ಬೆಳೆ ಹಾನಿ ಪರಿಹಾರಕ್ಕಿರುವ ಷರತ್ತುಗಳೇನು? ಇಲ್ಲಿದೆ ಮಾಹಿತಿ

Written by By: janajagran

Updated on:

Crop damage compensation conditions ಕೃಷಿ ಮತ್ತು ತೋಟಗಾರಿಕೆಯ ಬೆಳೆಗಳ ಉತ್ಪಾದನೆಯ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಸಹ ರೈತರಿಗೆ ಪರಿಹಾರದ ಮೊತ್ತ ಅಷ್ಟೇ ನೀಡಲಾಗುತ್ತಿದೆ. ಅತೀವೃಷ್ಟಿ, ಪ್ರವಾಹ, ಬರದಿಂದಾಗಿ ಬೆಳೆ ಹಾನಿಯಾದಾಗ ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್.ಡಿ.ಆರ್.ಎಫ್) ಅಡಿ ನೀಡುತ್ತಿರುವ ಮೊತ್ತ ಅತೀ ಕಡಿಮೆಯಾಗಿದೆ ಎಂದು ರೈತ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದರೂ ಪರಿಹಾರ ಮೊತ್ತ ಹೆಚ್ಚಾಗಿಲ್ಲ.

ರೈತರು ಬೆಳೆ ಉತ್ಪಾದನೆ ಮಾಡಲು ಕೂಲಿ ವೆಚ್ಚ, ಬೀಜ, ಗೊಬ್ಪರ ಸೇರಿದಂತೆ ಇನ್ನಿತರ ಖರ್ಚು ಹೆಚ್ಚಾಗುತ್ತಿದ್ದರೂ ಸಹ ಕೇಂದ್ರ ಸರ್ಕಾರವು ಆರು ವರ್ಷಗಳ ಹಿಂದೆ ರೂಪಿಸಿದ ಎನ್.ಡಿ.ಆರ್.ಎಫ್ ನಿಯಮದ ಪ್ರಕಾರವೇ ಪರಿಹಾರದ ಹಣವನ್ನು ರೈತರಿಗೆ ನೀಡಲಾಗುತ್ತಿದೆ.

ಎನ್.ಡಿ.ಆರ್.ಎಫ್ ನಿಯಮದ ಪ್ರಕಾರ ಎಷ್ಟು ಪರಿಹಾರ ನಿಗದಿ

ಎನ್.ಡಿ.ಆರ್.ಎಫ್ ನಿಯಮದ ಪ್ರಕಾರ ರೈತರಿಗೆ ಗರಿಷ್ಠ ಎರಡು ಹೆಕ್ಟೇರ್ ವರೆಗೆ ಮಾತ್ರ ಪರಿಹಾರ ನೀಡಲಾಗುವುದು. ಕೃಷಿ, ತೋಟಗಾರಿಕೆ ಬೆಳೆಗಳಿಗೆ ಮಾತ್ರ ಪರಿಹಾರ ನೀಡಲಾಗುವುದು. ಮಳೆಯಾಶ್ರಿತ ಬೆಳೆಗೆ 6800 ರೂಪಾಯಿ, ನೀರಾವರಿ ಪ್ರದೇಶದ ಬೆಳೆಗಳಿಗೆ 13,500 ರೂಪಾಯಿ ಹಾಗೂ ತೋಟಗಾರಿಕೆ ಬೆಳೆಗಳಿಗೆ 18000 ರೂಪಾಯಿ ನಿಗದಿಪಡಿಸಲಾಗಿದೆ. ಮಳೆ, ಪ್ರವಾಹ ಹಾಗೂ  ಬರದಿಂದಾಗಿ ಶೇ. 33 ಕ್ಕಿಂತ ಹೆಚ್ಚು ಬೆಳೆ ಹಾನಿಯಾದರೆ ಮಾತ್ರ ಪರಿಹಾರ ಹಣ ನೀಡಲಾಗುವುದು. ಈಗಾಗಲೇ ಕೊಯ್ಲು ಮಾಡಿದ ಬೆಳೆಗಳಿಗೆ ಪರಿಹಾರ ಸಿಗುವುದಿಲ್ಲ. ಕೊಯ್ಲು ಮಾಡಿದ ನಂತರ ರಾಶಿ ಮಾಡುವಾಗ ಬೆಳೆ ಹಾಳಾದರೆ ಪರಿಹಾರ ಸಿಗುವುದಿಲ್ಲ.  ಜಮೀನಿನಲ್ಲಿ ಬೆಳೆದು ನಿಂತಿರುವ ಬೆಳೆಗೆ ಮಾತ್ರ ಪರಿಹಾರ ನೀಡಲಾಗುವುದು.

ಪರಿಹಾರ ಮೊತ್ತ ಹೆಚ್ಚಿಸಲು ಕೃಷಿ ಬೆಲೆ ಆಯೋಗಕ್ಕೆ ಮನವಿ

ಬೀಜ, ಗೊಬ್ಬರ, ಕೂಲಿ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚೈಗುತ್ತಿದ್ದರಿಂದ ಅತೀವೃಷ್ಟಿ, ಬರದಿಂದಾಗಿ ಬೆಳೆ ಹಾಳಾದರೆ ಪರಿಹಾರ ಮೊತ್ತ ಹೆಚ್ಚಿಸಬೇಕೆಂದು ಕೃಷಿ ಬೆಲೆ ಆಯೋಗ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.

ಮಳೆಯಾಶ್ರಿತ ಬೆಳೆಗೆ 6800 ರೂಪಾಯಿ 50 ಸಾವಿರ ರೂಪಾಯಿಗೆ ಹೆಚ್ಚಿಸಬೇಕು. ನೀರಾವರಿ ಜಮೀನಿಗೆ 13500 ರೂಪಾಯಿಯಿಂದ 50 ಸಾವಿರ ರೂಪಾಯಿಗೆ ಹೆಚ್ಚಿಸಬೇಕು ಅದೇ ರೀತಿ ತೋಟಗಾರಿಕೆ ಬೆಳೆಗೆ 18 ಸಾವಿರದಿಂದ 1 ಲಕ್ಷ ರೂಪಾಯಿಯಯವರೆ ಹೆಚ್ಚಿಸಬೇಕೆಂದು ಮನವಿ ಮಾಡಿದೆ.

Crop damage compensation conditions ಪರಿಹಾರಕ್ಕೆ ಅರ್ಜಿ ಸಲ್ಲಿಸಬಲು ಬೇಕಾಗುವ ದಾಖಲೆಗಳು

ಮಳೆಯಿಂದಾಗಿ ಬೆಳೆ ಹಾನಿಯಾದರೆ ರೈತರು ಒಂದು ಅರ್ಜಿ ಬರೆಯಬೇಕು. ಅರ್ಜಿಯಲ್ಲಿ ಹೆಸರು, ವಿಳಾಸ, ಸರ್ವೆ ನಂಬರ್, ಜಮೀನಿನ ವಿಸ್ತೀರ್ಣ, ಬೆಳೆ ವಿವರ, ಬೆಳೆ ಹಾನಿಯಾದ ವಿಸ್ತೀರ್ಣ, ರೈತರ ವರ್ಗ ಅಂದರೆ ಸಣ್ಣ, ಅತೀ ಸಣ್ಣ ರೈತರು ಎಂದು ನಮೂದಿಸಬೇಕು.  ಆಧಾರ್ ಕಾರ್ಡ್ ಝರಾಕ್ಸ್, ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್, ಬ್ಯಾಂಕಿನ ಹೆಸರು, ಬ್ಯಾಂಕ್ ಐಎಫ್ಎಸ್ಐ ಕೋಡ್, ಬ್ಯಾಂಕ್ ಬ್ರ್ಯಾಂಚ್, ಮೊಬೈಲ್ ಸಂಖ್ಯೆ ನಮೂದಿಸಿ ಅರ್ಜಿ ಸಲ್ಲಿಸಬೇಕು.

ಸಮೀಕ್ಷೆಗೆ ನಿಮ್ಮ ಗ್ರಾಮಕ್ಕೆ ಅಧಿಕಾರಿಗಳು ಬರದಿದ್ದರೆ ರೈತರು ಖುದ್ದಾಗಿ  ಗ್ರಾಮ ಪಂಚಾಯತಿಗೆ ಹೋಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸ್ವೀಕರಿಸಿದ ಅಧಿಕಾರಿಗಳು ರೈತರ ಎಲ್ಲಾ ವಿವರಗಳನ್ನು ಪರಿಶೀಲಿಸಿ ಪರಿಹಾರ ತಂತ್ರಾಂಶದಲ್ಲಿ ನಮೂದಿಸುತ್ತಾರೆ. ನಂತರ ರೈತರಖಾತೆಗೆ ಪರಿಹಾರ ಹಣ ಜಮೆ ಮಾಡಲಾಗುವುದು.

ಇದನ್ನೂ ಓದಿ ಈ ರೈತರೇಕೆ ಪಿಎಂ ಕಿಸಾನ್ ಪಟ್ಟಿಯಿಂದ ಹೊರಗುಳಿಯಲಿದ್ದಾರೆ?

ಪರಿಹಾರ ಹಣ ಜಮೆಯ ಸ್ಟೇಟಸ್ ಸಹ ರೈತರು ಮೊಬೈಲ್ ನಲ್ಲಿಯೇ ನೋಡಿಕೊಳ್ಳಬಹುದು. ಕಳೆದ ವರ್ಷ ಪರಿಹಾರ ಹಣ ಎಷ್ಟು ಜಮೆಯಾಗಿದೆ ಈ ವರ್ಷ ಜಮೆಯಾಗುವ ಸ್ಟೇಟಸ್ ಸಹ ನೋಡಿಕೊಳ್ಳಬಹುದು.

ಪರಿಹಾರ ಸ್ಟೇಟಸ್ ನೋಡಲು ಈ  https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸರ್ಕಾರದ ಪರಿಹಾರ ವೆಬ್ ಪೇಜ್ ಓಪನ್ ಆಗುತ್ತದೆ ಅಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು. ನಂತರ Select calamity type ನಲ್ಲಿ Flood ಆಯ್ಕೆ ಮಾಡಿಕೊಳ್ಳಬೇಕು. ಈ ಕಳೆದ ವರ್ಷ ಸ್ಟೇಟಸ್ ನೋಡಲು 2020-21 ಆಯ್ಕೆ ಮಾಡಿಕೊಳ್ಳಬೇಕು. ಈ ವರ್ಷದ ಸ್ಟೇಟಸ್ ನೋಡಲು 2021-22 ಆಯ್ಕೆ ಮಾಡಿಕೊಳ್ಳಬೇಕು. ಕೆಳಗಡೆ ಆಧಾರ್ ಸಂಖ್ಯೆ ನಮೂದಿಸಿ ಕ್ಯಾಪ್ಚ್ಯಾ ಕೋಡ್ ನಮೂದಿಸಬೇಕು ನಂತರ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿದರೆ ಸಾಕು ಪರಿಹಾರ ಸ್ಟೇಟಸ್ ಮೊಬೈಲ್ ನಲ್ಲಿಯೇ ನೋಡಿಕೊಳ್ಳಬಹುದು.

Leave a Comment