ಮುಂಗಾರು ಹಂಗಾಮಿನ ಈ ಬೆಳೆಗಳಿಗೆ ವಿಮೆ ಹಣ ಬಿಡುಗಡೆ

Written by Ramlinganna

Updated on:

Interim Crop Insurance Compensation ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2022 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತೀವೃಷ್ಟಿಯಿಂದ ಹಾನಿಗೊಳಗಾದ ಆಲುಗಡ್ಡೆ, ಕೆಂಪು ಮೆಣಸಿನ ಕಾಯಿ, ಹತ್ತಿ, ಗೋವಿನಜೋಳ ಹಾಗೂ ಶೇಂಗಾ ಬೆಳೆದ ರೈತರಿಗೆ ಮಧ್ಯಂತರ ಪರಿಹಾರ ಬಿಡುಗಡೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

ಈ ಕುರಿತು ಟ್ವಿಟ್ ಮೂಲಕ ಮಾಹಿತಿ ನೀಡಿರುವ ಸಚಿವರು, ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದ 63609 ರೈತರಿಗೆ ವಿಮೆ ಹಣ ಬಿಡುಗಡೆಯಾಗಲಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 63609 ರೈತರಿಗೆ 57 ಕೋಟಿ ಮಧ್ಯಂತರ ಬೆಳೆ ವಿಮೆ ಪರಿಹಾರ ಮಂಜೂರಾಗಿದೆ ಎಂದು ತಿಳಿಸಿದ್ದಾರೆ.

ಯೋಜನೆಯ ಅನುಷ್ಠಾನ ಕಂಪನಿ ಐಸಿಐಸಿಐ ಲೋಂಬಾರ್ಡ್. ಜಿಐಸಿ ಲಿಮಿಟೆಡ್ ಕಂಪನಿಯ ಮುಖ್ಯ ಕಚೇರಿಯಿಂದ ಬೆಂಗಳೂರಿನ ಪ್ರಾದೇಶಿಕ ಕಚೇರಿಗೆ ಹಣ ವರ್ಗಾವಣೆಯಾಗಿದ್ದು, ಆಧಾರ್ ಜೋಡಣೆಯಾಗಿರುವ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಸಂದಾಯ ಮಾಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಈ ಪ್ರಕ್ರಿಯೆ ಮುಗಿದ ತಕ್ಷಣವೇ ಧಾರವಾಡ ಜಿಲ್ಲೆಯ 63609 ಸಾವಿರ ರೈತರಿಗೆ ನೇರವಾಗಿ ಅವರ ಖಾತೆಗಳಿಗೆ ವಿಮಾ ಹಣ ಜಮೆಯಾಗಲಿದೆ. ಸಧ್ಯ ಮಧ್ಯಂತರವಿಮೆ ಹಣ ಬಿಡುಗಡೆಯಾಗಲಿದ್ದು, ಸಂಪೂರ್ಣ ವಿಮೆಯು ಬೆಳೆ ಕಟಾವು ಸಮೀಕ್ಷಾ ವರದಿ ಸಲ್ಲಿಕೆಯಾದ ನಂತರ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಈ ಐದು ಬೆಳೆಗಳನ್ನು ಹೊರತುಪಡಿಸಿ ಇನ್ನುಳಿದ ಬೆಳೆಗಳಿಗೆ ವಿಮೆ ಮಾಡಿಸಿದ ರೈತರಿಗೆ ಸ್ಥಳೀಯ ನಿರ್ಧಿಷ್ಟ ಪ್ರಕೋಪಗಳ ಪರಿಹಾರದಡಿ ವಿಮೆ ಪ್ರಕರಣಗಳನ್ನು ಬೆಳೆ ಕಟಾವು ಸಮೀಕ್ಷೆ ಆಧಾರದಲ್ಲಿ ಇತ್ಯರ್ಥಗೊಳಿಸಿ ಬೆಳೆ ಪರಿಹಾರ ಸಂದಾಯ ಪ್ರಕ್ರಿಯೆ ಈಗಾಗಲೇ ಪ್ರಾರಂಭಿಸಲಾಗಿದೆ. ಆದಷ್ಟು ಬೇಗನೇ ವಿಮಾ ಸಂದಾಯಕ್ಕೆ ಕೃಷಿ ಇಲಾಖೆ ಹಾಗೂ ವಿಮಾ ಕಂಪನಿಗಳ ಉನ್ನತ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.  ಇದಕ್ಕಾಗಿ ಯೋಜನೆ ರೂಪಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಅವರಿಗೆ ಧನ್ಯವಾದಗಳನ್ನು ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

Interim Crop Insurance Compensation ಎಕರೆಗೆ ಯಾವ ಬೆಳೆಗೆ ಎಷ್ಟು ಜಮೆಯಾಗಬಹುದು? ಮೊಬೈಲ್ ನಲ್ಲೇ ಚೆಕ್ ಮಾಡಿ

2022-23ನೇ ಸಾಲಿನ ಮುಂಗಾರು ಹಂಗಾಮಿಗೆ ಆಲುಗಡ್ಡೆ, ಕೆಂಪು ಮೆಣಸಿನ ಕಾಯಿ, ಹತ್ತಿ, ಗೋವಿನಜೋಳ,  ಹಾಗೂ ಶೇಂಗಾ ಬೆಳೆಗಳಿಗೆ ವಿಮೆ ಮಾಡಿಸಿದ ರೈತರಷ್ಟೇ ಅಲ್ಲ ಇತರ ಜಿಲ್ಲೆಯ ರೈತರೂ ಸಹ  ತಮಗೆ ಎಷ್ಟು ವಿಮೆ ಜಮಯಾಗಬಹುದೆಂದು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು ರೈತರು ಈ

https://www.samrakshane.karnataka.gov.in/publichome.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Farmers ಕೆಳಗಡೆ ಕಾಣುವ Premium Calculator ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಜಿಲ್ಲೆ ಆಯ್ಕೆ, ತಾಲೂಕು, ಹೋಬಳಿ ಹಾಗೂ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ನೀವು ಯಾವ ಬೆಳೆಗೆ ವಿಮೆ ಮಾಡಿಸಿದ್ದೀರೋ ಆ ಬೆಳೆ ಆಯ್ಕೆ ಮಾಡಿಕೊಂಡು ಎಷ್ಟು ಎಕರೆ ಹಾಗೂ ಗುಂಟೆಗೆ ವಿಮೆ ಮಾಡಿಸಿದ್ದೀರೋ ಅದನ್ನುನಮೂದಿಸಿ Show Premium  ಮೇಲೆ ಕ್ಲಿಕ್ ಮಾಡಿದ ಮೇಲೆ Sum Insured  ಕೆಳಗಡೆ ನಿಮಗೆಷ್ಟು ಜಮೆಯಾಗಲಿದೆ ಎಂಬುದನ್ನು ನಮೂದಿಸಲಾಗಿರುತ್ತದೆ. ನೀವೆಷ್ಟು ಪ್ರಿಮಿಯಂ ಕಟ್ಟಿದ್ದೀರಿ ಎಂಬುದು ಫಾರ್ಮರ್ ಶೇರ್ ಕೆಳಗಡೆ ನಮೂದಿಸಲಾಗಿರುತ್ತದೆ.

ಇದನ್ನೂ ಓದಿ ಮುಟೇಶನ್ ಪ್ರಕಾರ ನಿಮ್ಮ ಹೆಸರಿಗೆ ಎಷ್ಟು ಎಕರೆ ಜಮೀನಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಉದಾಹರಣೆಗೆ ನೀವು ಮೆಣಸಿನಕಾಯಿಗೆ ಬೆಳೆ ವಿಮೆ ಮಾಡಿಸಿದ್ದರೆ ನಿಮಗೆ ಎಕರೆಗೆ 28733 ರೂಪಾಯಿ ಜಮೆಯಾಗುವ ಸಾಧ್ಯತೆಯಿದೆ. ಆಲುಗಡ್ಡೆಗೆ  ವಿಮೆ ಮಾಡಿಸಿದ್ದರೆ ನಿಮಗೆ 28329 ರೂಪಾಯಿ ಜಮೆಯಾಗುವ ಸಾಧ್ಯತೆಯಿದೆ. ಶೇಂಗಾ ಬೆಳೆಗೆ ವಿಮೆ ಮಾಡಿಸಿದ್ದರೆ 18616 ರೂಪಾಯಿ ಬೆಳೆ ವಿಮೆ ಜಮೆಯಾಗುವ ಸಾಧ್ಯತೆಯಿದೆ. ಹತ್ತಿ ಬೆಳೆಗೆ ವಿಮೆ ಮಾಡಿಸಿದ್ದರೆ ನಿಮಗೆ 17402 ರೂಪಾಯಿ ಜಮೆಯಾಗುವ ಸಾಧ್ಯತೆಯಿದೆ.

ಬೆಳೆ ವಿಮೆ ಜಮೆಯಾಗಿಲ್ಲವೇ? ಈ ಸಹಾಯವಾಣಿ ನಂಬರಿಗೆ ಕರೆ ಮಾಡಿ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ ರೈತರು ತಮಗೆ ಬೆಳೆ ವಿಮೆ ಹಣ ಜಮೆ ಕುರಿತಂತೆ ಮಾಹಿತಿ ಕೇಳಲು 1800 180 1551 ಗೆ ಕರೆ ಮಾಡಿ ವಿಚಾರಿಸಬಹುದು.

1 thought on “ಮುಂಗಾರು ಹಂಗಾಮಿನ ಈ ಬೆಳೆಗಳಿಗೆ ವಿಮೆ ಹಣ ಬಿಡುಗಡೆ”

Leave a Comment