ಅನ್ನ ಸುವಿಧಾ ಯೋಜನೆಯಡಿ ವೃದ್ಧರ ಮನೆ ಬಾಗಿಲಿಗೆ ರೇಷನ್

Written by Ramlinganna

Published on:

ತಿಂಗಳು ನ್ಯಾಯಬೆಲೆ ಅಂಗಡಿಗಳಿಗೆ ತೆರಳಲು ಸಾಧ್ಯವಾಗದ 80 ವರ್ಷ ದಾಟಿದ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಆಹಾರ ಧಾನ್ಯ ತಲುಪಿಸುವ ಅನ್ನ ಸುವಿಧಾ ಯೋಜನೆ (Anna Suvidha Yojane) ಯನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ.

ಏನಿದು ಅನ್ನ ಸುವಿಧಾ ಯೋಜನೆ (Anna Suvidha Yojane)?

ಬಿಪಿಎ್, ಅಂತ್ಯೋದಯ ಕಾರ್ಡ್ ಹೊಂದಿರುವ 80 ವರ್ಷ ಮೇಲ್ಪಟ್ಟ ವೃದ್ಧ, ವೃದ್ಧೆ ಪಾಲಿನ ಆಹಾರ ಪದಾರ್ಥಗಳನ್ನು ಆಯಾ ತಿಂಗಳು ಹೋಮ್ ಡೆಲಿವರಿ ಆ್ಯಪ್ ಮೂಲಕ ತಲುಪಿಸಲಾಗುವುದು. ಯೋಜನೆಯಿಂದ ರಾಜ್ಯದ ಅಂದಾಜಿ 80 ಸಾವಿರ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಸಾಮಾಜಿಕ ಭದ್ರತೆಯ ಕಳಕಳಿ ಇಟ್ಟುಕೊಂಡು ಇದನ್ನು ಜಾರಿಗೆ ತರಲಾಗುತ್ತಿದೆ.

ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಕನಸಿನೊಂದಿಗೆ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಉಚಿತ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿತ್ತು. ಈ ಬಾರಿ ನಾವು ನೀಡಿದ್ದ ಭರವಸೆಯಂತೆ ಹೆಚ್ಚುವರಿಯಾಗಿ 5 ಕೆಜಿ ಅ ಆಹಾರ ಧಾನ್ಯ ನೀಡಲು ತೀರ್ಮಾನಿಸಲಾಗಿತ್ತು.ಆದರೆ ಕೇಂದ್ರ ಸರ್ಕಾರದ ಅಸಹಕಾರ ಧೋರಣೆಯಿಂದಾಗಿ ಅಕ್ಕಿ ಲಭ್ಯವಾಗದ ಕಾರಣ ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಅಕ್ಕಿ ಬದಲು ಹಣ ವರ್ಗಾವಣೆ ವ್ಯವಸ್ಥೆಯನ್ನು ಜುಲೈ 10 ರಿಂದ ಜಾರಿಗೆ ತರಲಾಗಿದೆ.

ಪ್ರತಿ ತಿಂಗಳು ಬಿಪಿಎಲ್ ಕಾರ್ಡ್ ನಲ್ಲಿರುವ ಪ್ರತಿ ಸದಸ್ಯನಿಗೆ ಕೆಜಿಗೆ 34 ರೂಪಾಯಿಯಂತೆ 5 ಕೆಜಿ ಅಕ್ಕಿಗೆ 170 ರೂಪಾಯಿ ನಗದು ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ಹಾಕಲಾಗುತ್ತಿದೆ.

ಅದೇ ರೀತಿ, ಅಂತ್ಯೋದಯ ಕಾರ್ಡ್ ನಲ್ಲಿರುವ ನಾಲ್ಕು ಸದಸ್ಯರಿಗೆ ಕುಟುಂಬಕ್ಕೆ 170 ರೂಪಾಯಿಯಂತೆ ಐದು ಸದಸ್ಯರಿದ್ದರೆ 850 ರೂಪಾಯಿ, ಆರು ಸದಸ್ಯರಿದ್ದರೆ 1020 ರೂಪಾಯಿ ಹಣ ಅವರ ಖಾತೆಗೆ ಹಾಕಲಾಗುತ್ತಿದೆ.

ಇದನ್ನೂ ಓದಿ Baragala parihara amount:1.26 ಲಕ್ಷ ರೈತರಿಗೆ ಬರ ಪರಿಹಾರ ಜಮೆ

2024 ರ ಜನವರಿ ಅಂತ್ಯದವರಿಗೆ 4.02 ಕೋಟಿ ಫಲಾನುಭವಿಗಳಿಗೆ 4594 ಕೋಟಿ ರೂಪಾಯಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ನಲ್ಲಿ ತಿಳಿಸಿದರು.

ಅನ್ನಭಾಗ್ಯ ಹಣ ಜಮೆ ನಿಮಗೆಷ್ಟು ಜಮೆಯಾಗಿದೆ?

ಅನ್ನಭಾಗ್ಯ ಯೋಜನೆಯಡಿಯಲ್ಲಿ ಪಡಿತರ ಚೀಟಿದಾರರ ಕುಟುಂಬಗಳಿಗೆ ನೀಡಲಾಗುವು 5 ಕೆ.ಜಿ ಅಕ್ಕಿ ಹೆಚ್ಚುವರಿ ಬದಲಾಗಿ ಡಿಬಿಟಿ ಮೂಲಕ ನಗದು ಹಣವನ್ನು ಪಾವತಿ ಮಾಡಲಾಗುತ್ತಿದೆ. ನಿಮಗೆಷ್ಟು ಜಮೆಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಅನ್ನಭಾಗ್ಯ ಯೋಜನೆಯಡಿಯಲ್ಲಿ ನೋಂದಣಿ ಮಾಡಿಸಿಕೊಂಡ ಫಲಾನುಭವಿಗಳು ತಮ್ಮ ಯಾವ ಖಾತೆಗೆ ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://ahara.kar.nic.in/lpg/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ನಿಮಗೆ ರೇಶನ್ ಕಾರ್ಡ್ ನಮೂದಿಸಿ ಸ್ಟೇಟಸ್ ಚೆಕ್ ಮಾಡುವ ಲಿಂಕ್ ಗಳು ಕಾಣಿಸುತ್ತವೆ. ನೀವು ಯಾವ ಜಿಲ್ಲೆಯವರಾಗಿದ್ದೀರೋ ಆ ಜಿಲ್ಲೆಯ ಮೇಲ್ಗಡೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ಸ್ಟೇಟಸ್ ಆಫ್ ಡಿಬಿಟಿ ನೇರ ನಗದು ವರ್ಗಾವಣೆಯ ಸ್ಥಿತಿ ಪೇಜ್ ಕಾಣಿಸುತ್ತದೆ. ಅದ ಮೇಲೆ ಕ್ಲಿಕ್ ಮಾಡಿದ ನಂತರ   ತೆರೆದುಕೊಳ್ಳುವ ಪೇಜ್ ನಲ್ಲಿ ತಿಂಗಳು ಆಯ್ಕೆ ಮಾಡಿಕೊಳ್ಳಬೇಕು.  ನಿಮ್ಮ ರೇಶನ್ ಕಾರ್ಡ್ ನಮೂದಿಸಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ  ಗೋ ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಬಹುದು.

ಅಲ್ಲಿ ನಿಮ್ಮ ಹೆಸರು ಕಾಣಿಸುತ್ತದೆ. ನಂತರ ನಿಮ್ಮ ಕುಟುಂಬದಲ್ಲಿ ಎಷ್ಟು ಜನ ಸದಸ್ಯರಿದ್ದಾರೆ. ಅವರ ಖಾತೆಗೆ ಎಷ್ಟು ಹಣ ಜಮೆಯಾಗಿದೆ ಎಂಬ ಸಂಪೂರ್ಣ ಮಾಹಿತಿ ನಿಮಗೆ ಕಾಣಿಸುತ್ತದೆ. ಇದೇ ರೀತಿ ನಿಮ್ಮ ಸಂಬಂಧಿಕರ ಸ್ಟೇಟಸ್ ಸಹ ಚೆಕ್ ಮಾಡಬಹುದು.

Leave a Comment