ಕಲಬುರಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣ ನೀಡಲು ಸಂಪನ್ಮೂಲ ಕೇಂದ್ರಗಳಿಗೆ ಬ್ಲಾಕ್ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರು (ಪ್ರಾಥಮಿಕ) ಹಾಗೂ ಬ್ಲಾಕ್ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರು (ಪ್ರೌಢ) ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸಲು ಅರ್ಹ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ತಿಳಿಸಿದ್ದಾರೆ.

ತಾಲೂಕುವಾರು ಖಾಲಿಯಿರುವ ಹುದ್ದೆಗಳ ವಿವರ ಇಂತಿದೆ. (ಪ್ರಸ್ತುತ ಸಾಲಿನ ವರ್ಗಾವಣೆ ಆದೇಶದ ಅನುಸಾರ ಸ್ಥಳ ನಿಯುಕ್ತಿಗೊಳಿಸಲಾಗುತ್ತದೆ). ಅಫಜಲಪೂರ ತಾಲೂಕು: ಪ್ರಾಥಮಿಕ ವಿಭಾಗ-1 ಹುದ್ದೆ ಮತ್ತು ಪ್ರೌಢ ವಿಭಾಗ-2 ಹುದ್ದೆ. ಆಳಂದ ತಾಲೂಕು: ಪ್ರೌಢ ವಿಭಾಗ-2 ಹುದ್ದೆ. ಚಿಂಚೋಳಿ ತಾಲೂಕು: ಪ್ರೌಢ ವಿಭಾಗ-2 ಹುದ್ದೆ.  ಚಿತ್ತಾಪುರ ತಾಲೂಕು: ಪ್ರಾಥಮಿಕ ವಿಭಾಗ-1 ಹುದ್ದೆ ಮತ್ತು ಪ್ರೌಢವಿಭಾಗ-2 ಹುದ್ದೆ. ಕಲಬುರಗಿ (ಉ.ವ): ಪ್ರೌಢವಿಭಾಗ 2 ಹುದ್ದೆ. ಕಲಬುರಗಿ(ದ.ವ): ಪ್ರೌಢವಿಭಾಗ-2 ಹುದ್ದೆ. ಜೇವರ್ಗಿ ತಾಲೂಕು: ಪ್ರಾಥಮಿಕ ವಿಭಾಗ-1 ಹುದ್ದೆ ಮತ್ತು ಪ್ರೌಢ ವಿಭಾಗ-2 ಹುದ್ದೆ ಹಾಗೂ ಸೇಡಂ ತಾಲೂಕು: ಪ್ರಾಥಮಿಕ ವಿಭಾಗ-1 ಹುದ್ದೆ ಮತ್ತು ಪ್ರೌಢಶಾಲಾ ವಿಭಾಗ-2 ಹುದ್ದೆಗಳು.

ಪ್ರಾಥಮಿಕ ಬಿ.ಐ.ಇ.ಆರ್.ಟಿ ಹುದ್ದೆಗೆ ವಿಶೇಷ ಡಿ.ಇಡಿ, ಎಮ್.ಟಿ.ಟಿ.ಸಿ. ಅಥವಾ ವಿಶೇಷ ಬಿ.ಎಡ್ ವಿದ್ಯಾರ್ಹತೆ ಹೊಂದಿರಬೇಕು. ಪ್ರೌಢ ಬಿ.ಐ.ಇ.ಆರ್.ಟಿ ಹುದ್ದೆಗೆ ಬಿ.ಎ., ಬಿ.ಇಡ್ ಹಾಗೂ ವಿಶೇಷ ಬಿ.ಇಡಿ ವಿದ್ಯಾರ್ಹತೆ ಹೊಂದಿರಬೇಕು. ಅರ್ಹ ಶಿಕ್ಷಕರು ತಮ್ಮ ಮನವಿ ಅರ್ಜಿಯನ್ನು  ಸೇವಾ ವಿವರದೊಂದಿಗೆ ಸಂಬAಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಗತ್ಯ ದೃಢೀಕೃತ ದಾಖಲೆಗಳೊಂದಿಗೆ 2021ರ ಅಕ್ಟೋಬರ್ 18 ರೊಳಗಾಗಿ ಸಲಿಸಬೇಕು.

ಇದನ್ನೂ ಓದಿ :  ಗ್ರಾಪಂ ಗ್ರೇಡ್-2 ಕಾರ್ಯದರ್ಶಿ-13, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರು, ದೈಹಿಕ ಶಿಕ್ಷಕರು, ಪ್ರೌಢ ಶಾಲಾ ಮುಖ್ಯೋಪಾದ್ಯಾಯರು/ತತ್ಸಮಾನ ವೃಂದ ಹಾಗೂ ವಿಶೇ಼ಷ ಶಿಕ್ಷಕರು (ಚಿತ್ರಕಲಾ, ಸಂಗೀತಾ, ನೃತ್ಯ, ನಾಟಕ, ವೃತ್ತಿ ಇತರೆ) ಶಿಕ್ಷಕರು, ಸಿ.ಆರ್.ಪಿ, ಬಿ.ಆರ್.ಪಿ. ಗಳನ್ನೂಳಗೊಂಡAತೆ ಇಲಾಖೆಯ ಬೊಧಕ/ಬೋಧಕೆತರ ವೃಂದದ ಇನ್ನಾವುದೇ ಸಿಬ್ಬಂದಿ/ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *