ರೈತರು ಮನೆಯಲ್ಲಿಯೇ ಕುಳಿತು ತಮಗೆ ಎಷ್ಟು ಬೆಳೆ ಸಾಲಮನ್ನಾ ಆಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ 2018 ರಲ್ಲಿ 1 ಲಕ್ಷ ರೂಪಾಯಿಯವರೆಗೆ ರೈತರ ಬೆಳೆ ಸಾಲಮನ್ನಾ ಮಾಡಲಾಗಿತ್ತು. ಆಗ ಕೆಲವು ರೈತರ ಸಂಪೂರ್ಣವಾಗಿ ಸಾಲಮನ್ನಾ ಮಾಡಲಾಗಿತ್ತು.ಇನ್ನೂ ಕೆಲವು ರೈತರಿಗೆ ಸ್ವಲ್ಪ ಸಾಲ ಮನ್ನಾ ಮಾಡಲಾಗಿತ್ತು. ಇದರಲ್ಲಿ ಕೆಲವು ರೈತರಿಗೆ ಅರ್ಧ ಬೆಳೆ ಸಾಲಮನ್ನಾ ಆಗಿತ್ತು. ಕೆಲವು ತಾಂತ್ರಿಕ ಕಾರಣಗಳಿಂದಾಗಿ ಇನ್ನೂ ಕೆಲವು ರೈತರಿಗೆ ಸಾಲಮನ್ನಾ ರದ್ದಾಗಿತ್ತು. ಯಾವ ಕಾರಣದಿಂದಾಗಿ ರೈತರ ಸಾಲಮನ್ನಾ ಆಗಿರಲಿಲ್ಲ ಎಂಬುದನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು ಅತೀ ಸುಲಭವಾಗಿ ಮೊಬೈಲ್ ನಲ್ಲಿ ಚೆಕ್ ಮಾಡಬಹುದು.
ರೈತರು ಪಡೆದ ಬೆಳೆ ಸಾಲ ಯಾವ ಪ್ರಕಾರದ ಸಾಲವಿದೆ. ಸಾಲ ಪಡೆದ ದಿನಾಂಕ, ಸಾಲಮನ್ನಾ ಆಗಲು ಅನುಮತಿ ದೊರೆತಿದೆಯೋ ಇಲ್ಲವೋ ಎಂದು ಪರಿಶೀಲಿಸಬಹುದು. ಇಷ್ಟೇ ಅಲ್ಲ, ಸಾಲಮನ್ನಾ ಗ್ರೀನ್ ಪಟ್ಟಿಯಲ್ಲಿ ಹೆಸರಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.
ರೈತರು ಮೊಬೈಲ್ ನಲ್ಲೇ ಎಷ್ಟು ಬೆಳೆ ಸಾಲ ಮನ್ನಾ ಆಗಿರುವ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ರೈತರು ಮೊಬೈಲ್ ನಲ್ಲೇ ಎಷ್ಟು ಬೆಳೆ ಸಾಲಮನ್ನಾ ಆಗಿದೆ ಎಂಬುದನ್ನು ನೋಡಲು ಈ
https://clws.karnataka.gov.in/loanwaiverreport/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ಸಾಲಮನ್ನಾ ಪಟ್ಟಿ ಓಪನ್ ಆಗುತ್ತದೆ. Bank Wise ಮೇಲೆ ಕ್ಲಿಕ್ ಮಾಡಬೇಕು. ಮಾಡಬೇಕು. ಆಗ Select Report ನಲ್ಲಿ Farmer wise ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ Get Report ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮೂರಿನಲ್ಲಿ ಯಾರು ಯಾರು ಬೆಳೆ ಸಾಲಮನ್ನಾ ಪಡೆದಿದ್ದಾರೆ ಎಂಬ ಪಟ್ಟಿ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಗ್ರಾಮ, ರೈತರ ಹೆಸರು, ತಂದೆಯ ಹೆಸರು ಇರುತ್ತದೆ.
ಯಾವ ಬ್ಯಾಂಕಿನಿಂದ ಸಾಲ ಪಡೆದಿದ್ದೀರಿ? ಬ್ರ್ಯಾಂಚ್ ಹೆಸರು, ನಿಮ್ಮ ಬೆಳೆ ಸಾಲ ಯಾವ ಪ್ರಕಾರದದ್ದು, ಇದಾದ ಮೇಲೆ 31-12-2017 ರವರೆಗೆ ಎಷ್ಟುವಿತ್ತು? ನಿಮ್ಮ ಹೆಸರು ಗ್ರೀನ್ ಪಟ್ಟಿಯಲ್ಲಿದೆಯೋ ಇಲ್ಲವೋ ಎಂಬುದು ಕಾಣುತ್ತದೆ. ಗ್ರೀನ್ ಲಿಸ್ಟ್ ನಲ್ಲಿಇರದಿದ್ದರೆ ಯಾವ ಕಾರಣದಿಂದಾಗಿ ಗ್ರೀನ್ ಪಟ್ಟಿಯಲ್ಲಿಲ್ಲ ಎಂಬುದು ಕಾಣುತ್ತದೆ. ಬೆಳೆ ಸಾಲ ಮನ್ನಾ ಆಗಿದೆಯೇ? ಆಗಿದ್ದರೆ ಎಷ್ಟು ಬೆಳೆ ಸಾಲಮನ್ನಾ ಆಗಿದೆ? ಹಾಗೂ ಬೆಳೆ ಸಾಲ ಸಂಪೂರ್ಣವಾಗಿ ಮನ್ನಾ ಆಗಿದೆಯೋ ಇಲ್ಲವೋ ಎಂಬುದು ಕಾಣುತ್ತದೆ. ಕೊನೆಯಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಕಾಣುತ್ತದೆ. ನಿಮ್ಮ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ ಪರಿಶೀಲಿಸಲ್ಪಟ್ಟಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
ಇದನ್ನೂ ಓದಿ : ಹಿಂಗಾರು ಬೆಳೆಗಳ ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ಸಾಲ ಮನ್ನಾ ಪಟ್ಟಿಯಲ್ಲಿ ಅಸೆಂಡಿಂಗ್ ಆರ್ಡರ್ ನಲ್ಲಿ ಹೆಸರಿರುತ್ತದೆ. ಅಂದರೆ ಎ ದಿಂದ ಹೆಸರು ಆರಂಭವಾಗುತ್ತದೆ. ನಿಮ್ಮ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತದೆ ಎಂಬುದನ್ನು ಚೆಕ್ ಮಾಡಬೇಕು. ನಿಮ್ಮ ಹೆಸರಿನ ಮುಂದುಗಡೆ ಏನೇನು ಬರೆಯಲಾಗಿದೆ ಎಂಬುದನ್ನು ಚೆಕ್ ಮಾಡಬಹುದು.
ಈ ಬೆಳೆ ಸಾಲಮನ್ನಾ ವರದಿಯೂ 2018 ರ ಅವಧಿಯದ್ದಾಗಿದೆ. ಇತ್ತೀಚೆಗೆ ರಾಜ್ಯ ಸರ್ಕಾರವಾಗಲಿ ಕೇಂದ್ರ ಸರ್ಕಾರವಾಗಲಿ ಯಾವುದೇ ಬೆಳೆ ಸಾಲಮನ್ನಾ ಘೋಷಣೆ ಮಾಡಿಲ್ಲ. ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಘೋಷಣೆ ಮಾಡಿದ ಬೆಳೆ ಸಾಲಮನ್ನಾ ಪಟ್ಟಿಯಾಗಿದೆ.