ಗ್ರಾಪಂ ಗ್ರೇಡ್-2 ಕಾರ್ಯದರ್ಶಿ-13, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Written by By: janajagran

Published on:

ಕಲಬುರಗಿ ಜಿಲ್ಲಾ ಪಂಚಾಯತಿಯಲ್ಲಿನ ಗ್ರಾಮ ಪಂಚಾಯತ್ ಗ್ರೇಡ್-2 ಕಾರ್ಯದರ್ಶಿ-13 ಹುದ್ದೆ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ-2 ಹುದ್ದೆ ಒಟ್ಟು 15 ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅರ್ಹ ಕರವಸೂಲಿಗಾರರಿಂದ ಅರ್ಜಿ ಆಹ್ವಾನಿಸಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಷ್ ಶಸಿ ಅವರು ತಿಳಿಸಿದ್ದಾರೆ.

ಗ್ರಾಮ ಪಂಚಾಯತ್ ಗ್ರೇಡ್ -2 ಕಾರ್ಯದರ್ಶಿ ಹುದ್ದೆಗಳ ಪೈಕಿ ಹೈ.ಕ.ವೃಂದಕ್ಕೆ 8 (ಎಸ್.ಸಿ-6 ಮತ್ತು ಎಸ್.ಟಿ-2) ಮತ್ತು ಸ್ಥಳೀಯೇತರ ವೃಂದಕ್ಕೆ 5 (ಎಸ್.ಸಿ-4 ಮತ್ತು ಎಸ್.ಟಿ-1) ಹುದ್ದೆಗಳು ಮೀಸಲಿರಿಸಿದೆ. ಅದೇ ರೀತಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕ 2  (ಎಸ್.ಸಿ-1 ಮತ್ತು ಎಸ್.ಟಿ-1) ಹುದ್ದೆಗಳು ಸ್ಥಳೀಯೇತರಿಗೆ ಮೀಸಲಿಡಲಾಗಿದೆ.

ಅರ್ಜಿ ಶುಲ್ಕ 250 ರೂಪಾಯಿ ಇದ್ದು,  ಅಧಿಸೂಚನೆ ಹೊರಡಿಸಿದ ದಿನದಿಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ಕಲಬುರಗಿ ಇವರ ಹೆಸರಿನಲ್ಲಿ ಪೋಸ್ಟಲ್ ಆರ್ಡರ್ ಪಡೆದು ಜಿಲ್ಲಾ ಪಂಚಾಯತ್ ಆಡಳಿತ ಶಾಖೆಯಲ್ಲಿ ಕಚೇರಿ ಸಮಯದಲ್ಲಿ ಸಲ್ಲಿಸಿ ನಿಗದಿತ ಅರ್ಜಿ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲಾತಿಗಳನ್ನು ಲಗತ್ತಿಸಿ 2021ರ ಅಕ್ಟೋಬರ್ 7 ರೊಳಗಾಗಿ ಅರ್ಜಿ ಸಲ್ಲಿಸಬೇಕು.

ಬಿಲ್ ಕಲೆಕ್ಟರ್ ಗಳಾಗಿ 8 ಹಾಗೂ 10 ವರ್ಷ ಸೇವೆ ಪೂರೈಸಿರುವ ಹಾಗೂ ಜೇಷ್ಠತಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಕನಿಷ್ಠ ಪಿಯುಸಿ (ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ನ್ಯಾಯಾಲಯ ಹೊರಡಿಸಿರುವ ಆದೇಶಕ್ಕೆ ಒಪ್ಪಿ ಅರ್ಜಿ ಸಲ್ಲಿಸಬೇಕು) ವಿದ್ಯಾರ್ಹತೆ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರುವ ಕುರಿತು ಪ್ರಮಾಣಪತ್ರ ಸಲ್ಲಿಸಬೇಕು.

ಇದನ್ನೂ ಓದಿ : ಬೆಳೆ ಸಾಲಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರು ಮೊಬೈಲ್ ನಲ್ಲಿಯೇ ಚೆಕ್ ಮಾಡಿ.. ಇಲ್ಲಿದೆ ಸಂಪೂರ್ಣ ಮಾಹಿತಿ

ಉದ್ಯೋಗಕ್ಕಾಗಿ ತಹಶೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಲ್ಲಿಸಬೇಕು. ಗ್ರಾಮೀಣ ಅಭ್ಯರ್ಥಿ, ಮಾಜಿ ಸೈನಿಕ, ಕನ್ನಡ ಮಾಧ್ಯಮ ಹಾಗೂ ನಿರಾಶ್ರಿತ ಅಭ್ಯರ್ಥಿ ವಿಶೇಷ ಮೀಸಲಾತಿ ಕೋರಿದಲ್ಲಿ ಅದಕ್ಕನುಗುಣವಾಗಿ ಪ್ರಮಾಣ ಪತ್ರ ಸಲ್ಲಿಸಬೇಕು.

ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ www.kalburagi.nic.in ವೆಬ್‌ಸೈಟ್‌ನ್ನು ವೀಕ್ಷಿಸಲು ಕೋರಲಾಗಿದೆ.

Leave a Comment