‘ಭಾರತದ ಉಪಗ್ರಹ ಮಾನವ’  ಎಂದೇ ಖ್ಯಾತರಾದ  ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಪ್ರೊ. ರಾಮಚಂದ್ರರಾವ್ ಅವರ 89ನೇ ಜನ್ಮದಿನವನ್ನು ಗೂಗಲ್ ಡೂಡಲ್ ಆಚರಿಸಿಕೊಳ್ಳುತ್ತಿದೆ.  ಈ ವ್ಯಕ್ತಿಯ ಹುಟ್ಟುಹಬ್ಬವನ್ನು ಗೂಗಲ್ ಡೂಡಲ್ (Google Doodle celebrates Udupi Ramchandra Rao’s Birthday ಆಚರಿಸುಕೊಳ್ಳುತ್ತದೆ ಎಂದರೆ ಈ ಮಹಾನ್ ವ್ಯಕ್ತಿಯ ಚರಿತ್ರೆ ಒಮ್ಮೆ ತಿಳಿದುಕೊಳ್ಳೋಣವೇ…..ಇಲ್ಲಿದೆ ಸಂಪೂರ್ಣ ಮಾಹಿತಿ

ಉಡುಪಿಯ ರಾಮಚಂದ್ರರಾವ್, ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ’ (ಇಸ್ರೋ)ಯ ಮಾಜಿ ಮುಖ್ಯಸ್ಥರಾಗಿ ಮಹತ್ವದ ಸಾಧನೆಗಳನ್ನು ಮಾಡಿದ್ದಾರೆ. ರಾಮಚಂದ್ರ ರಾವ್, ಅಂತರ ರಾಷ್ಟ್ರೀಯ ವೈಮಾನಿಕ ಫೆಡರೇಷನ್‌ ಸಂಸ್ಥೆ, ಬಾಹ್ಯಾಕಾಶ ವಿಜ್ಞಾನದಲ್ಲಿ ಅತ್ಯುತ್ತಮ ಸೇವೆಸಲ್ಲಿಸಿದವರಲ್ಲಿ ಪ್ರಮುಖರು.

ಜೀವನ ಚರಿತ್ರೆ (Biography)

ಉಡುಪಿ ರಾಮಚಂದ್ರರಾವ್ ರವರು ಉಡುಪಿ ಸಮೀಪದ ‘ಮಾರ್ಪಳ್ಳಿ’ಯಲ್ಲಿ ಮಾರ್ಚ್ 10 ರಂದು 1932 ರಲ್ಲಿ ಜನಿಸಿದರು. ಇವರ ತಾಯಿ, ಕೃಷ್ಣವೇಣೀಯಮ್ಮ; ತಂದೆ ಲಕ್ಷ್ಮೀನಾರಾಯಣರಾವ್. ಇವರದು ಕೃಷಿಕ ಕುಟುಂಬ.

ವೈಯಕ್ತಿಕ ಆಸಕ್ತಿಗಳು (His interest)

ಆತ್ಯುತ್ತಮ ಉಡುಪಿ ಶೈಲಿಯ ಅಡುಗೆ ಮಾಡುವಕಲೆಯನ್ನು ಕರಗತಮಾಡಿಕೊಂಡಿದ್ದ, ರಾವ್ ರಜದದಿನಗಳಲ್ಲಿ ತಾವೇ ಅಡುಗೆ ಮಾಡಿ ತಮ್ಮ ಪರಿವಾರದವರಿಗೆ ಬಡಿಸುತ್ತಿದ್ದರು.ಹಿಂದೂಸ್ತಾನಿ ಸಂಗೀತಾಸಕ್ತ. ಪಂ.ಭೀಮಸೇನ ಜೋಶಿ, ಗಂಗೂಬಾಯಿಹಾನಗಲ್, ಪಂ.ಹರಿಪ್ರಸಾದ್ ಚೌರಸಿಯ,ಪಂ.ಶಿವಕುಮಾರ ಶರ್ಮ, ಮೊದಲಾದವರ ಸಂಗೀತ ಬಹಳ ಇಷ್ಟ. ಕನ್ನಡ, ಸಾಹಿತ್ಯ, ಹಾಗೂ ಇಂಗ್ಲೀಷ್ ಲೇಖಕರ ಕಾದಂಬರಿ ಓದಲು ಇಷ್ಟಪಡುತ್ತಿದ್ದರು. ವೈಜ್ಞಾನಿಕ ಪ್ರಹಸನಗಳು ಅವರಿಗೆ ಪ್ರಿಯ.ಯಕ್ಷಗಾನ, ಬಯಲಾಟ ಮೊದಲಾದ ಪ್ರಾಕಾರಗಳನ್ನು ಸಮಯಸಿಕ್ಕಾಗ ಬಿಡದೆ ವೀಕ್ಷಿಸುತ್ತಿದ್ದರು

ಮೊದಲಿಗೆ ‘ಅಹಮದಾಬಾದಿನ ಫಿಜಿಕಲ್ ರಿಸರ್ಚ್ ಲೆಬೊರೆಟರಿ’ಯಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರೊ.ಯು.ಆರ್.ರಾವ್ ಆ ನಂತರ ಇಸ್ರೋದಲ್ಲಿ ಸೇವೆಗೈದರು. ಬಾಹ್ಯಾಕಾಶ ಕಕ್ಷೆಗೆ ಅನೇಕ ಉಪಗ್ರಹಗಳನ್ನು ಸೇರಿಸಿದ ಕೀರ್ತಿ ಡಾ.ಯು.ಆರ್.ರಾವ್ ಅವರದು. ಹಾಗಾಗಿ ಅವರು ಭಾರತದ ಬಾಹ್ಯಾಕಾಶ ಯೋಜನೆಯ ಪಿತಾಮಹ ಎಂದೇ ಖ್ಯಾತರಾಗಿದ್ದರು. ಡಾಕ್ಟರೇಟ್ ಪದವಿ ಮುಗಿಸಿದ ನಂತರ ಪ್ರೊ ರಾವ್  ಅಮೇರಿಕಾದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಾಸಾದ ಪಯೋನೀರ್ ಮತ್ತು ಎಕ್ಸ್ ಪ್ಲೋರರ್ ಬಾಹ್ಯಾಕಾಶ ಶೋಧಕಗಳ ಮೇಲೆ ಪ್ರಯೋಗಗಳನ್ನು ನಡೆಸಿದರು’.ಇಂತಹ ಮಹಾಮೇಧಾವಿಯ ಹುಟ್ಟುಹಬ್ಬಕ್ಕೆ ಗೂಗಲ್ ಡೂಡನ್ ಶುಭಕೋರಿದ್ದಾರೆ..ಡೂಡಲ್ ನಲ್ಲಿ ಪ್ರೊಫೆಸರ್ ರಾವ್ ಅವರ ಚಿತ್ರ, ಪೃಥ್ವಿ ಯ ಹಿನ್ನೆಲೆ ಮತ್ತು ಶೂಟಿಂಗ್ ಸ್ಟಾರ್ ಗಳ ಚಿತ್ರಗಳಿವೆ.

ಪ್ರೊ.ರಾವ್ ಅವರು 1966ರಲ್ಲಿ ಭಾರತಕ್ಕೆ ಹಿಂದಿರುಗಿ, ಭಾರತದ ಪ್ರಮುಖ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿಯಲ್ಲಿ 1972ರಲ್ಲಿ ತಮ್ಮ ದೇಶದ ಉಪಗ್ರಹ ಕಾರ್ಯಕ್ರಮವನ್ನು ಆರಂಭಿಸುವ ಮೂಲಕ ಉನ್ನತ ಮಟ್ಟದ ಖಗೋಳ ವಿಜ್ಞಾನ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

1975ರಲ್ಲಿ ಭಾರತದ ಮೊದಲ ಉಪಗ್ರಹ ‘ಆರ್ಯಭಟ’ದ ಉಡಾವಣೆಯ ಉಸ್ತುವಾರಿಯನ್ನು ಪ್ರೊ ರಾವ್ ಅವರು ಅಭಿವೃದ್ಧಿ ಪಡಿಸಿದ 20 ಉಪಗ್ರಹಗಳ ಪೈಕಿ ಒಂದು, ಸಂವಹನ ಮತ್ತು ಹವಾಮಾನ ಸೇವೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಗ್ರಾಮೀಣ ಭಾರತದ ಬಹುಭಾಗವನ್ನು ರೂಪಾಂತರಿಸಿದರು.

1984ರಿಂದ 1994ರವರೆಗೆ ಪ್ರೊ.ರಾವ್ ಅವರು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾಗಿ ತಮ್ಮ ದೇಶದ ಬಾಹ್ಯಾಕಾಶ ಕಾರ್ಯಕ್ರಮವನ್ನು ಎತ್ತರಕ್ಕೆ ಏರಿಸಿದರು ಎಂದು ಗೂಗಲ್ ತಿಳಿಸಿದೆ.

Leave a Reply

Your email address will not be published. Required fields are marked *