ಕೊರೋನಾ ಸೋಂಕಿನ ಆತಂಕದ ನಡುವೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವುದಾಗಿ ಅಧಿಸೂಚನೆ ಪ್ರಕಟಿಸಿರುವ (Karnataka SSLC Exam 2021 guidelines ) ಶಿಕ್ಷಣ ಇಲಾಖೆ ಇದೀಗ ವಿದ್ಯಾರ್ಥಿಗಳಿಗೆ ಕನಿಷ್ಠ ಅಂಕ ನೀಡಿ ಎಲ್ಲರನ್ನೂ ಉತ್ತೀರ್ಣಗೊಳಿಸಲು ತಿಳಿಸಿದ್ದು, ಮರುಮೌಲ್ಯಮಾಪನ ಇರುವುದಿಲ್ಲವೆಂದು ಖಚಿಪಪಡಿಸಿದೆ.

ಜುಲೈ 18 ರಿಂದ ಎಸ್ಎಸ್ಎಲ್ಸಿ ಪರೀಕ್ಷೆಗಳು ಆರಂಭವಾಗಲಿವೆ ಎನ್ನಲಾಗುತ್ತಿದೆ. ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲಾಗುವುದು.  ಮೌಲ್ಯಾಂಕನ ಹಾಗೂ ವಿದ್ಯಾಥಿಗಳು ಗಳಿಸುವ ಅಂಕಗಳ ಆಧಾರದ ಮೇಲೆ ನಾಲ್ಕು ಗ್ರೇಡ್ ನೀಡಲಾಗುತ್ತದೆ. ಆಂತರಿಕ ಮೌಲ್ಯಮಾಪನ ಆಧರಿಸಿ ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತೀರ್ಣ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.

2020-21ನೇ ಸಾಲಿನ ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ನಿಯಮನಾಸುರಾ ಕನಿಷ್ಠ ಉತ್ತೀರ್ಣತೆಯ ಅಂಕ ನೀಡಿ , ವಿದ್ಯಾರ್ಥಿಗಳು ಗಳಿಸುವ ಅಂಕದ ಆಧಾರದಲ್ಲಿ ಶ್ರೇಣಿ ನೀಡಲು ಸೂಚಿಸಲಾಗಿದೆ.

90 ರಿಂದ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಎ+, 80 ರಿಂದ 89 ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಎ ಗ್ರೇಡ್, 60 ರಿಂದ 79 ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಬಿ ಗ್ರೇಡ್ ಮತ್ತು 35 ರಿಂದ 59 ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಸಿ. ಶ್ರೇಣಿ ನೀಡಲು ತಿಳಿಸಿದೆ. ಪ್ರತಿ ವಿಷಯದ ಪರೀಕ್ಷೆ 40 ಅಕಂಗಳಿಗೆ ನಡೆಯಲಿದ್ದು, ಅವುಗಳನ್ನು 80 ಅಂಕಗಳಿಗೆ ಪರಿವರ್ತಿಸಲಾಗುವುದು. (ಪ್ರಥಮ ಭಾಷೆ 125 ಅಂಕ) ಒಟ್ಟು 625 ಅಂಕಕ್ಕೆ ಅನುಗುಣವಾಗಿ ಫಲಿತಾಂಶ ನೀಡಲು ಸೂಚಿಸಿದೆ. ಪ್ರಥಮ ಭಾಷೆಗೆ ಮಾತ್ರ 25 ಆಂತರಿಕ ಅಂಕಗಳಿರಲಿದೆ. ಉಳಿದ ಭಾಷೆಗಳಿಗೆ ನಡೆಯುವ ಪರೀಕ್ಷೆಗೆ 20 ಆಂತರಿಕ ಅಂಕಗಳಿರುತ್ತವೆ.

ಎಸ್ಎಸ್ಎಲ್ಸಿ ಪರೀಕ್ಷೆ 2 ದಿನ ಮಾತ್ರ

ಕೋವಿಡ್ ಹಿನ್ನೆಲೆಯಲ್ಲ ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಸರಳೀಕರಿಸಿ ಕೇವಲ ಎರಡೇ ದಿನದಲ್ಲಿ ನಡೆಸಲು ನಿರ್ಧರಿಸಿದ್ದ ಶಿಕ್ಷಣ ಇಲಾಖೆ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ.   ಈ ಹಿಂದೆ ಆರು ವಿಷಯಗಳಿಗೆ ಆರು ದಿನಗಳ ಕಾಲ ನಡೆಯುತ್ತಿದ್ದ ಪರೀಕ್ಷೆಯನ್ನು ಇದೀಗ ಎಱಡು ದಿನಗಳಿಗೆ ಪರೀಕ್ಷೆಯನ್ನು ಮೊಟಕುಗೊಳಿಸಿದೆ. ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳಿಗೂ ನಿಯಮಾನುಸಾರ ಕನಿಷ್ಠ ಉತ್ತೀರ್ಣತಾ ಅಂಕಗಳ ನೀಡುವಿಕೆಯಿಂದ ಉತ್ತೀರ್ಣರೆಂದು ಫಲಿತಾಂಶ ನೀಡಲಾಗುವುದು. ಪರೀಕ್ಷಾ ಸಮಯವನ್ನು ಬೆಳಗ್ಗೆ 10.30 ರಿಂದ 1.30ರವರೆಗೆ ನಿಗದಿಪಡಿಸಲಾಗಿದೆ.

ಪರೀಕ್ಷಾ ಕೇಂದ್ರಗಳ ಹೆಚ್ಚಳ

ಈ ಹಿಂದೆ ಸುಮಾರು 3 ಸಾವಿರ ಪರೀಕ್ಷಾ ಕೇಂದ್ರಗಳನ್ನು ರಚಿಸಿ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಈ ವರ್ಷ 6ಸಾವಿರಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಒಂದು ಕೊಠಡಿಗೆ 12 ವಿದ್ಯಾರ್ಥಿಗಳಂತೆ ಒಂಡು ಡೆಸ್ಕ್ ಗೆ ಒಬ್ಬ ವಿದ್ಯಾರ್ಥಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ

Leave a Reply

Your email address will not be published. Required fields are marked *