ಎರೆಹುಳು ಗೊಬ್ಬರದಿಂದ ಲಾಭ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

Written by Ramlinganna

Updated on:

How to prepare Vermicompost ಎರೆಹುಳುಗಳನ್ನು ರೈತ ಮಿತ್ರ ಎಂದು ಕರೆಯಲಾಗುತ್ತದೆ. ಈ ಎರೆಹುಳು ಸಾಕಾಣಿಕೆಯಿಂದ ರೈತರು ತಮ್ಮ ಜಮೀನುಗಳನ್ನು ಫಲವತ್ತಾಗಿ ಮಾಡುವುದಲ್ಲೇ ಲಾಭದಾಯಕ ಬ್ಯುಸಿನೆಸ್ ಸಹ ಮಾಡಬಹುದು

ಹೌದು, ದಿನದಿಂದ ದಿನಕ್ಕೆ ಜಮೀನುಗಳಲ್ಲಿ ಸತ್ವಯುತ ಗೊಬ್ಬರದ ಬಳಕೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಜಮೀನು ಕಲ್ಲುಬಂಡೆಯಾಗುತ್ತಾ ಹೋಗುತ್ತಿದೆ. ಇದರಿಂದ ಇಳುವರಿಯೂ ಕಡಿಮೆಯಾಗುತ್ತಾ ಹೋಗುತ್ತಿದೆ. ಹಾಗಾಗಿ ರೈತರು ಹೆಚ್ಚಿನ ಇಳುವರಿ ಪಡೆಯಲು ತಮ್ಮ ಜಮೀನಿಗಾಗಿ ಎರೆಹುಳು ಸಾಕಾಣಿಕೆ ಮಾಡಿ ನಂತರ ಎರೆಹುಳು ಗೊಬ್ಬರದಿಂದ ಉತ್ತಮ ಆದಾಯ ಸಹ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ಎರೆಹುಳುಗಳ ಸಾಕಾಣಿಕೆಯಿಂದ ಉತ್ತಮ ಗುಣಮಟ್ಟದ ಸಾವಯವ ಗೊಬ್ಬರವನ್ನು ಪಡೆಯುವುದ ಜೊತೆಗೆ ಸಸ್ಯಜನ್ಯ, ಪ್ರಾಣಿಜನ್ಯ ತ್ಯಾಜ್ಯಗಳಿಂದ ಉಂಟಾಗಬಹುದಾದ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು.

How to prepare Vermicompost ಎರೆಹುಳು ಘಟಕ ನಿರ್ಮಿಸುವುದು ಹೇಗೆ?

ಚಪ್ಪಡಿ ಕಲ್ಲು, ಇಟ್ಟಿಗೆ ಅಥವಾ ಸಿಮೆಂಟಿನಿಂದ ತೊಟ್ಟಿಯನ್ನು ನೆಲದ ಮೇಲೆ ನಿರ್ಮಿಸಬಹುದು. ಸುಮಾರು 8x4x3 ತ್ಯಾಜ್ಯ ತುಂಬಿದ ತೊಟ್ಟಿಯಲ್ಲಿ 4-5 ಕೆಜಿ.ಹುಳುಗಳನ್ನು ಬಿಡಬೇಕು. ಮಳೆ ಹಾಗೂ ಬಿಸಿಲಿನಿಂದ ಕಾಪಾಡಲು ತೊಟ್ಟಿಯ ಮೇಲೆ ಚಪ್ಪರ ಹಾಕಬೇಕು. ಕಳೆ, ಕೂಳೆ, ಹೊಟ್ಟು, ನಾರಿನಪುಡಿ, ಕಬ್ಬಿನ ಸಿಪ್ಪೆ, ಹಸಿರೆಲೆ, ತರಗು, ಮುತಾದಗವುಗಳನ್ನು ಶೇಖರಿಸಿ ತೇವಾಂಶವಿರುವಂತೆ ಮಾಡಿ 2-3 ವಾರ ಇಡಬೇಕು.

ಇದನ್ನೂ ಓದಿ ನಿಮ್ಮ ಜಮೀನು ಯಾರ ಹೆಸರಿಗೆ ಎಷ್ಟು ಎಕರೆ ಜಂಟಿ ಇದೆ? ಇಲ್ಲೇ ಚೆಕ್ ಮಾಡಿ

ಈ ಸಮಯದಲ್ಲಿ 2 – 3 ಬಾರಿ ಮಿಶ್ರಣವನ್ನು ತಿರುವಿ ಹಾಕಬೇಕು. ಅನಂತರ ತೊಟ್ಟಿಗೆ ತುಂಬಿ ಎರೆಹುಳುಗಳನ್ನು ಬಿಡಬೇಕು.  ಎರೆಹುಳುಗಳು ಕಸವನ್ನು ತಿನ್ನುತ್ತಾ ಮೇಲ್ಪದರದಿಂದ ಒಳಹೋಗುತೊಡಗುತ್ತವೆ. ಹಾಗೆ ಹೋಗುವಾಗ ಅವುಗಳ ಹಿಕ್ಕೆಯ ಮೇಲ್ಪದರದಲ್ಲಿಶೇಖರಣವಾಗುತ್ತದೆ.

ಗೊಬ್ಬರ ಹಾಗೂ ಹುಳುಗಳನ್ನು ಬೇರ್ಪಡಿಸುವುದು ಹೇಗೆ?

6 ರಿಂದ 8 ವಾರಗಳಾದ ಮೇಲೆ ಗೊಬ್ಬರವನ್ನು ಹೊರಕ್ಕೆ ತೆಗೆದು ನೆಲದ ಮೇಲೆ ಗೋಪುರ ಆಕಾರದಲ್ಲಿ ಸುರಿಯಬೇಕು. 1 ದಿನದಲ್ಲಿ ಹುಳುಗಳು ತಳ ಸೇರಿ ಚೆಂಡಿನಿಂತೆ ಗುಂಪಾಗುತ್ತವೆ ನಂತರ ಮೇಲಿನಿಂದ ಗೊಬ್ಬರವನ್ನು ಬೇರ್ಪಡಿಸಿ, ತಳದಲ್ಲಿ ಸೇರಿರುವ ಹುಳುಗಳನ್ನು ತೊಟ್ಟಿಯಲ್ಲಿ ಹೊಸದಾಗಿ ತುಂಬಿರುವ ಕಸದಲ್ಲಿ ಬಿಡಬೇಕು. ಗೊಬ್ಬರದಲ್ಲಿಉಳಿದಿರುವ ಮೊಟ್ಟೆ ಹಾಗೂ ಸಣ್ಣ ಮರಿಗಳನ್ನು ಬೇರ್ಪಡಿಸಲು ಗೊಬ್ಬರವನ್ನು ಒಂದೆಡೆ ಶೇಖರಿಸಿ, ಅದರಲ್ಲಿ ಚಿಕ್ಕಚಿಕ್ಕ ಸಗಣಿಯ ಉಂಡೆಗಳನ್ನು ಅಲ್ಲಲ್ಲಿ ಹೂತಿಟ್ಟು, ಗುರುತಿಗೆ ಅಂಚಿ ಕಡ್ಡಿಯನ್ನು ಸಿಕ್ಕಿಸಬಹುದು.

ಇದನ್ನೂ ಓದಿ ಜಮೀನಿನ ಅಳತೆ ಮೊಬೈಲ್ ನಲ್ಲೇ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಎರಡು ವಾರಗಳನಂತರ ಈ ಉಂಡೆಗಳನ್ನು ಹೊರ ತೆಗೆದಲ್ಲಿ ಗೊಬ್ಬರದಲ್ಲಿ ಉಳಿದ ಎಲ್ಲಾ ಮರಿಗಳು, ಮೊಟ್ಟೆಯಿಂದ ಹೊರಬಂದ ಮರಿಗಳೆಲ್ಲವೂ ಈ ಉಂಡೆಗಳಲ್ಲಿ ಸೇರಿರುತ್ತವೆ. ಇವುಗಳನ್ನು ಅನಂತರ ಹೊಸ ತೊಟ್ಟಿಗಳಿಗೆ ಬಿಡಬಹುದು. 3-4 ಮಿ.ಮೀ ರಂದ್ರದ ಜರಡಿಯಿಂದ ತಿನ್ನದೆ ಉಳಿದ ಪದಾರ್ಥವನ್ನು ಗೊಬ್ಬರದಿಂದ ಬೇರ್ಪಡಿಸಬಹುದು.

ಎರೆಹುಳು ಗೊಬ್ಬರ ಘಟಕಕ್ಕೆ ಸಬ್ಸಿಡಿ

ರೈತರಿಗೆ ಎರೆಹುಳು ಘಟಕ ನಿರ್ಮಾಣಕ್ಕೆ ಸಹಾಯಧನ (ಸಬ್ಸಿಡಿ) ನೀಡಲಾಗುವುದು. ಹೌದು,  ಈ ಕುರಿತು ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು. ಎರೆಹುಳು ಘಟಕ ನಿರ್ಮಾಣ ಹಾಗೂ ಸಬ್ಸಿಡಿ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ರೈತರಿಗೆ ನೀಡಲಾಗುವುದು. ಎರೆಹುಳುಗಳ ಸಾಕಾಣಿಕೆ ಮಾಡಿ ತಮ್ಮ ಜಮೀನನ್ನು ರೈತರು ಸತ್ವಯುತ ಮಾಡಿ ಹೆಚ್ಚು ಇಳುವರಿ ಪಡೆಯಲು ಇದು ಒಳ್ಳೆಯ ಮಾರ್ಗವಾಗಿದೆ.

ಎರೆಹುಳು ಗೊಬ್ಬರದ ಬೇಡಿಕೆ ಸಹ ದಿನದಿಂದ ದಿನ್ಕಕೆ ಹೆಚ್ಚಾಗುತ್ತಿದೆ. ರೈತರು ಎರೆಹುಳು ಗೊಬ್ಬರವನ್ನು ಮಾರಾಟ ಮಾಡಿ ಉತ್ತಮ ಆದಾಯ ಪಡೆದುಕೊಳ್ಳಬಹುದು.

ಈ ಲೇಖನದಲ್ಲಿರುವ ಕೆಲವು ಮಾಹಿತಿಯನ್ನು ಕೃ ಷಿ ಇಲಾಖೆಯಿಂದ ಪ್ರಕಟವಾದ ರೈತರಿಗೆ ದೊರೆಯುವ ಸೌಲಭ್ಯಗಳು ಕೃತಿಯಿಂದ ಪಡೆಯಲಾಗಿದೆ.

Leave a Comment