ಜಂಬು ನೆರಳೆ ಬೆಳೆಸಿ ಕೈತುಂಬಾ ಆದಾಯ ಗಳಿಸುವುದು ಹೇಗೆ?

Written by By: janajagran

Updated on:

jamun farming ರಾಸಾಯನಿಕ ಕ್ರಿಮಿನಾಶಕ ಬಳಸದೆ ಕೇವಲ ನೀರು ಹರಿಸಿ ಆಗಾಗ ಗೊಬ್ಬರ ಹಾಕಿ ಸಹಜ ಬೇಸಾಯ ಪದ್ದತಿಯಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ನೇರಳೆ ಬೆಳೆದು (jamun farming) ಜೀವನ ಪೂರ್ತಿ ಲಾಭ ಗಳಿಸಬಹುದು.

ಹೌದು,  ಹೊಲದ ಬದುಗಳಲ್ಲಿಯೂ ಸಹ ಈ ಗಿಡಗಳನ್ನು ನೆಟ್ಟು ಹೆಚ್ಚಿನ ಆದಾಯ ಗಳಿಸಬಹುದು. ಇತರ ಬೆಳೆಗಳಿಗೆ ಹೆಚ್ಚು ನೀರು ಬೇಕಾಗುತ್ತದೆ. ಆದರೆ ನೇರಳೆ ಮರಗಳಿಗೆ ಆರಂಭದಲ್ಲಿ 6 ತಿಂಗಳ ಕಾಲ ನೀರು ಹರಿಸಿದರೆ ಸಾಕು, ನಂತರ ತಾನಾಗಿಯೇ ಗಿಡ ಬೆಳೆಯುತ್ತದೆ. ಕಡಿಮೆ ಖರ್ಚಿಯಲ್ಲಿ  ಹೆಚ್ಚು ಆದಾಯ ಕೊಡುವ ನೇರಳೆ ಹಣ್ಣಿನ ಬೆಳೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ನೇರಳೆಯನ್ನು ಕರ್ನಾಟಕದ ಮಲೆನಾಡು ಮತ್ತು ಒಣಹವೆ ಪ್ರದೇಶಗಳಲ್ಲಿ ಬೆಳೆಯಬಹುದು. ಇದನ್ನು ಚೌಗು ಪ್ರದೇಶಗಳಲ್ಲಿಯೂ ಹಾಗೂ ಅತೀ ತೇವವಿರುವ ಪ್ರದೇಶಗಳಲ್ಲಿಯೂ ಬೆಳೆಯಬಹುದು. ಆಳವಾದ ಕೆಂಪುಗೋಡು ಮಣ್ಣು ಮತ್ತು ಮಿಶ್ರಿತ ಫಲವತ್ತಾದ ಮಣ್ಣು ಈ ಬೆಳೆಗೆ ಸೂಕ್ತ.

jamun farming ಜಂಬು ನೇರಳೆ ಬೇಸಾಯ ಸುಲಭ 

ಜಂಬು ತಳಿಯನ್ನು ಮಳೆಗಾದಲ್ಲಿ ಗಿಡ ನೆಟ್ಟು, ಜಾನುವಾರು ಬಾಯಿ ಹಾಕದಂತೆ ನೋಡಿಕೊಂಡರೆ ಸಾಕು., ಮೂರು-ನಾಲ್ಕು ವರ್ಷದಲ್ಲಿ ಬೆಳೆದು ನಿಲ್ಲುತ್ತದೆ. ಗಿಡವಾಗಿರುವಾಗಲೇ ಕಾಯಿ ಬಿಡಲು  ಪ್ರಾರಂಭಿಸಿ ವರ್ಷದಿಂದ ವರ್ಷಕ್ಕೆ ಫಸಲು ಹೆಚ್ಚುತ್ತಾ ಹೋಗುತ್ತದೆ. ಹುಳು ಬಾಧೆಗೆ ಒಂದೆರಡು ಸಲ ಔಷಧ ಸಿಂಪರಣೆ ಮಾಡಿದರೆ ಸಾಕು, ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಗಿಡಗಳನ್ನು 10 ರಿಂದ 15 ಅಡಿ ಎತ್ತರ ಬೆಳೆದ ನಂತರ ಹೆಚ್ಚು ಎತ್ತರಕ್ಕೆ ಹೋಗದಂತೆ ಕತ್ತರಿಸಬೇಕು. ರಾಸಾಯನಿಕ ಬಳಸದೆ ಇಧ್ದರೆ ಸೂಮಾರು 70 ವರ್ಷಗಳ ಕಾಲ ಫಲ ನೀಡುತ್ತದೆ ಎಂಬುದು ಕೃಷಿ ತಜ್ಞರ ಅಭಿಪ್ರಾಯವಾಗಿದೆ.

ತೋಟಗಾರಿಕೆ ಇಲಾಖೆಯಿಂದ ಕಡಿಮೆ ಬೆಲೆಯಲ್ಲಿ ಜಂಬು ನೇರಳೆ ಸಸಿಗಳನ್ನು ತಂದು ಕೃಷಿ ಭೂಮಿಯ ಬದುಗಳಲ್ಲಿ ನಾಟಿ ಮಾಡಿ ಸಾವಯವ ಗೊಬ್ಬರ ಮತ್ತು ಮಿತವಾದ ನೀರನ್ನು ನೀಡುತ್ತಾ ಬೆಳೆಸಿದರೂ ಆದಾಯ ಗಳಿಸಬಹುದು. ಜೂನ್ ಮತ್ತು ಜುಲೈ ತಿಂಗಳಲ್ಲಿ  ಇದರ ಬೆಲೆ ಬಂಗಾರದಂತಿರುತ್ತದೆ. ಇದನ್ನು ಬೆಳೆದಂತಹ ರೈತರು ಮುಂಗಾರಿನ ಆರಂಭದಲ್ಲಿ ಆರ್ಥಿಕವಾಗಿ ಸಬಲರಾಗಬಹುದು.

ನೇರಳೆ ಹಣ್ಣುಗಳನ್ನು ನಗರ ಪ್ರದೇಶಗಳಲ್ಲಿಯೂ ಸಹ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಕಾಡಿಗೆ ಸೀಮಿತವಾಗಿದ್ದ ನೇರಳೆ ಗಿಡದ ಸುಧಾರಿತ ತಳಿಗಳನ್ನು ತಂದು ಜಮೀನಿನಲ್ಲಿ ಬೆಳೆದರೆ ಸಾಕು ಜೇಬು ತುಂಬ ಆದಾಯ ಗಳಿಸಬಹುದು. ಇದಕ್ಕಾಗಿ ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ.

ನೇರಳೆ ಹಣ್ಣಿನ ತಳಿಗಳು (Variety of jamun tree) :

ನೇರಳೆಯಲ್ಲಿ ವೆಜ್ಞಾನಿಕವಾಗಿ ಜವಾರಿ, ಹೆಬ್ರಿಡ್ ತಳಿಗಳನ್ನು ಸಾಮಾನ್ಯವಾಗಿ ಬೆಳೆಯಲಾಗುತ್ತದೆ. ಅವುಗಳಲ್ಲಿ ಹೆಬ್ರಿಡ್ ಜಾಂಬೊಲಿನ್, ರಾಜಾ ಜಾಂಬೊಲಿನ್, ಸಿಡ್ಲೇಸ್ ಜಾಂಬೊಲಿನ್, ನರೇಂದ್ರನ್ ಜಾಂಬೊಲಿನ್ ಪ್ರಮುಖ. ಹಳ್ಳಿಗರು ಹಣ್ಣಿನ ಗಾತ್ರಕ್ಕೆ ಅನುಗುಣವಾಗಿ ಎಮ್ಮೆ ನೇರಳೆ, ನಾಯಿ ಗೋಲಿ(ದುಂಡು) ನೇರಳೆ ಮುಂತಾದ ತಳಿಗಳನ್ನು ಬೆಳೆಯುತ್ತಾರೆ. ರೈತರು ತಮ್ಮ ಜಮೀನಿಗೆ ಯಾವ ತಳಿ ಸೂಕ್ತವೆಂಬುದನ್ನು ಕೃಷಿ ತಜ್ಞರೊಂದಿಗೆ ಚರ್ಚಿಸಿ ಸಸಿಗಳನ್ನು ಖರೀದಿಸಿಕೊಳ್ಳಬೇಕು.

ಎಜೆಜಿ-85 (AJG-85)

ಇದು ದೊಡ್ಡ ಗಾತ್ರದ ಹಣ್ಮುಕೊಡುವ ತಳಿಯಾಗಿದ್ದು, ಶೇ. 88 ರಷ್ಟು ರುಚಿಯಾದ ತಿರುಳನ್ನು ಹೊಂದಿರುತ್ತದೆ. ಇದು ಶೇ. 17 ರಷ್ಟು ಸಕ್ಕರೆ ಅಂಶವನ್ನು ಹೊಂದಿರುತ್ತದೆ. ಅಲ್ಲದೆ ಅತ್ಯದಿಕ ಆರ್ಥಿಕ ಇಳುವರಿಯನ್ನು ಕೊಡುತ್ತದೆ.

ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ

ಸಾಮಾನ್ಯವಾಗಿ ನೇರಳೆ ಹಣ್ಣಿನ ಗಿಡಗಳು ಜನವರಿ, ಫೆಬ್ರುವರಿ ತಿಂಗಳಲ್ಲಿ ಹೂ ಬಿಟ್ಟು ಮಾರ್ಚ್ ತಿಂಗಳಲ್ಲಿ ಕಾಯಿ ಕಟ್ಟಿ ಏಪ್ರೀಲ್ ಮೇ ತಿಂಗಳಲ್ಲಿ ಹೇರಳವಾಗಿ ಹಣ್ಣು ಸುರಿಯುತ್ತದೆ. ಕಾಯಿ ಹಣ್ಣಾಗುವ ಕಾಲಕ್ಕೆ ನೀಲಿ ಕೆಸರಿ ಮಿಶ್ರಿತ ಕೆಂಪು ಬಣ್ಣಕ್ಕೆ ತಿರುಗುತ್ತದೆ. ನೇರಳೆ ಸಸಿ ಒಂದು ನಾಲ್ಕು ರಿಂದ ಐದು ವರ್ಷಕ್ಕೆ ಹಣ್ಣು ಬಿಡಲಾರಂಭಿಸಿ ಸುಧೀರ್ಘ ಅರವತ್ತು ವರ್ಷದವರೆಗೆ ಗುಣಮಟ್ಟದ ಹಣ್ಣುಗಳನ್ನು ನೀಡುತ್ತದೆ.

jamun farming ನೇರಳೆ ಹಣ್ಣುಗಳ ಸೇವನೆಯಿಂದಾಗುವ ಪ್ರಯೋಜನಗಳು

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೂಳೆಗಳು ಬಲಿಷ್ಠಗೊಳ್ಳುತ್ತವೆ. ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗುವುದು. ಊಟದ ನಂತರ ಸೇವಿಸಿದರೆ ದೇಹದ ಉಷ್ಣತೆ ಕಡಿಮೆಯಾಗುವುದು. ರಕ್ತವನ್ನು ಶುದ್ಧಿಮಾಡುವುದು. ಹಣ್ಣಿನ ರಸ ಸೇವನೆಯಿಂದ ಕೆಮ್ಮು ಮತ್ತು ಉಬ್ಬಸವನ್ನು ಕಡಿಮೆ ಮಾಡುವುದು. ಕೆಟ್ಟ ಉಸಿರಾಟದ ಸಮಸ್ಯೆಯನ್ನು ನಿವಾರಿಸುವುದು. ಹಣ್ಣಿನ ಪೇಸ್ಟಿಗೆ ಸಾಸಿವೆ ಎಣ್ಣೆ ಕಲಸಿ ಚರ್ಮದ ಉರಿ ಇರುವ ಜಾಗಕ್ಕೆ ಲೇಪಿಸಿದರೆ ಉರಿ ಶಮನವಾಗುವುದು.

ಬೇಡಿಕೆಯೂ ಹೆಚ್ಚು (jamun demand increased) :

ಮಾರುಕಟ್ಟೆಯಲ್ಲಿ ನೇರಳೆ ಹಣ್ಣಿನ ಹೋಲ್ ಸೇಲ್ ಬೆಲೆ 100 ರಿಂದ 150 ರೂಪಾಯಿ ಇರುತ್ತದೆ. ವ್ಯಾಪಾರಿಗಳು ಇದಕ್ಕೆ  200 ರಿಂದ 250 ರೂಪಾಯಿಗೆ ಮಾರಾಟ ಮಾಡುತ್ತಾರೆ. 100 ಗ್ರಾಂಗೆ 20 ರೂಪಾಯಿಯಂತೆ ಮಾರಾಟ ಮಾಡುವ ದುಬಾರಿ ಹಣ್ಣು ಇದಾಗಿದೆ. ಮರದಲ್ಲಿ ಮೊಗ್ಗು ಇರುವಾಗಲೇ ವರ್ತಕರು ನೇರಳ ಮರಗಳ ಗುತ್ತಿಗೆ ಪಡೆಯುವುದರಿಂದ ದರ ಏರಿಕೆಯಾಗುತ್ತದೆ.

ರೈತಬಾಂಧವರಿಗೆ ನರೇಗಾ ಯೋಜನೆಯಡಿಯಲ್ಲಿ ಸಸಿ ನಾಟಿ ಮಾಡುವವರೆಗೂ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದ್ದರಿಂದ ರೈತರು ನೇರಳೆ ಹಣ್ಣನ್ನು ಬೆಳೆದು ಲಾಭಮಾಡಿಕೊಳ್ಳಬಹುದು. ನಿಮ್ಮ ಹತ್ತಿರದ ರೈತ ಸಂಪರ್ಕಕ್ಕೆ ಅಥವಾ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ಸಸಿಗಳನ್ನು ಪಡೆಯಬಹುದು.

Leave a Comment