ನಿಮ್ಮ ಸ್ನೇಹಿತರಿಗೆ, ಬಂಧು ಬಳಗದವರಿಗೆ, ಕುಟುಂಬಸ್ಥರಿಗೆ ಹೊಸ ವರ್ಷದ ಶುಭಾಶಯಗಳ ಸಂದೇಶಗಳನ್ನು ಕಳಿಸಬೇಕೆ? ಇಲ್ಲಿದೆ ನೋಡಿ ಶುಭಾಶಯಗಳ ಪಟ್ಟಿ.

ಇನ್ನೇನು ಹೊಸ ವರ್ಷ ಬಂದೇ ಬಿಡ್ತು. ಹೊಸ ವರ್ಷಕ್ಕೆ ಎರಡೇ ದಿನ ಬಾಕಿ ಉಳಿದಿದೆ.ಹೊಸ ವರ್ಷದ ಹೊಸ ಹುರುಪಿನೊಂದಿಗೆ ಇರುವ ನೀವುಗಳು ನಿಮ್ಮ ಕುಟುಂಬಸ್ಥರು, ಬಂಧುಬಳಗದವರು, ಸ್ನೇಹಿತರು ಖುಷಿಯಿಂದ ಇರಬೇಕೆಂದು ಬಯಸುತ್ತಿದ್ದೀರಾ? ಅವರಿಗೆ ಹೊಸ ವರ್ಷದ ಎಂತಹ ಶುಭಾಶಯಗಳನ್ನ ಕಳಿಸಬೇಕೆಂಬ ವಿಚಾರದಲ್ಲಿದ್ದೀರಾ? ಹಾಗಾದರೆ ಇಲ್ಲಿದೆ ನೋಡಿ ಹೊಸ ವರ್ಷದ ಶುಭ ಸಂದೇಶಗಳು.

2022 ಕ್ಕೆ ವಿದಾಯ ಹೇಳಿ  2023ನ್ನು ಹರುಷದಿಂದ ಸ್ವಾಗತಿಸುವ ನೀವುಗಳು ಕಳೆದ ವರ್ಷದ ಸುಂದರ ನೆನಪುಗಳನ್ನು ಮೆಲಕುಹಾಕುತ್ತಾ, ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ, ಹೊಸ ಕನಸುಗಳೊಂದಿಗೆ ಸುಂದರ ಭವಿಷ್ಯದ ಹೆಜ್ಜೆ ಇಡುವ ಕ್ಷಣ ಇದಾಗಿದೆ.

ನಿಮ್ಮ ಎಲ್ಲಾ ಕನಸುಗಳನ್ನು ಭಗವಂತ ಈಡೇರಿಸಲಿ, ಹೊಸ ವರ್ಷದ ಹರ್ಷ ನಿಮ್ಮ ಬದುಕಿನ ಪ್ರತಿ ದಿನ ಸಂತಸ ತುಂಬಿರಲಿ, ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.

ಹೊಸ ವರ್ಷ ನಿಮ್ಮ ಜೀವನದಲ್ಲಿ ಹೊಸ ಉಲ್ಲಾಸ, ಹೊಸ ಖುಷಿ, ಹೊಸ ಹುರುಪನ್ನು ತರಲಿ, ನಿಮಗೆ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.

2023 ನೇ ಹೊರ ವರ್ಷ ನಿಮ್ಮ ಕುಟುಂಬಕ್ಕೆ ಶಾಂತಿ, ನೆಮ್ಮದಿ, ಸುಖ, ಸಂತೋಷ, ಆರೋಗ್ಯ ಮತ್ತು ಸಿರಿಸಂಪತನ್ನು ಹೊತ್ತು ತರಲಿ, ನಿಮ್ಮ ಬದುಕಿನ ಪ್ರತಿ ಕ್ಷಣವೂ ಸುಖಕರವಾಗಿರಲಿ. ಹ್ಯಾಪಿ ನ್ಯೂ ಇಯರ್.

ಹೊಸ ವರ್ಷ, ಹೊಸ ತಿಂಗಳು, ಹೊಸ ದಿನ, ಹೊಸ ಗುರಿ, ಹೊಸ ಉಲ್ಲಾಸ ನಿಮ್ಮ ಜೀವನದಲ್ಲಿ ಸದಾ ಇರಲಿ, ಹೊಸ ವರ್ಷದ ಶುಭಾಶಯಗಳು.

ನಿಮಗೆ 12 ತಿಂಗಳು ಯಶಸ್ಸು, 52 ವಾರ ನಗು, 365 ದಿನಗಳು ಸಂತೋಷ, 8760 ಗಂಟೆ ಆನಂದ, 525600 ನಿಮಿಷ ಅದೃಷ್ಟ, 31536000 ಸೆಕೆಂಡ್ ನೆಮ್ಮದಿ ತುಂಬಿರಲಿ, ಹೊಸ ವರ್ಷದ ಶುಭಾಶಯಗಳು.

ಹೊಸ ವರ್ಷ ನಿಮ್ಮ ಕುಟುಂಬದ ಎಲ್ಲರ ಬಾಳಲ್ಲಿ ಹೊಸ ಸಂತೋಷ, ಹೊಸ ಹುರುಪು ತರಲಿ,

ಜೀವನದ ಎಲ್ಲಾ ಖುಷಿ ನಿಮ್ಮದಾಗಲಿ, ಹೊಸ ವರ್ಷದ ಶುಭಾಶಯಗಳು.

ಇದನ್ನೂ ಓದಿ : ನಿಮ್ಮ ಜಮೀನು ಹಾಗೂ ಅಕ್ಕಪಕ್ಕದ ಜಮೀನುಗಳಿಗೆ ಹೋಗಲು ದಾರಿವಿದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ

ಹೊಸ ವರುಷದೊಂದಿಗೆ ಹೊಸ ಅವಕಾಶಗಳು, ನಿಮ್ಮನ್ನು ಹುಡುಕಿಕೊಂಡು ಬರಲಿ, ಈ ವರ್ಷದಲ್ಲಿ ನಿಮ್ಮ ಆಸೆಗಳು ಈಡೇರಲಿ. ಆಲ್ ದಿ ಬೆಸ್ಟ್ ಹ್ಯಾಪಿ ನ್ಯೂ ಇಯರ್.

ಹೊಸ ವರುಷ, ಹೊಸ ಬೆಳಕು, ಹೊಸ ಉಲ್ಲಾಸ, ಹೊಸ ಹುಮ್ಮಸ್ಸು, ಹೊಸ ನೆನಪು ಸದಾ ನಿಮ್ಮ ಜೀವನದಲ್ಲಿರಲಿ. ಹೊಸ ವರುಷದ ಶುಭಾಶಯಗಳು.

ಹಳೆಯ ಕಹಿ ಕ್ಷಣಗಳೆಲ್ಲಾ ಅಳಿಯಲಿ, ಜಾರಿದ ಸಿಹಿ ಕ್ಷಣಗಳೆಲ್ಲ ಮರಳಿ ಕೈಸೇರಲಿ, ನಿಮ್ಮ ಬಾಳು ಸದಾ ಸುಖಕರವಾಗಲಿ ಹೊಸ ವರ್ಷದ ಶುಭಾಶಯಗಳು

ಹೊಸ ವರ್ಷ ನಿನಗೆ ಹಾರ್ಧಿಕ ಸ್ವಾಗತ, ನೀನು ನಮ್ಮೆಲ್ಲರ ಬಾಳಲ್ಲಿ ಹೊಸ ಬೆಳಕನ್ನು  ತುಂಬಲು ಬಾ, ನಮ್ಮ ಬಳಿಗೆ ಹೊಚ್ಚ ಹೊಸ ಕನಸನ್ನು ಹೊತ್ತು ನಮ್ಮ ಆಸೆ ಈಡೇರಿಸಲು ಬಾ.

ಹಳೆಯ ಕಹಿಯನ್ನು ಮರೆಯೋಣ, ಹೊಸತನ್ನು ಸ್ವಾಗತಿಸೋಣ, ನಮ್ಮೆಲ್ಲರ ಬಾಳಲ್ಲಿ ತರುವ ಸುಖ ಸಂತೋಷಕ್ಕಾಗಿ ಹೊಸ ವರ್ಷಕ್ಕೆ ಸ್ವಾಗತಿಸೋಣ.

2023 ನೇ ಹೊಸ ವರ್ಷ ನಿಮ್ಮ ಜೀವನದಲ್ಲಿ ಹೊಸ ಬದಲಾವಣೆ ತರಲಿ, ಹೊಸ ಚೈತನ್ಯ ತರಲಿ ಹೊಸ ವರ್ಷದ ಶುಭಾಶಯಗಳು

ಹೊಸ ವರ್ಷ ಒಳಿತನ್ನು ಮಾಡಲಿ, ನಿಮ್ಮ ಕನಸುಗಳು ನನಸಾಗಲಿ, ಖುಷಿ, ಶಾಂತಿ, ನೆಮ್ಮದಿ, ಪ್ರೀತಿ, ಅದೃಷ್ಟ ನಿಮ್ಮದಾಗಲಿ,

2023ರ ಹೊಸ ವರ್ಷ ನಿಮ್ಮ ಬಾಳಲ್ಲಿ ಹೊಸತನ ತುಂಬಲಿ, ನಿಮ್ಮ ಬಾಳು ಬಂಗಾರವಾಗಲಿ ಹೊಸ ವರ್ಷದ ಶುಭಾಶಯಗಳು

Leave a Reply

Your email address will not be published. Required fields are marked *