ಕರ್ನಾಟಕ ರಾಜ್ಯದಲ್ಲಿ ನಮಗೆ ಗೊತ್ತಿರದ ಎಷ್ಟೋ ಟೂರಿಸ್ಟ್ ಪ್ಲೆಸ್ ಗಳಿವೆ. ಆ ಸ್ಥಳಗಳ ಮಾಹಿತಿ ಪಡೆಯಲು ಈಗ ಲೈಬ್ರರಿಗೆ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಕ್ಷಣಾರ್ಧದಲ್ಲಿ ಪಡೆಯಬಹುದು.

ಹೌದು, ಕರ್ನಾಟಕ ಸರ್ಕಾರವು ಸಾರ್ವಜನಿಕರಿಗೆ ಅನುಕೂಲವಾಗಲೆಂದು ರಾಜ್ಯದ ಟೂರಿಸ್ಟ್ ಸ್ಥಳಗಳ ಮಾಹಿತಿಯೂ ಒಂದೇ ವೇದಿಕೆಯಲ್ಲಿ ಸಿಗಲೆಂದು ವ್ಯವಸ್ಥೆ ಮಾಡಿದೆ. ಇದೇನಪಾ, ನಾವು ಟೂರಿಸ್ಟ್ ಪ್ಲೆಸ್ ಗಳ ಮಾಹಿತಿ ಪಡೆಯಲು ಗೂಗಲ್ ನಲ್ಲಿ ಹುಡುಕುತ್ತೇವೆ. ಆದರೆ ಗೂಗಲ್ ನಲ್ಲಿ ಕೆಲವು ಸ್ಥಳಗಳ ಮಾಹಿತಿ ಮಾತ್ರ ಸಿಗುತ್ತವೆ. ಆಯಾ ಜಿಲ್ಲಾವಾರು ಐತಿಹಾಸಿಕ ಸ್ಥಳಗಳು, ಪ್ರವಾಸಿ ತಾಣಗಳ ಮಾಹಿತಿ ಸಿಗುವುದಿಲ್ಲ. ಆದರೆ ಇಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಂಡರೆ ಸಾಕು, ಕ್ಷಣಾರ್ಧದಲ್ಲಿ ನಿಮ್ಮಜಿಲ್ಲೆಯ , ನಿಮ್ಮ ನೆರೆಹೊರೆ ಜಿಲ್ಲೆಯ ಹಾಗೂ ರಾಜ್ಯದ ಯಾವ ಜಿಲ್ಲೆಯಲ್ಲಿ ಯಾವ ಯಾವ ಪ್ರವಾಸಿ ತಾಣಗಳಿವೆ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ರಾಜ್ಯದ ಜಿಲ್ಲಾವಾರು ಪ್ರವಾಸಿ ತಾಣಗಳ ಮಾಹಿತಿ ಪಡೆಯುವುದು ಹೇಗೆ?

ರಾಜ್ಯದ ಜನರು ಜಿಲ್ಲಾವಾರು ಐತಿಹಾಸಿಕ ಸ್ಥಳಗಳು, ಪ್ರವಾಸಿ ತಾಣಗಳ ಮಾಹಿತಿ ಪಡೆಯಲು ಈ

https://mahitikanaja.karnataka.gov.in/Kstdc/TouristPlace?ServiceId=5444&Type=TABLE&DepartmentId=3131

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸಾರ್ವಜನಿಕರ ಮಾಹಿತಿ ವ್ಯವಸ್ಥೆಯ  ವೆಬ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ಆಯ್ಕೆ ಮಾಡಿಕೊಂಡ ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಥಳಗಳ ಮಾಹಿತಿಯ ಪಟ್ಟಿ ತೆರೆದುಕೊಳ್ಳುತ್ತದೆ.

ಉದಾಹರಣೆಗೆ ನೀವು ಕಲಬುರಗಿ ಜಿಲ್ಲೆ ಆಯ್ಕೆ ಮಾಡಿಕೊಂಡರೆ ಅಫಜಲ್ಪೂರ ತಾಲೂಕಿನ ಗಾಣಗಾಪುರ, ಘತ್ತರಗಿ, ಮಣ್ಣೂರ, ಆಳಂದ ತಾಲೂಕಿನ ನರೋಣ ಅಮರ್ಜಾ ಡ್ಯಾಂ ಮಾಹಿತಿ ಇರುತ್ತದೆ.  ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಡ್ಯಾಂ, ಯತ್ತಪೋತ ಫಾಲ್ಸ್, ಪಂಚಲಿಂಗೇಶ್ವರ ಬುಗ್ಗಿ, ಗೊಟ್ಟಮಗೊಟ್ಟ ಸ್ಥಳದ ಮಾಹಿತಿ ಇರುತ್ತದೆ.ಅದೇ ರೀತಿ ಚಿತ್ತಾಪುರ ತಾಲೂಕಿನ ಸನ್ನತಿ, ನಾಗಾವಿ, ರಟಕಲ್, ಕೋರವಾರ, ಜೇವರ್ಗಿ ತಾಲೂಕಿನ ಕುಲಗೇರಿ, ಯಡ್ರಾಮಿ ರಾಮತೀರ್ಥ,  ಸೇಡಂ ತಾಲೂಕಿನ ಮಲಖೇಡ ಕೋಟೆ, ಯಾನಾಗುಂದಿ, ಮೋತಕಪಲ್ಲಿ ದೇವಸ್ಥಾನದ ಮಾಹಿತಿ ಸಿಗುತ್ತದೆ. ಅದೇ ರೀತಿ ಕಲಬುರಗಿ ಜಿಲ್ಲೆಯಲ್ಲಿರುವ ಕಲಬುರಗಿ ಕೋಟೆ, ಚೋರ್ ಗುಂಬಜ್, ಹಫ್ತ್ ಗುಂಬಜ್, ಬುದ್ದವಿಹಾರ, ಫಿರೋಜಾಬಾದ್ ಕೋಟೆ, ಸನ್ನತಿ ಸ್ಥಳಗಳ ಮಾಹಿತಿ ಕಾಣುತ್ತದೆ.

ಇದನ್ನೂ ಓದಿ : ನಿಮ್ಮ ಮಕ್ಕಳಿಗೆ ಸ್ಕಾಲರಶಿಪ್ ಬಂದಿದೆಯೇ? ಮೊಬೈಲ್ ನಲ್ಲಿ ಹೀಗೆ ಸ್ಟೇಟಸ್ ಚೆಕ್ ಮಾಡಿ

ಅದೇ ರೀತಿ ನೀವು ಒಂದು ವೇಳೆ ಬೆಂಗಳೂರು ಆಯ್ಕೆ ಮಾಡಿಕೊಂಡರೆ ಹೆಸರುಘಟ್ಟ, ಬನ್ನೇರು ಘಟ್ಟ, ಲಾಲ್ ಬಾಗ್, ಕಬ್ಬನ್ ಪಾರ್ಕ್, ಬುಲ್ ಟೆಂಪಲ್, ಟಿಪ್ಪು ಪ್ಯಾಲೇನ್ ಕಾಣುತ್ತದೆ. ಇದರೊಂದಿಗೆ ಟಿಪ್ಪು ಫೋರ್ಟ್,  ಸೋಮೇಶ್ವರ ಟೆಂಪಲ್, ಬನ್ನೇರುಘಟ್ಟ ನ್ಯಾಶನಲ್ ಪಾರ್ಕ್  ಮಾಹಿತಿಯೂ ಸೇರಿಸಲಾಗಿದೆ. ಇಸ್ಕಾನ್ ಟೆಂಪಲ್, ವಿಧಾನಸೌಧ, ಹಲಸೂರ ಲೇಕ್, ರಾಚೇನಳ್ಳಿ ಲೇಕ್, ಸಂಕೇ ಟ್ಯಾಂಕ್, ಮ್ಯುಸಿಕಲ್ ಮ್ಯುಸಿಯಂ, ನೆಹರು ಪ್ಲಾಂಟೇಶನ್, ಬೆಂಗಳೂರು ಸರ್ಕಾರಿ ಮ್ಯುಸಿಯಂ, ದೊಡ್ಡ ಆಲದ ಮರದ ಮಾಹಿತಿ ಕಾಣುತ್ತದೆ.

ಇದೇ ರೀತಿ ರಾಜ್ಯದ ಬೀದರ್, ಬಿಜಾಪುರ, ರಾಯಚೂರು, ಧಾರವಾಡ, ಬೆಳಗಾವಿ, ಬಾಗಲಕೋಟ, ಮಂಗಳೂರು, ಚಿಕ್ಕಮಗಳೂರು, ಉಡುಪಿ, ಕೊಡಗು, ಬಳ್ಳಾರಿ, ಹಾಸನ, ಚಾಮರಾಜನಗರ, ಚಿತ್ರದುರ್ಗ, ಹುಬ್ಬಳ್ಳಿ, ಶಿವಮೊಗ್ಗ, ರಾಮನಗರ, ಯಾದಗಿರಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಐತಿಹಾಸಿಕ ಸ್ಥಳ, ಪ್ರೇಕ್ಷಣೀಯ ಸ್ಥಳಗಳ ಮಾಹಿತಿ ಇರುತ್ತದೆ.

ನಮಗೆ ಗೊತ್ತಿಲ್ಲದ ಎಷ್ಟೋ ಮಾಹಿತಿಗಳು ಒಂದೇ ವೇದಿಕೆಯಲ್ಲಿ ಸಿಗುತ್ತದೆ.  ಇದಕ್ಕಾಗಿ ಯಾರ ಬಳಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಎಲ್ಲಾ ಮಾಹಿತಿಯನ್ನು ಪಡೆಯಬಹುದು.

Leave a Reply

Your email address will not be published. Required fields are marked *