ಪಿಎಂ ಕಿಸಾನ್ ಫಲಾನುಭವಿಗಳಿಗೆ 4 ಸಾವಿರ ರೂಪಾಯಿ ಜಮೆ

Written by Ramlinganna

Updated on:

Karnataka farmers got double benefit ಕರ್ನಾಟಕದ ರೈತರಿಗೆ ಡಬಲ್ ಗುಡ್ ನ್ಯೂಸ್ ಏನು ಗೊತ್ತೇ. ಮೂರು ದಿನಗಳ ಅಂತರದಲ್ಲಿ ರಾಜ್ಯದ ರೈತರ ಖಾತೆಗೆ 4 ಸಾವಿರ ಜಮೆಯಾಯಿತು. ಹೌದು, ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯ11ನೇ ಕಂತಿನ 2 ಸಾವಿರ ಹಾಗೂ ರಾಜ್ಯ ಸರ್ಕಾರದ ಹೆಚ್ಚುವರಿ 2 ಸಾವಿರ ರೂಪಾಯಿ ರೈತರ ಖಾತೆಗೆ ಜಮೆ ಮಾಡಲಾಯಿತು. ಇದೇನಿದು ಅಂದುಕೊಂಡಿದ್ದೀರಾ… ಇಲ್ಲಿದೆ ಸಂಪೂರ್ಣಮಾಹಿತಿ

ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ರೈತರಿಗೆ ಪ್ರತಿ ವರ್ಷ 6 ಸಾವಿರ ರೂಪಾಯಿ ಜಮೆ ಮಾಡುವಂತೆ ರಾಜ್ಯ ಸರ್ಕಾರವು ರೈತರಿಗೆ ಪ್ರತಿ ವರ್ಷ 4 ಸಾವಿರ ರೂಪಾಯಿ ಜಮೆ ಮಾಡುತ್ತಿದೆ. ಆದರೆ ಪಿಎಂ ಕಿಸಾನ್ ಯೋಜನೆಯಡಿ ರೈತರು ತಮ್ಮ ಹೆಸರು ನೋಂದಣಿ ಮಾಡಿಸಿದಂತೆ ಇಲ್ಲಿ ಇನ್ನೂ ಅನೇಕ ರೈತರು ತಮ್ಮ ಹೆಸರು ನೋಂದಣಿ ಮಾಡಿಸಿಲ್ಲ.

ಪಿಎಂ ಕಿಸಾನ್ ಯೋಜನೆಯಯಡಿಯಲ್ಲಿ ಫಲಾನುಭವಿಯಾಗಿರುವ ಎಲ್ಲಾ ರೈತರಿಗೆ  ರಾಜ್ಯ ಸರ್ಕಾರವು ಬಿಡುಗಡೆಮಾಡುವ ಹೆಚ್ಚುವರಿ ಹಣ ಜಮೆಯಾಗುವುದಿಲ್ಲ. ಇಲ್ಲಿ ಕೆಲವು ರೈತರಿಗೆ ಮಾತ್ರ ಈ ಹಣ ಜಮೆಯಾಗುತ್ತದೆ.  ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಣಿ ಮಾಡಿಸಿದ ರೈತರಿಗೆ ಈ ಹಣ ಜಮೆಯಾಗುತ್ತದೆ.

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ರಾಜ್ಯದ ರೈತರಿಗಾಗಿ ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ನೀಡಲಾಗುವ 6 ಸಾವಿರ ರೂಪಾಯಿಯೊಂದಿಗೆ  ಹೆಚ್ಚುವರಿಯಾಗಿ 4 ಸಾವಿರ ರೂಪಾಯಿ ನೀಡಲು ಘೋಷಣೆ ಮಾಡಿದ್ದರು.  ಇದರಂತೆ ಈಗಾಗಲೇ ರೈತರ ಖಾತೆಗೆ ಪ್ರತಿ ವರ್ಷ ಎರಡು ಕಂತುಗಳಲ್ಲಿ ಜಮೆ ಮಾಡಲಾಗುತ್ತಿದೆ.

ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ರೈತರ ಹೆಸರು ಚೆಕ್ ಮಾಡುವಂತೆ ರಾಜ್ಯ ಸರ್ಕಾರದ ಪಿಎಂ ಕಿಸಾನ್ ಯೋಜನೆಯ ರೈತರ ಫಲಾನುಭವಿಗಳ ಪಟ್ಟಿಯನ್ನು ಸಹ ನೋಡಬಹುದು. ಇದಕ್ಕಾಗಿ ರೈತರು ಯಾರ ಸಹಾಯವೂ ಇಲ್ಲದೆ ಮನೆಯಲ್ಲಿ ಕುಳಿತು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು ರೈತರು ಈ

https://fruitspmk.karnataka.gov.in/MISReport/FarmerDeclarationReport.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫ್ರೂಟ್ಸ್ ತಂತ್ರಾಂಶದ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಯಾವ ಜಿಲ್ಲೆಗೆ ಸೇರಿದವರೋ ಆ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಅದರ ನಂತರ ಹೋಬಳಿ ಆಯ್ಕೆ ಮಾಡಿಕೊಂಡ ನಂತರ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಗ್ರಾ ಆಯ್ಕೆ ಮಾಡಿಕೊಂಡ ನಂತರ ವೀಕ್ಷಿಸು ಮೇಲೆ ಕ್ಲಿಕ್ ಮಾಡಿದರೆ ಸಾಕು, ಆಗ ಇನ್ನೊಂದು ಪೇಜ್ ತೆರದೆುಕೊಳ್ಳುತ್ತದೆ. ಅಲ್ಲಿ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 4 ಸಾವಿರ ರೂಪಾಯಿ ಪ್ರತಿ ವರ್ಶ ಜಮೆಯಾಗುವ ರೈತರ ಪಟ್ಟಿ ಕಾಣುತ್ತದೆ. ಇಲ್ಲಿ ರೈತರು ತಮ್ಮ ಹೆಸರು ಚೆಕ್ ಮಾಡಬೇಕು. ಪಟ್ಟಿಯಲ್ಲಿ ರೈತರ ಹೆಸರಿದ್ದರೆ ಅವರಿಗೆ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ಬಿಡುಗಡೆ ಮಾಡುವ 4 ಸಾವಿರ ರೂಪಾಯಿ ಅವರ ಖಾತೆಗೆ ಜಮೆಯಾಗುತ್ತದೆ.

Karnataka farmers got double benefit ಪಿಎಂ ಕಿಸಾನ್ ಯೋಜನೆಯ 11 ನೇ ಕಂತಿನ ಹಣ ಮೇ 31 ರಂದು ರೈತರ ಖಾತೆಗೆ ಜಮೆ  

ಇಲ್ಲಿ ರೈತರು ಗಮನಿಸಬೇಕಾದ ಸಂಗತಿವೇನೆಂದರೆ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯೇ ಬೇರೆ. ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ರೈತರ ಖಾತೆಗೆ ಜಮೆಯಾಗುವ ರೈತರ ಪಟ್ಟಿಯೇ ಬೇರೆಯಾಗಿರುತ್ತದೆ.  ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಣಿ ಮಾಡಿಸಿದ ಬಹುತೇಕ ರೈತರ ಹೆಸರು ಕಂಡುಬರುತ್ತದೆ.

ಇದನ್ನೂ ಓದಿ ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಜಮೀನಿದೆ? ಚೆಕ್ ಮಾಡಿ

ರಾಜ್ಯ ಸರ್ಕಾರವು ಗುರುವಾರ ರಾಜ್ಯದ ರೈತರಿಗೆ ಹೆಚ್ಚುವರಿಯಾಗಿ ಹಣ ಬಿಡುಗಡೆ ಮಾಡಿತು. ಈ ಹಣವನ್ನು ಸರ್ಕಾರವು ಆಧಾರ್ ಆಧಾರಿತ ಡಿಬಿಟಿ ಮೂಲಕ ರೈತರ ಖಾತೆಗೆ ಜಮೆ ಮಾಡಿತು. ಆದರೆ ಬಹುತೇಕ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಖಾತೆಗೆ  ಈ ಹಣ ಜಮೆಯಾಗಿಲ್ಲ.  ಬಹುತೇಕ ರೈತರು ಪಿಎಂ ಕಿಸಾನ್ ಯೋಜನೆಯ ಹಣವೆಂದೇ ಭಾವಿಸಿದ್ದಾರೆ.

ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯ 11 ನೇ ಕಂತು ಮೇ 31 ರಂದು ರೈತರ ಖಾತೆಗೆ ಜಮೆಯಾಯಿತು. ರಾಜ್ಯ ಸರ್ಕಾರವು ಜೂನ್ 2 ರಂದು ರೈತರ ಖಾತೆಗೆ ಹಣ ಜಮೆ ಮಾಡಿತು.  ರಾಜ್ಯ ಸರ್ಕಾರವು ಜಮೆ ಮಾಡಿದ ಹಣವೇ ಬೇರೆ. ಕೇಂದ್ರ ಸರ್ಕಾರದ ಪಿಎಂಕಿಸಾನ್ ಯೋಜನೆಯೇ ಬೇರೆಯಾಗಿದೆ.

Leave a Comment