ಬಿದಿರು ಕೃಷಿ ಮಾಡುವ ರೈತರಿಗಿಲ್ಲದೆ ಸಂತಸದ ಸುದ್ದಿ. ಕೃಷಿಯೊಂದಿಗೆ ಬಿದಿರು ಬೆಳೆಯಲಿಚ್ಚಿಸುವ ರೈತರಿಗೆ ಪ್ರತಿ ಎಕರೆಗೆ 18 ಸಾವಿರ ರೂಪಾಯಿಯಂತೆ ಮೂರು ವರ್ಷಗಳ ಕಾಲ ಒಟ್ಟು 54 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪರಿಶಿಷ್ಟ ಪಂಗಡದ ರೈತರು ಬಿದಿರು ಕೃಷಿಯನ್ನು ಕೈಗೊಳ್ಳಲು ಮತ್ತು ಅವರಿಗೆ ಪ್ರೋತ್ಸಾಹಿಸಲು ಅರ್ಜಿ ಕರೆಯಲಾಗಿದೆ. ಪ್ರತಿ ಎಕರೆಗೆ ಪ್ರತಿ ವರ್ಷ 18 ಸಾವಿರ ರೂಪಾಯಿಗಳಂತೆ ಮೂರು ವರ್ಷಗಳ ಕಾಲಾವಧಿಗೆ ಸಹಾಯಧನ ಒದಗಿಸುವ ಕಾರ್ಯಕ್ರಮದಡಿಯಲ್ಲಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2020-21ನೇ ಸಾಲಿನ ಭಾರತ ಸಂವಿಧಾನ ಅನುಚ್ಛೇದ 271(1) ರಡಿ ಅನುಮೋದನೆಗೊಂಡಿರುವ ಕಲ್ಟಿವೇಷನ್ ಆಫ್ ಬೊಂಬು ಕಾರ್ಯಕ್ರಮವನ್ನುಅನುಷ್ಠಾನಗೊಳಿಸಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಎನ್ಎಫ್ಎಬಿ-ಬೊಂಬು ಮಿಷನ್ ಹಾಗೂ ಅರಣ್ಯ ಇಲಾಖೆಯ ಸಹಯೊಗದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅರ್ಜಿ ಸಲ್ಲಿಸಲು ಅರ್ಹತೆಗಳು?
ಬಿದಿರು ಕೃಷಿ ಮಾಡಲಿಚ್ಚಿಸುವ ರೈತರು ಕಲಬುರಗಿ ಜಿಲ್ಲೆಯವರಾಗಿರಬೇಕು. ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಜಮೀನು ಹೊಂದಿರುವ ಕುರಿತು ಆರ್.ಟಿ.ಸಿ ಅರಣ್ಯ ಹಕ್ಕು ಅಧಿನಿಯಮದಡಿ ಹಕ್ಕುಪತ್ರ ಹೊಂದಿರಬೇಕು.ವಯೋಮಿತಿ 18 ರಿಂದ 60 ವರ್ಷದೊಳಗಿರಬೇಕು.
ಅರ್ಜಿ ಎಲ್ಲಿ ಸಲ್ಲಿಸಬೇಕು?
ರೈತರು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ಮಾರ್ಚ್ 14 ರ ಸಂಜೆ 5.30 ರೊಳಗೆ ಕಲಬುರಗಿ ಮಿನಿ ವಿಧಾನಸೌಧ ಎದುರುಗಡೆಯಿರುವ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು.
ರೈತರು ಅರ್ಜಿ ಸಲ್ಲಿಸಲು ಅರ್ಹತೆಗಳು, ದಾಖಲಾತಿಗಳು ಹಾಗೂ ಇನ್ನಿತರ ಮಾಹಿತಿಗಾಗಿ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-278621, ಮೊಬೈಲ್ ನಂಬರ್ 9243332555 ಗೆ ಸಂಪರ್ಕಿಸಲು ಕೋರಲಾಗಿದೆ.
ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ
ಪ್ರತಿದಿನ ಬಿದಿರು ಬಳಸುವ ರೈತರು ಬಿದಿರು ಬೆಳೆಯಲು ಹಿಂದೇಟು ಹಾಕುತ್ತಾರೆ. ಬಿದಿರು ಕಾಡು ಸಸ್ಯವಾಗಿದೆ ಎಂಬ ಕಲ್ಪನೆ ರೈತರಲ್ಲಿದೆ. ಬಿದಿರು ಬೆಳೆಯುವುದರಿಂದ ಯಾವುದೇ ಲಾಭವಿಲ್ಲವೆಂಬ ಮನೋಧೋರಣೆಯಿಂದಾಗಿ ಇಂದು ಬಿದಿರು ಕೃಷಿ ಕಣ್ಮರೆಯಾಗುತ್ತಿದೆ. ಹಾಗಾಗಿ ಸರ್ಕಾರವು ಬಿದಿರು ಕೃಷಿಯನ್ನು ಪ್ರೋತ್ಸಾಹಿಸಲು ಸಹಾಯಧನ ನೀಡಲು ಮುಂದಾಗಿದೆ.
ಅರಣ್ಯ ಕೃಷಿ ಮಾಡುವ ರೈತರು ಮಾತ್ರ ಬಿದಿರು ಕೃಷಿಯಲಲ್ಲಿ ಆಸಕ್ತಿಹೊಂದಿರುತ್ತಾರೆ. ಆದರೆ ಅರಣ್ಯ ಕೃಷಿ ಮಾಡುವ ರೈತರ ಸಂಖ್ಯೆ ಬೆರಳೆಣಿಕೆಷ್ಟೇ ಕಾಣುತ್ತದೆ. ಬಿದಿರು ಬೆಳೆಯ ಮಹತ್ವ ಕುರಿತು ತಿಳಿದುಕೊಳ್ಳಲಿ ಎಂಬ ಉದ್ದೇಶದಿಂದಾಗಿ ಸರ್ಕಾರವು ಪ್ರತಿ ಎಕರೆಗೆ 18 ಸಾವಿರ ರೂಪಾಯಿಯಂತೆ ಮೂರು ವರ್ಸ 54 ಸಾವಿರ ರೂಪಾಯಿಯವರಿಗೆ ಪ್ರೋತ್ಸಾಹಧನ ನೀಡುತ್ತಿದೆ.
ರೈತರು ಕೊನೆಯ ದಿನದವರೆಗೆ ಕಾಯದೆ ಆದಷ್ಟು ಬೇಗ ಸಂಬಂಧಪಟ್ಟ ಕಚೇರಿಯಲ್ಲಿ ಅರ್ಜಿ ಪಡೆದು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಭರ್ತಿ ಮಾಡಿದ ಅರ್ಜಿಯನ್ನು ಕೊನೆಯ ದಿನಾಂಕದೊಳಗೆ ಸಲ್ಲಿಸಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬಹುದು.
ಇತರೆ ವರ್ಗಕ್ಕೆ ಸೇರಿದ ರೈತರು ಒಂದುವೇಳೆ ಬಿದಿರು ಕೃಷಿ ಮಾಡುವಲ್ಲಿ ಆಸಕ್ತಿಯಿದ್ದರೆ ಹತ್ತಿರದ ಅರಣ್ಯ ಇಲಾಖೆಯ ಕಚೇರಿಯಲ್ಲಿ ಹೆಸರು ನೋಂದಾಯಿಸಿ ಬಿದಿರು ಸಸಿಗಳನ್ನು ಪಡೆಯಬಹುದು. ಬಿದರು ಬೆಳೆಯು ರೈತರಿಗೆ ಅಗತ್ಯವಿರುವ ಮಾಹಿತಿಯನ್ನು ಸಹ ನೀಡಲಾಗುತ್ತದೆ. ರಾಷ್ಟ್ರೀಯ ಬಿದಿರು ಮಿಷನ್ ಅಡಿಯಲ್ಲಿ ರೈತರು ಸರ್ಕಾರದ ವತಿಯಿಂದ ಸಬ್ಸಿಡಿಯನ್ನು ಸಹ ಪಡೆಯಬಹುದು.
ಇದನ್ನೂ ಓದಿ: ಯಾವ ಬೆಳೆಗೆ ಎಷ್ಟು ವಿಮೆ ಹಣ ಬರುತ್ತದೆ ? ಮೊಬೈಲ್ ನಲ್ಲೇ ಚೆಕ್ ಮಾಡಬೇಕೆ? ಇಲ್ಲಿದೆ ಮಾಹಿತಿ
ಬಿದಿರನ್ನು ಜಮೀನಿನ ಸುತ್ತಮುತ್ತಬೇಲಿ ರೂಪದಲ್ಲಿ ಬೆಳೆಯಬಹುದು ಅಥವಾ ಬಿದಿರು ಬೆಳೆಯನ್ನು ಮುಖ್ಯ ಬೆಳೆಯನ್ನಾಗಿ ಬೆಳೆಯಬೇಕಾದರೆ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು ಲಾಭದಾಯಕ ಕೃಷಿಯಾಗಿ .ಬಿದಿರನ್ನು ಬೆಳೆಯಬಹುದು.