ಗ್ರಾಪಂ ವ್ಯಾಪ್ತಿಯ ಈ ಆಸ್ತಿಗಳ ದಾಖಲೆ ಹೀಗೆ ಡೌನ್ಲೋಡ್ ಮಾಡಿ

Written by By: janajagran

Published on:

e swathu : ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ನಿಮ್ಮ ಆಸ್ತಿ ನಿಮ್ಮ ಹೆಸರಿನಲ್ಲಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು. ಇದರೊಂದಿಗೆ ನಿಮ್ಮ ಆಸ್ತಿಯ ಪ್ರಮಾಣ ಪತ್ರಗಳನ್ನು ಮೊಬೈಲ್ ನಲ್ಲಿಯೇ ಡೌನ್ಲೋಡ್ ಮಾಡಿಕೊಳ್ಳಬಹುದು.

ಅಷ್ಟೇ ಅಲ್ಲ ನೀವು ಖರೀದಿ ಮಾಡುವ ಆಸ್ತಿಯ ಅಸಲಿ ಮಾಲೀಕರಾರು, ಅಕ್ಕಪಕ್ಕದ ಆಸ್ತಿ ಯಾರ ಹೆಸರಿನಲ್ಲಿದೆ ಎಂಬುದನ್ನು ಸಹ ತಿಳಿದುಕೊಳ್ಳಬಹುದು…ಇದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಈ ಸ್ವತ್ತು ತಂತ್ರಾಂಶದ ಮೂಲಕ ನಿಮ್ಮ ಆಸ್ತಿಯ ಪ್ರಮಾಣ ಪತ್ರಗಳನ್ನು ಮೊಬೈಲ್ ಮೂಲಕವೇ ಡೌನ್ಲೋಡ್ ಮಾಡಿಕೊಳ್ಳಬಹುದು.ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ಮಾಹಿತಿ

e swathu ಆಸ್ತಿಯ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಆಸ್ತಿಯ ದಾಖಲೆ ಡೌನ್ಲೋಡ್ ಮಾಡಿಕೊಳ್ಳಲು ಈ

  www.e-swathu.kar.nic.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಈ ಸ್ವತ್ತು ತಂತ್ರಾಂಶದ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಕಾಣುವ ಆಸ್ತಿಗಳ ಶೋಧನೆ ಮೇಲೆ ಕ್ಲಿಕ್ ಮಾಡಬೇಕು.ಆಗ ಇನ್ನೊಂದು ಪೇಜ್ ತೆರೆಯಲ್ಪಡುತ್ತದೆ. ಅಲ್ಲಿ Form-9 ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ ಜಿಲ್ಲೆ, ತಾಲೂಕು, ಪಂಚಾಯತ್, ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಪ್ರಾಪರ್ಟಿ ಐಡಿ ಹಾಕಬೇಕು. ಒಂದು ವೇಳೆ ನಿಮಗೆ ಪ್ರಾಪರ್ಟಿ ಐಡಿ ನೆನಪಿಲ್ಲವೆಂದರೆ ನೀವು

www.panchamitra.kar.nic.in

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ಪಂಚಮಿತ್ರ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಕರ್ನಾಟಕದ ಮ್ಯಾಪ್ ಕಾಣುತ್ತದೆ.

ಕರ್ನಾಟಕ ಮ್ಯಾಪ್ ನಲ್ಲಿ ನಿಮ್ಮ ಜಿಲ್ಲೆಯ ಮೇಲೆ ಕ್ಲಿಕ್ ಮಾಡಬೇಕು.ನಂತರ ನಿಮ್ಮ ತಾಲೂಕು ಮೇಲೆ ಕ್ಲಿಕ್ ಮಾಡಬೇಕು. ನಂತರ ಗ್ರಾಮ ಪಂಚಾಯತ್ ಮೇಲೆ ಕ್ಲಿಕ್ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಆಸ್ತಿ ತೆರಿಗೆಗಳು (Property Tax) ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ನಿಮ್ಮ ಗ್ರಾಮದಲ್ಲಿ ಬರುವವರೆಲ್ಲರ ಹೆಸರು ಕಾಣುತ್ತದೆ.  ಹೆಸರಿನ ಮುಂದೆ ಪ್ರಾಪರ್ಟಿ ಯೂನಿಕ್ ಐಡಿ ಇರುತ್ತದೆ. ಒಂದನೇ ಪೇಜ್ ನಲ್ಲಿ ನಿಮ್ಮ ಹೆಸರು ಕಾಣದಿದ್ದರೆ ಮುಂದಿನ ಪೇಜ್ ಆಯ್ಕೆ ಮಾಡಿಕೊಂಡು ನಿಮ್ಮ ಹೆಸರು ಹುಡುಕಿಕೊಳ್ಳಬೇಕು. ಹೆಸರಿನ ಮುಂದಿರುವ ಐಡಿಯನ್ನು ಕಾಪಿ ಮಾಡಿಕೊಳ್ಳಬೇಕು. ನಂತರ ಈ ಸ್ವತ್ತು ಪೇಜ್ ನಲ್ಲಿ ಪ್ರಾಪರ್ಟಿ ಐಡಿಯಲ್ಲಿ ಪೇಸ್ಚ್ ಮಾಡಬೇಕು. ನಂತರ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಆಗ ನಿಮ್ಮ ಹೆಸರು, ಗ್ರಾಮ, ಪ್ರಾಪರ್ಟಿ ಕೋಡ್ ಸೇರಿದಂತೆ ಇನ್ನಿತರ ಮಾಹಿತಿ ಕಾಣುತ್ತದೆ. ಸರ್ಚ್ ಬಟನ್ ಕ್ಲಿಕ್ ಮಾಡಿದ ನಂತರ ಹೆಸರು ಕಾಣದಿದ್ದರೆ ಈ ಸ್ವತ್ತು ಮಾಡಿಸಿಲ್ಲವೆಂದರ್ಥ.

ಆಸ್ತಿಗೆ e swathu ಮಾಡುವುದು ಹೇಗೆ?

ನಿಮ್ಮ ಆಸ್ತಿಗೆ ಈ ಸ್ವತ್ತು ಮಾಡಿಸುವುದು ಹೇಗೆ… ಎಂಬ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್ ಗ್ರಾಮ ಪಂಚಾಯತಿನಲ್ಲಿ ಇ-ಸ್ವತ್ತು ಅಡಿಯಲ್ಲಿ ಆಸ್ತಿ ನೋಂದಣಿ ಮಾಡಿಸಿದ್ದೀರಾ. ಇ ಸ್ವತ್ತು ಎಂದರೇನು, ಇ ಸ್ವತ್ತು ನೋಂದಣಿ ಮಾಡಿಸುವುದು ಹೇಗೆ? ಇಲ್ಲಿದೆ ಮಾಹಿತಿ ಮೇಲೆ ಕ್ಲಿಕ್ ಮಾಡಿ.

ಒಂದು ವೇಳೆ ಹೆಸರು ಬಂದರೆ ನಿಮ್ಮ ಹೆಸರಿನ ಹಿಂದಿರುವ ಡಾಕುಮೆಂಟ್ ನಂಬರ್ ಮೇಲೆ ಕ್ಲಿಕ್ ಮಾಡಬೇಕು ಆಗ ನಿಮ್ಮ ಆಸ್ತಿಯ ದಾಖಲೆ ಪತ್ರ ಡೌನ್ಲೋಡ್ ಆಗುತ್ತದೆ. .ಡಾಕುಮೆಂಟ್ ನಂಬರ್ ನೆನಪಿಟ್ಟುಕೊಳ್ಳಬೇಕು. ಅಥವಾ ಒಂದೆಡೆ ಬರೆದಿಟ್ಟುಕೊಳ್ಳಬೇಕು. ಡೌನ್ಲೋಡ್ ಆದ ಡಾಕುಮೆಂಟ್ ಓಪನ್ ಆಗಲು ಡಾಕುಮೆಂಟ್ ನಂಬರ್ ಬೇಕಾಗುತ್ತದೆ. ಡೌನ್ಲೋಡ್ ಆದ ಪಿಡಿಎಫ್ ಫೈಲ್ ಓಪನ್ ಮಾಡುವಾಗ ಡಾಕುಮೆಂಟ್ ನಂಬರ್ ಕೇಳುತ್ತದೆ. ಅದೇ ಪಾಸ್ವರ್ಡ್ ಆಗಿರುತ್ತದೆ. ಅಲ್ಲಿ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು.. ಆಗ ನಿಮ್ಮ ಆಸ್ತಿಯ ದಾಖಲೆ ಪತ್ರ ಓಪನ್ ಆಗುತ್ತದೆ. ಇಲ್ಲಿ ಮಾಲೀಕನ ಹೆಸರು ಹಾಗೂ ಫೋಟೋ ಸಹ ಕಾಣುತ್ತದೆ.

ನಿಮ್ಮ ಆಸ್ತಿಯ ಸರ್ವೆ ನಂಬರ್, ವಿಸ್ತೀರ್ಣವೆಷ್ಟು, ಉದ್ದ ಆಗಲವೆಷ್ಟಿದೆ, ಆಸ್ತಿಯು ಪಿತ್ರಾಜಿತ ಆಸ್ತಿಯೇ ಅಥವಾ ಖರೀದಿ ಮಾಡಿದ ಆಸ್ತಿಯೇ ಎಂಬುದನ್ನು ಸಹ ನೋಡಬಹುದು.

3 thoughts on “ಗ್ರಾಪಂ ವ್ಯಾಪ್ತಿಯ ಈ ಆಸ್ತಿಗಳ ದಾಖಲೆ ಹೀಗೆ ಡೌನ್ಲೋಡ್ ಮಾಡಿ”

Leave a Comment