ಹೈನುಗಾರಿಕೆ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಕುರಿ ಸಾಕಾಣಿಕೆ ಮಾಡಲಿಚ್ಚಿಸುವ ರೈತರಿಗೆ ಸಂತಸದ ಸುದ್ದಿ. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಪಡೆಯಲು ಹೊಸ ಕಿಸಾನ್ ಕ್ರ್ಡೆಡಿಟ್ ಕಾರ್ಡ್ ವಿತರಣಾ ಅಭಿಯಾನವನ್ನು ನ. 15 ರಿಂದ ಫೆಬ್ರವರಿ 15 ರವರೆಗೆ ಮೂರು ತಿಂಗಳ ಕಾಲ ಆರಂಭುಸಿದೆ.
ಈ ಅಭಿಯಾನ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಇದೆ. ರೈತರು ಹತ್ತಿರದ ಪಶು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಕಚೇರಿಯಲ್ಲಿ ಅರ್ಜಿ ಪಡೆದು ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಸಾಲ ಸೌಲಭ್ಯ ಪಡೆಯಬಹುದು. ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ವಯ ಪಶುಸಂಗೋಪನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರೆಗಿ ನಿರ್ವಹಣಾ ವೆಚ್ಚ ಭರಿಸಲು ರಾಷ್ಟ್ರೀಕೃತ ಬ್ಯಾಂಕ್ ಅಥವಾ ಸಹಕಾರ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲು ಈ ಅಭಿಯಾನವನ್ನು ಆರಂಭಿಸಲಾಗಿದೆ.
ಆಸಕ್ತ ರೈತರು ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಿ ಅರ್ಜಿ ನಮೂನೆಯನ್ನು ಪಡೆದು ಆಧಾರ್ ಕಾರ್ಡ್, ಪಹಣಿ ಪತ್ರ ಮತ್ತು ಭಾವಚಿತ್ರವನ್ನು ಸಲ್ಲಿಸಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.
ಸಾಲ ಸೌಲಭ್ಯದ ಮಾಹಿತಿ
ಹೈನುಗಾರಿಕೆ ಮಾಡಲಿಚ್ಚಿಸುವ ರೈತರಿಗೆ ಮಿಶ್ರತಳಿ ದನಗಳ ನಿರ್ವಹಣೆ (1+1) ಪ್ರತಿ ದನಕ್ಕೆ ಮಾಸಿ ಗರಿಷ್ಠ 7 ಸಾವಿರ ರೂಪಾಯಿಯಂತೆ ಎರಡು ತಿಂಗಳಿಗೆ 14 ಸಾವಿರ ರೂಪಾಯಿಗಳಂತೆ ಒಟ್ಟು ಎರಡು ಜಾನುವಾರುಗಳಿಗೆ 28 ಸಾವಿರ ಸಾಲ ಸೌಲಭ್ಯ ಒದಗಿಸಲಾಗುವುದು.
ಕುರಿ/ಮೇಕೆ ಸಾಕಾಣಿಕೆ ಮಾಡಲಿಚ್ಚಿಸುವ ರೈತರಿಗೆ ಮರಿಗಳ ಸಾಕಾಣಿಕೆಗೆ ಗರಿಷ್ಠ 8 ತಿಂಗಳ ಅವಧಿಗೆ) 10+1 ಘಟಕಕ್ಕೆ 24 ಸಾವಿರ ರೂಪಾಯಿಯವರೆಗೆ ಸಾಲ ಸೌಲಭ್ಯ ಅದೇ ರೀತಿ 20+1 ಘಟಕಕ್ಕೆ 48 ಸಾವಿರ ರೂಪಾಯಿಯವರೆಗೆ ಸಾಲ ಸೌಲಭ್ಯ ನೀಡಲಾಗುವುದು.
ಹಂದಿ ಸಾಕಾಣಿಕೆ ಮಾಡಲಿಚ್ಚಿಸುವ ರೈತರಿಗೆ 10 ಹಂದಿಗಳ ಘಟಕ ಕ್ಕೆ 6 ತಿಂಗಳುಗಳ ಅವಧಿಗೆ 60 ಸಾವಿರ ರೂಪಾಯಿ ಸಾಲ ಸೌಲಭ್ಯ ನೀಡಲಾಗುವುದು.
ಕೋಳಿ ಸಾಕಾಣಿಕೆ ಮಾಡವ ರೈತರಿಗೆ ಮಾಂಸದ ಕೋಳಿ ಸಾಕಾಣಿಕೆಗೆ ಪ್ರತಿ ಕೋಳಿಗೆ 80 ರೂಪಾಯಿಯಂತೆ 60 ದಿನಗಳವರೆಗೆ 1,60,000 ರೂಪಾಯಿಯವರೆಗೆ ಸಾಲ ಸೌಲಭ್ಯ ನೀಡಲಾಗುವುದು.
ಕಿಸಾನ್ ಕ್ರೆಡಿಟ್ ಕಾರ್ಡ್ ಅರ್ಜಿ ಪಡೆಯಲು ಈ ಲಿಂಕ್ https://pmkisan.gov.in/Documents/Kcc.pdf ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಅರ್ಜಿ ಓಪನ್ ಆಗುತ್ತದೆ. ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಅಥವಾ ನಿಮ್ಮ ಹತ್ತಿರದ ಪಶು ಸಂಗೋಪನಾ ಇಲಾಖೆಯ ಕಚೇರಿಯಲ್ಲಿ ಅರ್ಜಿ ಪಡೆದು ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಸಾಲ ಸೌಲಭ್ಯ ಪಡೆಯಬಹುದು.
ಹೆಚ್ಚಿನ ಮಾಹಿತಿಗೆ 8277 100 200 ಗೆ ಕರೆ ಮಾಡಿ
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಪಡೆಯಲು ಹೊಸ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣಾ ಅಭಿಯಾನ ಕುರಿತು ಹಾಗೂ ಸಾಲಸೌಲಭ್ಯದ ಕುರಿತು ಮಾಹಿತಿ ಪಡೆಯಲು ರೈತರು ದೂರವಾಣಿ ಸಂಖ್ಯೆ 8277 100 200 (ಉಚಿತ) ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಕರೆ ಮಾಡಿ ಪಶುವೈದ್ಯರು ಮತ್ತು ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆಯಬಹುದು.
ಇದಕ್ಕಾಗಿ ನೀವು ಯಾವುದೇ ಕರೆ ಶುಲ್ಕ ಪಾವತಿಸುವ ಅವಶ್ಯಕತೆಯಿಲ್ಲ. ಪಶು ಇಲಾಖೆಯ ತಜ್ಞರಿಂದ ಮಾಹಿತಿ ಪಡೆಯಲು ಈ ಉಚಿತ ಸಹಾಯವಾಣಿಗೆ ಕರೆ ಮಾಡಿದರೆ ಸಾಕು ನಿಮ್ಮ ಜಿಲ್ಲೆಯ, ತಾಲೂಕಿನ ಪಶು ಇಲಾಖೆಯ ಸಿಬ್ಬಂದಿಯೊಂದಿಗೆ ಸಂಪರ್ಕ ನೀಡಲಾಗುವುದು. ನಿಮಗೆ ಬೇಕಾದ ಮಾಹಿತಿ ಪಶು ಇಲಾಖೆಯ ಸಿಬ್ಬಂದಿಗಳಿಗೆ ಮನೆಯಲ್ಲಿಯೇ ಕುಳಿತು ಪಡೆಯಬಹುದು.
ಇದನ್ನೂ ಓದಿ : ಬೆಳೆ ಹಾನಿ ಪರಿಹಾರಕ್ಕಿರುವ ಷರತ್ತುಗಳೇನು? ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಎಷ್ಟು ಪರಿಹಾರದ ಮೊತ್ತ ನಿಗದಿ? ಇಲ್ಲಿದೆ ಸಂಪೂರ್ಣ ಮಾಹಿತಿ
ಈ ಉಚಿತ ಸಹಾಯವಾಣಿಯಿಂದ ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ, ಮೊಲ ಸಾಕಾಣಿಕೆ, ಕೋಳಿ ಸಾಕಾಣಿಕೆ ಕುರಿತಂತೆ ಇಲಾಖೆಯ ತರಬೇತಿ ಕೇಂದ್ರಗಳಲ್ಲಿ ನಡೆಯುವ ತರಬೇತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು. ಜಾನುವಾರು ರೋಗಗಳು, ಲಸಿಕಾ ಕಾರ್ಯಕ್ರಮ ಹೀಗೂ ಜಾನುವಾರು ರೋಗ ತಡೆಗಟ್ಟಲು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು. ಪಶುಸಂಗೋಪನಾ ಚಟುವಟಿಕೆಗಳಿಗೆ ವಿವಿಧ ಬ್ಯಾಂಕುಗಳಿಂದ ದೊರೆಯಬಹುದಾದ ಸಾಲಸೌಲಭ್ಯ ಕುರಿತು ಮಾಹಿತಿ ನೀಡಲಾಗುವುದು. ದೇಶಿ ಹಾಗೂ ವಿದೇಶಿ ಜಾನುವಾರು ತಳಿಗಳ ಬಗ್ಗೆ ಮಾಹಿತಿ ನೀಡಲಾಗುವುದು. ಮಿಶ್ರತಳಿ, ಹಸು, ಕುರಿ, ಮೇಕೆ, ಹಂದಿಗಳ ಅಂದಾಜು ಬೆಲೆ ಹಾಗೂ ಅವುಗಳ ಲಭ್ಯತೆ ಕುರಿತಂತೆ ಸೂಕ್ತ ಮಾಹಿತಿ ನೀಡಲಾಗುವುದು.