ಈ

https://pmkisan.gov.in/BeneficiaryStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಪೇಜ್ ಓಪನ್ ಆಗುತ್ತದೆ. ಅಲ್ಲಿ ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು. ನಂತರ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಪೇಜ್ ಓಪನ್ ಆಗುತ್ತದೆ.

ಅಲ್ಲಿ ನಿಮ್ಮ  ಹೆಸರು, ತಂದೆಯ ಹೆಸರು, ಮೊಬೈಲ್ ನಂಬರ್ ನ ಕೊನೆಯ ನಾಲ್ಕು ಅಂಕಿಗಳು, ಆಧಾರ್ ನಂಬರ್ ನಕೊನೆಯ ನಾಲ್ಕು ಅಂಕಿಗಳು, ಗ್ರಾಮ, ತಾಲೂಕು, ಜಿಲ್ಲೆ, ವಿಳಾಸ, ನಿಮ್ಮ ಪಿಎಂ ಕಿಸಾನ್ ಖಾತೆ ಆ್ಯಕ್ಟಿವ್ ಇದ್ದೆಯೋ ಇಲ್ಲವೋ ಎಂಬ ಮಾಹಿತಿ ಇರುತ್ತದೆ.

ಆ್ಯಕ್ಟಿವ್ ಕೆಳಗಡೆ PFMS/Bank Status: ಮುಂದುಗಡೆ Farmer Records has been accepted by PFMS/Bank  ಅದರ ಮುಂದುಗಡೆ ಯಾವ ದಿನಾಂಕದಂದು ಇಕೆವೈಸಿ ಸರಿಯಾಗಿದೆ ಎಂಬ ದಿನಾಂಕ ಇರುತ್ತದೆ. ಇದೆಲ್ಲಾ ಮಾಹಿತಿ ಇದ್ದರೆ ನೀವು 11ನೇ ಕಂತಿನ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೆಂದರ್ಥ. ಅಂದರೆ 11ನೇ ಕಂತಿನ ಹಣ ನಿಮ್ಮ ಖಾತೆಗೆ ಜಮೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿಬರಗಾಲ, ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆಹಾನಿಯ ಜಮೆ ಸ್ಟೇಟಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ಒಂದು ವೇಳೆ  PFMS/Bank Status : ಮುಂದುಗಡೆ Correction is pending by state ಎಂಬ ಮಾಹಿತಿಯಿದ್ದರೆ ನೀವು ಮಾಡಿಸಿದ ಇಕೆವೈಸಿ ಇನ್ನೂ ಆಗಿಲ್ಲವೆಂದರ್ಥ.

ಈಗಾಗಲೇ ಹಲವಾರು ರೈತರ ಇಕೆವೈಸಿ ಮಾಹಿತಿ ಯಶಸ್ವಿಯಾಗಿದೆ. ಇನ್ನೂ ಕೆಲವು ರೈತರು ಮಾಹಿತಿ correction is pending at state ಎಂಬ ಮಾಹಿತಿ ಕಾಣುತ್ತಿದೆ. ಅಂತಹ ರೈತರು ಪಹಣಿ, ಬ್ಯಾಂಕ್ ಪಾಸ್ಬುಕ್ ಹಾಗೂ ಆಧಾರ್ ಕಾರ್ಡ್ ನ್ನು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಮಾರ್ಚ್ 31 ರೊಳಗೆ ನೀಡಿ ಇಕೆವೈಸಿಮಾಡಿಸಿಕೊಂಡರೆ ಮಾತ್ರ 11 ನೇ ಕಂತಿನ ಹಣ ಅವರ ಖಾತೆಗೆಜಮೆಯಾಗಲಿದೆ.

Leave a Comment