ಪ್ರತಿಯೊಂದು ಕೆಲಸಕ್ಕೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕೆಲಸವಾಗುವುದಿಲ್ಲ. ಸಹಜವಾಗಿ ನಾವು ಆಧಾರ್ ಕಾರ್ಡ್ ನಮ್ಮ ಹತ್ತಿರ ಇಟ್ಟುಕೊಳ್ಳುತ್ತೇವೆ. ಕೆಲವು ಮನೆಯಲ್ಲಿ ಮರೆತುಹೊಗಬಹುದು. ಕೆಲವು ಕೆಲಸಕ್ಕೆ ನಮಗೆ ಅರ್ಜೆಂಟಾಗಿ ಆಧಾರ್ ಕಾರ್ಡ್ ಬೇಕಾಗಿರುತ್ತದೆ.  ಆದರೆ ಆಗ ನಮ್ಮ ಜೊತೆ ಓರಿಜಿನಲ್ ಆಧಾರ್ ಕಾರ್ಡ್ ಇರುವುದಿಲ್ಲ. ಆಗ ಮತ್ತೇ ಮನೆಗೆ ಹೋಗಿ ಆಧಾರ್ ಕಾರ್ಡ್ ತರಬೇಕಾಗುತ್ತದೆ. ಇಂತಹ ಸಮಯದಲ್ಲಿ ನೀವು ಆಧಾರ್ ಕಾರ್ಡ್ ತರಲು ಮತ್ತೇ ಮನೆಗೆ ಹೋಗಬೇಕಿಲ್ಲ. ನಿಮ್ಮ ಮೊಬೈಲ್ ನಲ್ಲಿಯೇ ಓರಿಜಿನಲ್ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ಮಾಹಿತಿ.

ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬೇಕಾದರೆ ನಿಮಗೆ ಆಧಾರ್ ಕಾರ್ಡ್ ನಂಬರ್ ನೆನಪಿರಬೇಕು. ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಲು ನೀವು ಸರ್ಕಾರದ ಅಧಿಕೃತ ವೆಬ್ ಸೈಟ್ https://myaadhaar.uidai.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಿಬೇಕು ಆಗ ಒಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಡೌನ್ಲೋಡ್ ಆಧಾರ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಥವಾ  https://myaadhaar.uidai.gov.in/genricDownloadAadhaar

ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಆಧಾರ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಆಧಾರ್ ಕಾರ್ಡ್ ನಮೂದಿಸಬೇಕು. ಅಲ್ಲಿ ನೀಡಲಾಗಿರುವ ಕ್ಯಾಪ್ಚ್ಯಾ ಕೋಡ್  ನಮೂದಿಸಬೇಕು. ನಂತರ ಸೆಂಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಮೊಬೈಲಿಗೆ ಒಂದು ಓಟಿಪಿ ಬರುತ್ತದೆ. ಅದನ್ನು ನಮೂದಿಸಬೇಕು. ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ.

ಇದನ್ನೂ ಓದಿ:ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ನಿಮ್ಮ ಆಸ್ತಿಗಳ ದಾಖಲೆ ಡೌನ್ಲೋಡ್ ಮಾಡುವುದು ಹೇಗೆ…? ಇಲ್ಲಿದೆ ಸಂಪೂರ್ಣ ಮಾಹಿತಿ

ಇನ್ನೊಂದು ಪೇಜ್ ನಲ್ಲಿ ಐದಾರು ಆಯ್ಕೆಗಳನ್ನು ಕೇಳಲಾಗುತ್ತದೆ. ಅವುಗಳನ್ನೆಲ್ಲಾ ನೀವು ಸೆಲೆಕ್ಟ್ ಮಾಡಿಕೊಂಡು ನಂತರ ಡೌನ್ಲೋಡ್ ಮೇಲೆ ಕ್ಲಿಕ್ ಮಾಡಬೇಕು.ಆಗ ಫೈಲ್ ಡೌನ್ಲೋಡ್ ಆಗುತ್ತದೆ. ಈ ಫೈಲ್ ಓಪನ್ ಆಗಬೇಕಾದರೆ ನಿಮಗೆ ಒಂದು ಪಾಸ್ವರ್ಡ್ ಕೇಳುತ್ತದೆ. ಅದು ನಿಮ್ಮ ಹೆಸರಿನ ಆರಂಭದ ನಾಲ್ಕು ಅಕ್ಷರಗಳು ಮತ್ತು ನಿಮ್ಮ ಜನ್ಮದ ವರ್ಷ ಉದಾಹರಣೆಗೆ ನಿಮ್ಮ ಹೆಸರು ASHOK ಆಗಿದ್ದರೆ ನಿಮ್ಮ ಹುಟ್ಟಿದ ವರ್ಷ 1980 ಇದ್ದರೆ ನೀವು ನಿಮ್ಮ ಹೆಸರಿನ ಆರಂಭದ ನಾಲ್ಕು ಅಕ್ಷರಗಳನ್ನು ಕ್ಯಾಪಿಟಲ್ ಲೆಟರ್ ನಲ್ಲಿ ಟೈಪ್ ಮಾಡಬೇಕು ಹಾಗೂ ನಿಮ್ಮ ಹುಟ್ಟಿದ ವರ್ಷ ಉದಾಹರಣೆಗೆ ASHO1980 ಎಂದು ಟೈಪ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಡೌನ್ಲೋಡ್ ಮಾಡಿದ ಆಧಾರ್ ಕಾರ್ಡ್ ಓಪನ್ ಆಗುತ್ತದೆ. ಇದನ್ನು ನೀವು ಮೊಬೈಲ್ ನಲ್ಲಿಯೇ ಸೇವ್ ಮಾಡಿಕೊಳ್ಳಬಹುದು. ನಿಮಗೆ ಬೇಕಾದಾಗ ನೀವು ಪ್ರಿಂಟಿ ತೆಗೆದುಕೊಳ್ಳಬಹುದು.

Leave a Reply

Your email address will not be published. Required fields are marked *