ಶಾಲಾ ಮಕ್ಕಳ ಸ್ಕಾಲರ್ ಶಿಪ್ ಸ್ಟೇಟಸನ್ನು ಮಕ್ಕಳ ಪಾಲಕರು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು,  ಒಂದನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳು ಮೊಬೈಲ್ ನಲ್ಲೇ ತಮ್ಮ ಸ್ಕಾಲರ್ ಶಿಪ್ ಸ್ಟೇಟಸನ್ನು ನೋಡಬಹುದು. ರಾಜ್ಯ ಸರ್ಕಾರದ ವತಿಯಿಂದ ಮಕ್ಕಳಿಗೆ ಒಂದನೇ ತರಗತಿಯಿಂದ ಪ್ರತಿ ವರ್ಷ ಮಕ್ಕಳಿಗೆ ಶಿಷ್ಯವೇತನ ನೀಡುತ್ತದೆ. ಶಿಷ್ಯವೇತನಕ್ಕಾಗಿ ಮಕ್ಕಳು ಒಂದು ಸಲ ಅರ್ಜಿ ಸಲ್ಲಿಸಿದರೆ ಸಾಕು, ಒಂದರಿಂದ 10ನೇ ತರಗತಿಯ ವರೆಗೆ ಪ್ರತಿ ವರ್ಷ ಮಕ್ಕಳ ಬ್ಯಾಂಕ್ ಖಾತೆಗೆ ಶಿಷ್ಯವೇತನ ಜಮೆಯಾಗುತ್ತದೆ.

ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಸಿದ ಮಕ್ಕಳ ಪಾಲಕರು ತಮ್ಮ ಮೊಬೈಲ್ ನಲ್ಲಿ ಮಕ್ಕಳಿಗೆ ಪ್ರತಿ ವರ್ಷ ಎಷ್ಟು ಸ್ಕಾಲರ್ ಶಿಪ್ ಜಮೆಯಾಗುತ್ತಿದೆ ಎಂಬುದನ್ನು ಚೆಕ್ ಮಾಡಲು ಈ

https://ssp.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಯೋಜನೆಗಳು ಕೆಳಕಡೆ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟಪಂಗಡಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಕಾರ್ಮಿಕ ಇಲಾಖೆ, ವಿಕಲಚೇತನರ ಕಲ್ಯಾಣ ಇಲಾಖೆಗಳು ಕಾಣುತ್ತದೆ.ನೀವು ಯಾವ ಇಲಾಖೆ ಅಡಿಯಲ್ಲಿ ಬರುತ್ತೀರೋ ಆ ಇಲಾಖೆ ಮೇಲೆ ಕ್ಲಿಕ್ ಮಾಡಬೇಕು.  ನಂತರ ಟ್ರ್ಯಾಕ್ ಸ್ಟುಡೆಂಟ್ ಸ್ಕಾಲರ್ಶಿಪ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಅಲ್ಲಿ ವಿದ್ಯಾರ್ಥಿಯ  SATS ಗುರುತಿನ ಸಂಖ್ಯೆಯನ್ನು ನಮೂದಿಸಿ ಬಾಕ್ಸ್ ನಲ್ಲಿ ವಿದ್ಯಾರ್ಥಿಗಳ ಮಾರ್ಕ್ಸ್ ಕಾರ್ಡ್ ನಲ್ಲಿರುವ ಎಸ್.ಟಿ.ಎಸ್ ನಂಬರ್ ನಮೂದಿಸಬೇಕು. ನಂತರ ಯಾವ  ವರ್ಷದ ಸ್ಕಾಲರ್ ಶಿಪ್ ಸ್ಟೇಟಸ್ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಅದನ್ನು ಆಯ್ಕೆಮಾಡಿಕೊಳ್ಳಬೇಕು. ನಂತರ ಹುಡುಕು ಮೇಲೆ ಕ್ಲಿಕ್ ಮಾಡಬೇಕು ಆಗ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯ ಸ್ಯಾಟ್ಸ್ ಐಡಿ, ವಿದ್ಯಾರ್ಥಿಯ ಹೆಸರು, ಶಾಲೆಯ ಹೆಸರು, ವರ್ಗ, ಲಿಂಗ, ಎಷ್ಟು ವಿದ್ಯಾರ್ಥಿ ವೇತನ  ಜಮೆಯಾಗಿದೆ ಎಂಬ ಮೆಸೆಜ್ ಕಾಣುತ್ತದೆ.

ಇದರೊಂದಿಗೆ ವಿದ್ಯಾರ್ಥಿ ಕಳೆದ ಸಾಲಿನಲ್ಲಿ ಯಾವ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂ ಮೆಸೆಜ್ ಕಾಣುತ್ತದೆ. ಹಾಗೂ ವಿದ್ಯಾರ್ಥಿಯು ಹಾಸ್ಟೆಲ್ ನಲ್ಲಿದ್ದಾರೋ ಇಲ್ಲವೋ ಎಂಬ ಮಾಹಿತಿ ಸಹ ಕಾಣುತ್ತದೆ.

ಮೊಬೈಲ್ ನಲ್ಲೇ ಶಿಷ್ಯವೇತನಕ್ಕೆ ಹೀಗೆ ಆನ್ಲನ್ ನಲ್ಲಿ ಅರ್ಜಿ ಸಲ್ಲಿಸಿ

ಈ ಶಿಷ್ಯವೇತನವ ಸರ್ಕಾರಿ ಶಾಲೆಯ ಮಕ್ಕಳಿಗಷ್ಟೇ ಅಲ್ಲ, ಖಾಸಗಿ, ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೂ ಪ್ರತಿವರ್ಷ ಶಿಷ್ಯವೇತನ ಸಿಗುತ್ತದೆ. ಹಾಗಾಗಿ ಯಾರು ಶಿಷ್ಯ ವೇತನಕ್ಕೆ ಅರ್ಜಿ ಸಲ್ಲಿಸುವ ಅಂತಹ ಮಕ್ಕಳು ಅರ್ಜಿ ಸಲ್ಲಿಸಬಹುದು.  ಒಂದನೇ ತರಗತಿಯಿಂದಲೇ ಮಕ್ಕಳಿಗೆ ಶಿಷ್ಯವೇತನ ಸಿಗುತ್ತದೆ. ಹಾಗಾಗಿ ನಿಮ್ಮ ಶಾಲೆಯಲ್ಲಿ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬಹುದು.

ಇದನ್ನೂ ಓದಿ : ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ 20 ರಿಂದ 35 ಸಾವಿರ ರೂ.ವರಿಗೆ ಪ್ರೋತ್ಸಹ ಧನ ನೀಡಲು ಅರ್ಜಿ ಆಹ್ವಾನ

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿ ವೇತನ ತಂತ್ರಾಂಶದ ಮುಖಪುಟದಲ್ಲಿ ಕಾಣುವ ಖಾತೆಯನ್ನು ಸೃಜಿಸು ಮೇಲೆ ಕ್ಲಿಕ್ ಮಾಡಬೇಕು. ಆಗ ಮೆಟ್ರಿಕ್ ಪೂರ್ವ ಬಾಕ್ಸ್ ಆಯ್ಕೆಮಾಡಿಕೊಳ್ಳಬೇಕು. ವಿದ್ಯಾರ್ಥಿಯ ಸ್ಯಾಟ್ಸ್ ಗುರುತಿನ ಸಂಖ್ಯೆಯನ್ನನಮೂದಿಸಿ ಮಾಹಿತಿ ಪಡೆಯಿರಿ ಮೇಲೆಕ್ಲಿಕ್ ಮಾಡಿ ಅಗತ್ಯ ಮಾಹಿತಿ ಭರ್ತಿ ಮಾಡಬೇಕು.

ಈ ಸಹಾಯವಾಣಿಗೆ ಕರೆ ಮಾಡಿ

ಶಿಷ್ಯವೇತನ ಕುರಿತಂತೆ ಮಾಹಿತಿ ಕೇಳಲು ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವವರು 9008400010, 9008400078 ಗೆ ಸಂಪರ್ಕಿಸಬಹುದು. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವವರು 080-22261789 ಗೆ ಸಂಪರ್ಕಿಸಬೇಕು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವವರು 8277799990 ಗೆ ಸಂಪರ್ಕಿಸಬೇಕು. ಅದೇ ರೀತಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವವರು 080-22374836, 8050770005 ಗೆ ಸಂಪರ್ಕಿಸಬಹುದು.

One Reply to “ನಿಮ್ಮ ಮಕ್ಕಳಿಗೆ ಸ್ಕಾಲರಶಿಪ್ ಬಂದಿದೆಯೇ? ಮೊಬೈಲ್ ನಲ್ಲಿ ಹೀಗೆ ಸ್ಟೇಟಸ್ ಚೆಕ್ ಮಾಡಿ”

Leave a Reply

Your email address will not be published. Required fields are marked *