ಇಂದೇ ಬೆಳೆ ವಿಮೆ ಮಾಡಿಸಿ ಪರಿಹಾರ ಪಡೆಯಿರಿ

Written by Ramlinganna

Updated on:

Insure your crop today ರೈತರು ತಮ್ಮ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಬೇಕೆಂದು ಕೃಷಿ ಇಲಾಖೆ ಕಳೆದೆರಡು ತಿಂಗಳಿಂದ ಸತತವಾಗಿ ಪ್ರಯತ್ನಿಸುತ್ತಿದೆ. ಬೆಳೆ ವಿಮೆ ಮಾಡಿಸದೆ ಇರುವ ರೈತರು ಇಂದೇ ಬೆಳೆ ವಿಮೆ ಮಾಡಿಸಿ ಬೆಳೆ ವಿಮೆ ಪರಿಹಾರ ಪಡೆಯಬಹುದು.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ರೈತರಿಗಾಗಿ ಜಾರಿಗೆ ತರಲಾಗಿದೆ. ರೈತರ ಬೆಳೆ ಅತೀವೃಷ್ಟಿ, ಪ್ರವಾಹದಿಂದಾಗಿ ಬೆಳೆ ಹಾಳಾದರೆ ರೈತರ ಕೈಹಿಡಿಯಲು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ.  ಮುಂಗಾರು ಬೆಳೆಗಳ ವಿಮೆ ಮಾಡಿಸಲು ರೈತರಿಗೆ ಏಪ್ರೀಲ್ ತಿಂಗಳಿಂದ ಅವಕಾಶ ನೀಡಲಾಗಿತ್ತು. ಆದರೆ ಇನ್ನೂ ಬಹುತೇಕ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಲ್ಲ. ಏಕೆಂದರೆ ಜುಲೈ ತಿಂಗಳಲ್ಲಿ ಅತೀವೃಷ್ಟಿಯಿಂದಾಗಿ ರೈತರ ಅಪಾರ ಬೆಳೆ ಹಾಳಾಗುತ್ತಿದೆ. ಹಾಗಾಗಿ ರೈತರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಬೆಳೆ ವಿಮೆ ಮಾಡಿಸಿ ವಿಮಾ ಸೌಲಭ್ಯ ಪಡೆಯಬಹುದು.  ಹಾಗಾದರೆ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬೇಕು. ಅದಕ್ಕೆ ಕೊನೆಯ ದಿನಾಂಕ ಯಾವುದು ಅಂದುಕೊಂಡಿದ್ದೀರಾ… ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಮುಂಗಾರು ಹಂಗಾಮಿನ ತೊಗರಿ, ಹತ್ತಿ, ಸೂರ್ಯಕಾಂತಿ, ಮುಸುಕಿನ ಜೋಳ ಸೇರಿದಂತೆ ಇನ್ನಿತರ ಬೆಳೆಗಳ ವಿಮೆ ಮಾಡಿಸಲು ಆಗಸ್ಟ್ 1 ಕೊನೆಯ ದಿನಾಂಕವಾಗಿದೆ. ಒಂದು ವೇಳೆ ನೀವು ಇನ್ನೂ ಈ ಬೆಳೆಗಳಿಗೆ ವಿಮೆ ಮಾಡಿಸದಿದ್ದರೆ ಇಂದೇ ನಿಮ್ಮ ಬೆಳೆಗೆ ವಿಮೆ ಮಾಡಿಸಿಕೊಳ್ಳಿ.

ಇದನ್ನೂ ಓದಿ Bara parihara status ಚೆಕ್ ಮಾಡುವ ಹೊಸ ಲಿಂಕ್ ಇಲ್ಲಿದೆ

ಭತ್ತ, ಸಜ್ಜೆ, ರಾಗಿ, ಶೇಂಗಾ, ನವಣೆ, ಹುರುಳಿ ಸೇರಿದಂತೆ ಇನ್ನಿತರ ಬೆಳೆಗಳಿಗೆ ಕೆಲವು ಜಿಲ್ಲೆಗಳಲ್ಲಿ ಆಗಸ್ಟ್ 16 ಕೊನೆಯ ದಿನಾಂಕವಾಗಿದೆ. ಕೆಲವು ಜಿಲ್ಲಗಳಲ್ಲಿ ಆಗಸ್ಟ್ 1 ಕೊನೆಯ  ದಿನಾಂಕವಾಗಿದೆ. ಬೆಳೆಗಳ ವಿಮೆ ಮಾಡಿಸುವ ಕೊನೆಯ ದಿನಾಂಕ ಒಂದು ಜಿಲ್ಲೆಗೆ ಮತ್ತೊಂದು ಜಿಲ್ಲೆಗೆ ಸ್ವಲ್ಪ ವ್ಯತ್ಯಾಸವಾಗಿರುತ್ತದೆ. ಕೆಲವು ಜಿಲ್ಲೆಗಳಿಗೆ ಕೆಲವು ಬೆಳೆಗಳಿಗೆ ಆಗಸ್ಟ್ 1 ಕೊನೆಯ ದಿನಾಂಕವಾಗಿದ್ದರೆ ಇನ್ನೂ ಕೆಲವು ಜಿಲ್ಲೆಗಳಿಗೆ ಅದೇ ಬೆಳೆಗೆ ಆಗಸ್ಟ್ 16 ಕೊನೆಯ ದಿನಾಂಕವಾಗಿರುತ್ತದೆ. ಹಾಗಾಗಿ ರೈತರು ಮೊಬೈಲ್ ನಲ್ಲೇ ತಮ್ಮ ಜಿಲ್ಲೆಯ ಬೆಳೆಗೆ ಕೊನೆಯ ದಿನಾಂಕ ಎಂದಿದೆ ಎಂಬುದನ್ನು ಚೆಕ್ ಮಾಡಿ ಬೆಳೆ ವಿಮೆ ಮಾಡಿಸಬಹುದು. ಹಾಗಾದರೆ ನಿಮ್ಮ ಜಿಲ್ಲೆಯ ಬೆಳೆಗಳ ವಿಮೆ ಮಾಡಿಸುವ ಕೊನೆಯ ದಿನಾಂಕ ಹೇಗೆ ಚೆಕ್ ಮಾಡಬೇಕು ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.

Insure your crop today ನಿಮ್ಮ ಜಿಲ್ಲೆಯ ಬೆಳೆಗಳ ಕೊನೆಯ ದಿನಾಂಕ ಯಾವುದು ಎಂಬುದು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಜಿಲ್ಲೆಯ ಬೆಳೆಗಳ ವಿಮೆ ಮಾಡಿಸುವ ಕೊನೆಯ ದಿನಾಂಕ ಚೆಕ್ ಮಾಡಲು ಈ

https://www.samrakshane.karnataka.gov.in/PublicView/FindCutOff.aspx

ಲಿಂಕ್ ಮೇಲೆ ಕ್ಲಿಕ್ ಮಾಡಿ. ಆಗ ಬೆಳೆ ವಿಮೆಯ ಅಂದರೆ ರಾಜ್ಯ ಸರ್ಕಾರದ ಸಂರಕ್ಷಣೆ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರು ತಮ್ಮ ಜಿಲ್ಲೆ ಆಯ್ಕೆ ಮಾಡಿಕೊಂಡರೆ ಸಾಕು, ನಿಮ್ಮ ಜಿಲ್ಲೆಗೆ ಯಾವ ಬೆಳೆಗೆ ಬೆಳೆ ವಿಮೆ ಮಾಡಿಸಲು ಕೊನೆಯ ದಿನಾಂಕ ಯಾವುದು ಎಂಬ ಪಟ್ಟಿ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಯಾವ ಬೆಳೆಗೆ ವಿಮೆ ಮಾಡಿಸಬೇಕೆಂದುಕೊಂಡಿದ್ದೀರೋ ಅದನ್ನು ಚೆಕ್ ಮಾಡಿ ಇಂದೇ ಬೆಳೆ ವಿಮೆ ಮಾಡಿಸಿ ಬೆಳೆ ವಿಮಾ ಸೌಲಭ್ಯ ಪಡೆದುಕೊಳ್ಳಿ.

ರೈತರು ಬೆಳೆ ವಿಮೆಯನ್ನು ಗ್ರಾಮ ಒನ್ ಕೇಂದ್ರಗಳಲ್ಲಿ ಅಥವಾ ಸಿಎಸ್.ಸಿ ಕೇಂದ್ರಗಳಲ್ಲಿಯೂ ವಿಮೆ ಮಾಡಿಸಬಹುದು. ಒಂದು ವೇಳೆ ನೀವು ಬೆಳೆ ಸಾಲ ಪಡೆದಿದ್ದರೆ ಬ್ಯಾಂಕ್ ಮ್ಯಾನೇಜರ್ ಗೆ ಸಂಪರ್ಕಿಸಿ ಬೆಳೆ ವಿಮೆ ಹಣ ಪಾವತಿಸಬಹುದು.

Leave a Comment