ನಿಮ್ಮ ಜಮೀನಿಗೆ ಹೋಗಲು ದಾರಿ ಇದೆಯೇ? ಇಲ್ಲೇ ಚೆಕ್ ಮಾಡಿ

Written by Ramlinganna

Updated on:

Check way to your land in mobile ರೈತರು ತಮ್ಮ ಜಮೀನುಗಳಿಗೆ ಹೋಗಲು ಕಾಲುದಾರಿ, ಬಂಡಿದಾರಿ ರಸ್ತೆಗಳಿವೆಯೇ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಇದಕ್ಕಾಗಿ ರೈತರು ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಿಲ್ಲ, ಯಾವ ಅಧಿಕಾರಿಗಳ ಬಳ ಹೋಗಿ ಕೈಕಟ್ಟಿ ನಿಂತುಗೊಳ್ಳುವ ಅಗತ್ಯವೂ ಇಲ್ಲ,  ಕಚೇರಿಗೆ ಸುತ್ತಾಡುವ ಕಾಲ ಈಗಿಲ್ಲ. ಈ ಇಂಟರ್ನೇಟ್ ಯುಗದಲ್ಲಿ ರೈತರು ಕುಳಿತಲ್ಲಿಯೇ ಜಮೀನಿನ ದಾಖಲೆಗಳು ಸೇರಿದಂತೆ ಜಮೀನಿಗೆ ಸಂಬಂಧಿಸಿದ ಇನ್ನಿತರ ಮಾಹಿತಿಗಳನ್ನು ಪಡೆಯಬಹುದು ಹಾಗೂ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Check way to your land in mobile ನಿಮ್ಮ ಜಮೀನಿಗೆ ಹೋಗಲು ಬಂಡಿದಾರಿ ಕಾಲದಾರಿಯಿಲ್ಲವೇ?

ಪ್ರತಿಯೊಬ್ಬ ರೈತರ ಜಮೀನಿಗೆ ಹೋಗಲು ಕಾಲುದಾರಿಯಾಗಲಿ ಬಂಡಿದಾರಿಯಾಗಲಿ ಇರಲೇಬೇಕು. ಏಕೆಂದರೆ ಜಮೀನಿಗೆ ದವಸ ಧಾನ್ಯ ಸಾಗಿಸಲು ಹಾಗೂ ಬೆಳೆ ಬೆಳೆಗಳನ್ನು ಮನೆಗೆ ಸಾಗಿಸಲು ಬಂಡಿದಾರಿ ಇರಬೇಕು. ಆದರೆ ಅತಿಕ್ರಮಣದಿಂದಾಗಿ ಜಮೀನಿಗೆ ಹೋಗು ರಸ್ತೆಗಳು ಮಾಯವಾಗಿರುತ್ತವೆ. ಆದರೆ ಬಹುತೇಕ ರೈತರಿಗೆ ತಮ್ಮ ಜಮೀನಿಗೆ ರಸ್ತೆಗಳು ಇಲ್ಲವೆಂದೇ ಭಾವಿಸಿ ಹಲವಾರು ರೀತಿಯಲ್ಲಿ ತೊಂದರೆ ಪಡುತ್ತಿರುತ್ತಾರೆ. ಅಂತಹ ರೈತರು ಸರ್ಕಾರದ ಮ್ಯಾಪ್ ಪ್ರಕಾರ ತಮ್ಮ ಜಮೀನಿಗೆ ರಸ್ತೆಗಳಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.

ನಿಮ್ಮ ಜಮೀನಿಗೆ ಹೋಗಲು ರಸ್ತೆಇದೆಯೋ ಇಲ್ಲವೋ ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಜಮೀನಿಗೆ ಹೋಗಲು ಕಾಲುದಾರಿಯಾಗಲಿ, ಬಂಡಿದಾರಿಯಾಗಲಿ ಇದೆಯೋ ಇಲ್ಲವೋ ತಮ್ಮ ಜಮೀನಿನ ಸುತ್ತಮುತ್ತಲಿರುವ ಹಳ್ಳಕೊಳ್ಳಗಳು, ನದಿಗಳು, ಗುಡ್ಡಬೆಟ್ಟಗಳು ಎಲ್ಲೆಲ್ಲಿ ಬರುತ್ತವೆ ಎಂಬುದನ್ನು ಚೆಕ್ ಮಾಡಬಹುದು. ಮೊಬೈಲ್ ನಲ್ಲೇ ಚೆಕ್ ಮಾಡಲು ಈ

https://landrecords.karnataka.gov.in/service3/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕಂದಾಯ ಇಲಾಖೆಯ ರೆವನ್ಯೂ ಮ್ಯಾಪ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ತಮ್ಮ ಜಿಲ್ಲೆಯನ್ನು ಆಯ್ಕೆಮಾಡಿಕೊಳ್ಳಬೇಕು. ಇದಾದಮೇಲೆ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹಾಗೂ ಹೋಬಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು. Map Types ನಲ್ಲಿ  Cadastral Maps ಆಯ್ಕೆ ಮಾಡಿಕೊಳ್ಳಬೇಕು. ಆಗ  ರೈತರಿಗೆ ತಾವು ಆಯ್ಕೆ ಮಾಡಿಕೊಂಡ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಪಟ್ಟಿ ಕಾಣುತ್ತದೆ. ಅಂದರೆ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಕಾಣಿಸುತ್ತದೆ. ಗ್ರಾಮದ ಮುಂದೆ ಪಿಡಿಎಫ್ ಫೈಲ್ ಐಕಾನ್ ಕಾಣುತ್ತದೆ.ರೈತರು ಯಾವ ಗ್ರಾಮಕ್ಕೆ ಸಂಬಂಧಿಸಿದ್ದಾರೋ ಆ ಗ್ರಾಮದ ಮುಂದುಗಡೆ ಕಾಣುವ ಪಿಡಿಪಿ ಫೈಲ್ ಐಕಾನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ನಿಮ್ಮೂರಿನ ಮ್ಯಾಪ್ ಕಾಣಿಸುತ್ತದೆ.

ಗ್ರಾಮ ನಕ್ಷೆಯಲ್ಲಿ ಏನೇನು ಮಾಹಿತಿ ಕಾಣಿಸುತ್ತದೆ ?

ರೈತರಿಗೆ ಕಂದಾಯ ಇಲಾಖೆಯ ಮ್ಯಾಪ್ ನಲ್ಲಿ ತಾವು ಆಯ್ಕೆ ಮಾಡಿಕೊಂಡ ಗ್ರಾಮ ಹಾಗೂ ಸುತ್ತುಮತ್ತಲು ಯಾವ ಯಾವ ಗ್ರಾಮಗಳಿಗೆ ಹಾಗೂ ಗ್ರಾಮಕ್ಕೆ ಹೋಗುವ ರಸ್ತೆಗಳು ಅಂದರೆ ಹೇಗೆ ರಸ್ತೆ ಹೇಗೆ ಹಾದುಹೋಗುತ್ತದೆ ಎಂಬುದುಕಾಣುತ್ತದೆ.

ಇದನ್ನೂ ಓದಿ ಬೆಳೆ ವಿಮೆಗೆ ಎಷ್ಟು ಹಣ ಜಮೆಯಾಗುತ್ತದೆ? ಎಷ್ಟು ಹಣ ಪಾವಿತಸಬೇಕು? ಮೊಬೈಲ್ ನಲ್ಲೇ ಚೆಕ್ ಮಾಡಿ

ಇದೇ ರೀತಿಯಾಗಿ ಆ ಗ್ರಾಮದ ಸುತ್ತಮುತ್ತಲಿರುವ ಜಮೀನಿನ ಸರ್ವೆ ನಂಬರ್ ಗಳ ಬಾರ್ಡರ್ ಕಾಣಿಸುತ್ತದೆ. ಸರ್ವೆ ನಂಬರಗಳನ್ನು ಕನ್ನಡ ಅಂಕಿಯಲ್ಲಿ ಬರೆಯಲಾಗಿರುತ್ತದೆ.  ಅದೇ ರೀತಿ ಕಾಲುದಾರಿ, ಬಂಡಿದಾರಿ, ಡಾಂಬಾರು ರಸ್ತೆ, ಹಳ್ಳ ಕಾಲುವುಗೆ, ಬೆಟ್ಟಗುಡ್ಡಗಳನ್ನು ಗುರುತಿಸಲು ಮ್ಯಾಪ್ ಎಡಗಡೆ ತೋರಿಸಲಾಗಿರುತ್ತದೆ. ಆ ಗುರುತುಗಳ ಆಧಾರದ ಮೇಲೆ ನೀವು ನಿಮ್ಮ ಜಮೀನಿಗೆ ಹೋಗಲು ಕಾಲುದಾರಿಯಿದೆಯೋ, ಬಂಡಿದಾರಿಯಿದೆಯೋ ಅಥವಾ ಡಾಂಬಾರು ರಸ್ತೆಗಳಿದೆಯೋ ಎಂಬುದನ್ನು ಚೆಕ್ ಮಾಡಬಹುದು.

ಮ್ಯಾಪ್ ನಲ್ಲಿ ಜಮೀನಿಗೆ ಹೋಗಲು ರಸ್ತೆಯಿದ್ದರೆ, ಈಗ ನಿಮ್ಮ ಜಮೀನಿಗೆಹೋಗಲು ರಸ್ತೆಯಿಲ್ಲದಿದ್ದರೆ ಆ ರಸ್ತೆ ಅತಿಕ್ರಮಣವಾಗಿದೆ ಎಂದರ್ಥ. ನೀವು ನಿಮ್ಮ ಜಮೀನಿಗೆ ಹೋಗಲು ರಸ್ತೆಯಿಲ್ಲವೆಂದು ಅದು ಅತಿಕ್ರಮಣವಾಗಿದೆಯೆ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಬಹುದು.

ನಿಮಗೆ ಓಪನ್ ಆದ ಮ್ಯಾಪನ್ನು ನೀವು ಡೌನ್ಲೋಡ್ ಸಹ ಮಾಡಿಕೊಳ್ಳಬಹುದು.

Leave a Comment