ಯಾವ ಯಾವ ಕಾರಣಗಳಿಂದ ಬೆಳೆ ಹಾನಿಯಾದರೆ ವಿಮೆ ಪರಿಹಾರ ನೀಡಲಾಗುವುದು ಹಾಗೂ ನೀಮಗೆಷ್ಟು ವಿಮೆ ಹಣ ಜಮೆಯಾಗುತ್ತದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, 2022 ಹಿಂಗಾರು ಹಂಗಾಮಿಗೆ ಕರ್ನಾಟಕ ರೈತರ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ರೈತರು  ಪ್ರಮುಖ ಬೆಳೆಗಳಿಗೆ ವಿಮಾ ಕಂತು ತುಂಬಿ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳಬಹುದು.

ಯಾವ ಕಾರಣಗಳಿಂದ ಬೆಳೆ ಹಾನಿಯಾದರೆ ವಿಮೆ ಜಮೆ?

ಪ್ರಸಕ್ತ ವರ್ಷ ಹಿಂಗಾರು ಹಂಗಾಮಿನಲ್ಲಿ ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಥವಾ ಸ್ಥಳ ನಿರ್ಧಿಷ್ಟ, ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಗಸ್ಫೋಟ ಮತ್ತು ಗುಡುಗು ಮಿಂಚುಗಳಿಂದಾಗಿ ಬೆಂಕಿ ಅವಘಡ ಸಂದರ್ಭದಲ್ಲಿ ಬೆಳೆ ನಷ್ಟವಾದರೆ ರೈತರಿಗೆ ಬೆಳೆ ವಿಮೆ ಪರಿಹಾರ ನೀಡಲಾಗುವುದು.

ಬೆಳೆ ವಿಮೆ ಮಾಡಿಸಲು ಯಾವ ಬೆಳೆಗೆ ಎಷ್ಟು ವಿಮೆ ಕಟ್ಟಬೇಕು? ಮೊಬೈಲ್ ನಲ್ಲೆ ಚೆಕ್ ಮಾಡಿ

ರೈತರು ಮೊಬೈಲ್ ನಲ್ಲೇ ತಾವು ಯಾವ ಬೆಳೆಗೆ ಎಷ್ಟು ವಿಮೆ ಹಣ ಪಾವತಿಸಬೇಕು. ತಮಗೆ ವಿಮಾ ಮೊತ್ತ ಎಷ್ಟು ಬರುತ್ತದೆ ಎಂಬುದನ್ನುಮೊಬೈಲ್ ನಲ್ಲೇ ಚೆಕ್ ಮಾಡಲು ಈ

https://www.samrakshane.karnataka.gov.in/PublicHome.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಫಾರ್ಮರ್ಸ್ ಕಾಲಂ ಕೆಳಗಡೆ Premium calculator ಮೇಲೆ ಕ್ಲಿಕ್ ಮಾಡಬೇಕು.

ಆಗ ಬೆಳೆ ವಿಮೆ ಕ್ಯಾಲ್ಕುಲೇಟರ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಜಿಲ್ಲೆ ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮ್ಮೂರಿನಿಂದ ಯಾವ ಯಾವ ಬೆಳೆಗೆ ವಿಮೆ ಮಾಡಿಸುವ ಪಟ್ಟಿ ಇರುತ್ತದೆ.  ಅಲ್ಲಿ ಬೆಳೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಸರ್ವೆ ನಂಬರಿನ ಎಕರೆ ಹಾಗೂ ಗುಂಟೆ ನಮೂದಿಸಿದ ನಂತರ ಶೋ ಪ್ರಿಮಿಯಂ ಮೇಲೆ ಕ್ಲಿಕ್ ಮಾಡಬೇಕು. ಅದರ ನೀವು ನಮೂದಿಸಿದ ಎಕರೆಗೆ  ಎಷ್ಟು ವಿಮೆ ಹಣ ಬರುತ್ತದೆ. ಫಾರ್ಮರ್ ಶೇರ್ ನಲ್ಲಿ ನೀವೆಷ್ಟು ಬೆಳೆವಿಮೆ ಹಣ ಪಾವತಿಸಬೇಕು ಎಂಬುದು ಕಾಣುತ್ತದೆ.ಉಳಿದ ಮೊತ್ತವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರವು ಪಾವತಿಸುತ್ತದೆ.

ಕಲಬುರಗಿ ಜಿಲ್ಲೆಯ ರೈತರ ಸಹಾಯವಾಣಿ

ಕಲಬುರಗಿ ಜಿಲ್ಲೆಯ ರೈತರು ಮುಂಗಾರು ಹಂಗಾಮು ಹಾಗೂ ಹಿಂಗಾರು ಹಂಗಾಮಿನ ಬೆಳೆ ವಿಮೆ ಕುರಿತು  1800 200 5142 ಅಥವಾ 1800 200 4030 ಗೆ ಸಂಪರ್ಕಿಸಬಹುದು.

ಬೆಂಗಳೂರಿನ ಯುನಿವರ್ಸಲ್ ಸೊಂಪೋ ಜನರಲ್ ಇನ್ಸುರೆನ್ಸ್ ಕಂಪನಿ ಲಿಮಿಟೆಡ್ ವಿಮಾ ಸಂಸ್ಥೆಯ ಕಲಬುರಗಿ ಜಿಲ್ಲೆಯ ಪ್ರತಿ ನಿಧಿಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಕಲಬುರಗಿ ಜಿಲ್ಲೆಯ ವಿಮಾ ಪ್ರತಿನಿಧಿಗಳ ಮೊಬೈಲ್ ನಂಬರ್

ಕಲಬುರಗಿ ಜಿಲ್ಲೆಯ ರೈತರು ಈ ಕೆಳಗಡೆ ಇರುವ ವಿಮಾ ಕಂಪನಿ ಪ್ರತಿನಿಧಿಗಳ ನಂಬರಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

ಕಲಬುರಗಿ ನಗರ ರೈತರು 8147603315, ಅಫಜಲ್ಪೂರ ತಾಲೂಕಿನ ರೈತರು 9902356434, ಆಳಂದ ತಾಲೂಕಿನ ರೈತರು 9702944943, ಚಿಂಚೋಳಿ ತಾಲೂಕಿನ ರೈತರು 8095384057, ಕಾಳಗಿ ತಾಲೂಕಿನ ರೈತರು 9000481448, ಶಹಾಬಾದ್  ತಾಲೂಕಿನ ರೈತರು 9113985051, ಚಿತ್ತಾಪುರ ತಾಲೂಕಿನ ರೈತರು 7996369510, ಜೇವರ್ಗಿ ತಾಲೂಕಿನ ರೈತರು 9845661193, ಕಲಬುರಗಿ ತಾಲೂಕಿನ ರೈತರು 8867508750, 8147603315, ಸೇಡಂ ತಾಲೂಕಿನ ರೈತರು 7204579007, ಕಮಲಾಪುರ ತಾಲೂಕಿನರೈತರು 7259754689 ಹಾಗೂ ಯಡ್ರಾಮಿ ತಾಲೂಕಿನ ರೈತರು 9880222988 ಗೆ ಸಂಪರ್ಕಿಸಬಹುದು.

ಬೆಳೆ ವಿಮೆ ಮಾಡಿಸಲು ನವೆಂಬರ್ 30 ಕೊನೆಯ ದಿನ

ಕಲಬುರಗಿ ಜಿಲ್ಲೆಗೆ ಜೋಳ (ಮಳೆಯಾಶ್ರಿತ), ಜೋಳ (ನೀರಾವರಿ), ಕಡಲೆ (ಮಳೆಯಾಶ್ರಿತ), ಸೂರ್ಯಕಾಂತರಿ (ಮಳೆಯಾಶ್ರಿತ), ಸೂರ್ಯಕಾಂತಿ (ನೀರಾವರಿ) ಹಾಗೂ ಕುಸುಮೆ (ಮಳೆಯಾಶ್ರಿತ) ಬೆಳೆಗಳಿಗೆ ನೋಂದಣಿ ಮಾಡಿಕೊಳ್ಳಲು ನವೆಂಬರ್ 30 ಕೊನೆಯ ದಿನವಾಗಿದೆ.

ಇದನ್ನೂ ಓದಿ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಿ

ಕಡಲೆ (ನೀರಾವರಿ) ಬೆಳೆಗೆ ನೋಂದಣಿ ಮಾಡಿಸಿಕೊಳ್ಳಲು ಡಿಸೆಂಬರ್ 16 ಕೊನೆಯ ದಿನವಾಗಿದೆ. ಗೋಧಿ (ಮಳೆಯಾಶ್ರಿತ), ಗೋಧಿ (ನೀರಾವರಿ) ಹಾಗೂ ಭತ್ತ (ನೀರಾವರಿ) ಬೆಳೆಗಳಿಗೆ ನೋಂದಣಿ ಮಾಡಿಕೊಳ್ಳಲು ಡಿಸೆಂಬರ್ 31 ಕೊನೆಯ ದಿನವಾಗಿದೆ.

Leave a Reply

Your email address will not be published. Required fields are marked *