ಹಿಂಗಾರು ಬೆಳೆಗಳಿಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ? ಚೆಕ್ ಮಾಡಿ

Written by Ramlinganna

Updated on:

Rabi crop premium calculator ಹಿಂಗಾರು ಬೆಳೆಗಳ ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ? ರೈತರ ವಂತಿಗೆ ಎಷ್ಟು ಹಣವಿದೆ ಎಂಬ ಮಾಹಿತಿಯನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಮುಂಗಾರು ಹಂಗಾಮು ಮುಗಿದು ಈಗ ಹಿಂಗಾರು ಬೆಳೆಗಳ ಬಿತ್ತನೆ ಆರಂಭವಾಗಿದೆ. ಮುಂಗಾರು ಬೆಳೆಗಳಂತೆ ಹಿಂಗಾರು ಬೆಳೆಗಳ ವಿಮೆ ಮಾಡಿಸಬಹುದು. ಮುಂಗಾರು ಬೆಳೆಯಂತೆ ಹಿಂಗಾರು ಬೆಳೆಗಳಿಗೂ ವಿಮೆ ಮಾಡಿಸಬಹುದು. ಯಾವ ಜಿಲ್ಲೆಯ ರೈತರು ಎಷ್ಟು ವಿಮೆ ಹಣ ಕಟ್ಟಬೇಕು? ಕೇಂದ್ರ ಸರ್ಕಾರದ ವಂತಿಗೆ, ರಾಜ್ಯ ಸರ್ಕಾರದ ವಂತಿಗೆ ಎಷ್ಟು? ಹಾಗೂ ರೈತರು ತಮ್ಮ ಬೆಳೆಗಳಿಗೆ ಎಕರೆಗೆ ಎಷ್ಟು ವಿಮೆ ಹಣ ಕಟ್ಟಬೇಕು? ವಿಮೆ ಹಣ ಎಲ್ಲಿ ಪಾವತಿಸಬೇಕು ಸೇರಿದಂತೆ ಇನ್ನಿತರ ಮಾಹಿತಿಗಳಳನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ರೈತರು ಹಿಂಗಾರು ಬೆಳೆಗಳ ವಿಮೆ ಕುರಿತಂತೆ ಮಾಹಿತಿ ಕೇಳಲು ಎಲ್ಲಿಯೂ ಹೋಗಬೇಕಿಲ್ಲ. ಯಾವ ಅಧಿಕಾರಿಗಳ ಮುಂದೆ ಹೋಗಿ ಕೈಕಟ್ಟಿ ಕುಳಿತುಕೊಳ್ಳಬೇಕಿಲ್ಲ. ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ದೇಶದ ಯಾವ ಸ್ಥಳದಿಂದ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ಮಾಹಿತಿ.

Rabi crop premium calculator ಆನ್ಲೈನ್ ನಲ್ಲಿ ಬೆಳೆ ವಿಮೆ ಕ್ಯಾಲ್ಕುಲೇಟರ್ ಮಾಡುವುದು ಹೇಗೆ?

ರೈತರು ಆನ್ಲೈನ್ ನಲ್ಲೇ ಕ್ಯಾಲ್ಕುಲೇಟರ್ ಮಾಡಬೇಕಾದರೆ ಈ

https://www.samrakshane.karnataka.gov.in/publichome.aspx

ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಫಾರ್ಮರ್ ಕಾರ್ನರ್ ಕೆಳಗಡೆ ಕಾಣುವ Premium calculator ಮೇಲೆ ಕ್ಲಿಕ್ ಮಾಡಬೇಕು. ಆಗ  ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು.  ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು.  ನಿಮ್ಮ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ಬೆಳೆ ಕಾಲಂನಲ್ಲಿ ಯಾವ ಯಾವ ಬೆಳೆಗಳಿಗೆ ನೀವು ವಿಮೆ ಮಾಡಿಸಬಹುದು ಎಂಬ ಪಟ್ಟಿ ಕಾಣುತ್ತದೆ.

ನೀವು ಯಾವ ಬೆಳೆಗೆ ವಿಮೆ ಮಾಡಿಸಬೇಕೆಂದುಕೊಂಡಿದ್ದೀರೋ ಆ ಬೆಳೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಾದಮೇಲೆ ಎಷ್ಟು ಎಕರೆಗೆ ವಿಮೆ ಮಾಡಿಸಬೇಕೆಂದುಕೊಂಡಿದ್ದೀರೋ ಎಕರೆ ಕಾಲಂನಲ್ಲಿ ನಮೂದಿಸಬೇಕು.ಗುಂಟೆಯಲ್ಲಿ ಜಮೀನಿದ್ದರೆ ಎಷ್ಟುಗುಂಟೆ ಜಮೀನಿದೆ ಎಂಬುದನ್ನು ನಮೂದಿಸಬೇಕು.  ಇದಾದ ಮೇಲೆ ಪ್ರಿಮಿಯಂ ವಿವರ ಮೇಲೆ ಕ್ಲಿಕ್ ಮಾಡಬೇಕು.

ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಮೂದಿಸಿದ ಜಮೀನಿನ ವಿಸ್ತೀರ್ಣ ಕಾಣುತ್ತದೆ. ಒಟ್ಟು ವಿಮಾ ಮೊತ್ತ ಅಂದರೆ ನಿಮ್ಮ ಬೆಳೆ ಹಾಳಾದರೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ. ಒಟ್ಟು ಎಷ್ಟು ವಿಮೆ ಹಣ ಪಾವತಿಸಲಾಗುತ್ತದೆ. ರೈತರೇಷ್ಟು ಹಣ ಪಾವತಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಪಾಲಿನ ವಂತಿಗೆ ಎಷ್ಟು ಹಣ ಪಾವತಿಸುತ್ತವೆ? ಎಂಬ ಮಾಹಿತಿ ಕಾಣುತ್ತದೆ.

ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆ?

ಉದಾಹರಣೆಗೆ ಕಡಲೆ ಬೆಳೆ ಆಯ್ಕೆ ಮಾಡಿಕೊಂಡರೆ ಎಕರೆಗೆ ಬೆಳೆ ಹಾನಿಯಾದರೆ 11736 ರೂಪಾಯಿಯವರೆಗೆ ಬೆಳೆ ವಿಮೆ ಹಣ ಬರುತ್ತದೆ. ರೈತರು ಕೇವಲ 176 ರೂಪಾಯಿ ಪಾವತಿಸಬೇಕು. ಕೇಂದ್ರ ಸರ್ಕಾರವು 718 ರೂಪಾಯಿ ಪಾವತಿಸಿದರೆ ರಾಜ್ಯ ಸರ್ಕಾರವು 718 ರೂಪಾಯಿ ಪಾವತಿಸುತ್ತದೆ. ಒಟ್ಟು 1613 ರೂಪಾಯಿಯವರೆಗೆ ವಿಮೆ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ : ನಿಮ್ಮ ಬೆಳೆ ಸಮೀಕ್ಷೆ ಆಗಿದೆಯೋ ಇಲ್ಲವೋ: ಮೊಬೈಲ್ ನಲ್ಲೇ ಚೆಕ್ ಮಾಡಿ

ಅದೇ ರೀತಿ ಜೋಳ ಬೆಳೆಗೆ ಆಯ್ಕೆ ಮಾಡಿಕೊಂಡರೆ 13759 ರೂಪಾಯಿಯವರೆಗೆ ವಿಮೆ ಹಣ ಜಮೆಯಾಗುತ್ತದೆ. ರೈತರು ಕೇವಲ 206 ರೂಪಾಯಿ ಪಾವತಿಸಬೇಕಾಗುತ್ತದೆ. ಕೇಂದ್ರ ಸರ್ಕಾರವು 617 ರೂಪಾಯಿ ಅದೇ ರೀತಿ 617 ರೂಪಾಯಿ ಪಾವತಿಸುತ್ತದೆ. ಒಟ್ಟು 1442 ರೂಪಾಯಿ ಹಣ ಪಾವತಿಸಲಾಗುತ್ತದೆ.

ಬೆಳೆ ಹಾನಿಯಾದರೆ ನೀವು ಯಾವ ವಿಮೆ ಕಂಪನಿಗೆ ಹಣ ಪಾವತಿಸಿದ್ದೀರೋ ಆ ಸಿಬ್ಬಂದಿಗೆ ಕರೆ ಮಾಡಿದಾಗ ಸಿಬ್ಬಂದಿಗಳು ಜಮೀನಿಗೆ ಬಂದು ಬೆಳೆ ಹಾಳಾಗಿದ್ದನ್ನು ಪರಿಶಿಲೀಸಿ ವಿಮೆ ಪಾವತಿಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತಾರೆ.

1 thought on “ಹಿಂಗಾರು ಬೆಳೆಗಳಿಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ? ಚೆಕ್ ಮಾಡಿ”

Leave a Comment